ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟೆಸ್ಟ್ ಕ್ರಿಕೆಟ್ ಮತ್ತು ಲಸಿಕಾ ಆಂದೋಲನದಲ್ಲಿ ಯಶಸ್ಸು ಗಳಿಸಿದ ಟೀಂ ಇಂಡಿಯಾಕ್ಕೆ ಪ್ರಧಾನಮಂತ್ರಿ ಶ್ಲಾಘನೆ

Posted On: 06 SEP 2021 10:09PM by PIB Bengaluru

ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಹಾಗೂ ಕ್ರಿಕೆಟ್ ಮೈದಾನದಲ್ಲಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಇಂದು ಭಾರತ ಮತ್ತೊಮ್ಮೆ ಒಂದು ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ನೀಡಿ ಸಾಧನೆ ಮಾಡಿದೆ. ಕಳೆದ ೧೧ ದಿನಗಳಲ್ಲಿ ೩ನೇ ಬಾರಿಗೆ ಈ ಸಾಧನೆ ಸಾಧ್ಯವಾಗಿದೆ.

ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;

ಕೋವಿಡ್-19 ಲಸಿಕೆ ಅಭಿಯಾನ ಮತ್ತು ಕ್ರಿಕೆಟ್ ಪಿಚ್‌ನಲ್ಲಿ ಇಂದು ಮಹತ್ವದ ದಿನ; ಸದಾಕಾಲವು #ಟೀಂ ಇಂಡಿಯಾ ಗೆಲ್ಲುತ್ತದೆ!

***


(Release ID: 1752722) Visitor Counter : 179