ಪ್ರಧಾನ ಮಂತ್ರಿಯವರ ಕಛೇರಿ
ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಲಿರುವ ಮಾಡಲಿರುವ ಪ್ರಧಾನಿ
Posted On:
04 JUN 2021 7:37PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜೂನ್ 5, 2021ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. 'ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನಗಳ ಪ್ರಚಾರ' ಎಂಬುದು ಈ ವರ್ಷದ ಕಾರ್ಯಕ್ರಮದ ವಿಷಯವಾಗಿದೆ.
ಕಾರ್ಯಕ್ರಮದ ವೇಳೆ, ಪ್ರಧಾನಿ ಅವರು "2020-2025ರ ಅವಧಿಯಲ್ಲಿ ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ನೀಲನಕ್ಷೆ ಕುರಿತ ತಜ್ಞರ ಸಮಿತಿಯ ವರದಿ"ಯನ್ನು ಬಿಡುಗಡೆ ಮಾಡಲಿದ್ದಾರೆ. ವಿಶ್ವ ಪರಿಸರ ದಿನಾಚರಣೆಯ ಸ್ಮರಣಾರ್ಥವಾಗಿ, ಭಾರತ ಸರಕಾರವು 2023 ಏಪ್ರಿಲ್ 1ರಿಂದ ಗರಿಷ್ಠ ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡಲು ತೈಲ ಕಂಪನಿಗಳಿಗೆ ನಿರ್ದೇಶನ ನೀಡುವ ಇ -20 ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತಿದೆ; ಜೊತೆಗೆ, ಹೆಚ್ಚಿನ ಎಥೆನಾಲ್ ಮಿಶ್ರಣಗಳಿಗಾಗಿ ಇ-12 ಮತ್ತು ಇ-15 ಬಿಐಎಸ್ ನಿರ್ದಿಷ್ಟಗಳನ್ನೂ ಬಿಡುಗಡೆ ಮಾಡುತ್ತಿದೆ. ಈ ಪ್ರಯತ್ನಗಳು ಹೆಚ್ಚುವರಿ ಎಥೆನಾಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಸಂಯೋಜಿತ ಇಂಧನವನ್ನು ದೇಶಾದ್ಯಂತ ಲಭ್ಯವಾಗುವಂತೆ ಮಾಡಲು ಸಮಯಸೂಚಿಯನ್ನು ಒದಗಿಸುತ್ತವೆ. ಇದು 2025ಕ್ಕೆ ಮೊದಲೇ ಎಥೆನಾಲ್ ಉತ್ಪಾದಿಸುವ ರಾಜ್ಯಗಳು ಮತ್ತು ನೆರೆಯ ಪ್ರದೇಶಗಳಲ್ಲಿ ಎಥೆನಾಲ್ ಬಳಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಧಾನಿಯವರು ಪುಣೆಯ ಮೂರು ಸ್ಥಳಗಳಲ್ಲಿ ಇ-100 ವಿತರಣಾ ಕೇಂದ್ರಗಳ ಪ್ರಾಯೋಗಿಕ ಯೋಜನೆಗೂ ಚಾಲನೆ ನೀಡಲಿದ್ದಾರೆ. ʻಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಜೈವಿಕ ಅನಿಲ ಕಾರ್ಯಕ್ರಮಗಳʼ ಅಡಿಯಲ್ಲಿ ಸಕ್ರಿಯರಾಗಿರುವ ರೈತರಿಂದ ಪ್ರತ್ಯಕ್ಷ ಅನುಭವದ ಬಗ್ಗೆ ಒಳನೋಟವನ್ನು ಪಡೆಯಲು ಪ್ರಧಾನ ಮಂತ್ರಿಗಳು ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
***
(Release ID: 1724580)
Visitor Counter : 243
Read this release in:
Marathi
,
Bengali
,
Assamese
,
English
,
Urdu
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam