ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್‌ನ ಮೂರು ಘಟಕಗಳಿಗೆ ಹೊಸ ಹೂಡಿಕೆ ನೀತಿ-2012 ರ ಅನ್ವಯದ ವಿಸ್ತರಣೆಗೆ ಸಚಿವ ಸಂಪುಟದ ಅನುಮೋದನೆ

Posted On: 22 MAR 2022 2:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (ಹೆಚ್‌ಯುಆರ್‌ಎಲ್‌) ನ ಗೋರಖ್‌ಪುರ, ಸಿಂದ್ರಿ ಮತ್ತು ಬರೌನಿ ಘಟಕಗಳಿಗೆ ಹೊಸ ಹೂಡಿಕೆ ನೀತಿ (ಎನ್‌ ಐ ಪಿ)-2012ರ ಅನ್ವಯದ ವಿಸ್ತರಣೆಗಾಗಿ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. )

ಹೆಚ್‌ಯುಆರ್‌ಎಲ್‌, 15ನೇ ಜೂನ್, 2016 ರಂದು ಸ್ಥಾಪನೆಯಾದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್),ಎನ್‌ಟಿಪಿಸಿ  ಲಿಮಿಟೆಡ್ (ಎನ್‌ಟಿಪಿಸಿ ) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಜಂಟಿ ಸಹಭಾಗಿತ್ವದ ಕಂಪನಿಯಾಗಿದೆ. ಹೆಚ್‌ಯುಆರ್‌ಎಲ್‌ ಪ್ರತಿ ವರ್ಷಕ್ಕೆ 12.7 ಲಕ್ಷ ಮೆಟ್ರಿಕ್ ಟನ್ (ಐಎಲ್‌ಎಮ್‌ಟಿಪಿಎ) ಸ್ಥಾಪಿತ ಸಾಮರ್ಥ್ಯದ ಹೊಸ ಅನಿಲ ಆಧಾರಿತ ಯೂರಿಯಾ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ‍ಎಫ್‌ಸಿಐಎಲ್ ನ ಹಿಂದಿನ ಗೋರಖ್‌ಪುರ ಮತ್ತು ಸಿಂದ್ರಿ ಘಟಕಗಳನ್ನು ಮತ್ತು ಜಿಏಸಿಎಲ್‌ ನ ಬರೌನಿ ಘಟಕಗಳನ್ನು ಪುನರುಜ್ಜೀವಗೊಳಿಸುತ್ತಿದೆ. ಮೂರು ಎಚ್‌ಯುಆರ್‌ಎಲ್‌ ಯೂರಿಯಾ ಯೋಜನೆಗಳ ವೆಚ್ಚ ರೂ. 25,120 ಕೋಟಿ.  ಹೆಚ್‌ಯುಆರ್‌ಎಲ್‌ ನ ಈ ಮೂರು ಘಟಕಗಳಿಗೆ ಜಿಎಐಎಲ್‌  ನೈಸರ್ಗಿಕ ಅನಿಲವನ್ನು ಪೂರೈಸುತ್ತಿದೆ.

ಈ ಅತ್ಯಾಧುನಿಕ ಎಚ್‌ಯುಆರ್‌ಎಲ್‌‍ ಘಟಕಗಳು  ಸ್ಥಾವರಗಳು ಯೂರಿಯಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಎಸ್‌ಸಿಐಎಲ್‌ / ಹೆಚ್‌ಎಫ್‌ಸಿಎಲ್ ನ ಸ್ಥಗಿತಗೊಂಡ ಯೂರಿಯಾ ಘಟಕಗಳನ್ನು ಪುನರುಜ್ಜೀವಗೊಳಿಸುವ ಸರ್ಕಾರದ ಉಪಕ್ರಮದ ಭಾಗವಾಗಿದೆ.

 ಎಲ್ಲಾ ಮೂರು ಸ್ಥಾವರಗಳ ಕಾರ್ಯಾರಂಭದೊಂದಿಗೆ, ದೇಶೀಯ ಯೂರಿಯಾ ಉತ್ಪಾದನೆಯು ದೇಶದಲ್ಲಿ 38.1 ಎಲ್‌ಎಮ್‌ಟಿಪಿಎ  ಗೆ ಹೆಚ್ಚಾಗುತ್ತದೆ ಮತ್ತು ಯೂರಿಯಾ ಉತ್ಪಾದನೆಯಲ್ಲಿ ಭಾರತವನ್ನು 'ಸ್ವಾವಲಂಬಿ' ಯನ್ನಾಗಿ ಮಾಡುವ ಪ್ರಧಾನಮಂತ್ರಿಯವರ ದೃಷ್ಟಿಯನ್ನು ಪೂರೈಸುವಲ್ಲಿ ಸಹಾಯ ಮಾಡುತ್ತದೆ. ಈ ಯೋಜನೆಯು ರೈತರಿಗೆ ರಸಗೊಬ್ಬರಗಳ ಲಭ್ಯತೆಯನ್ನು ಸುಧಾರಿಸುವುದಲ್ಲದೆ, ದೇಶದಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸುವುದು ಮತ್ತು ರಸ್ತೆ, ರೈಲು, ಪೂರಕ ಕೈಗಾರಿಕೆಗಳಂತಹ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.

ಎಲ್ಲಾ ಮೂರು ಎಚ್‌ಯುಆರ್‌ಎಲ್‌‍ ಘಟಕಗಳು ಡಿಸಿಎಸ್ (ಡಿಸ್ಟ್ರಿಬ್ಯೂಟೆಡ್ ಕಂಟ್ರೋಲ್ ಸಿಸ್ಟಮ್), ಇಎಸ್‌ಡಿ (ತುರ್ತು ಸ್ಥಗಿತಗೊಳಿಸುವ ವ್ಯವಸ್ಥೆ) ಮತ್ತು ಪರಿಸರ ಮಾನಿಟರಿಂಗ್ ಸಿಸ್ಟಮ್‌ಗಳೊಂದಿಗೆ ಅತ್ಯಾಧುನಿಕ ಬ್ಲಾಸ್ಟ್ ಪ್ರೂಫ್ ಕಂಟ್ರೋಲ್ ರೂಮ್‌ನಂತಹ ವಿವಿಧ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಈ ಘಟಕಗಳಲ್ಲಿ ಯಾವುದೇ ಆಫ್‌ಸೈಟ್ ತ್ಯಾಜ್ಯ ನೀರು ವಿಲೇವಾರಿ ಇರುವುದಿಲ್ಲ. ವ್ಯವಸ್ಥೆಗಳನ್ನು ಹೆಚ್ಚು ಪ್ರೇರಿತ, ಸಮರ್ಪಿತ, ಉತ್ತಮ ತರಬೇತಿ ಪಡೆದ ಆಪರೇಟರ್‌ಗಳು ನಿರ್ವಹಿಸುತ್ತಾರೆ. ಹೆಚ್‌ಯುಆರ್‌ಎಲ್‌‍ -ಗೋರಖ್‌ಪುರ ಘಟಕವು 65 ಮೀ. ಉದ್ದ ಮತ್ತು 2 ಮೀ ಎತ್ತರದ ಭಾರತದ ಮೊದಲ ಏರ್ ಆಪರೇಟೆಡ್ ಬುಲ್ಡ್ ಪ್ರೂಫ್ ರಬ್ಬರ್ ಅಣೆಕಟ್ಟನ್ನು ಹೊಂದಿದೆ.

ಈ ಮೂರು ಸೌಲಭ್ಯಗಳು ಭಾರತದ ಏಳು ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯೂರಿಯಾದ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿರುವ ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿವೆ.

***


(Release ID: 1808225) Visitor Counter : 251