ಪ್ರಧಾನ ಮಂತ್ರಿಯವರ ಕಛೇರಿ
ನೀವು ಉತ್ತಮವಾದ ಪ್ರದರ್ಶನವನ್ನೇ ನೀಡಿದ್ದೀರಿ, ಅದಷ್ಟೇ ಗಣನೆಗೆ ಬರುತ್ತದೆ: ಫೆನ್ಸರ್ ಭವಾನಿ ದೇವಿಗೆ ಪ್ರಧಾನಿ
Posted On:
26 JUL 2021 9:55PM by PIB Bengaluru
ಒಲಿಂಪಿಕ್ ಫೆನ್ಸಿಂಗ್ ಪಂದ್ಯದಲ್ಲಿ ಮುಂದಿನ ಸುತ್ತಿನಿಂದ ಹೊರಹೋಗುವ ಮೊದಲು ಭಾರತದ ಪರ ಪ್ರಥಮ ಪಂದ್ಯದಲ್ಲಿ ಜಯ ದಾಖಲಿಸಿದ ಭಾರತದ ಫೆನ್ಸಿಂಗ್ ಆಟಗಾರ್ತಿ ಸಿ.ಎ. ಭವಾನಿ ದೇವಿ ಅವರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ ಆಟಗಾರ್ತಿಯ ಭಾವೋದ್ವೇಗದ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು: "ನೀವು ನಿಮ್ಮ ಅತ್ಯುತ್ತಮವಾದ್ದನ್ನು ನೀಡಿದ್ದೀರಿ. ಅದಷ್ಟೇ ಗಣನೆಗೆ ಬರುತ್ತದೆ.
ಸೋಲು ಮತ್ತು ಗೆಲುವು ಬದುಕಿನ ಭಾಗ.
ನಿಮ್ಮ ಕೊಡುಗೆಗೆ ಭಾರತ ಹೆಮ್ಮೆ ಪಡುತ್ತದೆ. ನೀವು ನಮ್ಮ ನಾಗರಿಕರಿಗೆ ಸ್ಫೂರ್ತಿಯಾಗಿದ್ದೀರಿ" ಎಂದು ತಿಳಿಸಿದ್ದಾರೆ.
***
(Release ID: 1739338)
Visitor Counter : 258
Read this release in:
Malayalam
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu