ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಸಬ್ಕಾ ವಿಕಾಸ್ ಮಹಾ ರಸಪ್ರಶ್ನೆಯಲ್ಲಿ ಭಾಗವಹಿಸಲು ಜನರನ್ನು ಆಹ್ವಾನಿಸಿದ್ದಾರೆ.

Posted On: 14 APR 2022 9:07PM by PIB Bengaluru

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಸಬ್ಕಾ ವಿಕಾಸ್ ಮಹಾ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜನರನ್ನು ಕೋರಿದ್ದಾರೆ. ಉತ್ತಮ ಆಡಳಿತದ ಉಪಕ್ರಮಗಳ ಸರಣಿಯನ್ನು ಒಳಗೊಂಡಿರುವ ಆಸಕ್ತಿದಾಯಕ ರಸಪ್ರಶ್ನೆ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

MyGovIndia ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ;

"ಇದು ಆಸಕ್ತಿದಾಯಕ ರಸಪ್ರಶ್ನೆಯಾಗಿದ್ದು, ಇದು ಉತ್ತಮ ಆಡಳಿತದ ಉಪಕ್ರಮಗಳ ಸರಣಿಯನ್ನು ಒಳಗೊಂಡಿರುತ್ತದೆ.

#SabkaVikasMahaQuiz ನಲ್ಲಿ ಭಾಗವಹಿಸಿ ಮತ್ತು ಅಂತರ್ಗತ ಅಭಿವೃದ್ಧಿಯತ್ತ ನಮ್ಮ ಸಾಮೂಹಿಕ ಅನ್ವೇಷಣೆಯನ್ನು ಬಲಪಡಿಸಿ." ಎಂದಿದ್ದಾರೆ.

 

****


(Release ID: 1817137) Visitor Counter : 173