ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿ ಗ್ಲೋಬಲ್‌ ಸಿಟಿಝನ್‌ ಲೈವ್‌’ ಕಾರ್ಯಕ್ರಮದಲ್ಲಿ ಸೆ.25ರಂದು ಸಂಜೆ ವಿಡಿಯೊ ಭಾಷಣ ಮಾಡುವರು

Posted On: 24 SEP 2021 5:02PM by PIB Bengaluru

ಪ್ರಧಾನಿ ನರೇಂದ್ರಮೋದಿ ಅವರು ಗ್ಲೋಬಲ್‌ ಸಿಟಿಜನ್‌ ಲೈವ್‌ ಕಾರ್ಯಕ್ರಮದಲ್ಲಿ ಸೆ.25 ಶನಿವಾರ ಸಂಜೆ ವಿಡಿಯೊ ಭಾಷಣ ನೀಡಲಿದ್ದಾರೆ.

ಗ್ಲೋಬಲ್‌ ಸಿಟಿಜನ್‌  ಒಂದು ಜಾಗತಿಕ ಸಂಸ್ಥೆಯಾಗಿದ್ದು, ಜಾಗತಿಕ ಬಡತನ ನಿವಾರಣೆಗೆ ಅಹಿರ್ನಿಶಿ ಶ್ರಮಿಸುತ್ತಿದೆ. ಗ್ಲೋಬಲ್‌ ಸಿಟಿಜನ್‌ ಲೈವ್‌ ಕಾರ್ಯಕ್ರಮವು ಸೆ.25 ಹಾಗೂ 26ರಂದು 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯಕ್ರಮವನ್ನು ವಿಶ್ವದಲ್ಲಿ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ. ಮುಂಬೈ, ನ್ಯೂಯಾರ್ಕ್‌, ಪ್ಯಾರಿಸ್‌, ರಿಯೊ ಡೆ ಜನೆರಿಯೊ, ಸಿಡ್ನಿ, ಲಾಸ್‌ ಏಂಜೆಲ್ಸ್‌, ಲಾಗೋಸ್‌ ಹಾಗೋ ಸೋಲ್‌ನಲ್ಲಿಯೂ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಡೀ ಕಾರ್ಯಕ್ರಮವನ್ನು ವಿಶ್ವದ 120 ದೇಶಗಳಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು.

***


(Release ID: 1757877) Visitor Counter : 227