ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 30, 2022ರ ʻಮನ್ ಕಿ ಬಾತ್ʼ ಕಾರ್ಯಕ್ರಮಕ್ಕಾಗಿ ತಮ್ಮ ಚಿಂತನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಪ್ರಧಾನಿ ಆಹ್ವಾನ

Posted On: 19 JAN 2022 11:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022ರ ಜನವರಿ 30ರಂದು ಭಾನುವಾರ ಪ್ರಸಾರವಾಗಲಿರುವ ʻಮನ್ ಕಿ ಬಾತ್ʼ ಕಾರ್ಯಕ್ರಮಕ್ಕಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ನಾಗರಿಕರಿಗೆ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,

"ಇದೇ ತಿಂಗಳು 30ರಂದು 2022ರ ಮೊದಲ ʻಮನ್‌ ಕಿ ಬಾತ್‌ʼ#MannKiBaat ನಡೆಯಲಿದೆ. ಸ್ಫೂರ್ತಿದಾಯಕ ಜೀವನಗಾಥೆಗಳು ಮತ್ತು ವಿಚಾರಗಳ ಬಗ್ಗೆ ಹಂಚಿಕೊಳ್ಳಲು ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳಿವೆ ಎಂಬ ಖಾತರಿ ನನಗಿದೆ. ಅವುಗಳನ್ನು ʻಮೈಗವ್‌ಇಂಡಿಯಾʼ @mygovindia ಅಥವಾ ʻನಮೋ ಆಪ್ʼನಲ್ಲಿ ಹಂಚಿಕೊಳ್ಳಿ. 1800-11-7800ಗೆ ಡಯಲ್ ಮಾಡುವ ಮೂಲಕವೂ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು." ಎಂದಿದ್ದಾರೆ.

***(Release ID: 1790887) Visitor Counter : 85