ಪ್ರಧಾನ ಮಂತ್ರಿಯವರ ಕಛೇರಿ
ಫೆಬ್ರವರಿ 26 ರಂದು 2 ನೇ ಖೇಲೋ ಇಂಡಿಯಾ ಚಳಿಗಾಲದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಮಂತ್ರಿ
Posted On:
25 FEB 2021 4:55PM by PIB Bengaluru
2021 ಫೆಬ್ರವರಿ 26 ರಂದು ಬೆಳಗ್ಗೆ 11.50 ಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ 2 ನೇ ಖೇಲೋ ಇಂಡಿಯಾ ಚಳಿಗಾಲದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.
2021 ರ ಫೆಬ್ರವರಿ 26 ರಿಂದ ಮಾರ್ಚ್ 2 ರವರೆಗೆ ಕ್ರೀಡಾಕೂಟ ನಡೆಯಲಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರದ ಕ್ರೀಡಾಮಂಡಳಿ ಮತ್ತು ಜಮ್ಮು ಕಾಶ್ಮೀರದ ಕ್ರೀಡಾ ಸಂಘಟನೆಗಳ ಸಹಯೋಗದಲ್ಲಿ ಚಳಿಗಾಲದ ಕ್ರೀಡಾ ಕೂಟ ಆಯೋಜಿಸಲಾಗಿದೆ. ಐಸ್ ಸ್ಟಾಕ್, ಐಸ್ ಸ್ಕೇಟಿಂಗ್, ಐಸ್ ಹಾಕಿ, ಸ್ಕೈ ಮೌಂಟನೀಯರಿಂಗ್, ಸ್ನೋಬೋರ್ಡಿಂಗ್, ನೊರ್ಡಿಕ್ ಸ್ಕೈ, ಅಲ್ಪೇನ್ ಸ್ಕೈಯಿಂಗ್ ಮತ್ತಿತರ ಕ್ರೀಡಾ ಪ್ರಕಾರಗಳು ನಡೆಯಲಿವೆ. 27 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕ್ರೀಡಾ ಮಂಡಳಿಗಳ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.
***
(Release ID: 1700827)
Visitor Counter : 134
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam