ಪ್ರಧಾನ ಮಂತ್ರಿಯವರ ಕಛೇರಿ
2021ರ ಸೆಪ್ಟೆಂಬರ್ 26ರಂದು ʻಮನ್ ಕಿ ಬಾತ್ʼಗಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಪ್ರಧಾನಿ ಆಹ್ವಾನ
प्रविष्टि तिथि:
16 SEP 2021 10:01AM by PIB Bengaluru
2021ರ ಸೆಪ್ಟೆಂಬರ್ 26ರ ಭಾನುವಾರ ನಡೆಯಲಿರುವ ʻಮನ್ ಕಿ ಬಾತ್ʼನ 81ನೇ ಸಂಚಿಕೆಗಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರಿಗೆ ಕರೆ ನೀಡಿದ್ದಾರೆ. ಮನ್ ಕಿ ಬಾತ್‌ನ ವಿಚಾರಗಳನ್ನು ʻನಮೋ ಆ್ಯಪ್ʼ, ʻಮೈಗವ್ʼ ಪೋರ್ಟಲ್‌ನಲ್ಲಿ ಹಂಚಿಕೊಳ್ಳಬಹುದು ಅಥವಾ 1800-11-7800 ದೂರವಾಣಿ ಸಂಖ್ಯೆ ಮೂಲಕ ಜನರು ತಮ್ಮ ಸಂದೇಶವನ್ನು ಧ್ವನಿ ಮುದ್ರಣ ಮಾಡಬಹುದು.
ಈ ಬಗ್ಗೆ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ: "ಈ ತಿಂಗಳ 26ರಂದು ನಡೆಸಿಕೊಡಲಾಗುವ ʻಮನ್ ಕಿ ಬಾತ್ʼ #MannKiBaat ಕಾರ್ಯಕ್ರಮಕ್ಕಾಗಿ ಹಲವಾರು ಆಸಕ್ತಿದಾಯಕ ಮಾಹಿತಿಗಳನ್ನು ಪಡೆಯುತ್ತಿದ್ದೇನೆ. ʻನಮೋ ಆಪ್ʼ, ʻಮೈಗವ್ʼಪೋರ್ಟಲ್‌ನಲ್ಲಿ ನಿಮ್ಮ ಒಳನೋಟಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿ ಅಥವಾ 1800-11-7800 ನಲ್ಲಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ. https://t.co/OR3BUI1rK3"
***
(रिलीज़ आईडी: 1755366)
आगंतुक पटल : 211
इस विज्ञप्ति को इन भाषाओं में पढ़ें:
Telugu
,
Manipuri
,
Assamese
,
English
,
Urdu
,
Marathi
,
हिन्दी
,
Bengali
,
Punjabi
,
Gujarati
,
Odia
,
Tamil
,
Malayalam