ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಆರೋಗ್ಯಗಿರಿ ಪ್ರಶಸ್ತಿ 21 ವಿಜೇತರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 02 OCT 2021 6:12PM by PIB Bengaluru

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ಆರೋಗ್ಯಗಿರಿ ಪ್ರಶಸ್ತಿ 21 ವಿಜೇತರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೀಗೆ ಹೇಳಿದ್ದಾರೆ.

"ಆರೋಗ್ಯಗಿರಿ ಪ್ರಶಸ್ತಿ 21 ವಿಜೇತರನ್ನು ನಾನು  ಅಭಿನಂದಿಸಲು ಬಯಸುತ್ತೇನೆ. ಪ್ರತಿ ವರ್ಷ ಅಕ್ಟೋಬರ್ 2 ರಂದು ಸ್ವಚ್ಛತೆ ಅಥವಾ ಇದೀಗ ಆರೋಗ್ಯ ವಲಯಗಳಲ್ಲಿ ತಳಮಟ್ಟದಲ್ಲಿ ಪರಿವರ್ತನೆಯ ಹರಿಕಾರರನ್ನು ಗುರ್ತಿಸಿ ಗೌರವಿಸುವ ಇಂಡಿಯಾ ಟುಡೇ ಬಳಗದ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ.

ಕೋವಿಡ್ 19 ಸಾಂಕ್ರಾಮಿಕದ ಮೂಲಕ‌ ಅಸಾಧಾರಣ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಂದರ್ಭಕ್ಕೆ ತಕ್ಕಂತೆ ಸವಾಲು ಎದುರಿಸಿದ್ದಾರೆ ಮತ್ತು ಸಾಂಕ್ರಾಮಿಕದ ವಿರುದ್ಧದ ಹೋರಾಟ ಬಲವರ್ಧನೆಗೊಂಡಿದೆ.

ಅಂತಹ ಅಸಾಮಾನ್ಯ ಪ್ರಯತ್ನಗಳು ಮತ್ತು ಅವರ ಕಾರ್ಯದ  ಪ್ರಾಮುಖ್ಯತೆ   ಗುರುತಿಸಿ ಆರೋಗ್ಯಗಿರಿ ಪ್ರಶಸ್ತಿ 21 ಗೌರವಿಸುವ ಇಂಡಿಯಾ ಟುಡೇ ಕಾರ್ಯ ಶ್ಲಾಘನೀಯ" ಎಂದು ಹೇಳಿದ್ದಾರೆ.

***(Release ID: 1760684) Visitor Counter : 167