ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಡಬಲ್ಸ್ ರಿಕರ್ವ್ ಸ್ಪರ್ಧೆಯಲ್ಲಿ ಪ್ಯಾರಾ ಬಿಲ್ಲಗಾರರಾದ ಹರ್ವಿಂದರ್ ಸಿಂಗ್ ಮತ್ತು ಸಾಹಿಲ್ ಅವರು ಪಡೆದ ಕಂಚಿನ ಪದಕವನ್ನು ಸಂಭ್ರಮಿಸಿದ ಪ್ರಧಾಮಂತ್ರಿಯವರು
ಪ್ರಕಟಣಾ ದಿನಾಂಕ:
25 OCT 2023 4:40PM by PIB Bengaluru
ಚೀನಾದ ಹ್ಯಾಂಗ್‌ಝೌನಲ್ಲಿ 2022 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್ ರಿಕರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವುದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ಯಾರಾ ಬಿಲ್ಲುಗಾರರಾದ ಹರ್ವಿಂದರ್ ಸಿಂಗ್ ಮತ್ತು ಸಾಹಿಲ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯುವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮುಕ್ತ ಪುರುಷರ ಡಬಲ್ಸ್ ರಿಕರ್ವ್‌ನಲ್ಲಿ ಕಂಚಿನ ಪದಕ ಗೆದ್ದ ನಮ್ಮ ಪ್ಯಾರಾ ಬಿಲ್ಲುಗಾರರಾದ ಹರ್ವಿಂದರ್ ಸಿಂಗ್ ಮತ್ತು ಸಾಹಿಲ್ ಅವರಿಗೆ ಅಭಿನಂದನೆಗಳು. ಅವರ ಅದ್ಭುತ ಪ್ರದರ್ಶನ ಮತ್ತು ಬಾಣದ ನಿಖರತೆ ಭಾರತಕ್ಕೆ ಹೆಮ್ಮೆ ತಂದಿದೆ. ಭಾರತವು ಅವರ ಅದ್ಭುತ ಸಾಧನೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತದೆ.”
***
(ಪ್ರಕಟಣೆ ಐ.ಡಿ.: 1971341)
ವಿಸಿಟರ್ ಕೌಂಟರ್ : 125
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu