ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸೋಂಕು ಪತ್ತೆ ಪರೀಕ್ಷೆ ಗಣನೀಯ ಹೆಚ್ಚಳ; 15 ಕೋಟಿ ದಾಟಿದ ಒಟ್ಟು ಪರೀಕ್ಷೆಗಳ ಸಂಖ್ಯೆ


ಕಳೆದ ಹತ್ತು ದಿನಗಳಲ್ಲಿ ಒಂದು ಕೋಟಿ ಪರೀಕ್ಷೆ

ಕಳೆದ 11 ದಿನಗಳಿಂದೀಚೆಗೆ ಸತತವಾಗಿ 40 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣ ದಾಖಲು

ಕಳೆದ ಐದು ದಿನಗಳಿಂದ ಪ್ರತಿ ದಿನ 500ಕ್ಕಿಂತ ಕಡಿಮೆ ಸೋಂಕಿತರ ಸಾವು

Posted On: 10 DEC 2020 10:35AM by PIB Bengaluru

ಜಾಗತಿಕ ಸಾಂಕ್ರಾಮಿಕ ವಿರುದ್ಧದ ಸಮರದಲ್ಲಿ ಭಾರತ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದೆ. ದೇಶದಲ್ಲಿ ಒಟ್ಟಾರೆ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ 15 ಕೋಟಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ 9,22,959 ಸೋಂಕು ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತ ಒಟ್ಟಾರೆ ಈವರೆಗೆ  15,07,59,726  ಪರೀಕ್ಷೆಗಳನ್ನು ನಡೆಸಿದಂತಾಗಿದೆ.

ಕಳೆದ ಹತ್ತು ದಿನಗಳ ಅವಧಿಯಲ್ಲಿ ಒಂದು ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಸಮಗ್ರ ಮತ್ತು ವ್ಯಾಪಕ ಪರೀಕ್ಷೆಗಳನ್ನು ಸುಸ್ಥಿರ ರೀತಿಯಲ್ಲಿ ನಡೆಸುತ್ತಿರುವುದರ ಪರಿಣಾಮ ಪಾಸಿಟಿವಿಟಿ ದರ ಕಡಿಮೆಯಾಗಿದೆ.

WhatsApp Image 2020-12-10 at 10.10.34 AM.jpeg

ಮತ್ತೊಂದು ಮಹತ್ವದ ಸಾಧನೆಯಲ್ಲಿ ಭಾರತ ಸತತ 11 ದಿನಗಳಿಂದೀಚೆಗೆ ಪ್ರತಿ ದಿನ 40,000ರಕ್ಕಿಂತ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೇವಲ 31,521 ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

WhatsApp Image 2020-12-10 at 10.10.50 AM.jpeg

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 37,725 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,72,293 ಇದ್ದು, ದೇಶದ ಒಟ್ಟು ಪಾಸಿಟಿವ್ ಸಂಖ್ಯೆಗಳಿಗೆ ಹೋಲಿಸಿದರೆ ಇದು ಶೇ.3.81ರಷ್ಟು ಮಾತ್ರ.

WhatsApp Image 2020-12-10 at 10.04.07 AM.jpeg

ಒಟ್ಟಾರೆ ಗುಣಮುಖರಾಗಿರುವವರ ಸಂಖ್ಯೆ ಇಂದು 92.5ಲಕ್ಷ(92,53,306) ದಾಟಿದೆ. ಚೇತರಿಕೆ ಪ್ರಮಾಣ ಸುಧಾರಣೆಯಾಗಿ ಶೇ.94.74ಕ್ಕೆ ಏರಿಕೆಯಾಗಿದೆ. ಗುಣಮುಖರಾಗಿರುವವರ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಕ್ರಮೇಣ ಹೆಚ್ಚಾಗುತ್ತಿದೆ ಮತ್ತು ಸದ್ಯ  8,881,013 ರಷ್ಟಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಶೇ.77.30ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಕೋವಿಡ್ ನಿಂದ 5,051 ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ಕೇರಳ ಮತ್ತು ದೆಹಲಿಯಲ್ಲಿ ಕ್ರಮೇಣ 4,647 ಮತ್ತು 4,177 ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದಾರೆ.

WhatsApp Image 2020-12-10 at 9.58.28 AM.jpeg

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.74.65ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 4,981 ಪ್ರಕರಣಗಳು ದಾಖಲಾಗಿವೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ನಿನ್ನೆ ಕ್ರಮವಾಗಿ 4,875 ಮತ್ತು 2,956 ಪ್ರಕರಣಗಳು ವರದಿಯಾಗಿವೆ.

WhatsApp Image 2020-12-10 at 9.58.25 AM.jpeg

ಕಳೆದ 24 ಗಂಟೆಗಳಲ್ಲಿ 412 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ ಶೇ.77.67ರಷ್ಟು ಪ್ರಕರಣ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಶೇ.18.20ರಷ್ಟು ಸಾವು ಅಂದರೆ 75 ಸೋಂಕಿತರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 50 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಪ್ರಮಾಣ ಅಲ್ಲಿ 12.13ರಷ್ಟಿದೆ.

WhatsApp Image 2020-12-10 at 9.58.26 AM.jpeg

ಕಳೆದ ಐದು ದಿನಗಳಿಂದೀಚೆಗೆ ಪ್ರತಿ ದಿನ 500ಕ್ಕಿಂತ ಕಡಿಮೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

WhatsApp Image 2020-12-10 at 10.13.53 AM.jpeg

***



(Release ID: 1680218) Visitor Counter : 232