ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 21ರಂದು ಸೋಮನಾಥ್ ಹೊಸ ಸರ್ಕ್ಯೂಟ್ ಹೌಸ್ ಉದ್ಘಾಟಿಸಲಿರುವ ಪ್ರಧಾನಮಂತ್ರಿ
प्रविष्टि तिथि:
20 JAN 2022 12:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜನವರಿ 21 ರಂದು ಬೆಳಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೋಮನಾಥದಲ್ಲಿನ ಹೊಸ ಸರ್ಕ್ಯೂಟ್ ಹೌಸ್ ಅನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುವರು.
ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈಗಿರುವ ಸರ್ಕಾರಿ ಸೌಲಭ್ಯವು ದೇವಸ್ಥಾನದಿಂದ ಸಾಕಷ್ಟು ದೂರದಲ್ಲಿರುವುದರಿಂದ ಹೊಸ ಸರ್ಕ್ಯೂಟ್ ಹೌಸ್ ನಿರ್ಮಾಣದ ಅಗತ್ಯ ಎದುರಾಗಿತ್ತು. 30 ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ಸರ್ಕ್ಯೂಟ್ ಹೌಸ್ ನಿರ್ಮಾಣಗೊಂಡಿದ್ದು, ಅದು ಸೋಮನಾಥ ದೇವಾಲಯದ ಸಮೀಪವೇ ಇದೆ. ಇದು ಸೂಟ್‌ಗಳು (ಶಯನ ಮತ್ತು ಸ್ನಾನ ಗೃಹ ಒಳಗೊಂಡಿರುವ), ಗಣ್ಯರಿಗೆ ಮತ್ತು ಡೀಲಕ್ಸ್ ಕೊಠಡಿಗಳು, ಸಮಾವೇಶ ಕೋಣೆ, ಸಭಾಂಗಣ ಇತ್ಯಾದಿ ಒಳಗೊಂಡ ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಪ್ರತಿ ಕೋಣೆಯಿಂದಲೂ ಸಮುದ್ರದ ನೋಟವು ಲಭ್ಯವಾಗುವ ರೀತಿಯಲ್ಲಿ ಭೂದೃಶ್ಯವನ್ನು ರೂಪಿಸಲಾಗಿದೆ.
***
(रिलीज़ आईडी: 1791169)
आगंतुक पटल : 252
इस विज्ञप्ति को इन भाषाओं में पढ़ें:
Gujarati
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Odia
,
Tamil
,
Telugu
,
Malayalam