ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೈರೋಬಿಯಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌-2021ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಪ್ರಧಾನಿ ಅಭಿನಂದನೆ

प्रविष्टि तिथि: 23 AUG 2021 1:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈರೋಬಿಯಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್  ಚಾಂಪಿಯನ್‌ಶಿಪ್‌ -2021 ನಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನಿಯವರು, "ವೇಗ ಮತ್ತು ಯಶಸ್ಸಿನ ದಾಪುಗಾಲು! @WAU20Nairobi21 ನಲ್ಲಿ 2 ಬೆಳ್ಳಿ ಪದಕಗಳು ಮತ್ತು ಒಂದು ಕಂಚಿನ ಪದಕವನ್ನು ಮನೆಗೆ ತಂದ ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅಥ್ಲೆಟಿಕ್ಸ್ ಭಾರತದಾದ್ಯಂತ ಜನಪ್ರಿಯತೆ ಪಡೆಯುತ್ತಿದೆ ಮತ್ತು ಇದು ಮುಂಬರುವ ದಿನಗಳಿಗಾಗಿ‌ ಉತ್ತಮ ಸಂಕೇತವಾಗಿದೆ. ನಮ್ಮ ಕಠಿಣ ಪರಿಶ್ರಮದ ಕ್ರೀಡಾಪಟುಗಳಿಗೆ ಶುಭ ಹಾರೈಕೆಗಳು.ಎಂದಿದ್ದಾರೆ.

***


(रिलीज़ आईडी: 1748244) आगंतुक पटल : 254
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam