ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಸತತ 5ನೇ ದಿನ 50 ಸಾವಿರಕ್ಕಿಂತ ಕಡಿಮೆ ಹೊಸ ಕೋವಿಡ್ ಪ್ರಕರಣ


ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 4.9 ಲಕ್ಷ, ಒಟ್ಟು ಪ್ರಕರಣಗಳಲ್ಲಿನ ಪಾಲು ಶೇ.5.63ರಷ್ಟು ಇಳಿಕೆ

Posted On: 12 NOV 2020 11:10AM by PIB Bengaluru

ಸತತ ಐದನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 50 ಸಾವಿರದ ಗಡಿ ದಾಟಿಲ್ಲ. 47,905 ಜನರಲ್ಲಿ ಕೋವಿಡ್ -19 ಸೋಂಕು ಕಳೆದ 24 ಗಂಟೆಗಳ ಅವಧಿಯಲ್ಲಿ ದೃಢಪಟ್ಟಿದೆ.

ದೈನಿಕ ಹೊಸ ಪ್ರಕರಣಗಳಿಗಿಂತಲೂ ಹೆಚ್ಚು ದೈನಿಕ ಹೊಸ ಚೇತರಿಕೆ ಪ್ರವೃತ್ತಿ 40ನೇ ದಿನವೂ ಮುಂದುವರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 52,718 ಗುಣಮುಖ ದಾಖಲಾಗಿದೆ.

ಭಾರತದಲ್ಲಿ ಸಕ್ರಿಯಪ್ರಕರಣಗಳ ಸಂಖ್ಯೆ ಪ್ರಸ್ತುತ 4.98 ಲಕ್ಷವಾಗಿದ್ದು ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳಿಗೆ ಕೇವಲ ಶೇ.5.63ರಷ್ಟು ಕೊಡುಗೆಯೊಂದಿಗೆ, ಭಾರತದ ಸಕ್ರಿಯ ಪ್ರಕರಣಗಳು 4,89,294 ರಷ್ಟಾಗಿವೆ, ಇದು 5 ಲಕ್ಷಕ್ಕಿಂತಲೂ ಕಡಿಮೆ ಇದೆ.

ಚೇತರಿಕೆಯ ಪ್ರವೃತ್ತಿಯೊಂದಿಗೆ ಒಟ್ಟು ಗುಣಮುಖ ದರ ಹೊಸ ಪ್ರಕರಣಗಳಿಗಿಂತಲೂ ಹೆಚ್ಚಾಗಿದೆ. ಅದು ಪ್ರಸ್ತುತ ಶೇ.92.89ರಷ್ಟಿದೆ. ಇಂದು ಒಟ್ಟು ಚೇತರಿಕೆ 80,66,501 ತಲುಪಿದೆ. ಚೇತರಿಕೆಯ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಸ್ಥಿರವಾಗಿ ವಿಸ್ತರಣೆಯಾಗುತ್ತಿದ್ದು 75,77,207 ಆಗಿದೆ.

ಶೇ.78ರಷ್ಟು ಹೊಸ ಚೇತರಿಕೆಯ ಪ್ರಕರಣಗಳು 10 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿವೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 9,164 ಜನರು ಗುಣಮುಖರಾಗಿದ್ದು, ಏಕದಿನದಲ್ಲಿ ಚೇತರಿಕೆಯ ಗರಿಷ್ಠ ಪ್ರಕರಣ ವರದಿಯಾಗಿದೆ. 7,264 ಜನರು ದೆಹಲಿಯಲ್ಲಿ ಚೇತರಿಸಿಕೊಂಡಿದ್ದರೆ, ಕೇರಳದಲ್ಲಿ 7,252 ಹೊಸ ಚೇತರಿಕೆ ವರದಿಯಾಗಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.78ರಷ್ಟು ಹೊಸ ಪ್ರಕರಣ ವರದಿಯಾಗಿದೆ.

ದೆಹಲಿಯಲ್ಲಿ ಮತ್ತೊಮ್ಮೆ ಹೆಚ್ಚಳವಾಗಿದ್ದು, ಅತಿ ಹೆಚ್ಚು ದೈನಂದಿನ ಹೊಸ ಪ್ರಕರಣ ವರದಿಯಾಗಿದ್ದು, ಇದುವರೆಗೆ ಅತಿ ಹೆಚ್ಚಿನ ದೈನಂದಿನ ಹೊಸಪ್ರಕರಣ 8,593 ದಾಖಲಿಸಿದೆ. ದೆಹಲಿಯ ಬಳಿಕ ಕೇರಳದಲ್ಲಿ 7,007 ಪ್ರಕರಣಗಳು ಮತ್ತು ಮಹಾರಾಷ್ಟ್ರದಲ್ಲಿ 4,907 ಪ್ರಕರಣಗಳು ದಾಖಲಾಗಿವೆ.

550 ಸಾವು ಕಳೆದ 24 ಗಂಟೆಗಳ ಅವಧಿಯಲ್ಲಿ ವರದಿಯಾಗಿದೆ. ಇಂದು ಮರಣ ದರ ಪ್ರಮಾಣ ಶೇ.1.48ರಲ್ಲಿ ನಿಂತಿದೆ.

ಈ ಹೊಸ ಸಾವುಗಳ ಪೈಕಿ ಶೇ.80ರಷ್ಟು ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿದೆ. ಮಹಾರಾಷ್ಟ್ರದಲ್ಲಿ 125 ಸಾವು ಸಂಭವಿಸಿದ್ದು, ಶೇ.22.7ರಷ್ಟಾಗಿದ್ದರೆ, ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅನುಕ್ರಮವಾಗಿ 85 ಮತ್ತು 49 ಸಾವಿನ ವರದಿಯಾಗಿದೆ.

***



(Release ID: 1672264) Visitor Counter : 211