ಪ್ರಧಾನ ಮಂತ್ರಿಯವರ ಕಛೇರಿ

ಸಮಾಜದ ಎಲ್ಲ ವರ್ಗಕ್ಕೂ ನೆರವಾಗುವ ಸರ್ಕಾರದ ಪ್ರಯತ್ನದ ಮುಂದುವರಿಕೆಯೇ ಇಂದಿನ ಆತ್ಮನಿರ್ಭರ ಭಾರತ ಪ್ಯಾಕೇಜ್: ಪ್ರಧಾನಮಂತ್ರಿ

Posted On: 12 NOV 2020 9:55PM by PIB Bengaluru

ಇಂದಿನ ಆತ್ಮನಿರ್ಭರ ಭಾರತ ಪ್ಯಾಕೇಜ್ ಸಮಾಜದ ಎಲ್ಲ ವರ್ಗದವರಿಗೂ ನೆರವಾಗಬೇಕು ಎನ್ನುವ ಸರ್ಕಾರದ ಪ್ರಯತ್ನದ ಮುಂದುವರಿಕೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.

"ಇಂದಿನ ಆತ್ಮನಿರ್ಭರ ಭಾರತ ಪ್ಯಾಕೇಜ್ ಸಮಾಜದ ಎಲ್ಲಾ ವರ್ಗಗಳಿಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳ ಮುಂದುವರಿಕೆಯಾಗಿದೆ. ಉಪಕ್ರಮಗಳು ಉದ್ಯೋಗ ಸೃಷ್ಟಿಸಲು, ಒತ್ತಡಕ್ಕೊಳಗಾದ ಕ್ಷೇತ್ರಗಳನ್ನು ಮೇಲೆತ್ತಲು, ಹಣಹರಿವು ಖಾತ್ರಿಪಡಿಸಲು, ಉತ್ಪಾದನೆಯನ್ನು ಹೆಚ್ಚಿಸಲು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಶಕ್ತಿ ತುಂಬಲು ಮತ್ತು ರೈತರಿಗೆ ಬೆಂಬಲ ನೀಡಲು ಸಹಾಯ ಮಾಡುತ್ತದೆ." ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

***


(Release ID: 1672525) Visitor Counter : 226