ಪ್ರಧಾನ ಮಂತ್ರಿಯವರ ಕಛೇರಿ

ಅತ್ಯಂತ ವೇಗದಲ್ಲಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ ನೀಡಿದ ರಾಷ್ಟ್ರ ಭಾರತ

Posted On: 10 APR 2021 9:02PM by PIB Bengaluru

ಭಾರತ, ಅತ್ಯಂತ ವೇಗದಲ್ಲಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ ನೀಡಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಈ ಸಾಧನೆಯನ್ನು 85 ದಿನಗಳಲ್ಲಿ ಮಾಡಿದ್ದರೆ, ಅಮೆರಿಕಾ(ಯುಎಸ್ ಎ) 89 ದಿನಗಳಲ್ಲಿ ಈ ಸಾಧನೆ ಮಾಡಿತ್ತು ಮತ್ತು ಚೀನಾ 102 ದಿನಗಳಲ್ಲಿ ಈ ಮೈಲಿಗಲ್ಲು ತಲುಪಿತ್ತು.

ಪ್ರಧಾನಮಂತ್ರಿಗಳ ಕಾರ್ಯಾಲಯದ ತನ್ನ ಟ್ವೀಟ್ ನಲ್ಲಿ “ಆರೋಗ್ಯಕರ ಮತ್ತು ಕೋವಿಡ್-19 ಮುಕ್ತ ಭಾರತ ಖಾತ್ರಿ ನಿಟ್ಟಿನ ಪ್ರಯತ್ನಗಳು ಮತ್ತಷ್ಟು ಬಲವರ್ಧನೆಗೊಂಡಿವೆ’’ಎಂದು ವಿವರಗಳ ಸಹಿತ ತಿಳಿಸಿದೆ.

***(Release ID: 1711120) Visitor Counter : 195