ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ಕ್ಕೆ ಚಾಲನೆ


ಯುವ ಮನಸ್ಸು, ದೇಹ ಮತ್ತು ಆತ್ಮವು ಆರೋಗ್ಯಕರ ಮತ್ತು ಸದೃಢ ಭಾರತದ ಪ್ರಮುಖ ಚಾಲಕಶಕ್ತಿಯಾಗಿದೆ: ಶ್ರೀ ಅನುರಾಗ್ ಠಾಕೂರ್

ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟಗಳನ್ನು ದೇಶಾದ್ಯಂತ ಸುಮಾರು 750 ಜಿಲ್ಲೆಗಳು, ಪ್ರತೀ ಜಿಲ್ಲೆಯ 75 ಹಳ್ಳಿಗಳಲ್ಲಿ ಆಯೋಜಿಸಲಾಗುವುದು: ಕ್ರೀಡಾ ಸಚಿವರು

Posted On: 13 AUG 2021 3:13PM by PIB Bengaluru

ಪ್ರಮುಖ ಅಂಶಗಳು:

  • ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟವನ್ನು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದೆ
  • ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನವ ಭಾರತವನ್ನು ಫಿಟ್ ಇಂಡಿಯಾ ಮಾಡಲು ಫಿಟ್ನೆಸ್ ಪ್ರತಿಜ್ಞೆಯನ್ನು ಬೋಧಿಸಿದರು
  • 'ಫಿಟ್ ಇಂಡಿಯಾ' ಭಾರತವನ್ನು 'ಹಿಟ್ ಇಂಡಿಯಾ' ಮಾಡುತ್ತದೆ: ಶ್ರೀ ಅನುರಾಗ್ ಠಾಕೂರ್
  • ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ರಾಜ್ಯ ಸಚಿವ (ನಿ) ಶ್ರೀ ನಿಶಿತ್ ಪ್ರಮಾಣಿಕ್ ಸಹ ಭಾಗವಹಿಸಿದ್ದವರೊಂದಿಗೆ ಪ್ರಮುಖ ಸ್ಥಳಗಳಲ್ಲಿ ಸಂವಾದ ನಡೆಸಿದರು

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರು ಆಗಸ್ಟ್ 13 ರಂದು ರಾಷ್ಟ್ರಮಟ್ಟದ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ಕಾರ್ಯಕ್ರಮಕ್ಕೆ ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಚಾಲನೆ ನೀಡಿದರು.  ಕ್ರೀಡಾ ಇಲಾಖೆಯ ಕಾರ್ಯದರ್ಶಿ, ಶ್ರೀ ರವಿ ಮಿತ್ತಲ್ ಮತ್ತು ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ ಸಂದರ್ಭದಲ್ಲಿ ಹಾಜರಿದ್ದರು.

https://static.pib.gov.in/WriteReadData/userfiles/image/image001FF2E.jpg

ಕೇಂದ್ರ ಸಚಿವರು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಿಂದ ಫ್ರೀಡಂ ರನ್ ಗೆ ಹಸಿರು ನಿಶಾನೆ ತೋರಿ, ಫ್ರೀಡಮ್ ರನ್ ನಲ್ಲಿ ಭಾಗವಹಿಸಿದರು. ಪೋರ್ಟ್ ಬ್ಲೇರ್ ಸೆಲ್ಯುಲಾರ್ ಜೈಲ್‌, ಲಹಾಲ್ ಸ್ಪಿಟಿಯ ಕಾಜಾ ಪೋಸ್ಟ್,  ಮುಂಬೈನ ಗೇಟ್ವೇ ಆಫ್ ಇಂಡಿಯಾ ಮತ್ತು ಪಂಜಾಬ್ ಅಟ್ಟಾರಿ ಗಡಿಯಂತಹ ಇತರ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಂತೆ ದೇಶದ 75 ಇತರ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

https://static.pib.gov.in/WriteReadData/userfiles/image/image002ZEK1.jpg

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಫಿಟ್ ಇಂಡಿಯಾ ಫ್ರೀಡಮ್ ರನ್ ನಲ್ಲಿ ಭಾಗವಹಿಸುವ ಮೂಲಕ ನವ ಭಾರತವನ್ನು ಫಿಟ್ ಇಂಡಿಯಾ ಮಾಡಲು ಫಿಟ್ನೆಸ್ ಪ್ರತಿಜ್ಞೆಯನ್ನು ಬೋಧಿಸಿದರು.  ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿರುವ ಫಿಟ್ ಇಂಡಿಯಾ ಫ್ರೀಡಂ ರನ್ 2.0 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದವರೊಂದಿಗೆ ಕ್ರೀಡಾ ಸಚಿವರು ರಾಷ್ಟ್ರಗೀತೆ ಹಾಡಿದರು.

https://static.pib.gov.in/WriteReadData/userfiles/image/image00303S7.jpg

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವೈಭವವನ್ನು ಸಾರುವ ಸಂಸ್ಕೃತಿ ಸಚಿವಾಲಯದ ಮಾರ್ಷಲ್ ನೃತ್ಯ ಪ್ರದರ್ಶನದ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ಸಚಿವರು ಸಶಸ್ತ್ರ ಮತ್ತು ಅರೆಸೇನಾ ಪಡೆಗಳ ಸದಸ್ಯರು ಮತ್ತು ದೇಶಾದ್ಯಂತದ ನೆಹರು ಯುವ ಕೇಂದ್ರ ಸಂಘಟನೆಯ ಸ್ವಯಂಸೇವಕರೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ದೇಶವನ್ನು ರಕ್ಷಿಸುವುದಕ್ಕಾಗಿ ಮಾತ್ರವಲ್ಲದೆ ಯುವಜನರು ಫಿಟ್ನೆಸ್ ಅನ್ನು ತಮ್ಮ ಜೀವನದ ಭಾಗವಾಗಿ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಅವರನ್ನು ಪ್ರಶಂಸಿಸಿದರು.

ದೇಶದಾದ್ಯಂತದ ಪ್ರಮುಖ ಸ್ಥಳಗಳಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿದ ಕ್ರೀಡಾ ಸಚಿವರು, ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಅಭಿಯಾನವನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಫ್ರೀಡಂ ರನ್ ಕಾರ್ಯಕ್ರಮವು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ನಾಯಕರೊಂದಿಗೆ ದೇಶವನ್ನು ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಮುಂದಿನ 25 ವರ್ಷಗಳಲ್ಲಿ ನಮ್ಮ ರಾಷ್ಟ್ರ ಯಾವ ರೂಪು ಮತ್ತು ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂಬುದು ನಾವು ಎಷ್ಟು ಸದೃಢರಾಗಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. "ಯುವ ಮನಸ್ಸು, ದೇಹ ಮತ್ತು ಆತ್ಮವು ಆರೋಗ್ಯಕರ ಮತ್ತು ಸದೃಢ ಭಾರತದ ಪ್ರಮುಖ ಚಾಲಕ ಶಕ್ತಿಯಾಗಿದೆ. 'ಫಿಟ್ ಇಂಡಿಯಾ' ಮಾತ್ರ ಭಾರತವನ್ನು  'ಹಿಟ್ ಇಂಡಿಯಾ' ಮಾಡುತ್ತದೆ ಎಂದು ಸಚಿವರು ಹೇಳಿದರು. ಪ್ರತಿಯೊಬ್ಬ ನಾಗರಿಕರು ಚಳುವಳಿಯ ಭಾಗವಾಗುವಂತೆ ಶ್ರೀ ಅನುರಾಗ್ ಠಾಕೂರ್ ಒತ್ತಾಯಿಸಿದರು. "ಪ್ರಧಾನ ಮಂತ್ರಿಯವರು ಫಿಟ್ ಇಂಡಿಯಾವನ್ನು ಜನಾಂದೋಲನವನ್ನಾಗಿ ಮಾಡಲು ಕರೆ ಕೊಟ್ಟಿದ್ದಾರೆ.  ಇದು ಜನರ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ಒಂದು ಸ್ಥಳ ಮತ್ತು ವೇಗವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಐತಿಹಾಸಿಕ ಆಂದೋಲನದ ಭಾಗವಾಗಬೇಕು ಎಂದು ನಾನು ಮನವಿ ಮಾಡುತ್ತೇನೆ.” ಎಂದು ಅವರು ಹೇಳಿದರು.

ಅಸ್ಸಾಂನ ಎಸ್ಎಸ್ಬಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, 75 ಸ್ಥಳಗಳಿಂದ ಜನರು ಚಳುವಳಿಯಲ್ಲಿ ಭಾಗವಹಿಸುತ್ತಾರೆ ಮತ್ತು ಅದು ಪ್ರತಿಯೊಬ್ಬರನ್ನೂ ತಲುಪುತ್ತದೆ ಎಂದು ಹೇಳಿದರು. ಬಿಎಸ್ಎಫ್ ಸಿಬ್ಬಂದಿ ಅಟ್ಟಾರಿ ಗಡಿಯಿಂದ ಸೇರಿಕೊಂಡರು ಮತ್ತು ಸಂವಾದದ ಸಮಯದಲ್ಲಿ ಸಚಿವರು ಬಿಎಸ್ಎಫ್ ಸಿಬ್ಬಂದಿಗೆ ಫಿಟ್ ಇಂಡಿಯಾ ಚಳುವಳಿಯನ್ನು ಪ್ರತಿ ಹಳ್ಳಿಗೆ ತಲುಪಿಸುವಂತೆ ಮನವಿ ಮಾಡಿದರು. ಯುವ ಮತ್ತು ಕ್ರೀಡಾ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ನಿಶಿತ್ಪ್ರಮಾಣಿಕ್ ಅವರು ತಮ್ಮ ಸಂವಾದದಲ್ಲಿ ಫಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ರಕ್ಷಣಾ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪ್ರಧಾನ ಮಂತ್ರಿಯವರ ನವ ಭಾರತದ ಕನಸನ್ನು ಫಿಟ್ ಇಂಡಿಯಾ ಮೂಲಕ ನನಸಾಗಿಸುವಂತೆ ಕರೆ ನೀಡಿದರು.

https://static.pib.gov.in/WriteReadData/userfiles/image/image004USF1.jpg

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, "ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲು ಮತ್ತು ಸದೃಢವಾಗಿರಲು ರಾಷ್ಟ್ರದ ಯುವಕರನ್ನು ಪ್ರೋತ್ಸಾಹಿಸಲು ನಾವು ಇಂದು ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕ್ಕೆ ಚಾಲನೆ ನೀಡಿದ್ದೇವೆ. ದೇಶಾದ್ಯಂತ 75 ಪ್ರಮುಖ ಸ್ಥಳಗಳಲ್ಲಿ ಓಟವನ್ನು ಆಯೋಜಿಸಲಾಗಿದ್ದು, ಅವರು ಇದನ್ನು ರಾಷ್ಟ್ರದ ಸುಮಾರು 750 ಜಿಲ್ಲೆಗಳಲ್ಲಿ ಪ್ರತೀ ಜಿಲ್ಲೆ 75 ಗ್ರಾಮಗಳಿಗೆ ತಲುಪಿಸುತ್ತಾರೆ ಮತ್ತು ಫಿಟ್ನೆಸ್ ಕಿ ಡೋಜ್, ಆಧಾ ಘಂಟಾ ರೋಜ್ (ಸದೃಢತೆಯ ಡೋಸ್, ಪ್ರತಿ ದಿನ ಅರ್ಧ ಗಂಟೆ) ಅಭಿಯಾನವನ್ನು ಉತ್ತೇಜಿಸುತ್ತಾರೆ. ಇದರೊಂದಿಗೆ, ನಾವು ಪ್ರಧಾನ ಮಂತ್ರಿಯವರ ಫಿಟ್ನೆಸ್ ಆಂದೋಲನವನ್ನು ದೇಶದ ಪ್ರತಿಯೊಂದು ಭಾಗಕ್ಕೂ ತಲುಪಿಸುವ ಮೂಲಕ ಅದನ್ನು ಸಾಮೂಹಿಕ ಫಿಟ್ನೆಸ್ ಚಳುವಳಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಫ್ರೀಡಮ್ ರನ್ ಆಗಸ್ಟ್ 15 ರಂದು ಆರಂಭವಾಗುತ್ತದೆ ಮತ್ತು ಅಕ್ಟೋಬರ್ 2, 2021 ರವರೆಗೆ ಮುಂದುವರಿಯುತ್ತದೆ. ಇದರೊಂದಿಗೆ ನಾವು ದೇಶಾದ್ಯಂತ 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರನ್ನು ತಲುಪುವ ಗುರಿ ಹೊಂದಿದ್ದೇವೆ.” ಎಂದರು.

https://static.pib.gov.in/WriteReadData/userfiles/image/image005U28V.jpg

ಸಂದರ್ಭದಲ್ಲಿ ಮಾತನಾಡಿದ ಶ್ರೀ ನಿಶಿತ್ ಪ್ರಮಾಣಿಕ್ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನವ ಭಾರತವನ್ನು ಫಿಟ್ ಇಂಡಿಯಾ ಮಾಡುವ ಕನಸು  ನನಸಾಗಿಸುವಲ್ಲಿ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

https://static.pib.gov.in/WriteReadData/userfiles/image/image006TJW6.jpg

ಕ್ರೀಡಾ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಮಾತನಾಡಿ,  ಪ್ರತಿ ವಾರ ಫಿಟ್ ಇಂಡಿಯಾ ಫ್ರೀಡಮ್ ರನ್ ಅನ್ನು 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ 2 ನೇ ಅಕ್ಟೋಬರ್ 2021 ರವರೆಗೆ ನಡೆಸಲಾಗುತ್ತದೆ ಎಂದು ಹೇಳಿದರು. ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಯಂತಹ ಫಿಟ್ನೆಸ್ ಚಟುವಟಿಕೆಗಳನ್ನು ಕೈಗೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ಫಿಟ್ ಇಂಡಿಯಾ ಫ್ರೀಡಂ ರನ್ 2.0 ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆ, ಸ್ವಾತಂತ್ರ್ಯದ ಓಟ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಗವಹಿಸಲು ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ಗ್ರಾಮಗಳಲ್ಲಿ ಇದೇ ರೀತಿಯ ಫ್ರೀಡಮ್ ರನ್ ಗಳನ್ನು ಆಯೋಜಿಸುವುದು ಸೇರಿವೆ. ಜನರು ಫಿಟ್ ಇಂಡಿಯಾ ಪೋರ್ಟಲ್ https: //fitindia.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ತಮ್ಮ ಓಟವನ್ನು ಅಪ್ಲೋಡ್ ಮಾಡಬಹುದು. ಮತ್ತು #Run4India ಮತ್ತು #AzadikaAmritMahotsav ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಾತಂತ್ರ್ಯ ಓಟದ ಬಗ್ಗೆ ಪ್ರಚಾರ ಮಾಡಬಹುದು.

ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಪಿಆರ್ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾಪಟುಗಳು, ಮಾಧ್ಯಮ ವ್ಯಕ್ತಿಗಳು, ವೈದ್ಯರು, ರೈತರು ಮತ್ತು ಸೇನಾ ಸಿಬ್ಬಂದಿ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಜನರನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ವಿನಂತಿಸಲಾಗಿದೆ.  ಕೋವಿಡ್-19 ಶಿಷ್ಟಾಚಾರಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

***



(Release ID: 1745515) Visitor Counter : 340