ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭೂಕಂಪದ ನಂತರ ಕಚ್ ನಲ್ಲಿ ಬೆಳವಣಿಗೆ ಕುರಿತ ವಿಡಿಯೋ ಹಂಚಿಕೊಂಡ ಪ್ರಧಾನಮಂತ್ರಿ

Posted On: 28 AUG 2022 1:26PM by PIB Bengaluru

ಭೂಕಂಪದ ನಂತರ ಗುಜರಾತ್ ನ ಕಚ್ ಕೈಗಾರಿಕೆಗಳು, ಕೃಷಿ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಪ್ರವರ್ಧಮಾನ ಕೇಂದ್ರವಾಗಿ ಬೆಳೆಯುತ್ತಿರುವ ಕುರಿತಾದ ವಿಡಿಯೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೋದಿ ಸ್ಟೋರಿ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದ್ದು, ಇದರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಅವರ ಗಮನಾರ್ಹ ಕಾರ್ಯದ ಬಗ್ಗೆ ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭೂಕಂಪದ ನಂತರ ಕಚ್ ನ ನವೀಕರಣಕ್ಕಾಗಿ ಅಂದಿನ ಗುಜರಾತ್ ಮುಖ್ಯಮಂತ್ರಿ ನಾಯಕತ್ವವನ್ನು ಜನ ಶ್ಲಾಘಿಸಿದ್ದಾರೆ.

 

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ  

 

“ಕೆಲವು ಜನ 2001 ರ ಭೂ ಕಂಪದ ನಂತರ ಕಚ್ ಎಂದಿಗೂ ಮೇಲೇರಲು ಸಾಧ್ಯವಿಲ್ಲ ಎಂದು ಬರೆದಿದ್ದರು. ಆದರೆ ಆ ಸಂದೇಹವಾದಿಗಳು ಕಚ್ ನ ಆತ್ಮವನ್ನು ಕಡಿಮೆ ಅಂದಾಜು ಮಾಡಿದ್ದರು.  

 

ಸ್ವಲ್ಪ ಸಮಯದಲ್ಲೇ ಕಚ್ ಬೆಳವಣಿಗೆ ಕಂಡಿತು ಮತ್ತು ಇದು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ.” ಎಂದು ಹೇಳಿದ್ದಾರೆ.  

****


(Release ID: 1855034) Visitor Counter : 159