ಪ್ರಧಾನ ಮಂತ್ರಿಯವರ ಕಛೇರಿ

ಉಜ್ವಲಾ ಸಬ್ಸಿಡಿ ಕುರಿತ ಇಂದಿನ ನಿರ್ಧಾರವು ಕುಟುಂಬ ಬಜೆಟ್ ಅನ್ನು ಹೆಚ್ಚು ಸುಲಭಗೊಳಿಸುತ್ತದೆ: ಪ್ರಧಾನಮಂತ್ರಿ

Posted On: 21 MAY 2022 8:16PM by PIB Bengaluru

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಕುಸಿತವು ವಿವಿಧ ವಲಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಜತೆಗೆ ನಮ್ಮ ನಾಗರಿಕರಿಗೆ ಪರಿಹಾರವನ್ನು ನೀಡುತ್ತದೆ: ಪ್ರಧಾನಮಂತ್ರಿ

ಉಜ್ವಲ ಸಬ್ಸಿಡಿ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕುಸಿತದ ಬಗ್ಗೆ ಇಂದಿನ ನಿರ್ಧಾರಗಳು ವಿವಿಧ ವಲಯಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿವೆ. ನಮ್ಮ ನಾಗರಿಕರಿಗೆ ಪರಿಹಾರವನ್ನು ಒದಗಿಸುತ್ತವೆ ಮತ್ತು ಮತ್ತಷ್ಟು ‘ಜೀವನವನ್ನು ಸುಗಮಗೊಳಿಸುತ್ತವೆ’ ಎಂದು ಪ್ರಧಾನಿ ಹೇಳಿದ್ದಾರೆ.

ಈ ನಿರ್ಧಾರಗಳಿಗೆ ಸಂಬಂಧಿಸಿದಂತೆ ಹಣಕಾಸು ಸಚಿವರ ಟ್ವೀಟ್ ಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ:

“ ನಮಗೆ ಯಾವಾಗಲೂ ಜನರೇ ಮೊದಲಿಗರು!

ಇಂದಿನ ನಿರ್ಧಾರಗಳು, ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಕುಸಿತಕ್ಕೆ ಸಂಬಂಧಿಸಿದ ನಿರ್ಧಾರಗಳು ವಿವಿಧ ವಲಯಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ. ನಮ್ಮ ನಾಗರಿಕರಿಗೆ ಪರಿಹಾರವನ್ನುಸಹ ಒದಗಿಸುತ್ತವೆ ಮತ್ತು ಮತ್ತಷ್ಟು ‘ಜೀವನವನ್ನು ಸುಗಮಗೊಳಿಸುತ್ತವೆ,’ ಎಂದಿದ್ದಾರೆ.

“ ಉಜ್ವಲ ಯೋಜನೆಯು ಕೋಟ್ಯಂತರ ಭಾರತೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡಿದೆ. ಉಜ್ವಲ ಸಬ್ಸಿಡಿಯ ಬಗ್ಗೆ ಇಂದಿನ ನಿರ್ಧಾರವು ಕುಟುಂಬ ಬಜೆಟ್ ಅನ್ನು ಹೆಚ್ಚು ಸುಲಭಗೊಳಿಸುತ್ತದೆ,’’ ಎಂದು ಅವರು ಹೇಳಿದರು.

***



(Release ID: 1827438) Visitor Counter : 163