ಪ್ರಧಾನ ಮಂತ್ರಿಯವರ ಕಛೇರಿ
ರಕ್ಷಣಾ ಸಚಿವಾಲಯವು 928 ವ್ಯೂಹಾತ್ಮಕವಾಗಿ ಪ್ರಮುಖವಾದ ಲೈನ್ ಬದಲಿ ಘಟಕಗಳು / ಉಪ-ವ್ಯವಸ್ಥೆಗಳು / ಬಿಡಿಭಾಗಗಳು ಮತ್ತು ಘಟಕಗಳ 4 ನೇ ಸಕಾರಾತ್ಮಕ ಸ್ವದೇಶಿಕರಣ ಪಟ್ಟಿಗೆ ಅನುಮೋದನೆ ನೀಡಿದೆ
Posted On:
16 MAY 2023 9:39AM by PIB Bengaluru
ರಕ್ಷಣಾ ವಲಯಕ್ಕೆ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದ ಪ್ರಧಾನಿ
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ವ್ಯೂಹಾತ್ಮಕವಾಗಿ ಮಹತ್ವದ 928 ಲೈನ್ ರೀಪ್ಲೇಸ್ಮೆಂಟ್ ಯುನಿಟ್ (ಎಲ್ ಆರ್ ಯು) / ಸಬ್ ಸಿಸ್ಟಮ್ಸ್ / ಬಿಡಿಭಾಗಗಳು ಮತ್ತು ಘಟಕಗಳ 4 ನೇ ಸಕಾರಾತ್ಮಕ ಸ್ವದೇಶಿೀಕರಣ ಪಟ್ಟಿ (ಪಿಐಎಲ್) ಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಪಟ್ಟಿಯಲ್ಲಿ 715 ಕೋಟಿ ರೂ.ಗಳ ಆಮದು ಬದಲಿ ಮೌಲ್ಯದ ಉನ್ನತ ಮಟ್ಟದ ವಸ್ತುಗಳು ಮತ್ತು ಬಿಡಿಭಾಗಗಳು ಸೇರಿವೆ.
ಶ್ರೀ ರಾಜನಾಥ್ ಸಿಂಗ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
"ರಕ್ಷಣಾ ಕ್ಷೇತ್ರಕ್ಕೆ ಇದು ಸಕಾರಾತ್ಮಕ ಬೆಳವಣಿಗೆ. ಇದು ಆತ್ಮನಿರ್ಭರ ಭಾರತದತ್ತ ನಮ್ಮ ಸಂಕಲ್ಪಕ್ಕೆ ಬಲ ನೀಡುತ್ತದೆ ಮತ್ತು ಸ್ಥಳೀಯ ಉದ್ಯಮಶೀಲ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತದೆ".
ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು;
https://pib.gov.in/PressReleasePage.aspx?PRID=1923971
******
(Release ID: 1925175)
Visitor Counter : 152
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam