ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಕ್ವಾಷ್‌ ಪುರಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಸೌರವ್‌ ಘೋಷಾಲ್‌ ಅವರಿಗೆ ಅಭಿನಂದನೆ ಸಲ್ಲಿಸಿದ  ಪ್ರಧಾನ ಮಂತ್ರಿಗಳು

प्रविष्टि तिथि: 05 OCT 2023 9:05PM by PIB Bengaluru

ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಕ್ವಾಷ್‌ ಪುರುಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸೌರವ್‌ ಘೋಷಾಲ್‌ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಸಂಬಂಧ ಅವರು ʼಎಕ್ಸ್‌ʼ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. "ಸ್ಕ್ವಾಷ್‌ ಪುರುಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ನಮ್ಮ ಚಾಂಪಿಯನ್‌ ಆಟಗಾರ ಸೌರವ್‌ ಘೋಷಾಲ್‌ ಅವರಿಗೆ ನನ್ನ ಅಭಿನಂದನೆಗಳು.

ಕ್ರೀಡೆಯಲ್ಲಿನ ಅದ್ಭುತ ಕೌಶಲ್ಯ ಹಾಗೂ ಅಚಲ ವಿಶ್ವಾಸವು ಇಂತಹ ಅದ್ಭುತ ಸಾಧನೆ ತೋರಲು ಕಾರಣವಾಗಿದೆ. ಅವರ ಬದ್ಧತೆ ಹಾಗೂ ಶಿಸ್ತಿಗೆ ತೆರೆಕಂಡ ಸ್ಪರ್ಧೆಯ ವೇದಿಕೆ ಸಾಕ್ಷಿಯಾಗಿದೆ,ʼʼ ಎಂದು ಬಣ್ಣಿಸಿದ್ದಾರೆ

 

***


(रिलीज़ आईडी: 1964940) आगंतुक पटल : 148
इस विज्ञप्ति को इन भाषाओं में पढ़ें: Urdu , English , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam