ಪ್ರಧಾನ ಮಂತ್ರಿಯವರ ಕಛೇರಿ
ಪ್ಯಾನ್ ಐಐಟಿ ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಭಾಷಣ
Posted On:
04 DEC 2020 10:22PM by PIB Bengaluru
ಶ್ರೀ ಸುಂದರಮ್ ಶ್ರೀನಿವಾಸನ್ ಅವರೇ,
ಅಧ್ಯಕ್ಷರು,
ಪ್ಯಾನ್ ಐಐಟಿ ಯುಎಸ್ಎ,
ಗೌರವಾನ್ವಿತ ಹಿರಿಯ ವಿದ್ಯಾರ್ಥಿಗಳೇ,
ಸ್ನೇಹಿತರೆ,
ನಾನು ನಿಮ್ಮೆಲ್ಲರೊಂದಿಗೆ ಸೇರಿರುವುದಕ್ಕೆ ಹರ್ಷಿತನಾಗಿದ್ದೇನೆ. ಚೆನ್ನೈ, ಮುಂಬೈ, ಗುವಾಹಟಿಯಲ್ಲಿನ ಐಐಟಿಗಳಲ್ಲಿ ಮತ್ತು ಇತ್ತೀಚೆಗೆ ದೆಹಲಿಯ ಐಐಟಿಗಳಲ್ಲಿ ಘಟಿಕೋತ್ಸವ ಉದ್ದೇಶಿಸಿ ಮಾತನಾಡುವ ಅವಕಾಶ ನನಗೆ ದೊರೆತಿತ್ತು. ಐಐಟಿಗಳ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ನಂತರ ನಾನು ಸದಾ ಪ್ರಭಾವಿತನಾಗುತ್ತೇನೆ. ನಾನು ಭಾರತದ ಮತ್ತು ನಮ್ಮ ಭೂಗ್ರಹದ ಭವಿಷ್ಯದ ಬಗ್ಗೆ ಉಲ್ಲಾಸಿತನಾಗಿ ಮತ್ತು ಪುನರ್ ಖಾತ್ರಿಯೊಂದಿಗೆ ಹಿಂತಿರುಗಿಸುತ್ತೇನೆ.
ಸ್ನೇಹಿತರೆ,
ನೀವು ಮಾನವತೆಯ ಸೇವೆ ಮಾಡುವ ಭಾರತದ ಪುತ್ರರು ಮತ್ತು ಪುತ್ರಿಯರಾಗಿದ್ದೀರಿ. ನಿಮ್ಮ ನಾವಿನ್ಯತೆಯ ಸ್ಫೂರ್ತಿ ವಿಶ್ವದ ದೊಡ್ಡ ಕನಸಿಗೆ ನೆರವಾಗುತ್ತಿದೆ. ಇದು ನಿಮ್ಮೊಳಗಿನ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ. ಬಹುಶಃ ಇದು ನಿಮ್ಮ ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯಗಳಿಗೆ ಎರಡನೆಯದಾಗುತ್ತದೆ. ಭೂಗ್ರಹದಾದ್ಯಂತ ಆರ್ಥಿಕ ಮೌಲ್ಯಕ್ಕೆ ಐಐಟಿ ಹಿರಿಯ ವಿದ್ಯಾರ್ಥಿಗಳ ಸಂಚಿತ ಕೊಡುಗೆಯನ್ನು ಯಾರಾದರೂ ಲೆಕ್ಕ ಹಾಕಬೇಕು. ಇದು ಸಮಂಜಸ ಗಾತ್ರ ಹೊಂದಿರುವ ರಾಷ್ಟ್ರದ ಜಿಡಿಪಿಯೊಂದಿಗೆ ಹೊಂದಿಕೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಈ ರೀತಿಯ ಕೂಟದಲ್ಲಿ ಕೇವಲ ಐದು ಅಥವಾ ಆರು ಐಐಟಿಗಳ ಹಿರಿಯ ವಿದ್ಯಾರ್ಥಿಗಳು ಸೇರಬಹುದಾದ ಕಾಲವೊಂದಿತ್ತು. ಆ ಸಂಖ್ಯೆ ಈಗ ಬೆಳೆಯುತ್ತಿದೆ ಮತ್ತು ಎರಡು ಡಜನ್ ಸಮೀಪದಲ್ಲಿದೆ. ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದೇ ಸಮಯದಲ್ಲಿ, ಐಐಟಿಗಳ ಬ್ರ್ಯಾಂಡ್ ಮಾತ್ರ ಬಲಿಷ್ಠವಾಗಿದೆ ಎಂಬುದನ್ನು ನಾವು ಖಚಿತಪಡಿಸಿದ್ದೇವೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ಹ್ಯಾಕಥಾನ್ ಗಳ ಸಂಸ್ಕೃತಿ ಬೆಳೆಯುತ್ತಿರುವುದನ್ನು ನೀವು ಗಮನಿಸಿರಬಹುದು. ಈ ಕೆಲವು ಹ್ಯಾಕಥಾನ್ ಗಳಲ್ಲಿ ಭಾಗಿಯಾಗುವ ಅವಕಾಶವೂ ನನಗೆ ದೊರೆತಿದೆ. ಈ ಹ್ಯಾಕಥಾನ್ ಗಳಲ್ಲಿ, ಯುವ ಮನಸ್ಸುಗಳು ರಾಷ್ಟ್ರೀಯ ಮತ್ತು ಜಾಗತಿಕ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರಗಳನ್ನು ನೀಡುತ್ತಿರುವುದನ್ನೂ ನಾನು ನೋಡಿದ್ದೇನೆ.
ನಾವು ಈ ಕ್ಷೇತ್ರದಲ್ಲಿ ಆಗ್ನೇಯ ಏಷ್ಯಾ ಮತ್ತು ಯೂರೋಪ್ ನ ಹಲವು ರಾಷ್ಟ್ರಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಯುವಜನರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸುವುದನ್ನು ಖಾತ್ರಿಪಡಿಸುವುದು ಮತ್ತು ಜಾಗತಿಕವಾಗಿ ಉತ್ತಮ ರೂಢಿಗಳಿಂದ ಕಲಿಯುವುದು ನಮ್ಮ ಉದ್ದೇಶ. ಅಕ್ಟೋಬರ್ 2, ಗಾಂಧಿ ಜಯಂತಿಯಂದು ಭಾರತವು ವೈಭವ್ ಶೃಂಗಸಭೆಯನ್ನು ಆಯೋಜಿಸಿತ್ತು.
ಸುಮಾರು ಒಂದು ತಿಂಗಳ ಕಾಲ ನಡೆದ ಈ ಶೃಂಗಸಭೆಯು ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಉನ್ನತ-ಗುಣಮಟ್ಟದ ಪ್ರತಿಭೆಗಳನ್ನು ಒಗ್ಗೂಡಿಸಿತು. ಭಾಗವಹಿಸುವವರ ಸಂಖ್ಯೆ ಸುಮಾರು ಇಪ್ಪತ್ಮೂರು ಸಾವಿರವಾಗಿತ್ತು. 230 ಗೋಷ್ಠಿ ಚರ್ಚೆಗಳು ನಡೆದವು. ಸುಮಾರು 730 ಗಂಟೆಗಳ ಚರ್ಚೆಗಳು ನಡೆದವು. ಈ ಶೃಂಗಸಭೆಯು ಫಲಪ್ರದವಾಗಿದ್ದು, ಇದು ವಿಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭವಿಷ್ಯದ ಸಹಯೋಗಗಳಿಗೆ ನಾಂದಿ ಹಾಡಿತು.
ಸ್ನೇಹಿತರೆ,
ಭಾರತವು ಕಾರ್ಯನಿರ್ವಹಣೆಯ ರೀತಿಯಲ್ಲಿ ಸಾಗರ ಬದಲಾವಣೆಗೆ ಸಾಕ್ಷಿಯಾಗಿದೆ. ಎಂದಿಗೂ ಸಂಭವಿಸುವುದಿಲ್ಲ ಎಂದು ನಾವು ಭಾವಿಸಿದ್ದವುಗಳನ್ನು ಕೂಡ ಹೆಚ್ಚಿನ ವೇಗದಲ್ಲಿ ತಲುಪಿಸಲಾಗುತ್ತಿದೆ. ನಿಮಗೆ ಚೆನ್ನಾಗಿ ತಿಳಿದಿರುವ ಕ್ಷೇತ್ರದಿಂದ ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಈ ಮೊದಲು, ಐಐಟಿಗಳು ಏರೋ-ಸ್ಪೇಸ್ ಎಂಜಿನಿಯರ್ ಗಳನ್ನು ರೂಪಿಸಿದಾಗ, ಅವರನ್ನು ನೇಮಿಸಿಕೊಳ್ಳಲು ಬಲವಾದ ದೇಶೀಯ ಕೈಗಾರಿಕಾ ಪರಿಸರ ವ್ಯವಸ್ಥೆ ಇರಲಿಲ್ಲ. ಇಂದು, ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಐತಿಹಾಸಿಕ ಸುಧಾರಣೆಗಳೊಂದಿಗೆ, ಮಾನವೀಯತೆಯ ಹಿಂದಿನ ಫ್ರಾಂಟಿಯರ್ ಭಾರತೀಯ ಪ್ರತಿಭೆಗಳಿಗೆ ಮುಕ್ತವಾಗಿದೆ.
ಹೀಗಾಗಿಯೇ ಭಾರತದಲ್ಲಿ ನಿತ್ಯ ಹೊಸ ಬಾಹ್ಯಾಕಾಶ ತಂತ್ರಜ್ಞಾನ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ನಿಮ್ಮಲ್ಲಿ ಕೆಲವರು ಮೊದಲು ಯಾರೂ ಹೋಗದ ಸ್ಥಳಗಳಿಗೆ ಧೈರ್ಯದಿಂದ ಹೋಗುತ್ತಿದ್ದೀರೆ ಎಂಬುದು ನನಗೆ ಖಾತ್ರಿಯಾಗಿದೆ "! ಭಾರತದ ಹಲವು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಮತ್ತು ನಾವೀನ್ಯ ಕಾರ್ಯಗಳು ನಡೆಯುತ್ತಿವೆ. ನಮ್ಮದು" ಸುಧಾರಣೆ, ಪ್ರದರ್ಶನ, ಪರಿವರ್ತನೆ" ತತ್ವಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ.
ಸುಧಾರಣೆಗಳಿಂದ ಯಾವುದೇ ಕ್ಷೇತ್ರ ಬಿಟ್ಟುಹೋಗಿಲ್ಲ. ಕೃಷಿ, ಅಣು ಇಂಧನ, ರಕ್ಷಣೆ, ಶಿಕ್ಷಣ, ಆರೋಗ್ಯ ಆರೈಕೆ, ಹಣಕಾಸು, ಬ್ಯಾಂಕಿಂಗ್, ತೆರಿಗೆ ಎಲ್ಲ ಸುಧಾರಣೆಯಾಗಿದೆ. ಪಟ್ಟಿ ಹೀಗೆ ಮುಂದುವರಿಯುತ್ತದೆ. ನಾವು ಕಾರ್ಮಿಕ ವಲಯದಲ್ಲಿ ಮಹತ್ವದ ಸುಧಾರಣೆ ಮಾಡಿದ್ದೇವೆ. ಕೇಂದ್ರದ 44 ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳನ್ನಾಗಿ ಮಾಡಿದ್ದೇವೆ. ನಮ್ಮ ಸಾಂಸ್ಥಿಕ ತೆರಿಗೆ ದರ ವಿಶ್ವದಲ್ಲೇ ಅತ್ಯಂತ ಕಡಿಮೆಯಲ್ಲಿ ಒಂದಾಗಿದೆ.
ಕೆಲವು ವಾರಗಳ ಹಿಂದೆ ಕೇಂದ್ರ ಸಂಪುಟ 10 ಪ್ರಮುಖ ವಲಯಗಳಲ್ಲಿ ಉತ್ಪಾದನೆ ಸಂಪರ್ಕಿತ ಉಪಕ್ರಮ ಯೋಜನೆಗೆ ಅನುಮೋದನೆ ನೀಡಿತು. ಈ ನಿರ್ಧಾರವನ್ನು ರಫ್ತು ಹೆಚ್ಚಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಕೈಗೊಳ್ಳಲಾಗಿದೆ. ಈ ವಲಯಗಳಲ್ಲಿ ಬ್ಯಾಟರಿ, ಎಲೆಕ್ಟ್ರಾನಿಕ್, ಔಷಧ, ವಾಹನೋದ್ಯಮ, ದೂರಸಂಪರ್ಕ, ಸೌರ ಇಂಧನ ಮತ್ತು ಇತರೆ ಸೇರಿವೆ. ಈ ವಲಯಗಳ ಪ್ರತಿಯೊಂದೂ ತಂತ್ರಜ್ಞಾನದೊಂದಿಗೆ ಸಂಪರ್ಕಿತವಾಗಿವೆ. ಈ ಅವಕಾಶಗಳು ಬಳಕೆಗೆ ಕಾಯುತ್ತಿವೆ.
ಕೋವಿಡ್ -19 ಪರೀಕ್ಷೆಯ ಸಮಯದಲ್ಲಿ ಭಾರತ ದಾಖಲೆಯ ಹೂಡಿಕೆಯನ್ನು ಕಂಡಿದೆ. ಇವುಗಳಲ್ಲಿ ಬಹುತೇಕ ಹೂಡಿಕೆ ತಂತ್ರಜ್ಞಾನ ವಲಯದಲ್ಲಿ ಆಗಿದೆ. ಒಟ್ಟಾರೆ ವಿಶ್ವ ಭಾರತವನ್ನು ವಿಶ್ವಾಸಾರ್ಹ ಮತ್ತು ಭರವಸೆಯ ಸಹಯೋಗಿಯಾಗಿ ನೋಡುತ್ತಿರುವುದು ಸ್ಪಷ್ಟವಾಗಿದೆ.
ಸ್ನೇಹಿತರೆ,
ಪ್ಯಾನ್ ಐಐಟಿ ಚಳವಳಿಯ ಸಂಘಟಿತ ಶಕ್ತಿ ನಮ್ಮ ಆತ್ಮನಿರ್ಭರ ಭಾರತ –ಸ್ವಾವಲಂಬಿ ಭಾರತ-ದ ಕನಸನ್ನು ನನಸು ಮಾಡಲು ಇಂಬು ನೀಡಬಹುದಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಕೆಲವು ನಿರ್ಣಾಯಕ ತಿರುವುಗಳಲ್ಲಿ, ಪ್ರಪಂಚದಾದ್ಯಂತ ಇರುವ ಅನಿವಾಸಿ ಭಾರತೀಯ ಸಮುದಾಯ ಪುನರುಜ್ಜೀವಗೊಂಡ ಭಾರತದಲ್ಲಿ ತಮ್ಮ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಅವರು ನವ ಭಾರತದ ರಾಯಭಾರಿಗಳಾಗಿದ್ದಾರೆ ಮತ್ತು, ಭಾರತದ ದೃಷ್ಟಿಕೋನಗಳನ್ನು ಸರಿಯಾದ ಸ್ಫೂರ್ತಿಯೊಂದಿಗೆ ಜಗತ್ತು ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸುವಲ್ಲಿ ಅವರ ಧ್ವನಿ ನಿರ್ಣಾಯಕವಾಗಿದೆ.
ಸ್ನೇಹಿತರೆ,
ಇನ್ನು ಎರಡು ವರ್ಷಗಳ ಬಳಿಕ, 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದೆ. ಈ ಸಂದರ್ಭದಲ್ಲಿ ನಾನು ಪ್ಯಾನ್‌ಐಐಟಿ ಆಂದೋಲನಕ್ಕೆ "ಭಾರತಕ್ಕೆ ಮರಳಿ ನೀಡೋಣ" ಕುರಿತು ಇನ್ನೂ ಹೆಚ್ಚಿನ ಮಾನದಂಡವನ್ನು ನಿಗದಿಪಡಿಸುವಂತೆ ಒತ್ತಾಯಿಸುತ್ತೇನೆ. ನೀವು ಕಲಿತ ಶಿಕ್ಷಣ ಸಂಸ್ಥೆಯ ಬಗೆಗಿನ ನಿಮ್ಮ ಪ್ರಯತ್ನ ಸ್ಫೂರ್ತಿದಾಯಕ. ನಿಮ್ಮಲ್ಲಿ ಅನೇಕರು ನಿಮ್ಮ ಕಿರಿಯರಿಗೆ ಸೂಕ್ತ ವೃತ್ತಿ ಜೀವನ ಮಾರ್ಗ – ಶಿಕ್ಷಣದಲ್ಲಿ ಅಥವಾ ಕೈಗಾರಿಕೆಯಲ್ಲಿ- ಕೈಗೊಳ್ಳಲು ಮಾರ್ಗದರ್ಶನ ಮಾಡಿದ್ದೀರಿ. ಅವರಲ್ಲಿ ಅನೇಕರು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಬಯಸಿದ್ದಾರೆ. ಅವರು ಉಜ್ವಲ ಮತ್ತು ಆತ್ಮವಿಶ್ವಾಸದ ಯುವಕರಾಗಿದ್ದು ತಮ್ಮ ಕಠಿಣ ಪರಿಶ್ರಮ ಮತ್ತು ನಾವೀನ್ಯತೆಗಳ ಮೂಲಕ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
ಈಗ, ನಾನು ಈ ಪ್ರಯತ್ನದಲ್ಲೂ ಪ್ರೇರೇಪಿಸುವಂತೆ ನಿಮ್ಮನ್ನು ಆಹ್ವಾನಿಸುತ್ತೇನೆ. ನಾವು ಹೇಗೆ ನಮ್ಮ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವ ಬಗ್ಗೆ ನಿಮ್ಮ ಕಲ್ಪನೆಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಿ. ನೀವು ನಿಮ್ಮ ಅಭಿಪ್ರಾಯಗಳನ್ನು ಮೈಗೌ ನಲ್ಲಿ ಹಂಚಿಕೊಳ್ಳಬಹುದು ಅಥವಾ ನರೇಂದ್ರ ಮೋದಿ ಆಪ್ ನಲ್ಲಿ ನೇರವಾಗಿ ಹಂಚಿಕೊಳ್ಳಬಹುದು.
ಸ್ನೇಹಿತರೆ,
ಇಂದಿನ ನಮ್ಮ ಕಾರ್ಯಗಳು ನಮ್ಮ ಭೂಗ್ರಹದ ನಾಳೆಯನ್ನು ರೂಪಿಸುತ್ತವೆ. ಕೋವಿಡೋತ್ತರ ವ್ಯವಸ್ಥೆಯು ಎಲ್ಲ ಕ್ಷೇತ್ರಗಳಲ್ಲಿ ಪುನರ್ ಕಲಿಕೆ, ಪುನರ್ ಚಿಂತನೆ, ಪುನರ್ ನಾವಿನ್ಯತೆ ಮತ್ತು ಮರು ಆವಿಷ್ಕಾರದ ಕುರಿತಾಗಿರುತ್ತದೆ. ಇದರ ಜೊತೆಗೆ ಸರಣಿ ಆರ್ಥಿಕ ಸುಧಾರಣೆಗಳು ನಮ್ಮ ಭೂಗ್ರಹವನ್ನು ಪುನಶ್ಚೇತನಗೊಳಿಸುತ್ತವೆ. ಇದು ಸುಗಮ ಜೀವನ ಖಾತ್ರಿಪಡಿಸುತ್ತದೆ, ದುರ್ಬಲರು ಮತ್ತು ಬಡವರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕದ ಸಮಯದಲ್ಲಿ ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಹಲವು ನಾವಿನ್ಯತೆಗಳು ಹೇಗೆ ಹೊರಹೊಮ್ಮಿದವು ಎಂಬುದನ್ನು ನಾವು ನೋಡಿದ್ದೇವೆ. ಹೊಸ ಸಾಮಾನ್ಯ ಸ್ಥಿತಿಗೆ ಹೊಂದಿಕೊಳ್ಳಲು ಜಗತ್ತಿಗೆ ಇಂದು ಕಾರ್ಯಸಾಧ್ಯವಾದ ಪರಿಹಾರಗಳು ಬೇಕಾಗುತ್ತವೆ, ಮತ್ತು, ಈ ಸಂವಾದವನ್ನು ನಡೆಸಲು ನಿಮಗಿಂತ ಉತ್ತಮರು ಮತ್ತ್ಯಾರು? ಇಂದು, ಹೆಚ್ಚಿನ ಸಂಖ್ಯೆಯ ಐಐಟಿ ಹಿರಿಯ ವಿದ್ಯಾರ್ಥಿಗಳು ಜಾಗತಿಕ ನಾಯಕತ್ವದ ಸ್ಥಾನಗಳಲ್ಲಿದ್ದಾರೆ. ನಿಮ್ಮ ಬಲವಾದ ಜಾಲಗಳು ಉದ್ಯಮ, ಅಕಾಡೆಮಿ, ಕಲೆ, ಸರ್ಕಾರಗಳಲ್ಲಿ ಹರಡಿವೆ. ಮಾನವ ಚಟುವಟಿಕೆ ಮತ್ತು ಉತ್ಕೃಷ್ಟತೆಯ ಪ್ರತಿಯೊಂದು ಕ್ಷೇತ್ರದಲ್ಲೂ ನೀವಿದ್ದೀರಿ. ನಾನು ಪ್ರತಿ ದಿನ ಅಲ್ಲದಿದ್ದರೂ! ಪ್ರತಿ ವಾರ ನಿಮ್ಮ ಸಮುದಾಯದ ಒಬ್ಬರು ಅಥವಾ ಹೆಚ್ಚಿನವರೊಂದಿಗೆ ಸಂವಹನ ನಡೆಸುತ್ತೇನೆ, ನಾನು ಹೊರಹೊಮ್ಮುತ್ತಿರುವ ತಂತ್ರಜ್ಞಾನ ವ್ಯವಸ್ಥೆಯ ನವ ಯುಗದಲ್ಲಿ ಚರ್ಚಿಸಿ, ಸಮಾಲೋಚಿಸಿ, ಪರಿಹಾರ ಕಂಡುಹಿಡಿಯಲು ಕೊಡುಗೆ ನೀಡುವಂತೆ ಆಗ್ರಹಿಸುತ್ತೇನೆ. ಜವಾಬ್ದಾರಿ ಗುರುತರವಾಗಿದೆ, ಆದರೂ ನಿಮ್ಮ ತೋಳ್ಬಲ ಸಮರ್ಥವಾಗಿದೆ.
ಇದರೊಂದಿಗೆ, “ಭವಿಷ್ಯ ಈಗಿದೆ’ ಎಂಬ ಸೂಕ್ತವಾದ ಧ್ಯೇಯದ ಈ ವರ್ಷದ ನಿಮ್ಮ ಸಮಾವೇಶಕ್ಕೆ ನಾನು ಶುಭ ಕೋರುತ್ತೇನೆ.
ಶುಭವಾಗಲಿ.
ಮತ್ತು ಧನ್ಯವಾದಗಳು.
***
(Release ID: 1678768)
Visitor Counter : 264
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam