ಪ್ರಧಾನ ಮಂತ್ರಿಯವರ ಕಛೇರಿ

ಹೊಸ  ಭೌಪುರ್ - ಹೊಸ  ಖುರ್ಜಾ ವಿಭಾಗದ ಪೂರ್ವ ಸರಕು  ಕಾರಿಡಾರ್‌ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಷಣ

Posted On: 29 DEC 2020 2:03PM by PIB Bengaluru

ಉತ್ತರ ಪ್ರದೇಶದ ರಾಜ್ಯಪಾಲರಾದ  ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಯುಪಿ ಸರ್ಕಾರದ ಮಂತ್ರಿಗಳೇ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಹಿರಿಯ ಗಣ್ಯರೇ ಹಾಗೂ  ಸಹೋದರ ಸಹೋದರಿಯರೇ. ದಿನವು ಭಾರತೀಯ ರೈಲ್ವೆಯ ಅದ್ಭುತ ಗತಕಾಲಕ್ಕೆ 21 ನೇ ಶತಮಾನದ ಹೊಸ ಗುರುತನ್ನು ನೀಡಲಿದೆ ಮತ್ತು ಭಾರತ ಮತ್ತು ಭಾರತೀಯ ರೈಲ್ವೆಯ ಶಕ್ತಿಯನ್ನು ಹೆಚ್ಚಿಸುತ್ತದೆಇಂದು, ಸ್ವಾತಂತ್ರ್ಯದ ನಂತರ ಜಾರಿಗೆ ಬರುವ ಅತಿದೊಡ್ಡ ಮತ್ತು ಆಧುನಿಕ ರೈಲು ಮೂಲಸೌಕರ್ಯ ಯೋಜನೆಯನ್ನು ನಾವು ಕಾಣುತ್ತಿದ್ದೇವೆ.

ಸ್ನೇಹಿತರೇ,

ಮೊದಲ ಸರಕು ರೈಲು ಖುರ್ಜಾ-ಭೌ ಮಾರ್ಗದ ಸರಕು ಕಾರಿಡಾರ್ ಮಾರ್ಗದಲ್ಲಿ ಚಲಿಸಿದಾಗ, ಹೊಸ ಭಾರತ ಮತ್ತು ಆತ್ಮನಿರ್ಭರ ಭಾರತದ  ಘರ್ಜನೆಯನ್ನು ಸ್ಪಷ್ಟವಾಗಿ ಕೇಳಬಹುದುಪ್ರಯಾಗರಾಜ್ನಲ್ಲಿರುವ ಆಪರೇಷನ್ ಕಂಟ್ರೋಲ್ ಸೆಂಟರ್ ನವ ಭಾರತದ ಹೊಸ ಸಾಮರ್ಥ್ಯವನ್ನು ಸಹ ಸೂಚಿಸುತ್ತದೆಇದು ವಿಶ್ವದ ಅತ್ಯುತ್ತಮ ಮತ್ತು ಆಧುನಿಕ ನಿಯಂತ್ರಣ ಕೇಂದ್ರಗಳಲ್ಲಿ ಒಂದಾಗಿದೆ. ಹಾಗು ನಿರ್ವಹಣೆ ಮತ್ತು ದತ್ತಾಂಶಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಭಾರತದಲ್ಲಿಯೇ ತಯಾರಿಸಲಾಗಿದೆ ಎಂದು ತಿಳಿದರೆ ಯಾರಾದರೂ ಕೂಡ ಹೆಮ್ಮೆ ಪಡುವರು. ಇದನ್ನು ಭಾರತೀಯರು ಸಿದ್ಧಪಡಿಸಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ಮೂಲಸೌಕರ್ಯವು ಯಾವುದೇ ರಾಷ್ಟ್ರದ ಸಾಮರ್ಥ್ಯದ ದೊಡ್ಡ ಮೂಲವಾಗಿದೆ. ಮೂಲಸೌಕರ್ಯದಲ್ಲಿನ  ಸಂಪರ್ಕವು ರಾಷ್ಟ್ರದ ನರ ನಾಡಿಗಳಿದ್ದಂತೆ. ನರ ನಾಡಿಗಳು ಉತ್ತಮವಾದಷ್ಟೂ ರಾಷ್ಟ್ರವು ಆರೋಗ್ಯಕರ ಮತ್ತು ಹೆಚ್ಚು ಶಕ್ತಿಯುತವಾಗಿರುತ್ತದೆಇಂದು, ಭಾರತವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ವೇಗವಾಗಿ ಸಾಗುತ್ತಿರುವಾಗ, ಅತ್ಯುತ್ತಮ ಸಂಪರ್ಕವು ದೇಶದ ಆದ್ಯತೆಯಾಗಿದೆ. ಆಲೋಚನೆಯೊಂದಿಗೆ, ಭಾರತದಲ್ಲಿ ಆಧುನಿಕ ಸಂಪರ್ಕದ ಪ್ರತಿಯೊಂದು ಅಂಶವನ್ನು ಕೇಂದ್ರೀಕರಿಸಿ ಕೆಲಸ ಮಾಡಲಾಗುತ್ತಿದೆ. ಅದು ಹೆದ್ದಾರಿ, ರೈಲ್ವೆ, ವಾಯುಮಾರ್ಗ, ಜಲಮಾರ್ಗ ಅಥವಾ ಐವೇ ಆಗಿರಲಿ - ಐದು ಚಕ್ರಗಳಿಗೆ ಉತ್ತೇಜನ ಮತ್ತು ಶಕ್ತಿಯನ್ನು ನೀಡಲಾಗುತ್ತಿದೆ. ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ದೊಡ್ಡ ವಿಭಾಗದ ಉದ್ಘಾಟನೆಯು ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸ್ನೇಹಿತರೇ,

ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ಗಳನ್ನು, ಸಾಮಾನ್ಯ ಆಡುಭಾಷೆಯಲ್ಲಿ ವಿವರಿಸುವುದಾದರೆ, ಇವು ಸರಕುಗಳ ರೈಲುಗಳಿಗಾಗಿ ಇರುವ  ವಿಶೇಷ ಟ್ರ್ಯಾಕ್ಗಳು ಮತ್ತು ವ್ಯವಸ್ಥೆಗಳುದೇಶಕ್ಕೆ ಅವು ಏಕೆ ಬೇಕು? ನಮ್ಮ ಗದ್ದೆ, ತೋಟಗಳು, ಉದ್ಯಮ ಅಥವಾ ಮಾರುಕಟ್ಟೆಗಳು, ಅವೆಲ್ಲವೂ ಸರಕು ಸಾಗಣೆಯ ಮೇಲೆ ಅವಲಂಬಿತವಾಗಿವೆಎಲ್ಲೋ ಒಂದು ಬೆಳೆ ಬೆಳೆಯಲಾಗುತ್ತದೆ ಇದನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಬೇಕಾಗಿರುತ್ತದೆ. ರಫ್ತಿಗಾಗಿ ಬಂದರುಗಳಿಗೆ ಸಾಗಿಸಬೇಕಾಗಿರುತ್ತದೆಹಾಗೆಯೇಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಎಲ್ಲೋ ಸಮುದ್ರದ ಮಾರ್ಗದಿಂದ ಬರುತ್ತವೆಕೈಗಾರಿಕಾ ವಸ್ತುಗಳನ್ನು ಮಾರುಕಟ್ಟೆಗೆ ಸಾಗಿಸಬೇಕು ಅಥವಾ ರಫ್ತು ಮಾಡಲು ಅವುಗಳನ್ನು ಬಂದರುಗಳಿಗೆ ಸಾಗಿಸಬೇಕು. ಉದ್ದೇಶಕ್ಕಾಗಿ ರೈಲ್ವೆಯು  ದೊಡ್ಡ ಸಾರಿಗೆ ಮಾಧ್ಯಮವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಆರ್ಥಿಕತೆಯು ಬೆಳೆಯಿತು ಮತ್ತು ಸರಕು ಸಾಗಣೆ ಜಾಲದ ಮೇಲಿನ ಒತ್ತಡವೂ ಹೆಚ್ಚಾಯಿತುನಮ್ಮ ದೇಶದಲ್ಲಿ ಪ್ರಯಾಣಿಕ ಮತ್ತು ಸರಕು ರೈಲುಗಳು ಒಂದೇ ಮಾರ್ಗದಲ್ಲಿ ಓಡುತ್ತಿರುವುದು ಸಮಸ್ಯೆಯಾಗಿದೆಸರಕು ರೈಲಿನ ವೇಗ ನಿಧಾನವಾಗಿದೆಸರಕು ರೈಲುಗಳಿಗೆ ದಾರಿ ಮಾಡಿಕೊಡಲು ಪ್ರಯಾಣಿಕರ ರೈಲುಗಳನ್ನು ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತದೆಇದರಿಂದಾಗಿ, ಪ್ರಯಾಣಿಕರ ರೈಲು ಸಹ ಸಮಯಕ್ಕೆ ತಲುಪಲು ವಿಫಲವಾಗುತ್ತಿದೆ ಮತ್ತು ಸರಕುಗಳ ರೈಲು ಸಹ ತಡವಾಗುತ್ತಿದೆಸರಕುಗಳ ರೈಲಿನ ವೇಗ ನಿಧಾನವಾಗಿದ್ದಾಗ ಮತ್ತು ಮಧ್ಯಂತರ ಅಡಚಣೆಗಳಿದ್ದಾಗ, ಸಾರಿಗೆ ವೆಚ್ಚವು ಹೆಚ್ಚಾಗಿರುತ್ತದೆಇದು ನಮ್ಮ ಕೃಷಿ, ಖನಿಜ ಉತ್ಪನ್ನಗಳು ಮತ್ತು ಕೈಗಾರಿಕಾ ಉತ್ಪನ್ನಗಳ ಬೆಲೆಗೆ ನೇರವಾಗಿ ಪರಿಣಾಮ ಬೀರುತ್ತದೆದುಬಾರಿಯಾಗಿರುವುದರಿಂದ, ಇವುಗಳು ದೇಶದ ಮತ್ತು ವಿದೇಶದ ಮಾರುಕಟ್ಟೆಗಳಲ್ಲಿ  ಸ್ಪರ್ಧಾತ್ಮಕ ಬೆಲೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಮತ್ತು ಹಿಂದುಳಿದಿವೆ.

ಸಹೋದರ ಮತ್ತು ಸಹೋದರಿಯರೇ,

ಪರಿಸ್ಥಿತಿಯನ್ನು ಬದಲಾಯಿಸಲು ಸರಕು ಕಾರಿಡಾರ್ ಅನ್ನು ಯೋಜಿಸಲಾಗಿತ್ತು. ಆರಂಭದಲ್ಲಿ, ಎರಡು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ಗಳನ್ನು ನಿರ್ಮಿಸುವ ಯೋಜನೆ ಇದೆ. ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಪಂಜಾಬಿನ ಕೈಗಾರಿಕಾ ನಗರವಾದ ಲುಧಿಯಾನವನ್ನು ಪಶ್ಚಿಮ ಬಂಗಾಳದ ಡಂಕುನಿಯೊಂದಿಗೆ ಜೋಡಿಸುತ್ತಿದೆ ನೂರಾರು ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಕಲ್ಲಿದ್ದಲು ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಕೈಗಾರಿಕಾ ನಗರಗಳಿವೆಫೀಡರ್ ಮಾರ್ಗಗಳನ್ನು ಸಹ ನಿರ್ಮಿಸಲಾಗುತ್ತಿದೆ. ಮತ್ತೊಂದೆಡೆ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮಹಾರಾಷ್ಟ್ರದ ಜೆಎನ್ಪಿಟಿಯನ್ನು ಉತ್ತರ ಪ್ರದೇಶದ ದಾದ್ರಿಯೊಂದಿಗೆ ಜೋಡಿಸುತ್ತದೆ. ಸುಮಾರು 1500 ಕಿ.ಮೀ ದೂರದಲ್ಲಿರುವ ಕಾರಿಡಾರ್ನಲ್ಲಿ ಗುಜರಾತ್ ಮುಂಡ್ರಾ, ಕಂಡ್ಲಾ, ಪಿಪಾವವ್, ದಹೇಜ್ ಮತ್ತು ಹಜೀರಾ ಪ್ರಮುಖ ಬಂದರುಗಳಿಗೆ ಫೀಡರ್ ಮಾರ್ಗಗಳಿವೆ ಎರಡು ಸರಕು ಕಾರಿಡಾರ್ಗಳ ಸುತ್ತ ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಮತ್ತು ಅಮೃತಸರ-ಕೋಲ್ಕತಾ ಕೈಗಾರಿಕಾ ಕಾರಿಡಾರ್ ಅನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆಅಂತೆಯೇ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ವಿಶೇಷ ರೈಲ್ವೆ ಕಾರಿಡಾರ್ನಲ್ಲಿ ಅಗತ್ಯ ಕಾರ್ಯವಿಧಾನಗಳು ಪೂರ್ಣಗೊಳ್ಳುತ್ತಿವೆ.

ಸಹೋದರ ಮತ್ತು ಸಹೋದರಿಯರೇ

ಸರಕು ರೈಲುಗಳಿಗಾಗಿ ಮಾಡಿರುವ ಇಂತಹ ವಿಶೇಷ ಸೌಲಭ್ಯಗಳು ಭಾರತದಲ್ಲಿ ಆಗಾಗ್ಗೆ ತಲೆದೋರುವ ಪ್ರಯಾಣಿಕ ರೈಲುಗಳ ವಿಳಂಬದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಎರಡನೆಯದಾಗಿ, ಇದು ಸರಕು ರೈಲುಗಳ ವೇಗವನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಮತ್ತು ಸರಕು ರೈಲುಗಳು ಎರಡು ಪಟ್ಟು ಸರಕುಗಳನ್ನು ಸಾಗಿಸಲು ಸಹ ಸಾಧ್ಯವಾಗುತ್ತದೆ. ಏಕೆಂದರೆ ಟ್ರ್ಯಾಕ್ಗಳಲ್ಲಿ, ಡಬಲ್ ಡೆಕ್ಕರ್ ಸರಕುಗಳನ್ನು ಸಹ ಓಡಿಸಬಹುದಾಗಿದೆ. ಸರಕು ರೈಲುಗಳು ಸಮಯಕ್ಕೆ ಬಂದಾಗ ನಮ್ಮ ಲಾಜಿಸ್ಟಿಕ್ಸ್ ನೆಟ್ವರ್ಕ್ ಅಗ್ಗವಾಗಿರುತ್ತದೆ. ಸಾರಿಗೆ ವೆಚ್ಚದ ಕಡಿತದಿಂದಾಗಿ ನಮ್ಮ ಸರಕುಗಳು ಅಗ್ಗವಾಗಲಿದ್ದು ಅದು ನಮ್ಮ ರಫ್ತಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ದೇಶದಲ್ಲಿ ಉದ್ಯಮಕ್ಕೆ ಉತ್ತಮ ವಾತಾವರಣವಿರುತ್ತದೆ, ವ್ಯಾಪಾರ ಮಾಡುವುದು ಸುಲಭವಾಗುತ್ತದೆ ಮತ್ತು ಹೂಡಿಕೆಗಾಗಿ ಭಾರತವು ಹೆಚ್ಚು ಆಕರ್ಷಕವಾಗಲಿದೆ. ಉದ್ಯೋಗ ಮತ್ತು ಸ್ವ ಉದ್ಯೋಗಕ್ಕಾಗಿ ಅನೇಕ ಹೊಸ ಅವಕಾಶಗಳು ದೇಶದಲ್ಲಿ ಸೃಷ್ಟಿಯಾಗಲಿವೆ.

ಸ್ನೇಹಿತರೇ,

ಸರಕು ಕಾರಿಡಾರ್ಗಳು ಆತ್ಮನಿರ್ಭರ ಭಾರತದ ಒಂದು ದೊಡ್ಡ ಮಾಧ್ಯಮವಾಗಿದೆಅದು ಉದ್ಯಮ, ವ್ಯಾಪಾರ, ರೈತರು ಅಥವಾ ಗ್ರಾಹಕರೇ ಆಗಿರಲಿ, ಪ್ರತಿಯೊಬ್ಬರೂ ಇದರ ಲಾಭವನ್ನು ಪಡೆಯಲಿದ್ದಾರೆ. ಕಾರಿಡಾರ್ಗಳು ಲುಧಿಯಾನ ಮತ್ತು ವಾರಣಾಸಿಯ ಜವಳಿ ತಯಾರಕರಾಗಲಿ, ಅಥವಾ ಫಿರೋಜ್ಪುರದ ರೈತರಾಗಲಿ, ಅಲಿಗಢದ ಲಾಕ್ ತಯಾರಕರಾಗಲಿ ಅಥವಾ ರಾಜಸ್ಥಾನದ ಅಮೃತಶಿಲೆ ವ್ಯಾಪಾರಿ ಆಗಲಿ, ಮಾಲಿಹಾಬಾದ್ನಲ್ಲಿ ಮಾವಿನಹಣ್ಣಿನ ಉತ್ಪಾದಕರಾಗಲಿ, ಅಥವಾ ಚರ್ಮದ ಉದ್ಯಮವಾಗಲಿ, ಕಾನ್ಪುರ ಮತ್ತು ಆಗ್ರಾ, ಭಾದೋಹಿಯ ಕಾರ್ಪೆಟ್ ಉದ್ಯಮವಾಗಲಿ ಅಥವಾ ಫರಿದಾಬಾದಿನಕಾರ್ ಉದ್ಯಮವಾಗಲಿ ಎಲ್ಲರಿಗೂ ಅವಕಾಶಗಳನ್ನು ತಂದಿದೆ ಸರಕು ಕಾರಿಡಾರ್ ವಿಶೇಷವಾಗಿ ಕೈಗಾರಿಕೆಯಲ್ಲಿ  ಹಿಂದುಳಿದ ಪೂರ್ವ ಭಾರತಕ್ಕೆ ಹೊಸ ಉತ್ತೇಜನವನ್ನು ನೀಡಲಿದೆ. ಅದರಲ್ಲಿ ಶೇಕಡಾ 60 ರಷ್ಟು ಉತ್ತರ ಪ್ರದೇಶದಲ್ಲಿದೆ, ಆದ್ದರಿಂದ ಯುಪಿ ಪ್ರತಿಯೊಂದು ಸಣ್ಣ ಉದ್ಯಮವೂ ಇದರ ಲಾಭ ಪಡೆಯುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಯುಪಿ ಕಡೆಗೆ ಇದ್ದ ದೇಶ ಮತ್ತು ವಿದೇಶಗಳಲ್ಲಿನ ಕೈಗಾರಿಕೆಗಳ ಆಕರ್ಷಣೆ ಮತ್ತಷ್ಟು ಹೆಚ್ಚಾಗುತ್ತದೆ.

ಸಹೋದರ ಮತ್ತು ಸಹೋದರಿಯರೇ,

ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಿಸಾನ್ ರೈಲಿಗೂ  ಉಪಯೋಗವಾಗಲಿದೆ. ದೇಶದ 100 ನೇ ಕಿಸಾನ್ ರೈಲಿಗೆ  ನಿನ್ನೆ ಚಾಲನೆ ನೀಡಲಾಗಿದೆ. ಕಿಸಾನ್ ರೈಲಿನ ಮೂಲಕ ದೇಶದಾದ್ಯಂತ ದೊಡ್ಡ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳನ್ನು ಸುರಕ್ಷಿತ ಮತ್ತು ಕಡಿಮೆ ಬೆಲೆಗೆ ಸಾಗಿಸಲು ಸಾಧ್ಯವಾಗಿದೆ. ಈಗ ಕಿಸಾನ್ ರೈಲು ಹೊಸ ಸರಕು ಕಾರಿಡಾರ್ನಲ್ಲಿ ತನ್ನ ಗಮ್ಯಸ್ಥಾನವನ್ನು ಇನ್ನಷ್ಟು ವೇಗವಾಗಿ ತಲುಪಲಿದೆ. ಉತ್ತರಪ್ರದೇಶದಲ್ಲೂ ಹಲವಾರು ನಿಲ್ದಾಣಗಳನ್ನು ಕಿಸಾನ್ ರೈಲಿನೊಂದಿಗೆ ಸಂಪರ್ಕಿಸಲಾಗಿದೆ ಮತ್ತು ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಉತ್ತರ ಪ್ರದೇಶದ ರೈಲ್ವೆ ನಿಲ್ದಾಣಗಳ ಬಳಿ ಸಂಗ್ರಹಾಗಾರ ಮತ್ತು ಕೋಲ್ಡ್ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಯುಪಿಯ ನಲವತ್ತೈದು ಗೋದಾಮುಗಳಲ್ಲಿ ಆಧುನಿಕ ಸೌಲಭ್ಯಗಳಿವೆ. ಇದಲ್ಲದೆ, ರಾಜ್ಯದಲ್ಲಿ ಎಂಟು ಹೊಸ ಸರಕುಗಳ ಶೆಡ್ಗಳನ್ನು ಸಹ ಸ್ಥಾಪಿಸಲಾಗಿದೆ. ಉತ್ತರ ಪ್ರದೇಶದಲ್ಲಿ, ವಾರಣಾಸಿ ಮತ್ತು ಗಾಜಿಪುರದ ಎರಡು ದೊಡ್ಡ   ಸರಕು ಕೇಂದ್ರಗಳು ಈಗಾಗಲೇ ರೈತರಿಗೆ ಸೇವೆ ಸಲ್ಲಿಸುತ್ತಿವೆ. ರೈತರು ತಮ್ಮ ಶೀಘ್ರ ಹಾಳಾಗುವ ಉತ್ಪನ್ನಗಳನ್ನು, ಹಣ್ಣುಗಳು ಮತ್ತು ತರಕಾರಿಗಳನ್ನು ಅಲ್ಲಿ ಕಡಿಮೆ ದರದಲ್ಲಿ ಸಂಗ್ರಹಿಸಬಹುದು.

ಸ್ನೇಹಿತರೇ,

ರೀತಿಯ ಮೂಲಸೌಕರ್ಯವು ದೇಶಕ್ಕೆ ತುಂಬಾ ಪ್ರಯೋಜನವನ್ನು ನೀಡುತ್ತಿರುವಾಗ, ಹೀಗೊಂದು ಪ್ರಶ್ನೆಯೂ ಉದ್ಭವಿಸುತ್ತದೆಈದು ಏಕೆ ವಿಳಂಬವಾಯಿತು? ಎಂದು ಯೋಜನೆಯು 2014 ಮೊದಲು ಇದ್ದ ಸರ್ಕಾರದ ಕೆಲಸದ ರೀತಿಗೆ ಸಾಕ್ಷಿಯಾಗಿದೆ. ಯೋಜನೆಗೆ 2006 ರಲ್ಲಿ ಅನುಮೋದನೆ ನೀಡಲಾಯಿತು. ಅದರ ನಂತರ, ಅದು ಕಾಗದ ಮತ್ತು ಫೈಲ್ಗಳಲ್ಲಿ ಮಾತ್ರ ಇತ್ತು. ಕೇಂದ್ರವು ರಾಜ್ಯಗಳೊಂದಿಗೆ ಸಂವಹನ ನಡೆಸಬೇಕಾದ ಗಂಭೀರತೆ ಮತ್ತು ತುರ್ತು ಇರಲಿಲ್ಲಪರಿಣಾಮವಾಗಿ, ಕೆಲಸವು ನೆನೆಗುದಿಗೆ ಬಿದ್ದಿತ್ತು. 2014 ರವರೆಗೆ ಒಂದು ಕಿಲೋಮೀಟರ್ ಟ್ರ್ಯಾಕ್ ಅನ್ನು ಸಹ ಹಾಕಲಾಗದಂತಹ ಪರಿಸ್ಥಿತಿ ಇತ್ತು. ಮಂಜೂರು ಮಾಡಿದ ಹಣವನ್ನು ಸರಿಯಾಗಿ ಖರ್ಚು ಮಾಡಲು ಸಾಧ್ಯವಾಗಲಿಲ್ಲ.

ಸ್ನೇಹಿತರೇ,

2014 ರಲ್ಲಿ ಸರ್ಕಾರ ರಚನೆಯಾದ ನಂತರ, ಯೋಜನೆಯ ಫೈಲ್ಗಳನ್ನು ಮತ್ತೆ ತೆರೆಯಲಾಯಿತು. ಹೊಸದಾಗಿ ಪ್ರಾರಂಭಿಸಲು ಅಧಿಕಾರಿಗಳನ್ನು ಕೇಳಲಾಯಿತು ಮತ್ತು ಬಜೆಟ್ ಸುಮಾರು 11 ಪಟ್ಟು ಹೆಚ್ಚಾಯಿತು, ಅಂದರೆ 45,000 ಕೋಟಿ ರೂಪಾಯಿಗಳಷ್ಟು ವಿಮರ್ಶನಾ ಸಭೆಗಳಲ್ಲಿ, ನಾನು ಅದನ್ನು ಮೇಲ್ವಿಚಾರಣೆ ಮಾಡಿದ್ದೇನೆ, ಸಂಬಂಧಪಟ್ಟವರೊಂದಿಗೆ  ಮಾತುಕತೆ ನಡೆಸಿದೆ ಮತ್ತು ಅದನ್ನು ಪರಿಶೀಲಿಸಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗಿನ ಸಂಪರ್ಕವನ್ನು ನವೀಕರಿಸಿತು ಮತ್ತು ಅವರನ್ನು ಪ್ರೇರೇಪಿಸಿತು. ನಾವು ಹೊಸ ತಂತ್ರಜ್ಞಾನವನ್ನೂ ತಂದಿದ್ದೇವೆಇದರ ಪರಿಣಾಮವೇ ಮುಂದಿನ ಕೆಲವು ತಿಂಗಳುಗಳಲ್ಲಿ ಸುಮಾರು 1100 ಕಿ.ಮೀ ಗಳಷ್ಟು ಕೆಲಸವು ಸಂಪೂರ್ಣವಾಗುವುದು. ಊಹಿಸಿಕೊಳ್ಳಿ, ಎಂಟು ವರ್ಷಗಳಲ್ಲಿ ಒಂದು ಕಿಲೋಮೀಟರ್ ಕೂಡ ಆಗಿರಲಿಲ್ಲ ಮತ್ತು ಈಗ 6-7 ವರ್ಷಗಳಲ್ಲಿ 1100 ಕಿಲೋಮೀಟರ್ ಆಗಿದೆ!

ಸಹೋದರ ಮತ್ತು ಸಹೋದರಿಯರೇ,

ಮೂಲಸೌಕರ್ಯಗಳ ಬಗೆಗಿನ ರಾಜಕೀಯ ನಿರಾಸಕ್ತಿ ಸರಕು ಕಾರಿಡಾರ್ಗೆ ಮಾತ್ರ ನಷ್ಟವಾಗಲಿಲ್ಲ. ಇಡೀ ರೈಲ್ವೆ ವ್ಯವಸ್ಥೆಯೇ ಇದರ ಬಹಳ ದೊಡ್ಡ ಬಲಿಪಶುವಾಗಿದೆ. ಹಿಂದೆ ಚುನಾವಣೆಗಳಲ್ಲಿ ಲಾಭವಾಗುವಂತೆ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿತ್ತು. ಆದರೆ ರೈಲುಗಳು ಓಡಬೇಕಾದ ಹಳಿಗಳ ಮೇಲೆ ಯಾವುದೇ ಹೂಡಿಕೆ ಮಾಡಲಾಗಿಲ್ಲರೈಲ್ವೆ ಜಾಲದ ಆಧುನೀಕರಣದ ಬಗ್ಗೆ ಯಾವುದೇ ಗಂಭೀರ ಚಿಂತನೆ ಇರಲಿಲ್ಲನಮ್ಮ ರೈಲುಗಳ ವೇಗವು ಬಹಳ ಕಡಿಮೆಯಾಗಿತ್ತು ಮತ್ತು ಇಡೀ ಜಾಲವು ಮಾರಣಾಂತಿಕ ಮಾನವರಹಿತ ಗೇಟ್ಗಳಿಂದ ತುಂಬಿತ್ತು.

ಸ್ನೇಹಿತರೇ,

ನಾವು 2014 ನಂತರ ಕಾರ್ಯ ಶೈಲಿಯನ್ನು ಮತ್ತು ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ಪ್ರತ್ಯೇಕ ರೈಲ್ವೇ ಬಜೆಟ್ ವ್ಯವಸ್ಥೆಯನ್ನು ತೆಗೆದುಹಾಕುವ ಮೂಲಕ, ಪ್ರಕಟಣೆಗಳನ್ನು ಮಾಡಿದ ನಂತರ ಮರೆತುಹೋಗುವ ರಾಜಕೀಯವನ್ನು ನಾವು ಬದಲಾಯಿಸಿದ್ದೇವೆ. ನಾವು ರೈಲು ಹಳಿಗಳಲ್ಲಿ ಹೂಡಿಕೆ ಮಾಡಿದ್ದೇವೆ, ಸಾವಿರಾರು ಮಾನವರಹಿತ ಗೇಟ್ಗಳಿಂದ ರೈಲ್ವೆ ಜಾಲವನ್ನು ಮುಕ್ತಗೊಳಿಸಿದ್ದೇವೆ, ವೇಗವಾಗಿ ಚಲಿಸುವ ರೈಲುಗಳಿಗೆ ರೈಲ್ವೆ ಹಳಿಗಳನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ರೈಲು ಜಾಲದ ವಿಸ್ತರಣೆ ಮತ್ತು ವಿದ್ಯುದೀಕರಣ ಎರಡರಲ್ಲೂ ಗಮನಹರಿಸಿದ್ದೇವೆಇಂದು, ವಂದೇ ಭಾರತ್ ಎಕ್ಸ್ಪ್ರೆಸ್ನಂತಹ ಅರೆ ಹೈಸ್ಪೀಡ್ ರೈಲುಗಳು ಸಹ ಚಾಲನೆಯಲ್ಲಿವೆ ಮತ್ತು ಭಾರತೀಯ ರೈಲು ಎಂದಿಗಿಂತಲೂ ಸುರಕ್ಷಿತವಾಗಿದೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ, ರೈಲ್ವೆಯ ಎಲ್ಲಾ ಹಂತಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಅದು ಸ್ವಚ್ಛತೆಯಿರಬಹುದು, ಅಥವಾ ಉತ್ತಮ ಆಹಾರ ಅಥವಾ ಇತರ ಸೌಲಭ್ಯಗಳಿರಬಹುದು, ಅದರ ವ್ಯತ್ಯಾಸವು ಇಂದು ಸ್ಪಷ್ಟವಾಗಿದೆ. ಅಂತೆಯೇ, ರೈಲ್ವೆಯ ಉತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾರತವು ಸ್ವಾವಲಂಬನೆಯಲ್ಲಿ ಭಾರಿ ಜಿಗಿತವನ್ನು ಮಾಡಿದೆಭಾರತ ಈಗ ಆಧುನಿಕ ರೈಲುಗಳನ್ನು ನಿರ್ಮಿಸುತ್ತಿದೆ ಮತ್ತು ಅದನ್ನು ರಫ್ತು ಮಾಡುತ್ತಿದೆ. ಕೇವಲ ಯುಪಿಯಲ್ಲಿಯೇ, ವಾರಣಾಸಿಯಲ್ಲಿನ ಲೋಕೋಮೋಟಿವ್ ವರ್ಕ್ಸ್ ಭಾರತದಲ್ಲಿ ದೊಡ್ಡ ವಿದ್ಯುತ್ ಲೋಕೋಮೋಟಿವ್ ಕೇಂದ್ರವಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ, ಕೇವಲ ಡೆಂಟಿಂಗ್ಮತ್ತು ಪೇಂಟಿಗಗಳಿಗೆ ಮಾತ್ರ ಸೀಮಿತವಾಗಿದ್ದ ರಾಯ್ಬರೆಲಿಯ ಆಧುನಿಕ ಕೋಚ್ ಕಾರ್ಖಾನೆಯನ್ನು ನಾವು ನವೀಕರಿಸಿದ್ದೇವೆ. ಅಲ್ಲಿ ಇಲ್ಲಿಯವರೆಗೆ 5000 ಕ್ಕೂ ಹೆಚ್ಚು ಹೊಸ ರೈಲ್ವೆ ಬೋಗಿಗಳನ್ನು ಮಾಡಲಾಗಿದೆಅಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಬೋಗಿಗಳನ್ನು ಈಗ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಸಹೋದರರು ಮತ್ತು ಸಹೋದರಿಯರು,

ದೇಶದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ರಾಜಕೀಯದಿಂದ ದೂರವಿಡಬೇಕು ಎಂದು ನಮ್ಮ ಹಿಂದಿನ ಅನುಭವಗಳು ತೋರಿಸುತ್ತವೆ. ದೇಶದ ಮೂಲಸೌಕರ್ಯವು ದೇಶದ ಅಭಿವೃದ್ಧಿಯ ಹಾದಿಯಾಗಿದೆ ಮತ್ತು ಅದು ಯಾವುದೇ ಪಕ್ಷದ ಸಿದ್ಧಾಂತವಲ್ಲಇದು 5 ವರ್ಷಗಳ ರಾಜಕೀಯವಲ್ಲ, ಆದರೆ ಮುಂಬರುವ ಹಲವು ತಲೆಮಾರುಗಳಿಗೆ ಅನುಕೂಲವಾಗುವ ಉದ್ದೇಶವಾಗಿದೆರಾಜಕೀಯ ಪಕ್ಷಗಳು ಸ್ಪರ್ಧಿಸಬೇಕಾದರೆ, ಮೂಲಸೌಕರ್ಯ, ವೇಗ ಮತ್ತು ಪ್ರಮಾಣದ ಗುಣಮಟ್ಟದ ಮೇಲೆ ಸ್ಪರ್ಧಿಸಬೇಕು. ಪ್ರದರ್ಶನಗಳು ಮತ್ತು ಚಳುವಳಿಗಳ ಸಮಯದಲ್ಲಿ ನಾವು ಹೆಚ್ಚಾಗಿ ನೋಡುವ ಮತ್ತೊಂದು ಮನಸ್ಥಿತಿಯನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಮನಸ್ಥಿತಿ ದೇಶದ ಮೂಲಸೌಕರ್ಯ ಮತ್ತು ಆಸ್ತಿಗೆ ಹಾನಿ ಮಾಡುವುದು. ಮೂಲಸೌಕರ್ಯಗಳು ಮತ್ತು ಸ್ವತ್ತುಗಳು ಯಾವುದೇ ನಾಯಕ, ಪಕ್ಷ ಅಥವಾ ಯಾವುದೇ ಸರ್ಕಾರಕ್ಕೆ ಸೇರಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದು ದೇಶದ ಆಸ್ತಿ. ಇದು ಪ್ರತಿಯೊಬ್ಬ ಬಡವರು, ತೆರಿಗೆದಾರರು, ಮಧ್ಯಮ ವರ್ಗದವರು ಮತ್ತು ಸಮಾಜದ ಪ್ರತಿಯೊಂದು ವರ್ಗದವರ ಬೆವರಿನಿಂದ ಆಗಿದೆ. ಅದಕ್ಕೆ ಮಾಡುವ ಯಾವುದೇ ಹಾನಿಯು ದೇಶದ ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ಮಾಡುವ ಹಾನಿಯಾಗಿದೆ. ಆದ್ದರಿಂದ, ನಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ವ್ಯಕ್ತಪಡಿಸುವಾಗ, ನಮ್ಮ ರಾಷ್ಟ್ರೀಯ ಕರ್ತವ್ಯಗಳನ್ನು ನಾವು ಎಂದಿಗೂ ಮರೆಯಬಾರದು.

ಸ್ನೇಹಿತರೇ,

ಆಗಾಗ್ಗೆ ಠೀಕೆಗೆ ಗುರಿಯಾಗುವ ರೈಲ್ವೆಯು, ಕಠಿಣ ಪರಿಸ್ಥಿತಿಯಲ್ಲಿಯೂ ದೇಶಕ್ಕೆ ಅದರ ಸೇವೆ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ಕೊರೊನಾ ಅವಧಿಯಲ್ಲಿ ತೋರಿಸಿದೆ. ಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ತಮ್ಮ ಗ್ರಾಮವನ್ನು ತಲುಪಲು, ದೇಶದ ಮೂಲೆ ಮೂಲೆಗೆ ಔಷಧಿ ಮತ್ತು ಪಡಿತರವನ್ನು ರವಾನಿಸಲು ಅಥವಾ ಸಂಚಾಲಿತ ಕೊರೊನಾ ಆಸ್ಪತ್ರೆಯಿರಲಿ, ದೇಶದ ರೈಲ್ವೆಯ ಸಂಪೂರ್ಣ ಜಾಲದ, ಎಲ್ಲಾ ನೌಕರರ ಸೇವೆಯನ್ನು ದೇಶವು ನೆನೆಯುತ್ತದೆ. ಅಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ಗ್ರಾಮಗಳಿಗೆ ಮರಳಿದ ಕಾರ್ಮಿಕ ಬಂಧುಗಳಿಗೆ ರೈಲ್ವೆಯು ಒಂದು ಲಕ್ಷಕ್ಕೂ ಹೆಚ್ಚು ದಿನಗಳ ಉದ್ಯೋಗವನ್ನು ಸೃಷ್ಟಿಸಿದೆ. ಸೇವೆ, ಸಾಮರಸ್ಯ ಮತ್ತು ಸಮೃದ್ಧಿಯ ಅಚಲ ಯೋಚನೆಯು ರಾಷ್ಟ್ರದೆಡೆಗೆ ಮುಂದುವರಿಯುತ್ತದೆ ಎಂದು ನನಗೆ ವಿಶ್ವಾಸವಿದೆ.

ಮತ್ತೊಮ್ಮೆ, ಯುಪಿ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಗೆ ಸರಕು ಸಾಗಣೆ ಕಾರಿಡಾರ್ಗಳ ಹೊಸ ಸೌಲಭ್ಯಕ್ಕಾಗಿ ಮತ್ತು ರೈಲ್ವೆಯ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಸರಕು ಕಾರಿಡಾರ್ ಮುಂದಿನ ಕಾರ್ಯಗಳು ಸಹ ಹೆಚ್ಚಿನ ವೇಗದಲ್ಲಿ ನಡೆಯಬೇಕು2014 ನಂತರ ನಾವು ತಂದ ವೇಗವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕು. ಆದ್ದರಿಂದ, ನನ್ನ ಎಲ್ಲಾ ರೈಲ್ವೆ ಸಹೋದ್ಯೋಗಿಗಳು ಖಂಡಿತವಾಗಿಯೂ ದೇಶದ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆಯಿದೆನಿಮ್ಮೆಲ್ಲರಿಗೂ ಅಭಿನಂದನೆಗಳು !

ಬಹಳ ಬಹಳ ಧನ್ಯವಾದಗಳು!

***



(Release ID: 1685196) Visitor Counter : 116