ಸಂಪುಟ

ಬಿ ಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಮ್ ಹಂಚಿಕೆ ನೀಡಲು ಕೇಂದ್ರ ಸಂಪುಟದ ಅನುಮೋದನೆ


89,047 ಕೋಟಿ ರೂ. ವೆಚ್ಚದಲ್ಲಿ ಮೂರನೇ ಪುನರುಜ್ಜೀವನ ಪ್ಯಾಕೇಜ್

ಬಿ ಎಸ್ ಎನ್ ಎಲ್ ನ ಅಧಿಕೃತ ಬಂಡವಾಳವನ್ನು 1,50,000 ಕೋಟಿ ರೂ. ಗಳಿಂದ 2,10,000 ಕೋಟಿ ರೂ. ಗಳಿಗೆ ಹೆಚ್ಚಿಸಲಾಗುವುದು

Posted On: 07 JUN 2023 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪುನರುಜ್ಜೀವನ ಕಾರ್ಯತಂತ್ರದ ಭಾಗವಾಗಿ ಬಿ ಎಸ್ ಎನ್ ಎಲ್ ಗೆ ಒಟ್ಟು 89,047 ಕೋಟಿ ರೂ.ಗಳ ಮೂರನೇ ಪುನರುಜ್ಜೀವನ ಪ್ಯಾಕೇಜ್ ಗೆ ತನ್ನ ಅನುಮೋದನೆಯನ್ನು ನೀಡಿದೆ. ಹಣ ಹೂಡಿಕೆಯ ಒಳಹರಿವಿನ (ಈಕ್ವಿಟಿ ಇನ್ಫ್ಯೂಷನ್) ಮೂಲಕ ಬಿಎಸ್ಎನ್ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ಮಾಡಲಾಗುವುದು.

ಬಿ ಎಸ್ ಎನ್ ಎಲ್ ನ ಅಧಿಕೃತ ಬಂಡವಾಳವನ್ನು 1,50,000 ಕೋಟಿ ರೂ. ಗಳಿಂದ 2,10,000 ಕೋಟಿ ರೂ. ಗಳಿಗೆ ಹೆಚ್ಚಿಸಲಾಗುವುದು.

ಈ ಪುನರುಜ್ಜೀವನ ಪ್ಯಾಕೇಜಿನ ಲಭ್ಯತೆಯೊಂದಿಗೆ, ಬಿಎಸ್ಎನ್ಎಲ್ ಭಾರತದ ದೂರದ ಅಸಂಪರ್ಕಿತ ಭಾಗಗಳಿಗೆ ಸಂಪರ್ಕವನ್ನು ಒದಗಿಸುವತ್ತ ಗಮನ ಹರಿಸುವ ಸ್ಥಿರ ಟೆಲಿಕಾಂ ಸೇವಾ ಪೂರೈಕೆದಾರರಾಗಿ ಹೊರಹೊಮ್ಮಲಿದೆ.

ಸ್ಪೆಕ್ಟ್ರಂನ ವಿವರಗಳು ಈ ಕೆಳಗಿನಂತಿವೆ:

ಬ್ಯಾಂಡ್

ಹಂಚಿಕೆ ಮಾಡಲಾದ ಸ್ಪೆಕ್ಟ್ರಮ್

ಬಜೆಟ್ ಬೆಂಬಲ

700 MHz

10 MHz ಗೆ ಜೋಡಿಸಲಾದ 22 LSAs

46,338.60 ಕೋಟಿ ರೂ.

3300 MHz

70 MHz ಗೆ ಜೋಡಿಸಲಾದ 22 LSAs

26,184.20 ಕೋಟಿ ರೂ.

26 GHz

800 MHz ಗೆ ಜೋಡಿಸಲಾದ 21 LSAs ಮತ್ತು 650 MHz ಗೆ ಜೋಡಿಸಲಾದ 1 LSA

 

6,564.93 ಕೋಟಿ ರೂ.

2500 MHz

20 MHz ಗೆ ಜೋಡಿಸಲಾದ 6 LSAs ಮತ್ತು 10 MHz ಗೆ ಜೋಡಿಸಲಾದ 2 LSAs

 

9,428.20 ಕೋಟಿ ರೂ.

 

ಇತರ ಅಂಶಗಳು

531.89 ಕೋಟಿ ರೂ.

                  ಮೊತ್ತ

89,047.82 ಕೋಟಿ ರೂ.

ಮೇಲೆ ತಿಳಿಸಿದ ಈ ಸ್ಪೆಕ್ಟ್ರಮ್ ನ ಹಂಚಿಕೆಯೊಂದಿಗೆ, ಬಿಎಸ್ಎನ್ಎಲ್ ಈ ಕೆಳಗಿನ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ:

a. ಭಾರತದಾದ್ಯಂತ 4ಜಿ ಮತ್ತು 5ಜಿ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

b. ವಿವಿಧ ಸಂಪರ್ಕ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಮತ್ತು ಅಸಂಪರ್ಕಿತ ಹಳ್ಳಿಗಳಿಗೆ 4ಜಿ ವ್ಯಾಪ್ತಿಯ ಸೌಲಭ್ಯವನ್ನು ನೀಡಲು ಸಾಧ್ಯವಾಗುತ್ತದೆ.

c. ಹೈಸ್ಪೀಡ್ ಇಂಟರ್ನೆಟ್ ಗಾಗಿ ಫಿಕ್ಸೆಡ್ ವೈರ್ ಲೆಸ್ ಆಕ್ಸೆಸ್ (FWA) ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

d. ಕ್ಯಾಪ್ಟಿವ್ ನಾನ್-ಪಬ್ಲಿಕ್ ನೆಟ್ ವರ್ಕ್ ಗೆ (CNPN) ಸೇವೆಗಳು / ಸ್ಪೆಕ್ಟ್ರಮ್ ಅನ್ನು ಒದಗಿಸಲು ಸಾಧ್ಯವಾಗುತ್ತದೆ.

ಬಿಎಸ್ಎನ್ಎಲ್/ಎಂಟಿಎನ್ಎಲ್ ಪುನರುಜ್ಜೀವನ:

• ಬಿಎಸ್ಎನ್ಎಲ್/ಎಂಟಿಎನ್ಎಲ್ ಗೆ ಮೊದಲ ಪುನರುಜ್ಜೀವನ ಪ್ಯಾಕೇಜ್ ಗೆ ಕೆಂದ್ರ ಸರ್ಕಾರ 2019ರಲ್ಲಿ ಅನುಮೋದಿಸಿತ್ತು. ಇದು 69,000 ಕೋಟಿ ರೂ. ಗಳಾಗಿದ್ದು, ಬಿಎಸ್ಎನ್ಎಲ್ / ಎಂಟಿಎನ್ಎಲ್ ನಲ್ಲಿ ಸ್ಥಿರತೆಯನ್ನು ಮೂಡಿಸಿತ್ತು.

• 2022ರಲ್ಲಿ, ಸರ್ಕಾರವು ಬಿಎಸ್ಎನ್ಎಲ್ / ಎಂಟಿಎನ್ಎಲ್ ಗ್ಎ 1.64 ಲಕ್ಷ ಕೋಟಿ ರೂ. ಗಳ ಎರಡನೇ ಪುನರುಜ್ಜೀವನ ಪ್ಯಾಕೇಜ್ ಗೆ ಅನುಮೋದನೆ ನೀಡಿತು. ಇದು ಕ್ಯಾಪೆಕ್ಸ್ಗೆ ಆರ್ಥಿಕ ಬೆಂಬಲ, ಗ್ರಾಮೀಣ ಭೂಸಂಪರ್ಕಗಳಿಗೆ ಕಾರ್ಯಸಾಧ್ಯತೆ ಅಂತರ ಧನಸಹಾಯ, ಆಯವ್ಯಯದ ಒತ್ತಡವನ್ನು ನಿವಾರಿಸಲು ಆರ್ಥಿಕ ಬೆಂಬಲ ಮತ್ತು ಎಜಿಆರ್ ಬಾಕಿಗಳ ಇತ್ಯರ್ಥ, ಬಿಬಿಎನ್ಎಲ್ ಅನ್ನು ಬಿಎಸ್ಎನ್ಎಲ್ ನೊಂದಿಗೆ ವಿಲೀನಗೊಳಿಸುವುದು ಇತ್ಯಾದಿಗಳನ್ನು ಒದಗಿಸಿತು.

• ಈ ಎರಡು ಪ್ಯಾಕೇಜ್ ಗಳ ಪರಿಣಾಮವಾಗಿ, ಬಿಎಸ್ಎನ್ಎಲ್ 2021-22ರ ಹಣಕಾಸು ವರ್ಷದಿಂದ ಕಾರ್ಯಾಚರಣಾ ಲಾಭವನ್ನು ಗಳಿಸಲು ಪ್ರಾರಂಭಿಸಿದೆ. ಬಿಎಸ್ಎನ್ಎಲ್ ನ ಒಟ್ಟು ಸಾಲ 32,944 ಕೋಟಿ ರೂ.ಗಳಿಂದ 22,289 ಕೋಟಿ ರೂ.ಗೆ ಇಳಿದಿದೆ.

• ಬಿಎಸ್ಎನ್ಎಲ್ ನ ಪ್ರಮುಖ ಹಣಕಾಸು ವಹಿವಾಟುಗಳು ಈ ಕೆಳಗಿನಂತಿವೆ:

 

ಹಣಕಾಸು ವರ್ಷ 2020-21

ಹಣಕಾಸು ವರ್ಷ 2021-22

ಹಣಕಾಸು ವರ್ಷ 2022-23

ಆದಾಯ

18,595 ಕೋಟಿ

19,053 ಕೋಟಿ

20,699 ಕೋಟಿ

ಕಾರ್ಯಾಚರಣಾ ಲಾಭ

1,177 ಕೋಟಿ

944 ಕೋಟಿ

1,559 ಕೋಟಿ

ಬಿಎಸ್ಎನ್ಎಲ್ ಹೋಮ್ ಫೈಬರ್ ವಿಭಾಗದಲ್ಲಿ ಬಲವಾದ ಬೆಳವಣಿಗೆಯನ್ನು ಸಾಧಿಸಿದೆ. ಇದು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹೊಸ ಸಂಪರ್ಕಗಳನ್ನು ಒದಗಿಸುತ್ತಿದ್ದು, ಮೇ 2023ರಲ್ಲಿ ಬಿಎಸ್ಎನ್ಎಲ್ ನ ಒಟ್ಟು ಹೋಮ್ ಫೈಬರ್ ಚಂದಾದಾರರ ಸಂಖ್ಯೆ 30.88 ಲಕ್ಷ. ಕಳೆದ ವರ್ಷ ಹೋಮ್ ಫೈಬರ್ ನಿಂದ ಬಂದ ಒಟ್ಟು ಆದಾಯ 2,071 ಕೋಟಿ ರೂ. ಗಳಾಗಿವೆ.

ದೇಶೀಯ 4ಜಿ/5ಜಿ ತಂತ್ರಜ್ಞಾನ:

• ಟೆಲಿಕಾಂ ತಂತ್ರಜ್ಞಾನವು ವಿಶ್ವದ ಸೀಮಿತ ಸಂಖ್ಯೆಯ ಎಂಡ್-ಟು-ಎಂಡ್ ತಂತ್ರಜ್ಞಾನ ಪೂರೈಕೆದಾರರನ್ನು ಹೊಂದಿರುವ ಕಾರ್ಯತಂತ್ರದ ತಂತ್ರಜ್ಞಾನವಾಗಿದೆ.

• ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ದೃಷ್ಟಿಕೋನದ ಅಡಿಯಲ್ಲಿ, ಭಾರತದ ಸ್ವಂತ 4ಜಿ/5ಜಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ.

• ಈ ತಂತ್ರಜ್ಞಾನದ ನಿಯೋಜನೆಯು ಪ್ರಾರಂಭವಾಗಿದ್ದು, ಕೆಲವು ತಿಂಗಳ ಕ್ಷೇತ್ರ ನಿಯೋಜನೆಯ ನಂತರ, ಇದನ್ನು ಬಿಎಸ್ಎನ್ಎಲ್ ನೆಟ್ವರ್ಕ್ ನಲ್ಲಿ ದೇಶಾದ್ಯಂತ ವೇಗವಾಗಿ ಕಾರ್ಯರೂಪಕ್ಕೆ ತರಲಾಗುವುದು.

****



(Release ID: 1930531) Visitor Counter : 105