ಹಣಕಾಸು ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಸಮರ್ಥ ಯೋಜನೆ(ಮಾಸ್ಟರ್ ಪ್ಲಾನ್)ಯ 7 ಚಾಲನಾ ಯಂತ್ರಗಳು – ಆರ್ಥಿಕ ಪರಿವರ್ತನೆ, ತಡೆರಹಿತ ಬಹುಮಾದರಿ ಸಂಪರ್ಕಕ್ಕಾಗಿ ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಸರಕು ಸಾಗಣೆ ಮೂಲಸೌಕರ್ಯ ಅಭಿವೃದ್ಧಿ


2022-23ರ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಗಳ ಜಾಲ 2,50,000 ಕಿ.ಮೀ. ವಿಸ್ತರಣೆ

ಎಲ್ಲಾ ಪಾಲುದಾರರಿಗೆ ನೈಜ ಸಮಯದ ಮಾಹಿತಿ ಒದಗಿಸಲು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ ಫೇಸ್(ಎಪಿಐ)ಗಾಗಿ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲ್ಯಾಟ್ ಫಾರ್ಮ್ (ಯುಲಿಪ್) ವಿನ್ಯಾಸ

ದೇಶದ 4 ಕಡೆ ಬಹುಮಾದರಿ ಸರಕು ಸಾಗಣೆ ಪಾರ್ಕ್ ಗಳ ನಿರ್ಮಾಣ; 2022-23ರಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ಗುತ್ತಿಗೆ ನೀಡಲಾಗುವುದು

ಸ್ಥಳೀಯ ವ್ಯಾಪಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು 'ಒಂದು ನಿಲ್ದಾಣ-ಒಂದು ಉತ್ಪನ್ನ' ಜನಪ್ರಿಯಗೊಳಿಸಲಾಗುವುದು

ಕವಚ್  ತಂತ್ರಜ್ಞಾನದ ಅಡಿ 2,000 ಕಿಮೀ ರೈಲ್ವೆ ಜಾಲ ತರಲಾಗುವುದು; 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳ ಅಭಿವೃದ್ಧಿ

ಮುಂದಿನ 3 ವರ್ಷಗಳಲ್ಲಿ ಬಹುಮಾದರಿ ಸರಕು ಸಾಗಣೆ ಸೌಲಭ್ಯಗಳಿಗಾಗಿ 100 ಪಿಎಂ ಗತಿಶಕ್ತಿ ಸರಕು ಟರ್ಮಿನಲ್‌ಗಳ ಅಭಿವೃದ್ಧಿ

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ರೋಪ್‌ವೇಗಳ ಅಭಿವೃದ್ಧಿ ಕಾರ್ಯಕ್ರಮ

60 ಕಿಮೀ ದೂರದ 8 ರೋಪ್‌ವೇಗಳ ನಿರ್ಮಾಣ ಯೋಜನೆಗಳಿಗೆ 2022-23ರಲ್ಲಿ ಗುತ್ತಿಗೆ

Posted On: 01 FEB 2022 12:49PM by PIB Bengaluru

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪರಿವರ್ತನೀಯ ಕಾರ್ಯವಿಧಾನವಾಗಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಸರಕು ಸಾಗಣೆ ಮೂಲಸೌಕರ್ಯ ಎಂಬ 7 ಚಾಲನಾ ಯಂತ್ರಗಳು ದೇಶದ ಅರ್ಥ ವ್ಯವಸ್ಥೆಯನ್ನು ರಾಜಪಥದಲ್ಲಿ ಮುನ್ನಡೆಸುತ್ತವೆ.

ಕೇಂದ್ರ ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2022-23ನೇ ಸಾಲಿನ ಬಜೆಟ್ ಮಂಡಿಸುವಾಗ, ಕಾರ್ಯಕ್ರಮ ಪ್ರಸ್ತಾಪಿಸಿದರು.

ಪ್ರಮುಖ 7 ಚಾಲನಾ ಯಂತ್ರಗಳು ದೇಶದ ಅರ್ಥ ವ್ಯವಸ್ಥೆಯ ಉತ್ಕೃಷ್ಟ ಬೆಳವಣಿಗೆಯನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲಿವೆ ಎಂದರು. ಪ್ರಮುಖ 7 ಚಾಲನಾ ಯಂತ್ರಗಳಿಗೆ ಇಂಧನ ಪ್ರಸರಣ, ಮಾಹಿತಿ ತಂತ್ರಜ್ಞಾನ ಸಂವಹನ, ಬಲ್ಕ್ ವಾಟರ್ ಮತ್ತು ಒಳಚರಂಡಿ ಹಾಗೂ ಸಾಮಾಜಿಕ ಮೂಲಸೌಕರ್ಯ ವಲಯಗಳು ಪೂರಕ ಬೆಂಬಲ ನೀಡಲಿವೆ ಎಂದರು.

ಅಂತಿಮವಾಗಿ, ಕಾರ್ಯ ವಿಧಾನವು ಸ್ವಚ್ಛ ಇಂಧನ ಮತ್ತು ಸಬ್ಕಾ ಪ್ರಯಾಸ್‌  - ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಪ್ರಯತ್ನಗಳು - ಎಲ್ಲರಿಗೂ ವಿಶೇಷವಾಗಿ ಯುವಜನರಿಗೆ ದೊಡ್ಡ ಉದ್ಯೋಗ ಮತ್ತು ಉದ್ಯಮಶೀಲತೆಯ ವಿಪುಲ ಅವಕಾಶಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

2 . PM Gatishakti.jpg

ಪಿಎಂ ಗತಿಶಕ್ತಿ ರಾಷ್ಟ್ರೀಯ ಸಮರ್ಥ ಯೋಜನೆ(ಮಾಸ್ಟರ್ ಪ್ಲಾನ್):

ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಸಮರ್ಥ ಯೋಜನೆ(ಮಾಸ್ಟರ್ ಪ್ಲಾನ್‌) ವ್ಯಾಪ್ತಿಯು ಆರ್ಥಿಕ ಪರಿವರ್ತನೆ, ತಡೆರಹಿತ ಮಲ್ಟಿಮೋಡಲ್ ಸಂಪರ್ಕ ಮತ್ತು ಸರಕು ಸಾಗಣೆ ದಕ್ಷತೆಗಾಗಿ 7 ಚಾಲನಾ ಯಂತ್ರಗಳು ಒಳಗೊಂಡಿವೆ. ಗತಿಶಕ್ತಿ ಮಾಸ್ಟರ್ ಪ್ಲಾನ್ ಪ್ರಕಾರ, ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸುವ ಮೂಲಸೌಕರ್ಯಗಳನ್ನು ಸಹ ಒಳಗೊಂಡಿರುತ್ತದೆ. ಯೋಜನೆ, ನವೀನ ಮಾರ್ಗಗಳ ಮೂಲಕ ಹಣಕಾಸು, ತಂತ್ರಜ್ಞಾನದ ಬಳಕೆ ಮತ್ತು ತ್ವರಿತ ಅನುಷ್ಠಾನದ ಮೇಲೆ ಗಮನ ಹರಿಸಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.

Quote Covers_M3.jpg

ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ನಲ್ಲಿ 7 ಚಾಲನಾ ಯಂತ್ರ(ಎಂಜಿನ್)ಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪಿಎಂ ಗತಿಶಕ್ತಿ ಚೌಕಟ್ಟಿನೊಂದಿಗೆ ಜೋಡಿಸಲಾಗುವುದು. ಮಾಸ್ಟರ್ ಪ್ಲಾನ್‌ ವಿಶ್ವದರ್ಜೆಯ ಆಧುನಿಕ ಮೂಲಸೌಕರ್ಯ ಮತ್ತು ವಿವಿಧ ರೀತಿಯ ಸರಕು ಸಾಗಣೆ ವ್ಯವಸ್ಥೆಯ ಸಹಯೋಗವಾಗಿದೆ. ಇದು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ರಸ್ತೆ ಸಾರಿಗೆ:

ಜನರು ಮತ್ತು ಸರಕುಗಳ ವೇಗದ ಚಲನೆಗೆ ಅನುಕೂಲವಾಗುವಂತೆ 2022-23ರಲ್ಲಿ ಎಕ್ಸ್‌ಪ್ರೆಸ್‌ವೇ ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್  ರೂಪಿಸಲಾಗುವುದು. 2022-23ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿ.ಮೀ ವಿಸ್ತರಿಸಲಾಗುವುದು. ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ ನವೀನ ವಿಧಾನಗಳ ಮೂಲಕ 20,000 ಕೋಟಿ ರೂ. ಕ್ರೋಡೀಕರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ತಡೆರಹಿತ ಬಹುಮಾದರಿ ಸರಕು ಮತ್ತ ಜನರ ಚಲನೆ

ಎಲ್ಲಾ ಮಾದರಿಯ ಆಪರೇಟರ್‌ಗಳ ನಡುವೆ ದತ್ತಾಂಶ ವಿನಿಮಯ ಉದ್ದೇಶದಿಂದ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(ಎಪಿಐ)ಗಾಗಿ ವಿನ್ಯಾಸಗೊಳಿಸಲಾದ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್(ಯುಲಿಪ್)ನಲ್ಲಿ ತರಲಾಗುವುದು. ಇದು ವಿಭಿನ್ನ ವಿಧಾನಗಳ ಮೂಲಕ ಸರಕುಗಳ ದಕ್ಷ ಚಲನೆಯನ್ನು ಒದಗಿಸುತ್ತದೆ, ಸರಕು ಸಾಗಣೆ ವೆಚ್ಚ ಮತ್ತು ಸಮಯವನ್ನು ಉಳಿಸುತ್ತದೆ. ಸಕಾಲದಲ್ಲಿ ದಾಸ್ತಾನು ನಿರ್ವಹಣೆಗೆ ಸಹಾಯ ಮಾಡುತ್ತದೆ, ಅನಗತ್ಯ ದಾಖಲೆ ಒದಗಿಸುವುದನ್ನು ತೆಗೆದುಹಾಕುತ್ತದೆ. ಬಹುಮುಖ್ಯವಾಗಿ, ಇದು ಎಲ್ಲಾ ಪಾಲುದಾರರಿಗೆ ರಿಯಲ್ ಟೈಮ್ ಮಾಹಿತಿ ಒದಗಿಸುತ್ತದೆ. ಜತೆಗೆ, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆ ಸುಧಾರಿಸುತ್ತದೆ. ಪ್ರಯಾಣಿಕರ ತಡೆರಹಿತ ಪ್ರಯಾಣವನ್ನು ಆಯೋಜಿಸಲು ಓಪನ್ ಸೋರ್ಸ್ ಮೊಬಿಲಿಟಿ ಸ್ಟಾಕ್ ಅನ್ನು ಸಹ ಸುಗಮಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಬಹುಮಾದರಿ ಸರಕು ಸಾಗಣೆ ಪಾರ್ಕ್ ಗಳು:

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ದೇಶದ 4 ಸ್ಥಳಗಳಲ್ಲಿ ಬಹುಮಾದರಿ ಸರಕು ಸಾಗಣೆ ಪಾರ್ಕ್ ಗಳನ್ನು ನಿರ್ಮಿಸಲು 2022-23ರಲ್ಲಿ ಗುತ್ತಿಗೆ ನೀಡಲಾಗುವುದು.

ರೈಲ್ವೆ:

ದೇಶದ ಸಣ್ಣ, ಅತಿಸಣ್ಣ ರೈತರು, ಸಣ್ಣ ಮತ್ತು ಮಧ್ಯಮ ಗ್ರಾತ್ರದ ಉದ್ಯಮಗಳಿಗೆ ಹೊಸ ಉತ್ಪನ್ನಗಳು ಮತ್ತು ದಕ್ಷ ಸರಕು ಸಾಗಣೆ  ಸೇವೆಗಳನ್ನು ರೈಲ್ವೆ ಅಭಿವೃದ್ಧಿಪಡಿಸುತ್ತದೆ. ಜತೆಗೆ, ಪಾರ್ಸೆಲ್‌ಗಳ ಚಲನೆಗೆ ತಡೆರಹಿತ ಪರಿಹಾರ ಒದಗಿಸಲು ಅಂಚೆ ಜತೆ ರೈಲ್ವೆ ಸಹಯೋಗ ಹೊಂದಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು 'ಒಂದು ನಿಲ್ದಾಣ-ಒಂದು ಉತ್ಪನ್ನ' ಪರಿಕಲ್ಪನೆ ಜನಪ್ರಿಯಗೊಳಿಸಲಾಗುವುದುಆತ್ಮನಿರ್ಭರ್ ಭಾರತದ ಭಾಗವಾಗಿ, 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನಕವಚ್ಅಡಿಗೆ 2,000 ಕಿಮೀ ಜಾಲ ತರಲಾಗುವುದು. ಮುಂದಿನ 3 ವರ್ಷಗಳಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಪ್ರಯಾಣಿಕರಿಗೆ ಉತ್ತಮ ಸಂಚಾರ ಅನುಭವ ನೀಡುವ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಮುಂದಿನ 3 ವರ್ಷಗಳಲ್ಲಿ ಬಹುಮಾದರಿ ಸರಕು ಸಾಗಣೆ ಸೌಲಭ್ಯಗಳಿಗಾಗಿ 100 ಪಿಎಂ ಗತಿಶಕ್ತಿ ಸರಕು ಸಾಗಣೆ ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.

ರೈಲ್ವೆಗೆ ಸಂಪರ್ಕ ಸೇರಿದಂತೆ ಸಾಮೂಹಿಕ ನಗರ ಸಾರಿಗೆ:

ಮಹಾನಗರಗಳಲ್ಲಿ ಮಾದರಿಯ ಮೆಟ್ರೋ ರೈಲು ವ್ಯವಸ್ಥೆ ನಿರ್ಮಿಸಲು ನವೀನ ವಿಧಾನಗಳ ಮೂಲಕ ಹಣಕಾಸು ಒದಗಿಸುವುದು ಮತ್ತು ವೇಗದ ಅನುಷ್ಠಾನ ವಿಧಾನವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು. ಸಾಮೂಹಿಕ ನಗರ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವೆ ಬಹುಮಾದರಿ ಸಂಪರ್ಕವನ್ನು ಆದ್ಯತೆಯ ಮೇಲೆ ಸುಗಮಗೊಳಿಸಲಾಗುವುದು. ಮೆಟ್ರೋ ವ್ಯವಸ್ಥೆಗಳ ವಿನ್ಯಾಸವನ್ನು ಭಾರತೀಯ ಪರಿಸ್ಥಿತಿಗಳು ಮತ್ತು ಅಗತ್ಯಗಳಿಗೆ ಪೂರಕವಾಗಿ  ಪ್ರಮಾಣೀಕರಿಸಲಾಗುವುದು ಎಂದು ಅವರು ಹೇಳಿದರು.

ಪರ್ವತ್ ಮಾಲಾರಾಷ್ಟ್ರೀಯ ರೋಪ್ ವೇ ಅಭಿವೃದ್ಧಿ ಕಾರ್ಯಕ್ರಮ

ದುರ್ಗಮ ಗುಡ್ಡಗಾಡು ಪ್ರದೇಶಗಳಲ್ಲಿನ ಸಾಂಪ್ರದಾಯಿಕ ರಸ್ತೆಗಳಿಗೆ ಪರ್ಯಾಯವಾಗಿ, ರಾಷ್ಟ್ರೀಯ ರೋಪ್‌ವೇಸ್ ಅಭಿವೃದ್ಧಿ ಕಾರ್ಯಕ್ರಮವನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಪ್ರಯಾಣಿಕರಿಗೆ ಸಂಪರ್ಕ ಮತ್ತು ಅನುಕೂಲತೆ ಸುಧಾರಿಸುವುದು ಇದರ ಗುರಿಯಾಗಿದೆ ಎಂದು ಅವರು ಹೇಳಿದರು. ಇದು ದಟ್ಟಣೆಯ ನಗರ ಪ್ರದೇಶಗಳನ್ನು ಸಹ ಒಳಗೊಳ್ಳಬಹುದು, ಅಲ್ಲಿ ಸಾಂಪ್ರದಾಯಿಕ ಸಮೂಹ ಸಾರಿಗೆ ವ್ಯವಸ್ಥೆಯು ಕಾರ್ಯಸಾಧುವಲ್ಲ. 2022-23ರಲ್ಲಿ 60 ಕಿಮೀ ಉದ್ದದ 8 ರೋಪ್‌ವೇ ಯೋಜನೆಗಳ ಗುತ್ತಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಮೂಲಸೌಕರ್ಯ ಯೋಜನೆಗಳಿಗೆ ಸಾಮರ್ಥ್ಯ ನಿರ್ಮಾಣ:

ಸಾಮರ್ಥ್ಯ ನಿರ್ಮಾಣ ಆಯೋಗ, ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಅವುಗಳ ಮೂಲಸಂಸ್ಥೆಗಳ ತಾಂತ್ರಿಕ ಬೆಂಬಲದೊಂದಿಗೆ ತಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದು ಪಿಎಂ ಗತಿಶಕ್ತಿ ಮೂಲಸೌಕರ್ಯ ಯೋಜನೆಗಳ ಯೋಜನೆ, ವಿನ್ಯಾಸ, ಹಣಕಾಸು (ನವೀನ ವಿಧಾನಗಳನ್ನು ಒಳಗೊಂಡಂತೆ) ಮತ್ತು ಅನುಷ್ಠಾನ ನಿರ್ವಹಣೆಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ದೇಶದ ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಹಣಕಾಸು ಸಚಿವರು, 2022-23ನೇ ಸಾಲಿಗೆ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ. ಹಂಚಿಕೆ ಮಾಡುವುದಾಗಿ ಪ್ರಕಟಿಸಿದ್ದಾರೆ. 50 ವರ್ಷಗಳ ಬಡ್ಡಿ ರಹಿತ ಸಾಲಗಳು ರಾಜ್ಯಗಳಿಗೆ ನೀಡಲಾಗಿರುವ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ.

ಹಂಚಿಕೆಯನ್ನು ಪ್ರಧಾನ ಮಂತ್ರಿ ಗತಿಶಕ್ತಿ ಸಂಬಂಧಿತ ಯೋಜನೆಗಳು  ಮತ್ತು ರಾಜ್ಯಗಳ ಇತರ ಉತ್ಪಾದಕ ಬಂಡವಾಳ ಹೂಡಿಕೆಗೆ ಬಳಸಲಾಗುತ್ತದೆ. ಕೆಳಗಿನ ಯೋಜನೆಗಳನ್ನು ಸಹ ಒಳಗೊಂಡಿರುತ್ತದೆ:

  • ರಾಜ್ಯಗಳ ಪಾಲು ಬೆಂಬಲ ಸೇರಿದಂತೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಆದ್ಯತೆಯ ವಿಭಾಗಗಳಿಗೆ ಪೂರಕ ನಿಧಿ,
  • ಡಿಜಿಟಲ್ ಪಾವತಿಗಳು ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಜಾಲ  ಪೂರ್ಣಗೊಳಿಸುವಿಕೆ ಮತ್ತು ಆರ್ಥಿಕತೆಯ ಡಿಜಿಟಲೀಕರಣ.
  • ಕಟ್ಟಡ ಬೈಲಾಗಳು, ಟೌನ್ ಪ್ಲಾನಿಂಗ್ ಯೋಜನೆಗಳು, ಸಾರಿಗೆ-ಆಧಾರಿತ ಅಭಿವೃದ್ಧಿ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳಿಗೆ ಸಂಬಂಧಿಸಿದ ಸುಧಾರಣೆಗಳು.

***


(Release ID: 1794240) Visitor Counter : 513