ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ಸ್ - ಕ್ಲಾಸ್ 1 ಸ್ಪರ್ಧೆಯಲ್ಲಿ ಸಂದೀಪ್ ಡಾಂಗಿ ಅವರ ಕಂಚಿನ ಪದಕದ  ಗೆಲುವನ್ನು ಸಂಭ್ರಮಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 25 OCT 2023 4:36PM by PIB Bengaluru

ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ - ಕ್ಲಾಸ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್ ಡಾಂಗಿ ಅವರ ಗೆಲುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:

"ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ - ಕ್ಲಾಸ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್ ಡಾಂಗಿ ಅವರಿಗೆ ಅಭಿನಂದನೆಗಳು. ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವವು  ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದೆ. ಈ ಯಶಸ್ಸಿಗೆ ಭಾರತವು ಸಂತೋಷಪಡುತ್ತದೆ.” ಎಂದವರು ಹೇಳಿದ್ದಾರೆ.

 

***


(ಪ್ರಕಟಣೆ ಐ.ಡಿ.: 1971234) ವಿಸಿಟರ್ ಕೌಂಟರ್ : 169