ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಪುರುಷರ ಹೈ ಜಂಪ್ ಟಿ64 ಸ್ಪರ್ಧೆಯಲ್ಲಿ ಉಣ್ಣಿ ರೇಣು ಅವರಿಂದ ಕಂಚಿನ ಪದಕ ಗಳಿಕೆಗಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 23 OCT 2023 6:48PM by PIB Bengaluru

ಚೀನಾದ ಹ್ಯಾಂಗ್‌ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ 2022 ರ ಪುರುಷರ ಹೈ ಜಂಪ್ ಟಿ64 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಉಣ್ಣಿ ರೇಣು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

“ಪುರುಷರ ಹೈ ಜಂಪ್ ಟಿ64 ಸ್ಪರ್ಧೆಯಲ್ಲಿ ಹೆಚ್ಚು ಮಹತ್ವಪೂರ್ಣ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಉಣ್ಣಿ ರೇಣು ಅವರಿಗೆ ಅಭಿನಂದನೆಗಳು. ಅವರ ಪರಿಶ್ರಮ ಮತ್ತು ಅಸಾಧಾರಣ ಸಾಧನೆ ನಮ್ಮ ರಾಷ್ಟ್ರಕ್ಕೆ ಹೆಮ್ಮೆ ತಂದಿದೆ.

***

 



(Release ID: 1972964) Visitor Counter : 77