ಪ್ರಧಾನ ಮಂತ್ರಿಯವರ ಕಛೇರಿ

ಪಿ.ಎಸ್.ಎಲ್.ವಿ.-ಸಿ. 51/ ಅಮೆಜೋನಿಯಾ-1 ಅಭಿಯಾನದ ಪ್ರಥಮ ಯಶಸ್ವೀ ಸಮರ್ಪಿತ ವಾಣಿಜ್ಯ ಉಡಾವಣೆಗಾಗಿ ಇಸ್ರೋ ಮತ್ತು ಎನ್.ಎಸ್.ಐ.ಎಲ್.ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 28 FEB 2021 1:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಸ್.ಎಲ್.ವಿ-ಸಿ51/ಅಮೆಜೋನಿಯಾ-1 ಅಭಿಯಾನದ ಪ್ರಥಮ ಸಮರ್ಪಿತ ಯಶಸ್ವೀ ವಾಣಿಜ್ಯ ಉಡಾವಣೆಗಾಗಿ ಎನ್.ಎಸ್..ಎಲ್. ಮತ್ತು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಪಿ.ಎಸ್.ಎಲ್.ವಿ-ಸಿ51/ಅಮೆಜೋನಿಯಾ-1 ಅಭಿಯಾನದ ಪ್ರಥಮ ಸಮರ್ಪಿತ ಯಶಸ್ವೀ ವಾಣಿಜ್ಯ ಉಡಾವಣೆಗಾಗಿ ಎನ್.ಎಸ್..ಎಲ್. ಮತ್ತು ಇಸ್ರೋಗೆ ಅಭಿನಂದನೆಗಳು. ಇದು ದೇಶದ ಬಾಹ್ಯಾಕಾಶ ಸುಧಾರಣೆಯಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಇದು 18 ಸಹ-ಪ್ರಯಾಣಿಕರ ನಾಲ್ಕು ಸಣ್ಣ ಉಪಗ್ರಹಗಳನ್ನು ಒಳಗೊಂಡಿದ್ದು, ನಮ್ಮ ಯುವಕರ ಚಲನಶೀಲತೆ ಮತ್ತು ನಾವಿನ್ಯತೆಯನ್ನು ಪ್ರದರ್ಶಿಸುತ್ತದೆ." ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಬ್ರೆಜಿಲ್ ಅಮೆಜೋನಿಯಾ-1 ಉಪಗ್ರಹವನ್ನು ಪಿಎಸ್.ಎಲ್.ವಿ. –ಸಿ51 ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕಾಗಿ ಬ್ರೆಜ್ಲ್ ಅಧ್ಯಕ್ಷ, ಜೈರ್ ಬೊಲ್ಸೊನಾರೋ ಅವರಿಗೂ ಅಭಿನಂದನೆ ಸಲ್ಲಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಬ್ರೆಜಿಲ್ ಅಮೆಜೋನಿಯಾ-1 ಉಪಗ್ರಹವನ್ನು ಪಿ.ಎಸ್.ಎಲ್.ವಿ.–ಸಿ51 ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕಾಗಿ ಅಧ್ಯಕ್ಷ @jairbolsonaro ಅವರಿಗೆ ಅಭಿನಂದನೆಗಳು ಮತ್ತು ಬ್ರೆಜಿಲ್ ವಿಜ್ಞಾನಿಗಳಿಗೆ ನನ್ನ ಶುಭಾಶಯಗಳು." ಎಂದು ತಿಳಿಸಿದ್ದಾರೆ.

Excelência @jairbolsonaro pelo sucesso do lançamento do satélite Amazônia-1 do Brasil por PSLV-C51 de @isro. Este é um momento histórico em nossa cooperação espacial e meus melhores votos para muitos outros empreendimentos como esse no futuro.

— Narendra Modi (@narendramodi) February 28, 2021

***



(Release ID: 1701637) Visitor Counter : 178