ಪ್ರಧಾನ ಮಂತ್ರಿಯವರ ಕಛೇರಿ
ಡಾ.ದೇವೆಂದ್ರ ಪಟೇಲ್ ನಿಧನಕ್ಕೆ ಪ್ರಧಾನಿ ಸಂತಾಪ
ಪ್ರಕಟಣಾ ದಿನಾಂಕ:
05 APR 2022 2:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖ್ಯಾತ ಕ್ಯಾನ್ಸರ್ ಸರ್ಜನ್ ಡಾ.ದೇವೇಂದ್ರ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆರೋಗ್ಯ ಮೂಲಸೌಕರ್ಯ ಮತ್ತು ಕ್ಯಾನ್ಸರ್ ಆರೈಕೆ ಉತ್ತೇಜಿಸುವಲ್ಲಿ ಡಾ ಪಟೇಲ್ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ “ ಡಾ.ದೇವೇಂದ್ರ ಪಟೇಲ್ ಅವರು ಆರೋಗ್ಯ ಮೂಲಸೌಕರ್ಯ ಮತ್ತು ಕ್ಯಾನ್ಸರ್ ಆರೈಕೆ ವೃದ್ಧಿಸುವ ಪ್ರಯತ್ನಗಳಿಂದ ಅಸಂಖ್ಯಾತ ಜನರ ಗೌರವ ಮತ್ತು ಅಭಿಮಾನ ಸಂಪಾದಿಸಿದ್ದಾರೆ. ಅವರ ವೈದ್ಯಕೀಯ ಜ್ಞಾನ ಮತ್ತು ಸಹಾನುಭೂತಿಯ ಸ್ವಭಾವವು ಸದಾ ಸ್ಮರಣೀಯವಾಗಿದೆ.ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ’’ ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1813779)
ವಿಸಿಟರ್ ಕೌಂಟರ್ : 248
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam