ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಶೂಟರ್ ಗಳನ್ನು ಶ್ಲಾಘಿಸಿದ ಪ್ರಧಾನಿ 

प्रविष्टि तिथि: 25 SEP 2023 2:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಷ್ಯನ್ ಕ್ರೀಡಾಕೂಟದಲ್ಲಿ  ಚಿನ್ನದ ಪದಕ ಗೆದ್ದ 10 ಮೀಟರ್ ಏರ್ ರೈಫಲ್ ಫುರುಷರ ತಂಡವನ್ನು ಅಭಿನಂದಿಸಿದ್ದಾರೆ.  

ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ.

“ನಮ್ಮ ಅದ್ಭುತ ಶೂಟರ್ ಗಳಾದ 10 ಮೀಟರ್ ಏರ್ ರೈಫಲ್ ಪುರುಷರ ತಂಡದ ರುದ್ರಾಂಕ್ಷ್ ಪಾಟೀಲ್, ದಿವ್ಯಾಂಶ್ ಪನ್ವರ್ ಮತ್ತು ಐಶ್ವರ್ಯ ಪ್ರತಾಪ್ ತೋಮರ್ ಅವರು ವಿಶ್ವದಾಖಲೆಗಳನ್ನು ಅಳಿಸಿಹಾಕುವ ಮೂಲಕ ನಿಜವಾಗಿಯೂ ರೋಮಾಂಚಕಾರಿ ರೀತಿಯಲ್ಲಿ ಚಿನ್ನವನ್ನು ಗೆದ್ದಿದ್ದಾರೆ’’.

ಕೌಶಲ್ಯ ಮತ್ತು ಬದ್ಧತೆಯ ಅದ್ಭುತ ಪ್ರದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಂಪಿಯನ್ ಗಳಿಗೆ ವಂದಿಸಿದರು ಮತ್ತು ಅವರು ಹೊಸ ಎತ್ತರಕ್ಕೆ ಏರಲಿ ಎಂದು ಹಾರೈಸಿದರು.  

 

******


(रिलीज़ आईडी: 1960515) आगंतुक पटल : 133
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam