ಪ್ರಧಾನ ಮಂತ್ರಿಯವರ ಕಛೇರಿ
ಡಿಸ್ರಪ್ಷನ್ ಮತ್ತು ವೈವಿಧ್ಯೀಕರಣ ನಮ್ಮ ನವೋದ್ಯಮಗಳ ಎರಡು ಅತಿ ದೊಡ್ಡ ಯುಎಸ್ ಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ
प्रविष्टि तिथि:
16 JAN 2021 9:20PM by PIB Bengaluru
ನವೋದ್ಯಮ ಜಗತ್ತಿನ ಎರಡು ಅತಿ ದೊಡ್ಡ ಯುಎಸ್ ಪಿ ಎಂದರೆ ವೈವಿಧ್ಯೀಕರಣ ಮತ್ತು ಡಿಸ್ರಪ್ಷನ್ ಸಾಮರ್ಥ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ‘ಪ್ರಾರಂಭ: ಸ್ಟಾರ್ಟ್ ಅಪ್ ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶ’ವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಮಾತನಾಡಿದರು.
ಡಿಸ್ರಪ್ಷನ್ ನಿಂದಾಗಿ ನವೋದ್ಯಮಗಳು ಹೊಸ ಮನೋಭಾವವನ್ನು ಹುಟ್ಟು ಹಾಕುತ್ತಿವೆ, ಅಂತೆಯೇ ಹೊಸ ತಂತ್ರಜ್ಞಾನ ಹಾಗೂ ಹೊಸ ಮಾರ್ಗೋಪಾಯಗಳನ್ನು ಹುಟ್ಟು ಹಾಕುತ್ತಿವೆ. ಅವು ಕಾಲ ಕಾಲಕ್ಕೆ ಚಿಂತನೆಗಳನ್ನು ಬದಲಾಯಿಸುತ್ತಿವೆ ಎಂದರು.
ವೈವಿಧ್ಯೀಕರಣದಿಂದಾಗಿ ವಿಭಿನ್ನ ವಲಯಗಳಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿದ್ದು, ಭಿನ್ನ ಆಲೋಚನೆಗಳ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಇವು ಅನಿರೀಕ್ಷಿತ ಪ್ರಮಾಣ ಮತ್ತು ವ್ಯಾಪ್ತಿಯನ್ನು ಹೊಂದಿವೆ. ನವೋದ್ಯಮಗಳು ಹಲವು ವಲಯಗಳಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ. ಈ ವ್ಯವಸ್ಥೆಯ ಅತಿ ದೊಡ್ಡ ಅಂಶವೆಂದರೆ ವಾಸ್ತವಿಕತೆಗಿಂತ ಹೆಚ್ಚಾಗಿ ಪ್ಯಾಷನ್ ನಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಇದರ ‘ನಾನು ಮಾಡುತ್ತೇನೆ’ ಎಂಬ ಸ್ಫೂರ್ತಿಯಿಂದಾಗಿ ಇಂದು ಭಾರತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿಗಳು ಭೀಮ್, ಯುಪಿಐ ಆಪ್ ಉದಾಹರಣೆ ನೀಡಿ, ಇದು ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಮಾಡಿದ್ದು, 2020ರ ಡಿಸೆಂಬರ್ ನಲ್ಲಿ ಭಾರತದಲ್ಲಿ ಯುಪಿಐ ಮೂಲಕ ನಾಲ್ಕು ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದರು. ಅಂತೆಯೇ ಭಾರತ ಸೌರಶಕ್ತಿ ಮತ್ತು ಕೃತಕ ಬುದ್ಧಿಮತ್ತೆ ವಲಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
***
(रिलीज़ आईडी: 1689892)
आगंतुक पटल : 105
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam