ಪ್ರಧಾನ ಮಂತ್ರಿಯವರ ಕಛೇರಿ

ಲಕ್ನೋ ವಿಶ್ವವಿದ್ಯಾಲಯದ ಶತಮಾನೋತ್ಸವ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣ

Posted On: 25 NOV 2020 9:02PM by PIB Bengaluru

ನಮಸ್ಕಾರ!

ಕೇಂದ್ರ ಸಂಪುಟದಲ್ಲಿ ನನ್ನ ಹಿರಿಯ ಸಹೋದ್ಯೋಗಿ ಮತ್ತು ಲಕ್ನೋ ಸಂಸದರಾದ ಶ್ರೀ ರಾಜನಾಥ್ ಸಿ ಗ್ ಜೀ, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಉಪ ಮುಖ್ಯಮಂತ್ರಿ ಡಾ. ದಿನೇಶ್ ಶರ್ಮಾ ಜೀ, ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀಮತಿ ನೀಲಿಮಾ ಕಟಿಯಾರ ಜೀ, ಉತ್ತರ ಪ್ರದೇಶ ಸರಕಾರದ ಇತರ ಎಲ್ಲ ಸಚಿವರೇ, ಲಕ್ನೋ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಅಲೋಕ್ ಕುಮಾರ್ ರೈ ಜೀಮಹನೀಯರೇ ಮತ್ತು ಮಹಿಳೆಯರೇ,

ಲಕ್ನೋ ವಿಶ್ವವಿದ್ಯಾಲಯದ ಕುಟುಂಬಕ್ಕೆ 100 ವರ್ಷ ಪೂರ್ಣಗೊಳಿಸಿರುವುದಕ್ಕೆ ಹಾರ್ದಿಕ ಶುಭಾಶಯಗಳು. ನೂರು ವರ್ಷದ ಅವಧಿ ಅಮೂಲ್ಯ ಸಾಧನೆಗಳ ಚರಿತ್ರೆಯನ್ನು ಒಳಗೊಂಡಿರುವ  ಅವಧಿ. ಇದರ ಸ್ಮರಣಾರ್ಥ ಅಂಚೆ ಚೀಟಿ , ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಕವರ್ ಗಳನ್ನು ನೂರು ವರ್ಷಗಳ ನೆನಪಿಗಾಗಿ ಬಿಡುಗಡೆ ಮಾಡುವ ಅವಕಾಶ ನನಗೆ ದೊರೆತಿರುವುದಕ್ಕಾಗಿ ನಾನು ಹರ್ಷಿತನಾಗಿದ್ದೇನೆ.

ಸ್ನೇಹಿತರೇ,

ವಿಶ್ವವಿದ್ಯಾಲಯದ 100 ವರ್ಷಗಳ ನಿರಂತರ ಪ್ರಯಾಣಕ್ಕೆ ಸಾಕ್ಷಿಯಾಗಿ ಗೇಟ್ ನಂಬರ್ 1 ಬಳಿಯಲ್ಲಿ ಆಲದ ಮರವೊಂದಿದೆ ಎಂದು ನನಗೆ ತಿಳಿಸಲಾಗಿದೆ. ಮರವು ದೇಶಕ್ಕಾಗಿ ಮತ್ತು ವಿಶ್ವಕ್ಕಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ಅರಳಿದ, ರೂಪುಗೊಂಡ  ನೂರಾರು ಪ್ರತಿಭೆಗಳನ್ನು ನೋಡಿದೆ. ಅದರ ನೂರು ವರ್ಷಗಳ ಪ್ರಯಾಣದಲ್ಲಿ, ಇಲ್ಲಿಯ ಹಲವಾರು ವ್ಯಕ್ತಿತ್ವಗಳು ರಾಷ್ಟ್ರಪತಿಗಳಾಗಿದ್ದಾರೆ, ರಾಜ್ಯಪಾಲರಾಗಿದ್ದಾರೆ. ವಿಜ್ಞಾನ ಕ್ಷೇತ್ರವಿರಲಿ, ನ್ಯಾಯಾಂಗ, ರಾಜಕೀಯ ಅಥವಾ ಆಡಳಿತ, ಶಿಕ್ಷಣ ಅಥವಾ ಸಾಹಿತ್ಯ, ಸಾಂಸ್ಕೃತಿಕ ಅಥವಾ ಕ್ರೀಡಾ ಕ್ಷೇತ್ರವಿರಲಿ ಲಕ್ನೋ ವಿಶ್ವವಿದ್ಯಾಲಯವು ಪ್ರತೀ ಕ್ಷೇತ್ರದಲ್ಲಿಯೂ ಪ್ರತಿಭೆಗಳನ್ನು ರೂಪಿಸಿದೆ ಮತ್ತು ಪೋಷಿಸಿದೆ. ವಿಶ್ವವಿದ್ಯಾಲಯದ ಕಲಾ ಚೌಕಾಂಗಣ  ತನ್ನೊಳಗೆ ಬಹಳಷ್ಟು ಇತಿಹಾಸವನ್ನು ಹುದುಗಿಸಿಕೊಂಡಿದೆ. ಇದೇ  ಕಲಾ ಚೌಕಾಂಗಣದಲ್ಲಿ  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧ್ವನಿ ಪ್ರತಿಧ್ವನಿಸಿತ್ತು. ಮತ್ತು ನಾಯಕನ ಧ್ವನಿಯಲ್ಲಿ : ಭಾರತದ ಜನತೆ ತಮ್ಮ ಸಂವಿಧಾನ ರೂಪಿಸಲಿ ಅಥವಾ ಅದಕ್ಕಾಗಿ ದುಡಿಯಲಿ”  ಎಂದವರು ಹೇಳಿದ್ದರು. ನೇತಾಜಿ ಸುಭಾಷ್ ಬಾಬು ಅವರ ಯುದ್ದ ಘೋಷಣೆ ನಮ್ಮ ಸಂವಿಧಾನ ದಿನವನ್ನು ಆಚರಿಸುವಾಗ ನಮ್ಮಲ್ಲಿ ಹೊಸ ಶಕ್ತಿಯ ಉತ್ಸಾಹವನ್ನು ತುಂಬುತ್ತದೆ.

ಸ್ನೇಹಿತರೇ,

ಲಕ್ನೋ ವಿಶ್ವವಿದ್ಯಾಲಯದ ಜೊತೆ ಗುರುತಿಸಿಕೊಂಡ ಹಲವಾರು ಹೆಸರುಗಳಿವೆ. ಅಸಂಖ್ಯಾತ ಸಂಖ್ಯೆಯ ಜನರ ಹೆಸರುಗಳು ವಿಶ್ವವಿದ್ಯಾಲಯದ ಜೊತೆ ಇವೆ. ಇಲ್ಲಿ ಪ್ರತಿಯೊಬ್ಬರ ಹೆಸರನ್ನು ಪಟ್ಟಿ ಮಾಡುವುದು ಸಾಧ್ಯವಾಗದು. ಶುಭ ಸಂದರ್ಭದಲ್ಲಿ ನಾನು ಅವರೆಲ್ಲರನ್ನೂ ಶ್ಲಾಘಿಸುತ್ತೇನೆ. 100 ವರ್ಷಗಳ ಪ್ರಯಾಣದಲ್ಲಿ ಹಲವಾರು ಮಂದಿ ಹಲವಾರು ರೀತಿಯಲ್ಲಿ ಕಾಣಿಕೆ ನೀಡಿದ್ದಾರೆ. ಅವರೆಲ್ಲರೂ ಮೆಚ್ಚುಗೆಗೆ ಅರ್ಹರಾಗಿದ್ದಾರೆ. ಹೌದು, ಒಂದಂತೂ ಖಚಿತ, ನನಗೆ ಲಕ್ನೋ ವಿಶ್ವವಿದ್ಯಾಲಯದ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾತನಾಡುವ ಅವಕಾಶ ದೊರೆತಾಗ, ಇಲ್ಲಿಂದ ಉತ್ತೀರ್ಣರಾಗಿ ತೆರಳಿದ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ವಿಶ್ವವಿದ್ಯಾಲಯದ ಬಗ್ಗೆ ಮಾತನಾಡುವಾಗ ಹೊಳಪು ಕಾಣುತ್ತಿತ್ತು. ಹಲವು ಬಾರಿ ಅವರು ವಿಶ್ವವಿದ್ಯಾಲಯದಲ್ಲಿ ಕಳೆದ ದಿನಗಳನ್ನು ಸ್ಮರಿಸಿಕೊಳ್ಳುವಾಗ ಅವರು ಭಾವೋದ್ರೇಕಗೊಂಡದ್ದನ್ನು ನೋಡಿದ  ಅನುಭವ ನನ್ನದಾಗಿದೆ. ಆದುದರಿಂದ ಯಾರೊಬ್ಬರು ಕೂಡಾ लखनऊ हम पर फिदा, हम फिदा--लखनऊ ಎಂಬ ಮಾತಿನ ಅರ್ಥವನ್ನು ಮಾಡಿಕೊಳ್ಳಬಲ್ಲರು. ಲಕ್ನೋ ವಿಶ್ವವಿದ್ಯಾಲಯದ ಸಂಬಂಧ ಮತ್ತು ಅದರ ಬಗೆಗಿನ ಪ್ರೀತಿ ಬಹಳ ವಿಶಿಷ್ಟ. ಟ್ಯಾಗೋರ್ ಗ್ರಂಥಾಲಯದಿಂದ ಹಿಡಿದು ವಿವಿಧ ಕ್ಯಾಂಟೀನುಗಳ  ಚಹಾ-ಸಮೋಸಗಳವರೆಗೆ ಮತ್ತು ಬನ್ ಬಟರ್ ಗಳು ಇಂದಿಗೂ ವಿದ್ಯಾರ್ಥಿಗಳ ಹೃದಯದಲ್ಲಿ ಹಸಿರಾಗಿವೆ. ಈಗ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ, ಬಹಳಷ್ಟು ಬದಲಾಗಿದೆ. ಆದರೆ ಲಕ್ನೋ ವಿಶ್ವವಿದ್ಯಾಲಯದ ಮೂಡ್, ಲಹರಿ ಲಕ್ನವಿಯಾಗಿಯೇ ಇನ್ನೂ ಅದೇ ರೀತಿ ಉಳಿದಿದೆ.

ಸ್ನೇಹಿತರೇ,

ಇಂದು ದೇವ್ ಪ್ರಭೋಧಿನಿ ಏಕಾದಶಿ ಕೂಡಾ ಬಂದಿರುವುದು ಒಂದು ಯೋಗಾಯೋಗ. ಚಾತುರ್ಮಾಸದಲ್ಲಿ ಚಲನ ವಲನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಜೀವನ ಸ್ಥಗಿತಗೊಂಡಿರುತ್ತದೆ ಎಂದು ಭಾವಿಸಲಾಗುತ್ತದೆ. ದೇವರು ಕೂಡಾ ನಿದ್ರಾವಶರಾಗುತ್ತಾರೆ. ರೀತಿಯಲ್ಲಿ, ಇಂದಿನ ದಿನ ದೇವರು ನಿದ್ರೆಯಿಂದ ಏಳುತ್ತಾರೆ. ಇದನ್ನು - या निशा सर्वभूतानां तस्यां जागर्ति संयमी",ಎಂದು ಹೇಳಲಾಗುತ್ತದೆ. ಅಂದರೆ, ಪ್ರತಿಯೊಬ್ಬರೂ, ದೇವತೆಗಳು ಸಹಿತ ನಿದ್ರಾವಶರಾಗಿರುವಾಗ, ಮನುಷ್ಯರು ಕಟ್ಟುನಿಟ್ಟಾಗಿ ಸಾರ್ವಜನಿಕ ಕಲ್ಯಾಣದಲ್ಲಿ ತೊಡಗಿಕೊಂಡಿರುತ್ತಾರೆ. ಇಂದು ದೇಶದ ನಾಗರಿಕರು ಕೊರೊನಾದ ಸವಾಲನ್ನು ಹೇಗೆ ತಾಳ್ಮೆಯಿಂದ ಎದುರಿಸುತ್ತಿದ್ದಾರೆ ಮತ್ತು ದೇಶವನ್ನು ಹೇಗೆ ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ನಾವು ಕಾಣುತ್ತಿದ್ದೇವೆ

ಸ್ನೇಹಿತರೇ,

ಇಂತಹ ಶಿಕ್ಷಣ ಸಂಸ್ಥೆಗಳು ನಾಗರಿಕರನ್ನು ದೇಶಕ್ಕಾಗಿ ಪ್ರೇರೇಪಣೆ ನೀಡಿ ಉತ್ತೇಜನ ಒದಗಿಸುತ್ತವೆ. ಲಕ್ನೋ ವಿಶ್ವವಿದ್ಯಾಲಯ ಕಾರ್ಯವನ್ನು ದಶಕಗಳಿಂದ ಶ್ರದ್ಧೆಯಿಂದ ಮಾಡುತ್ತಾ ಬಂದಿದೆ. ಕೊರೋನಾ ಕಾಣಿಸಿಕೊಂಡ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮಾಜಕ್ಕೆ ಹಲವಾರು ಪರಿಹಾರಗಳನ್ನು ಒದಗಿಸಿದ್ದಾರೆ

ಸ್ನೇಹಿತರೇ,

ಲಕ್ನೋ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ವಿಶ್ವವಿದ್ಯಾಲಯವು ಹೊಸ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ನಾನು ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಲು ಇಚ್ಛಿಸುತ್ತೇನೆ. ನೀವಿದನ್ನು ಚರ್ಚಿಸುತ್ತೀರೆಂಬುದು ನನಗೆ ಖಚಿತವಿದೆ. ನಾವು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಶಿಸ್ತುಗಳ ಬಗ್ಗೆ, ಸ್ಥಳೀಯ ಉತ್ಪಾದನೆಗಳ ಬಗ್ಗೆ ಕೋರ್ಸ್ ಗಳನು ಯಾಕೆ ತೆರೆಯಬಾರದು. ನೀವು ಶೈಕ್ಷಣಿಕ ಚಟುವಟಿಕೆ ಹೊಂದಿರುವ ಜಿಲ್ಲೆಗಳಲ್ಲಿ ಆಕರ್ಷಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಯಾಕೆ ಹೊಂದಬಾರದು. ನಮ್ಮ ವಿಶ್ವವಿದ್ಯಾಲಯವು ಸ್ಥಳೀಯ ಉತ್ಪನ್ನಗಳ ತಯಾರಿಕೆ, ಅವುಗಳ ಮೌಲ್ಯವರ್ಧನೆಗೆ ಆಧುನಿಕ ಪರಿಹಾರಗಳು ಮತ್ತು ಆಧುನಿಕ ತಂತ್ರಜ್ಞಾನ ಕುರಿತೂ ಸಂಶೋಧನೆಯನು ಕೈಗೊಳ್ಳಬಹುದು. ಅವುಗಳ ಬ್ರ್ಯಾಂಡಿಂಗ್, ಮಾರುಕಟ್ಟೆ, ಮತ್ತು ನಿರ್ವಹಣೆಗಳಿಗೆ  ಸಂಬಂಧಿಸಿ  ಕಾರ್ಯತಂತ್ರ ನಿಮ್ಮ ಕೋರ್ಸ್ ಗಳ ಪಠ್ಯಕ್ರಮದ ಭಾಗವಾಗಬಹುದು. ಅದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದೈನಂದಿನ ಕಾರ್ಯ ಚಟುವಟಿಕೆಗಳ ಭಾಗವಾಗಬಲ್ಲುದು. ಉದಾಹರಣೆಗೆ, ಲಕ್ನೋ ಚಿಕನ್ಕರಿ’, ಅಲಿಘರ್ ಬೀಗಗಳ ತಯಾರಿಕೆ, ಮೊರದಾಬಾದಿನ ಕಂಚಿನ ಸಾಮಗ್ರಿಗಳು, ಭಾದೋಹಿ ಕಾರ್ಪೆಟ್ ಗಳನ್ನು ಜಾಗತಿಕವಾಗಿ ಹೇಗೆ ಸ್ಪರ್ಧಾತ್ಮಕಗೊಳಿಸಬಹುದು. ನಾವು ಖಂಡಿತವಾಗಿಯೂ ಹೊಸ ಆರಂಭವನ್ನು, ಹೊಸ ಅಧ್ಯಯನವನ್ನು, ಮತ್ತು ಹೊಸ ಸಂಶೋಧನೆಯನ್ನು ಮಾಡಬಲ್ಲೆವು. ಅಧ್ಯಯನಗಳು ಸರಕಾರಕ್ಕೆ ಹೊಸ ನೀತಿಗಳನು ರಚಿಸಲು , ರೂಪಿಸಲು ಸಹಾಯ ಮಾಡುತ್ತವೆ. ಮತ್ತು ಒಂದು ಜಿಲ್ಲೆಯ ಒಂದು ಉತ್ಪನ್ನದ ಸ್ಪೂರ್ತಿಯನ್ನು ನೈಜ ಅರ್ಥದಲ್ಲಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ನಾವು ನಮ್ಮ ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಬಂಧಿ ವಿಷಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಟೆಯನ್ನು ಇನ್ನಷ್ಟು ಬಲಗೊಳಿಸಲು ಅದರ ಮೃದು ಕೌಶಲ್ಯಗಳ ಶಕ್ತಿ ಬಹಳ ಸಹಕಾರಿಯಾಗಬಲ್ಲುದು. ನಾವು ಯೋಗದ ಶಕ್ತಿಯನ್ನು ವಿಶ್ವದಾದ್ಯಂತ ನೋಡಿದ್ದೇವೆ. ಕೆಲವರು ಅದನ್ನು ಯೋಗ್ ಎನ್ನುತ್ತಾರೆ, ಕೆಲವರು ಅದನ್ನು ಯೋಗಾ ಎನ್ನುತ್ತಾರೆ, ಅದು ಇಡೀ ಜಗತ್ತಿಗೆ ಯೋಗವನ್ನು ಓರ್ವನ ಜೀವನದ ಅಂಗವಾಗಿಸುವಷ್ಟು ಪ್ರೇರೇಪಣೆ ನೀಡಿದೆ.

ಸ್ನೇಹಿತರೇ,

ವಿಶ್ವವಿದ್ಯಾಲಯ ಎಂದರೆ ಅದು ಬರೇ ಉನ್ನತ ಶಿಕ್ಷಣದ ಕೇಂದ್ರ ಮಾತ್ರ ಅಲ್ಲ. ಅದು ಬಹಳ ದೊಡ್ಡ ಶಕ್ತಿ ಕೇಂದ್ರ, ಶಕ್ತಿಯ ಭೂಮಿ. ದೊಡ್ಡ ಗುರಿಗಳನ್ನು ಸಾಧಿಸಲು, ನಿರ್ಧಾರಗಳನ್ನು ಮಾಡಲು  ಪ್ರೇರೇಪಣೆ ಮತ್ತು ಸ್ಪೂರ್ತಿಯನ್ನು ನೀಡುವ ಭೂಮಿ. ನಮ್ಮ ಗುಣ ನಡತೆಗಳನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡುವ ಮತ್ತು ನಮ್ಮ ಅಂತಃಶಕ್ತಿಯನ್ನು ಜಾಗೃತ ಮಾಡುವ ಸ್ಥಳ. ವರ್ಷದಿಂದ ವರ್ಷಕ್ಕೆ ವಿಶ್ವವಿದ್ಯಾಲಯದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬುದ್ಧಿಶಕ್ತಿ, ಶೈಕ್ಷಣಿಕ, ಮತ್ತು ಭೌತಿಕ ಅಭಿವೃದ್ಧಿಯನ್ನು ಮಾಡುವುದಲ್ಲದೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನೂ ವೃದ್ಧಿಸುತ್ತಾರೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ಮತ್ತು ಅದನ್ನು ಹೊರಗೆಡವುವಲ್ಲಿ ಶಿಕ್ಷಕರಿಗೆ ಬಹಳ ದೊಡ್ಡ ಪಾತ್ರವಿದೆ.

ಆದರೇ ಸ್ನೇಹಿತರೇ, ಬಹಳ ಧೀರ್ಘಾವಧಿಯಿಂದ ನಾವು ನಮ್ಮ ಸಾಮರ್ಥ್ಯ್ವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗದ ಒಂದು ಸಮಸ್ಯೆಯನ್ನು ಹೊತ್ತುಕೊಂಡು ಬಂದಿದ್ದೇವೆ. ನಮ್ಮ ಆಡಳಿತದಲ್ಲಿಯೂ, ಆಡಳಿತದ ಅನುಷ್ಟಾನದಲ್ಲಿಯೂ ಇದೇ ಸಮಸ್ಯೆ ಅಲ್ಲಿತ್ತು. ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಲಾಗದಿದ್ದರೆ ಏನಾಗುತ್ತದೆ ಎಂಬ ಬಗ್ಗೆ, ನಾನಿಂದು ನಿಮಗೆ ಒಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. ಮತ್ತು ಇದು ಉತ್ತರ ಪ್ರದೇಶಕ್ಕೆ ಅತ್ಯಂತ ಸೂಕ್ತವಾದ ಉದಾಹರಣೆ. ರಾಯ್ ಬರೇಲಿ ರೈಲ್ವೇ ಬೋಗಿ ಕಾರ್ಖಾನೆ ಲಕ್ನೋಗೆ ಬಹಳ ದೂರದಲ್ಲೇನು ಇಲ್ಲ. ವರ್ಷಗಳ ಹಿಂದೆ ಹೂಡಿಕೆ ಮಾಡಲಾಯಿತು. ಸಂಪನ್ಮೂಲಗಳನ್ನು, ಯಂತ್ರೋಪಕರಣಗಳನ್ನು ಅಳವಡಿಸಲಾಯಿತು ಮತ್ತು ಹಲವಾರು ರೈಲ್ವೇ ಬೋಗಿಗಳನ್ನು ತಯಾರಿಸುವ ಬಗ್ಗೆ ಹಲವಾರು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಲಾಯಿತು. ಆದರೆ ಹಲವಾರು ವರ್ಷಗಳಿಂದ ಅಲ್ಲಿ ಪೈಂಟಿಂಗ್ ಮತ್ತು  ದುರಸ್ತಿ, ರಿಪೇರಿಗಳನ್ನು ಮಾತ್ರವೇ ಮಾಡಲಾಗುತ್ತಿತ್ತು. ಬೋಗಿಗಳು ಕಪೂರ್ತಾಲಾದಿಂದ ಬರುತ್ತಿದ್ದವು. ಅವುಗಳಿಗೆ ಪೈಂಟ್ ಮಾಡಲಾಗುತ್ತಿತ್ತು ಮತ್ತು ಕೆಲವು ಸೇರ್ಪಡೆಗಳನ್ನು ಮಾಡಲಾಗುತ್ತಿತ್ತು. ಕಾರ್ಖಾನೆಯು ಬೋಗಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿತ್ತು, ಆದರೆ ಎಂದೂ ಅದು ತನ್ನ ಪೂರ್ಣ ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. 2014 ಬಳಿಕ, ನಾವು ಮನಸ್ಥಿತಿಯನ್ನು ಬದಲಿಸಿದೆವು ಮತ್ತು ಕಾರ್ಯವೈಖರಿಯನ್ನು ಬದಲು ಮಾಡಿದೆವು. ಮತ್ತು ಇದರ ಫಲಿತವಾಗಿ ಕೆಲವೇ ಕೆಲವು ತಿಂಗಳುಗಳಲ್ಲಿ ಇಲ್ಲಿ ಮೊದಲ ಬೋಗಿಯನ್ನು ತಯಾರು ಮಾಡಲಾಯಿತು ಮತ್ತು ಇಂದು ಇಲ್ಲಿ ನೂರಾರು ಬೋಗಿಗಳನ್ನು ತಯಾರಿಸಲಾಗುತ್ತಿದೆ. ಸಾಮರ್ಥ್ಯವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದನ್ನು ಮತ್ತು ಜಗತ್ತು ಬಗ್ಗೆ ಗಮನ ಹರಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು. ಬರಲಿರುವ ವರ್ಷಗಳಲ್ಲಿ ಜಗತ್ತಿನ ಅತಿ ದೊಡ್ಡ ರೈಲ್ವೇ ಬೋಗಿ ಕಾರ್ಖಾನೆಯ ಪ್ರಸ್ತಾಪ ಬಂದಾಗೆಲ್ಲ, ಅದು ರಾಯ್ ಬರೇಲಿಯ ರೈಲ್ವೇ ಬೋಗಿ ಕಾರ್ಖಾನೆ ಎಂಬುದಾಗಿ  ಉತ್ತರ ಪ್ರದೇಶ ಮತ್ತು ನೀವು ಕೂಡಾ ಹೆಮ್ಮೆಪಡಬಹುದು

ಸ್ನೇಹಿತರೇ,

ಸೂಕ್ತ ರೀತಿಯಲ್ಲಿ ಸಾಮರ್ಥ್ಯ ಬಳಕೆ ಮಾಡುವಾಗ  ಉದ್ದೇಶ ಮತ್ತು ಇಚ್ಛಾಶಕ್ತಿ ಅಷ್ಟೇ ಮುಖ್ಯ. ಅಲ್ಲಿ ಇಚ್ಛಾಶಕ್ತಿ ಇಲ್ಲದಿದ್ದರೆ ನಿರೀಕ್ಷಿತ ಫಲಿತಾಂಶ ನಿಮಗೆ ದೊರಕುವುದಿಲ್ಲ. ಇಚ್ಛಾಶಕ್ತಿ ಹೇಗೆ ಬದಲಾವಣೆಗಳನ್ನು ತರಬಲ್ಲದು ಎಂಬ ಬಗ್ಗೆ ದೇಶದೆದುರು ಹಲವಾರು ಉದಾಹರಣೆಗಳಿವೆ ಮತ್ತು ನಾನು ಇಂದು ಒಂದೇ ಒಂದು ವಲಯದ ಬಗ್ಗೆ ಮತ್ತು ಯೂರಿಯಾದ ಬಗ್ಗೆ ಇದನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ದೇಶದಲ್ಲಿ ಯೂರಿಯಾ ಉತ್ಪಾದಿಸುವ ಹಲವಾರು ಕಾರ್ಖಾನೆಗಳನ್ನು ಹೊಂದಿದ್ದ ಕಾಲವೊಂದಿತ್ತು. ಆದಾಗ್ಯೂ, ಭಾರತವು ವಿದೇಶಗಳಿಂದ ದೊಡ್ದ ಪ್ರಮಾಣದಲ್ಲಿ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ, ದೇಶದ ರಸಗೊಬ್ಬರ ಕಾರ್ಖಾನೆಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿದ್ದುದು. ನನ್ನ ಸರಕಾರ ರಚನೆಯಾದ ನಂತರ ನನ್ನ ಅಧಿಕಾರಿಗಳ ಜೊತೆ ಮಾತನಾಡುವಾಗ ವಿಷಯ ತಿಳಿದು ನಾನು ದಿಗ್ಮೂಢನಾದೆ.

ಸ್ನೇಹಿತರೇ,

ನಾವು ಒಂದರ ಹಿಂದೆ ಒಂದರಂತೆ ನೀತಿ ನಿರ್ಧಾರಗಳನ್ನು ಕೈಗೊಂಡೆವು. ಅದರ ಫಲಿತವಾಗಿ ದೇಶದಲ್ಲಿಂದು ಯೂರಿಯಾ ಕಾರ್ಖಾನೆಗಳು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುತ್ತಿವೆ. ಅಲ್ಲಿ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರುವ ಸಮಸ್ಯೆ ಇತ್ತು. ಅದು ರೈತರಿಗಾಗಿ ಇದ್ದರೂ, ಯೂರಿಯಾ ಬೇರೆಲ್ಲಿಗೋ ಹೋಗುತ್ತಿತ್ತು. ಅಲ್ಲಿ ಯೂರಿಯಾ ಕಳವಾಗುತ್ತಿತ್ತು. ದೇಶದ ರೈತರು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತಿತ್ತು. ಯೂರಿಯಾಕ್ಕೆ ಶೇಖಡಾ ನೂರರಷ್ಟು ಬೇವಿನ ಲೇಪನ ಮಾಡುವ ಮೂಲಕ ಯೂರಿಯಾದ ಕಾಳಸಂತೆ ಮಾರಾಟಕ್ಕೆ ಪರಿಹಾರ ಹುಡುಕಿದೆವು. ಬೇವಿನ ಲೇಪನ ಸಿದ್ದಾಂತ ಮೋದಿ ಅಧಿಕಾರಕ್ಕೆ ಬಂದ ಬಳಿಕ ಚಾಲ್ತಿಗೆ ಬಂದುದಲ್ಲ. ಮೊದಲೂ ಅದು ಇತ್ತು. ಎಲ್ಲರಿಗೂ ಗೊತ್ತಿತ್ತು, ಬೇವಿನ ಲೇಪನ ಮಾಡಲಾಗುತ್ತದೆ ಎಂಬುದು. ಆದರೆ ಅದು ಬಹಳ ಸಣ್ಣ ಪ್ರಮಾಣದಲ್ಲಿತ್ತು. ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಿದರೆ ಕಳವು ತಡೆಯಲಾಗದು. 100 ಶೇಖಡಾ ಬೇವಿನ ಲೇಪನ ಮಾಡಲು ಅಲ್ಲಿ ಇಚ್ಛಾಶಕ್ತಿ ಇರಲಿಲ್ಲ. ಇಂದು ಅಲ್ಲಿ ನೂರು ಶೇಖಡಾ ಬೇವಿನ ಲೇಪನ ಆಗುತ್ತಿದೆ ಮತ್ತು ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ದೊರೆಯುತ್ತಿದೆ.

ಸ್ನೇಹಿತರೇ,

ಹಳೆಯ ಮತ್ತು ಮುಚ್ಚಲ್ಪಟ್ಟ ರಸಗೊಬ್ಬರ ಕಾರ್ಖಾನೆಗಳನ್ನು ನಾವು ಹೊಸ ತಂತ್ರಜ್ಞಾನ ಬಳಸಿ ಮರು ಆರಂಭ ಮಾಡುತ್ತಿದ್ದೇವೆ. ಗೋರಖ್ ಪುರ, ಸಿಂಡ್ರಿ ಮತ್ತು ಬರೌನಿಗಳ ರಸಗೊಬ್ಬರ ಕಾರ್ಖಾನೆಗಳು ಕೆಲವು ವರ್ಷಗಳಲ್ಲಿ ಪುನರಾರಂಭಗೊಳ್ಳಲಿವೆ. ಇದಕ್ಕಾಗಿ ಪೂರ್ವ ಭಾರತದಲ್ಲಿ ಬೃಹತ್ ಅನಿಲ ಕೊಳವೆ ಮಾರ್ಗವನ್ನು ಹಾಕಲಾಗುತ್ತಿದೆ. ನಾನು ಏನು ಹೇಳಲು ಬಯಸುತ್ತಿದ್ದೇನೆ ಎಂದರೆ, ಧನಾತ್ಮಕ ಚಿಂತನೆ ಮತ್ತು ಧೋರಣೆಗಳ ಸಾಧ್ಯತೆಗಳನ್ನು ಸದಾ ಮುಕ್ತವಾಗಿಡಬೇಕು , ಜೀವಂತವಾಗಿಡಬೇಕು. ಧೋರಣೆ ಇದ್ದಲ್ಲಿ, ನೀವು ಜೀವನದಲ್ಲಿಯ ಅತ್ಯಂತ ಕಠಿಣಾತಿ ಕಠಿಣ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತೀರಿ.

ಸ್ನೇಹಿತರೇ,

ನಿಮಗೆ ಪ್ರೋತ್ಸಾಹ, ಬೆಂಬಲ, ಪ್ರೇರಣೆ ನೀಡದ, ಆದರೆ ನಿರುತ್ಸಾಹಗೊಳಿಸುವ  ಹಲವಾರು ಮಂದಿಯನ್ನು ನೀವು ನಿಮ್ಮ ಜೀವನದಲ್ಲಿ ಎದುರಾಗುತ್ತೀರಿ. ನೀವು ಇಂತಹ, ಅದನ್ನು ಮಾಡಲು ಸಾಧ್ಯವಿಲ್ಲ, ಅಥವಾ ನೀವದನ್ನು ಮಾಡಲಾರಿರಿ, ಇದು ನಿಮ್ಮ ಕೆಲಸ ಅಲ್ಲ, ಅದನ್ನು ಹೇಗೆ ಮಾಡುತ್ತೀರಿ, ಅದರಲ್ಲಿ ಹಲವಾರು ಸಮಸ್ಯೆಗಳಿವೆ, ಇದು ಸಾಧ್ಯವಿಲ್ಲ ಎಂಬಂತಹ ಅರ್ಥಹೀನ  ಸಂಗತಿಗಳನ್ನು ನೀವು ಈಗಾಗಲೇ ಕೇಳಿರಬಹುದು. ನೀವು ದಿನ ನಿತ್ಯ ನಿಮ್ಮನ್ನು ನಿರುತ್ಸಾಹಗೊಳಿಸುವ ಕನಿಷ್ಟ 10 ಮಂದಿಯನ್ನಾದರೂ  ಭೇಟಿಯಾಗುತ್ತಿರಬಹುದು. ನಿಮ್ಮ ಕಿವಿಗಳು ಇಂತಹ ನಿರುತ್ಸಾಹದಾಯಕ ಮಾತುಗಳನ್ನು ಕೇಳಿ ಆಯಾಸಗೊಂಡಿರಬಹುದು. ಆದರೆ ನೀವು ನಿಮ್ಮ ಬದುಕಿನಲ್ಲಿ ನಿಮ್ಮನ್ನು ನಂಬಿಕೊಂಡು ಮುನ್ನಡೆಯಿರಿ. ನೀವು ಮಾಡುತ್ತಿರುವುದು ಸರಿ ಎಂಬುದು ನಿಮಗೆ ಸ್ಪಷ್ಟವಾದರೆ, ಅದು ದೇಶದ ಹಿತಾಸಕ್ತಿಗೆ ಅನುಗುಣವಾಗಿದ್ದರೆ ಮತ್ತು ಅದನ್ನು ನಿಮ್ಮ ಪ್ರಯತ್ನಗಳಿಂದ ಮಾಡಬಹುದಾಗಿದ್ದರೆ, ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳ ವೇಗವನ್ನು ಕಡಿಮೆ ಮಾಡಬೇಡಿ. ನಾನು ನಿಮಗೆ ಇನ್ನೊಂದು ಉದಾಹರಣೆ ನೀಡಲು ಇಚ್ಛಿಸುತ್ತೇನೆ.

ಸ್ನೇಹಿತರೇ,

ಈಗಿರುವ ವ್ಯವಸ್ಥೆಯಲ್ಲಿ ಖಾದಿಗೆ ಸಂಬಂಧಿಸಿ ನನ್ನ ದೃಷ್ಟಿ ಕೋನಗಳು ಕೊಂಚ ವಿರುದ್ಧವಾಗಿವೆ. ನಾನು ಗುಜರಾತ್ ಸರಕಾರದ ಭಾಗವಾಗಿರದ ಕಾಲದಲ್ಲಿ, ದಿನಗಳಲ್ಲಿ ನಾನು ಅದರ ಬಗ್ಗೆ ಸದಾ ಭಾವಪರವಶನಾಗುತ್ತಿದ್ದೆ. ಮತ್ತು.ಸಾಮಾಜಿಕ ಹಾಗು ರಾಜಕೀಯ ಕಾರ್ಯಕರ್ತನಾಗಿ ವಿಷಯದಲ್ಲಿ ಕೈಯಾಡಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದೆ. ನಾವು ಖಾದಿಯಲ್ಲಿ ಪ್ರತಿಷ್ಟೆಯನ್ನು ಕಾಣುತ್ತೇವೆ. ಮತ್ತು ಅಲ್ಲಿ ಬದ್ಧತೆ ಇರಬೇಕು ಎಂದು ಆಶಿಸುತ್ತೇವೆ. ಅದರ ಬಗೆಗೆ ಪ್ರೀತಿ ಇರಬೇಕು ಮತ್ತು ವಿಶ್ವದಾದ್ಯಂತ ಅದರ ಕೀರ್ತಿ ಹರಡಬೇಕು ಎನ್ನುತ್ತೇವೆ. ನಾನು ಕೂಡಾ ಭಾವನೆಯನ್ನು ಹೊಂದಿದ್ದೆ. ಹೀಗೆ ನಾನು ಮುಖ್ಯಮಂತ್ರಿಯಾದಾಗ, ನಾನು ಕೂಡಾ ಖಾದಿಯ ಪರವಾಗಿ ಪ್ರಚಾರ ಮಾಡತೊಡಗಿದೆ. ಅಕ್ಟೋಬರ್ 2 ರಂದು ನಾನು ಖಾದಿ ಅಂಗಡಿಗೆ ಹೋಗುತ್ತಿದ್ದೆ ಮತ್ತು ಏನನ್ನಾದರೂ ಖರೀದಿಸುತ್ತಿದ್ದೆ. ನಾನು ಧನಾತ್ಮಕ ಚಿಂತನೆ  ಹೊಂದಿದ್ದೆ ಮತ್ತು ನನ್ನ ಉದ್ದೇಶವೂ ಸರಿಯಾಗಿತ್ತು. ಇನ್ನೊಂದೆಡೆ ಕೆಲವು ಜನರು ನನ್ನನ್ನು ನಿರುತ್ಸಾಹಗೊಳಿಸುತ್ತಿದ್ದರು. ನಾನು ಖಾದಿಯ ಬಗ್ಗೆ ಪ್ರಚಾರ ಮಾಡುತ್ತಿರುವಾಗ ಜನರು ಖಾದಿ ಎಂದರೆ ಬರೇ ಬೋರು ಮತ್ತು ಅದು ಉಷ್ಣ ಎಂದು ಹೇಳತೊಡಗಿದರು. ನಮ್ಮ ಯುವಜನತೆಯಲ್ಲಿ ನೀವು ಖಾದಿಯನ್ನು ಹೇಗೆ ಪ್ರಚುರಪಡಿಸುತ್ತೀರಿ ?. ನಿಮಗೆ ಗೊತ್ತೇ, ಯಾವೆಲ್ಲ ರೀತಿಯ ಸಲಹೆಗಳು ನನಗೆ ಬರತೊಡಗಿದವು ಎಂಬುದಾಗಿ. ನಕಾರಾತ್ಮಕ ಚಿಂತನೆಗಳಿಂದಾಗಿ ಖಾದಿಗೆ ಪುನಃಶ್ಚೇತನ ನೀಡುವ ಎಲ್ಲಾ ಸಾಧ್ಯತೆಗಳು ನಮ್ಮಲ್ಲಿ ಸತ್ತುಹೋದವು. ನಾನು ಅಂತಹ ಟೀಕೆಗಳನ್ನು ಬದಿಗೆ ಸರಿಸಿ, ಧನಾತ್ಮಕ ಚಿಂತನೆಯೊಂದಿಗೆ ಹೊಸ ಆರಂಭ ಮಾಡಿದೆ. 2002ರಲ್ಲಿ ಪೋರಬಂದರಿನಲ್ಲಿ ಮಹಾತ್ಮಾ ಗಾಂಧಿ ಅವರ ಜನ್ಮದಿನಾಚರಣೆಯಂದು ಖಾದಿ ಉಡುಪುಗಳ  ಫ್ಯಾಶನ್ ಶೋ ಆಯೋಜಿಸಿದೆ. ಮತ್ತು ಅದರ ಜವಾಬ್ದಾರಿಯನ್ನು ವಿಶ್ವವಿದ್ಯಾಲಯದ ಯುವ ವಿದ್ಯಾರ್ಥಿಗಳಿಗೆ ನೀಡಿದೆ. ಫ್ಯಾಶನ್ ಶೋ ಗಳು ಸಾಮಾನ್ಯವಾಗಿದ್ದವು. ಆದರೆ ಖಾದಿ ಮತ್ತು ಯುವ ಜನತೆ ದಿನದಂದು ಜಾದೂ ಮಾಡಿದರು, ಅದು ಎಲ್ಲಾ ಪೂರ್ವಗ್ರಹಿಕೆಗಳನ್ನು ಧ್ವಂಸ ಮಾಡಿತು. ಯುವಜನತೆ ಅದನ್ನು ಸಾಧ್ಯ ಮಾಡಿತು. ಬಳಿಕ ಕಾರ್ಯಕ್ರಮ ಬಹಳ ಚರ್ಚೆಗೆ ಒಳಪಟ್ಟು ಜನಪ್ರಿಯವಾಯಿತು. ಕಾಲದಲ್ಲಿ, ನಾನು ಒಂದು ಘೋಷಣೆಯನ್ನು ರೂಪಿಸಿದ್ದೆ- ಸ್ವಾತಂತ್ರ್ಯಕ್ಕೆ ಮೊದಲು ರಾಷ್ಟ್ರಕ್ಕಾಗಿ ಖಾದಿ, ಮತ್ತು ಸ್ವಾತಂತ್ರ್ಯಾನಂತರ ಫ್ಯಾಶನ್ನಿಗಾಗಿ ಖಾದಿ. ಜನರು ಖಾದಿ ಹೇಗೆ ಫ್ಯಾಶನ್ ಆಗಬಲ್ಲದು ಎಂಬ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಖಾದಿ ಉಡುಪುಗಳ ಫ್ಯಾಶನ್ ಶೋ ಹೇಗೆ ಸಾಧ್ಯ ಎಂದವರು ಕೇಳುತ್ತಿದ್ದರು. ಖಾದಿಯನ್ನು ಮತ್ತು ಫ್ಯಾಶನ್ನನ್ನು ಒಟ್ಟು ಸೇರಿಸುವುದು ಹೇಗೆ ಎಂಬುದನ್ನು ಯಾರಾದರೂ ಹೇಗೆ ತಾನೇ ಕಲ್ಪಿಸಿಕೊಳ್ಳಬಲ್ಲರು ?.

ಸ್ನೇಹಿತರೇ,

ನನಗೆ  ಅದರ ಜೊತೆ ಹೆಚ್ಚು ಸಮಸ್ಯೆ ಇರಲಿಲ್ಲ. ನನ್ನ ಧನಾತ್ಮಕ ಚಿಂತನೆ ಮತ್ತು ನನ್ನ ಇಚ್ಛಾಶಕ್ತಿ ಅದನ್ನು ಸಾಧ್ಯ ಮಾಡಿತು. ಖಾದಿ ಮಳಿಗೆಗಳು ಪ್ರತೀ ದಿನ ಕೋಟ್ಯಾಂತರ ರೂಪಾಯಿಗಳ ಉತ್ಪಾದನೆಗಳನ್ನು ಮಾರಾಟ ಮಾಡುವುದನ್ನು ಕೇಳಿದಾಗೆಲ್ಲ, ನಾನು ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನಿಮಗೆ ಸಂಗತಿ ತಿಳಿದರೆ ಆಶ್ಚರ್ಯವಾಗಬಹುದು-ಕಳೆದ ಆರು ವರ್ಷಗಳಲ್ಲಿ ಮಾರಾಟವಾದ ಖಾದಿಯ ಪ್ರಮಾಣ 2014 ಕ್ಕೆ ಮೊದಲು 20 ವರ್ಷಗಳಲ್ಲಿ  ಮಾರಾಟವಾದ ಖಾದಿಯ ಪ್ರಮಾಣಕ್ಕಿಂತ ಅಧಿಕ. 20 ವರ್ಷದ ವ್ಯಾಪಾರ ವಹಿವಾಟು ಮತ್ತು ಆರು ವರ್ಷದ ವ್ಯಾಪಾರ ವಹಿವಾಟನ್ನು ತುಲನೆ ಮಾಡಿ ನೋಡಿ.

ಸ್ನೇಹಿತರೇ,

ಲಕ್ನೋ ವಿಶ್ವವಿದ್ಯಾಲಯದ , ನಿಮ್ಮ ವಿಶ್ವವಿದ್ಯಾಲಯದಿಂದ ಬಂದ ಕವಿ ಕ್ಯಾಂಪಸ್ಸಿನಿಂದ ಬರೆದ ಕಾವ್ಯ- ಕೆಲವೊಮ್ಮೆ ನಿಮ್ಮೊಂದಿಗೆ ನೀವೇ ಮಾತನಾಡಿ, ಕೆಲವೊಮ್ಮೆ ನಿಮ್ಮೊಂದಿಗೆ ನೀವೇ ಕೇಳಿಕೊಳ್ಳಿ. ನಿಮ್ಮ ಕಣ್ಣುಗಳಲ್ಲಿ ನೀವು ಏನು ಎಂಬುದನ್ನು?. ಅದನ್ನು ಮನೋಭೂಮಿಕೆಯ ತಕ್ಕಡಿಯಲ್ಲಿ ತೂಗಿ ನೋಡಿ. ಮಾತುಗಳು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಥವಾ ಜನ ಪ್ರತಿನಿಧಿಗಳಿಗೆ  ಮಾರ್ಗದರ್ಶಿಗಳಂತಿವೆ. ಇಂದಿನ ಜಂಜಾಟದ ಬದುಕಿನಲ್ಲಿ ತನ್ನೊಳಗೇ ತಾನು ಮಾತನಾಡಿಕೊಳ್ಳುವ, ಆತ್ಮಾವಲೋಕನ ಎಲ್ಲೋ ಕಳೆದುಹೋಗಿದೆ. ಅಲ್ಲಿ ಬಹಳಷ್ಟು ಡಿಜಿಟಲ್ ಸಲಕರಣೆಗಳಿವೆ ಮತ್ತು ಸಮಯವನ್ನು ಕಬಳಿಸುವ ಡಿಜಿಟಲ್ ವೇದಿಕೆಗಳಿವೆ. ಆದರೆ ನೀವು ಎಲ್ಲಾ ಆಕರ್ಷಣೆಗಳ ನಡುವೆ ನಿಮಗಾಗಿ ಸಮಯವನ್ನು ಹುಡುಕಿಕೊಳ್ಳಬೇಕಾಗಿದೆ

ಸ್ನೇಹಿತರೇ,

ಮೊದಲು, ನಾನು ಕಳೆದ 20 ವರ್ಷಗಳಿಂದ ಸಾಧ್ಯವಾಗದ ಕೆಲಸವನ್ನು ಮಾಡಲು ಇಚ್ಚಿಸಿದ್ದೇನೆ, ಯಾಕೆಂದರೆ ನೀವು ನನಗೆ ಜವಾಬ್ದಾರಿ ಕೊಟ್ಟ ಕಾರಣದಿಂದಾಗಿ. ನಾನು ಅದನ್ನು ಈಗಾಗಲೇ ಮಾಡಬೇಕಾದ ಕೆಲಸವೆಂದು ಪರಿಗಣಿಸಿದ್ದೇನೆ. ನಾನು ಆಡಳಿತದ ಭಾಗವಾಗಿರದಿದ್ದ ಕಾಲದಲ್ಲಿ, ನಾನು ಒಂದು ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೆ. ಪ್ರತೀ ವರ್ಷ ನನ್ನನ್ನು ನಾನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮದ ಹೆಸರು ಮೈನೆ ಮುಜ್ ಸೇ ಮಿಲ್ನೆ ಜಾತಾಹೂಂ” (ನಾನು ನನ್ನನ್ನು ಭೇಟಿಯಾಗುವುದು). ನಾನು ಮನುಷ್ಯ ಸಾಹಚರ್ಯ ಇಲ್ಲದ ಸ್ಥಳಕ್ಕೆ ಹೋಗಿ 5 ರಿಂದ 7 ದಿನಗಳ ಕಾಲ ಇರುತ್ತಿದ್ದೆ. ಅವು ನನ್ನ ಬದುಕಿನ ಬಹಳ ಸಂತೋಷದ ಸ್ಮರಣೀಯ ದಿನಗಳಾಗಿವೆ. ನಾನು ನಿಮಗೆ ಕಾಡಿಗೆ ಹೋಗಿ ಎಂದು ಹೇಳುವುದಿಲ್ಲ. ಆದರೆ ನಿಮಗಾಗಿ ಕೆಲವು ಸಮಯವನ್ನು ವಿನಿಯೋಗಿಸಿಕೊಳ್ಳಿ. ಬಹಳ ಮುಖ್ಯವಾದುದೇನೆಂದರೆ ನೀವು ನಿಮಗಾಗಿ ಎಷ್ಟು ಸಮಯ ಕೊಡುತ್ತೀರಿ ಎಂಬುದು. ನಿಮ್ಮನ್ನು ನೀವು ಅರಿತುಕೊಳ್ಳುವುದು ಬಹಳ ಮುಖ್ಯ ಮತ್ತು ಅಗತ್ಯ. ಇದು ನಿಮ್ಮ ಸಾಮರ್ಥ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಇಚ್ಛಾಶಕ್ತಿಯನ್ನು ವೃದ್ಧಿಸುತ್ತದೆ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ.

ಸ್ನೇಹಿತರೇ,

ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯವಾದುದು ಮತ್ತು ಅಲ್ಲಿಗೆ ಮರುಭೇಟಿ ಅಸಾಧ್ಯವಾದುದು. ಆದುದರಿಂದ, ನೀವು ನಿಮ್ಮ ವಿದ್ಯಾರ್ಥಿ ಜೀವನವನ್ನು ಸಂತೋಷದಿಂದ ಅನುಭವಿಸಬೇಕು. ಈಗ ನಿಮ್ಮ ಸ್ನೇಹಿತರಾಗಿರುವವರು ಎಂದೆಂದಿಗೂ ಸ್ನೇಹಿತರಾಗಿರುತ್ತಾರೆ. ನಿಮ್ಮ ಶಾಲಾ ದಿನಗಳ ಗೆಳೆಯರು ಅಥವಾ ಕಾಲೇಜು ದಿನಗಳ ಗೆಳೆಯರು ನಿಮ್ಮ ಜೀವನದಲ್ಲಿ ನೀವು ಯಾವುದೇ ಹುದ್ದೆ ಹೊಂದಿದ್ದರೂ, ಅಥವಾ ಯಾವುದೇ ಕೆಲಸ ಮಾಡುತ್ತಿದ್ದರೂ ಅಥವಾ ಯಾವುದೇ ವ್ಯಾಪಾರ ವ್ಯವಹಾರದಲ್ಲಿದ್ದರೂ ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ. ಹಲವಾರು ಸ್ನೇಹಿತರನ್ನು ಮಾಡಿಕೊಳ್ಳಿ ಮತ್ತು ಗೆಳೆತನದೊಂದಿಗೆ ಬದುಕಿ.

ಸ್ನೇಹಿತರೇ,

ದೇಶದ ಪ್ರತಿಯೊಬ್ಬ ಯುವ ಜನರೂ ತಮ್ಮನ್ನು ಅರಿತುಕೊಂಡು ತನ್ನನ್ನು ತಾನೇ ಪರೀಕ್ಷೆಗೆ ಒಳಪಡಬೇಕು ಎಂಬುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ. ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ನರ್ಸರಿಯಿಂದ ಹಿಡಿದು ಪಿ.ಎಚ್.ಡಿ.ಯವರೆಗೆ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇರಬೇಕು. ಇಂತಹ ಆತ್ಮವಿಶ್ವಾಸ ಬರುವುದು ಯಾರಿಗೇ ಆದರೂ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಮತ್ತು ಅವಕಾಶ ಲಭಿಸಿದಾಗ. ಬಂಧನದಲ್ಲಿರುವ ದೇಹ, ಮತ್ತು ನಿಯಂತ್ರಿತ ರೀತಿಯಲ್ಲಿ ಪೋಷಿಸಲ್ಪಡುವ, ನಿರ್ದೇಶಿಸಲ್ಪಡುವ ಮನಸ್ಸು ಉತ್ಪಾದಕತೆಯನ್ನು ಗಳಿಸಿಕೊಳ್ಳಲಾರದು. ನೆನಪಿಡಿ, ನೀವು ಸಮಾಜದಲ್ಲಿ ಬದಲಾವಣೆಗಳನ್ನು ವಿರೋಧಿಸುತ್ತಿರುವ ಹಲವರನ್ನು  ಎದುರಾಗುತ್ತೀರಿ. ಅವರಿಗೆ ಹಿಂಜರಿಕೆ , ಭಯ ಯಾಕೆ ಎಂದರೆ ಹಲವು ಹಳೆಯ ರಚನೆಗಳು ಕಳಚಿ ಬೀಳುತ್ತವೆ ಎಂಬುದಕ್ಕಾಗಿ. ಅದಕ್ಕಾಗಿ ಅವರು ಪ್ರತಿಭಟಿಸುತ್ತಾರೆ. ಬದಲಾವಣೆ ಎಂಬುದು ಅಲ್ಲೋಲ-ಕಲ್ಲೋಲಗಳನ್ನು ಮಾತ್ರ ಉಂಟುಮಾಡುತ್ತದೆ ಎಂಬ ನಂಬಿಕೆ ಅವರದಾಗಿರುತ್ತದೆ. ಹೊಸ ಆರಂಭದ ಸಾಧ್ಯತೆಗಳನ್ನು ಅವರು ಪರಿಗಣಿಸುವುದಿಲ್ಲ. ನೀವು ಯುವ ಸ್ನೇಹಿತರು ಭಯದಿಂದ ಹೊರಗೆ ಬರಬೇಕು. ಆದುದರಿಂದ, ಲಕ್ನೋ ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಮತ್ತು ಯುವ ಮಿತ್ರರಿಗೆ  ನನ್ನ ಕರೆ ಮತ್ತು ಕೋರಿಕೆ ಏನೆಂದರೆ, ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ಮಾಡಿ, ಸಮಾಲೋಚಿಸಿ ಮತ್ತು ಇತರರಿಗೆ ತಿಳಿಯಪಡಿಸಿ ಎಂಬುದಾಗಿದೆ. ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿರುವಾಗ ಹೊಸ ಶಿಕ್ಷಣ ನೀತಿ ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಪೂರ್ತಿಯ ಮತ್ತು ಅವಿಚ್ಛಿನ್ನವಾದ ಭಾಗವಾಗಬೇಕು. ನಾವು वय राष्ट्रे जागृयाम पुरोहिता ಸಂದೇಶವನ್ನು ಅರ್ಥೈಸಿಕೊಳ್ಳಲು ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ

ಸ್ನೇಹಿತರೇ,

1947 ರಿಂದ ಆರಂಭಗೊಂಡ, ಸ್ವಾತಂತ್ರ್ಯದ ನೂರು ವರ್ಷಗಳು 2047ಕ್ಕೆ ತುಂಬುತ್ತವೆ. ನಾನು ಲಕ್ನೋ ವಿಶ್ವವಿದ್ಯಾಲಯಕ್ಕೆ ಕೇಳಿಕೊಳ್ಳುವುದೇನೆಂದರೆ, ಅದರ ನೀತಿ ನಿರೂಪಕರು ವಿವಿಧ ತಂಡಗಳನ್ನು ರಚಿಸಿ , ದೇಶವು ತನ್ನ ಸ್ವಾತಂತ್ರ್ಯದ ನೂರು ವರ್ಷಗಳನ್ನು  ಆಚರಿಸಿಕೊಳ್ಳುವಾಗ ಲಕ್ನೋ ವಿಶ್ವವಿದ್ಯಾಲಯ ಎಲ್ಲಿರುತ್ತದೆ ಮತ್ತು 25 ವರ್ಷಗಳಲ್ಲಿ ಲಕ್ನೋ ವಿಶ್ವವಿದ್ಯಾಲಯ ದೇಶಕ್ಕೆ ಏನನ್ನು ನೀಡಲಿದೆ, ದೇಶದ ಆವಶ್ಯಕತೆಗಳನ್ನು ಪೂರೈಸಲು ಲಕ್ನೋ ವಿಶ್ವವಿದ್ಯಾಲಯ ನಾಯಕತ್ವ ವಹಿಸಲು ಬೇಕಾದ ಆವಶ್ಯಕತೆಗಳು ಯಾವುವು ಎಂಬುದರ ಬಗೆ 5-7 ದಿನಗಳ ಕಾಲ ಚರ್ಚೆ ನಡೆಸಿ . ನೀವು ಶತಮಾನೋತ್ಸವವನ್ನು ದೊಡ್ಡ ನಿರ್ಧಾರಗಳೊಂದಿಗೆ ಮತ್ತು ಹೊಸ ನಂಬಿಕೆಗಳೊಂದಿಗೆ ಆಚರಿಸಿದರೆಆಗ ಹಿಂದಿನ ಕಥೆಗಳು ಬರಲಿರುವ ದಿನಗಳಲ್ಲಿ ಪ್ರೇರೇಪಣೆಯನ್ನು ನೀಡಲು ಸಮರ್ಥವಾಗುತ್ತವೆ. ತ್ವರಿತ ಗತಿಯಲ್ಲಿ ಮುನ್ನಡೆ ಸಾಧಿಸಲು ಹೊಸ ಶಕ್ತಿಯನ್ನು ನೀಡುತ್ತವೆ.

ನೂರು ವರ್ಷಗಳ ಸ್ಮರಣೆಗಷ್ಟೇ ಆಚರಣೆಗಳು ಸೀಮಿತವಾಗಬಾರದು, ಆಚರಣೆಗಳು ಸ್ವಾತಂತ್ರ್ಯದ ನೂರು ವರ್ಷಗಳ ಆಚರಣೆಗೆ 25 ವರ್ಷಗಳ ಹಾದಿ ನಕ್ಷೆಯನ್ನು ರೂಪಿಸುವಂತಿರಬೇಕು. ಲಕ್ನೋ ವಿಶ್ವವಿದ್ಯಾಲಯವು 2047 ವೇಳೆಗೆ ದೇಶಕ್ಕೆ ಏನು ಕೊಡಬಲ್ಲದು ಎಂಬುದರ ಬಗ್ಗೆ ಚಿಂತಿಸಬೇಕು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ವಿಶ್ವವಿದ್ಯಾಲಯವೊಂದು 25 ವರ್ಷಗಳ ಅವಧಿಯನ್ನು ಮೀಸಲಾಗಿಟ್ಟರೆ ಅದರ ಫಲಿತಾಂಶವನ್ನು ಯಾರೂ ಕಲ್ಪಿಸಿಕೊಳ್ಳಲಾಗದು. ಕಳೆದ ನೂರು ವರ್ಷಗಳು ಲಕ್ನೋ ವಿಶ್ವವಿದ್ಯಾಲಯದ ಸಾಧನೆಗಳನ್ನು ಸಾಕ್ಷೀಕರಿಸಿವೆ. ಆದುದರಿಂದ ನಾನು ನಿಮ್ಮಲ್ಲಿ 2047ನ್ನು ಗಮನದಲ್ಲಿಟ್ಟುಕೊಂಡು ದೇಶದ ಸ್ವಾತಂತ್ರ್ಯದ ನೂರನೇ ವರ್ಷದಲ್ಲಿ ಓರ್ವ ವ್ಯಕ್ತಿಯಾಗಿ ನಾನೇನು ಕಾಣಿಕೆ ಕೊಡಬಲ್ಲೆ, ವಿಶ್ವವಿದ್ಯಾಲಯ ಏನು ಕೊಡಬಹುದು, ಅಥವಾ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮ ಪಾತ್ರ ಏನು  ಎಂಬ ಬಗ್ಗೆ ಚಿಂತನ ಮಂಥನ ಮಾಡಿ ಎಂದು ಮನವಿ ಮಾಡುತ್ತೇನೆ. ಇಂದು ಮತ್ತೊಮ್ಮೆ ನಾನು ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಿಮಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ನಿಮ್ಮನ್ನು ಭೇಟಿ ಮಾಡುವ ಅವಕಾಶಕ್ಕಾಗಿ ನಾನು ನಿಮಗೆ ಬಹಳ ಅಭಾರಿಯಾಗಿದ್ದೇನೆ.

ಧನ್ಯವಾದಗಳು !!

***



(Release ID: 1677100) Visitor Counter : 208