ಪ್ರಧಾನ ಮಂತ್ರಿಯವರ ಕಛೇರಿ
ನಾಳೆಯಿಂದ (ಮಾ.18) ಆರಂಭವಾಗಲಿರುವ ಮಾತೃಭೂಮಿ (ಮಲೆಯಾಳ ದಿನಪತ್ರಿಕೆ) ಶತಮಾನೋತ್ಸವ ಸಂವತ್ಸರ ಕಾರ್ಯಕ್ರಮ ಉದ್ಘಾಟಿಸಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
Posted On:
17 MAR 2022 11:07AM by PIB Bengaluru
ವರ್ಷಪೂರ್ತಿ ಆಯೋಜಿಸಿರುವ ಮಲೆಯಾಳ ದಿನಪತ್ರಿಕೆ ‘ಮಾತೃಭೂಮಿ’ ಶತಮಾನೋತ್ಸವ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಮಾತೃಭೂಮಿ ದಿನಪತ್ರಿಕೆಯು 1923 ಮಾರ್ಚ್ 18ರಂದು ಕಾರ್ಯಾರಂಭ ಮಾಡಿತು. ಈ ಪತ್ರಿಕೆಯು ಸಾಮಾಜಿಕ ಸುಧಾರಣೆ ಮತ್ತು ಅಭಿವೃದ್ಧಿ ಕಾರ್ಯಸೂಚಿಗಳನ್ನು ತರುವಲ್ಲಿ ದೇಶದಲ್ಲೇ ಮುಂಚೂಣಿ ದೈನಿಕವಾಗಿದೆ. ಜತೆಗೆ, ಅದು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಸ್ಥಿರವಾಗಿ ಮತ್ತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಮಾತೃಭೂಮಿಯು 11 ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದೆ, 11 ನಿಯತಕಾಲಿಕೆಗಳನ್ನು ಹೊರತರುತ್ತಿದೆ. ಅಲ್ಲದೆ, ಅದು ಪುಸ್ತಕ ಪ್ರಕಾಶನವನ್ನು ಸಹ ಮುನ್ನಡೆಸುತ್ತಿದ್ದು, ಸಮಕಾಲೀನ ಹಿತಾಸಕ್ತಿಗಳನ್ನು ಬಿಂಬಿಸುವ ಹಲವಾರು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ.
***
(Release ID: 1806896)
Visitor Counter : 218
Read this release in:
Telugu
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam