ಪ್ರಧಾನ ಮಂತ್ರಿಯವರ ಕಛೇರಿ

2021ರ ಮಾರ್ಚ್ 11ರಂದು ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು  ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ

Posted On: 10 MAR 2021 4:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಮಾರ್ಚ್ 11ರಂದು (ಗುರುವಾರ) ಬೆಳಗ್ಗೆ 10.25ಕ್ಕೆ ವರ್ಚುವಲ್ ಮಾಧ್ಯಮದ ಮೂಲಕ ಸ್ವಾಮಿ ಚಿದ್ಭಾವನಾನಂದಜೀ ಅವರ ಭಗವದ್ಗೀತೆಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು  ಬಿಡುಗಡೆ ಮಾಡಲಿದ್ದು, ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಸ್ವಾಮಿ ಚಿದ್ಭಾವನಾನಂದ ಸ್ವಾಮೀಜಿ ಅವರ ಭಗವದ್ಗೀತೆಯ 5 ಲಕ್ಷ ಪ್ರತಿಗಳು ಮಾರಾಟವಾದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸ್ವಾಮಿ ಚಿದ್ಭಾವನಾನಂದಜೀ ಅವರು ತಮಿಳುನಾಡಿನ, ತಿರುಚಿರಾಪಳ್ಳಿಯ, ತಿರುಪ್ಪಾರೈತುರೈನ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸಂಸ್ಥಾಪಕರಾಗಿದ್ದಾರೆ. ಸ್ವಾಮೀಜಿ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ 186 ಪುಸ್ತಕಗಳನ್ನು ಬರೆದಿದ್ದಾರೆ. ಗೀತೆಯ ಕುರಿತಾದ ಅವರ ಪಾಂಡಿತ್ಯಪೂರ್ಣ ಕೃತಿಯು ವಿಷಯದ ಬಗ್ಗೆ ಹೆಚ್ಚು ವಿಸ್ತಾರವಾದ ಪುಸ್ತಕಗಳಲ್ಲಿ ಒಂದಾಗಿದೆ. ಗೀತೆಯ ತಮಿಳು ಆವೃತ್ತಿಯನ್ನು ಅವರ ವ್ಯಾಖ್ಯಾನಗಳೊಂದಿಗೆ 1951ರಲ್ಲಿ ಪ್ರಕಟಿಸಲಾಯಿತು, ನಂತರ 1965ರಲ್ಲಿ ಇಂಗ್ಲಿಷ್ ಆವೃತ್ತಿ ಪ್ರಕಟಿಸಲಾಯಿತು. ತೆಲುಗು, ಒರಿಯಾ, ಜರ್ಮನ್ ಮತ್ತು ಜಪಾನೀ ಭಾಷೆಗಳಿಗೆ ಇದರ ಅನುವಾದಗಳನ್ನು ಭಕ್ತರು ಮಾಡಿಸಿದ್ದಾರೆ.

***



(Release ID: 1704027) Visitor Counter : 167