ಪ್ರಧಾನ ಮಂತ್ರಿಯವರ ಕಛೇರಿ

ಗೋಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರ ಕೌಶಲ್ಯಪೂರ್ಣ ಮತ್ತು ದೃಢನಿರ್ಧಾರದ ಆಟಕ್ಕೆ ಪ್ರಧಾನ ಮಂತ್ರಿ ಶ್ಲಾಘನೆ

Posted On: 07 AUG 2021 11:18AM by PIB Bengaluru

ಒಲಿಂಪಿಕ್ಸ್ ನಲ್ಲಿ ಗೋಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರ ಕೌಶಲ್ಯಪೂರ್ಣ ಮತ್ತು ದೃಢಸಂಕಲ್ಪದ ಮನಸೆಳೆಯುವ ಆಟಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ

ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು

“@aditigolf ಉತ್ತಮವಾಗಿ ಆಡಿದ್ದೀರಿ! ನೀವು ಬಹಳ ಅದ್ಭುತವಾದ ಕೌಶಲ್ಯವನ್ನು ಮತ್ತು ದೃಢ ಸಂಕಲ್ಪವನ್ನು #Tokyo2020 ರಲ್ಲಿ ತೋರ್ಪಡಿಸಿದ್ದೀರಿ. ಬಹಳ ಸಣ್ಣ ಅಂತರದಲ್ಲಿ ಪದಕವನ್ನು ಕಳೆದುಕೊಂಡಿರುವಿರಿ, ಆದರೆ ನೀವು ಯಾವುದೇ ಭಾರತೀಯ ಸಾಗಬಹುದಾದುದಕ್ಕಿಂತ  ದೂರ ಸಾಗಿದ್ದೀರಿ ಮತ್ತು  ಪ್ರಜ್ವಲಿಸಿದ್ದೀರಿ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು” ಎಂದಿದ್ದಾರೆ.

 

****
 


(Release ID: 1743634) Visitor Counter : 271