ಪ್ರಧಾನ ಮಂತ್ರಿಯವರ ಕಛೇರಿ

ಕಥಕ್ಕಲಿ ಪರಿಣತ, ಗುರು ಚೆಮಂಚೇರಿ ಕುನ್ಹಿರಾಮನ್ ನಾಯರ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 15 MAR 2021 4:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಥಕ್ಕಲಿ ಪರಿಣತ, ಗುರು ಚಮಂಚೇರಿ ಕುನ್ಹಿರಾಮನ್ ನಾಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಕಥಕ್ಕಲಿ ಪರಿಣತ, ಗುರು ಚಮಂಚೇರಿ ಕುನ್ಹಿರಾಮನ್ ನಾಯರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅವರಿಗಿದ್ದ ಒಲವು ಅಸಾಧಾರಣವಾದ್ದು. ನಮ್ಮ ಶಾಸ್ತ್ರೀಯ ನೃತ್ಯಗಳಲ್ಲಿ ಉದಯೋನ್ಮುಖ ಪ್ರತಿಭೆಗಳು ಅರಳಲು ಅವರು ಅಸಾಧಾರಣ ಪ್ರಯತ್ನಗಳನ್ನು ಮಾಡಿದ್ದರು. ಅವರ ಕುಟುಂಬದವರು ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂವೇದನೆ ಇದೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.

***



(Release ID: 1704905) Visitor Counter : 87