ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

3 ತಿಂಗಳ ನಂತರ ಹೊಸ ಕೊರೊನಾ ಪ್ರಕರಣಗಳ ಇಳಿಕೆ


11 ವಾರಗಳ ನಂತರ ಒಟ್ಟು ಸಕ್ರಿಯ ಪ್ರಕರಣಗಳು 6.25 ಲಕ್ಷಕ್ಕೆ ಇಳಿಕೆ

Posted On: 27 OCT 2020 11:41AM by PIB Bengaluru

ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ಭಾರತ, ಕಳೆದ 24 ತಾಸುಗಳಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಕಳೆದ 3 ತಿಂಗಳಲ್ಲಿ ಇದೇ ಮೊದಲ ಬಾರಿಗೆ 36,500 (36,470) ಇಳಿಮುಖವಾಗಿದೆ. 2020 ಜುಲೈ 18ರಂದು 34,884 ಹೊಸ ಪ್ರಕರಣಗಳು ದೃಢಪಟ್ಟಿದ್ದವು.

ಪ್ರತಿನಿತ್ಯ ಅಧಿಕ ಸಂಖ್ಯೆಯ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ಮತ್ತು ಮರಣ ಪ್ರಮಾಣ ಸುಸ್ಥಿರವಾಗಿ ತಗ್ಗುತ್ತಿರುವುದರಿಂದ, ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವ ಸ್ಥಿರ ಪ್ರವೃತ್ತಿ ಮುಂದುವರಿದಿದೆ.

ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದ್ದು, ಅದೀಗ 6.25 ಲಕ್ಷಕ್ಕೆ ಇಳಿಕೆಯಾಗಿರುವುದು ಮತ್ತೊಂದು ಸಾಧನೆಯಾಗಿದೆ. ದೇಶಾದ್ಯಂತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 6,25,857ಕ್ಕೆ ಕಡಿಮೆ ಆಗಿದ್ದು, ಒಟ್ಟು ಪ್ರಕರಣಗಳ ಶೇಕಡ 7.88ರಷ್ಟಿದೆ.

http://static.pib.gov.in/WriteReadData/userfiles/image/image001CN9D.jpg

ಕೇಂದ್ರ ಸರ್ಕಾರ ದೇಶವ್ಯಾಪಿ ಕೈಗೊಂಡಿರುವ ಸಮಗ್ರ ಮತ್ತು ನಿರಂತರ ಗಂಟಲು ದ್ರವ ಪರೀಕ್ಷೆ, ಪರಿಣಾಮಕಾರಿ ನಿಗಾ ವ್ಯವಸ್ಥೆ, ರೋಗ ಪತ್ತೆ, ಆಸ್ಪತ್ರೆಗಳಿಗೆ ತ್ವರಿತವಾಗಿ ರೋಗಿಗಳ ದಾಖಲು, ಗುಣಮಟ್ಟದ ಚಿಕಿತ್ಸಾ ವಿಧಾನ ಮತ್ತಿತರ ಕಾರ್ಯತಂತ್ರಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವುದರಿಂದ, ಉತ್ತೇಜನಾತ್ಮಕ ಫಲಿತಾಂಶ ಕಾಣಲು ಸಾಧ್ಯವಾಗುತ್ತಿದೆ. ಅಲ್ಲದೆ, ವೈದ್ಯ ಮತ್ತು ಅರೆವೈದ್ಯ ಸಮುದಾಯ, ಆರೋಗ್ಯ ಕಾರ್ಯಕರ್ತರು, ಕೋವಿಡ್-19 ವಾರಿಯರ್ ಗಳ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಮನೋಭಾವದಿಂದಾಗಿ ದೇಶದ ಎಲ್ಲಾ ಭಾಗಗಳಲ್ಲಿ ಸ್ಥಿರವಾಗಿ ಕೊರೊನಾ ರೋಗಾಣು ನಿಯಂತ್ರಣ ಹೋರಾಟದಲ್ಲಿ ಯಶಸ್ಸು ಕಾಣಲಾಗುತ್ತಿದೆ.

ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 35% ಪ್ರಮಾಣ ಕೇವಲ ದೇಶದ 18 ಜಿಲ್ಲೆಗಳಿಂದ ವರದಿಯಾಗಿದೆ ಎಂಬುದು ಗಮನಾರ್ಹ.

http://static.pib.gov.in/WriteReadData/userfiles/image/image002BA5J.jpg

ರೋಗದಿಂದ ಗುಣಮುಖರಾಗುತ್ತಿರುವವ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದರಿಂದ ದೇಶಾದ್ಯಂತ ಸಕ್ರಿಯ ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ. ದೇಶದಲ್ಲಿ ತನಕ ಗುಣಮುಖರಾದವರ ಸಂಖ್ಯೆ 72 ಲಕ್ಷದ (72,01,070) ಗಡಿ ದಾಟಿದೆ. ಇದು ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಪ್ರಕರಣಗಳ ನಡುವಿನ ಅಂತರವನ್ನು ಹೆಚ್ಚಿಸಿದ್ದು, ಅದೀಗ 65,75,213ರಷ್ಟಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 63,842 ಸೋಂಕಿತರು ಗುಣಮುಖರಾಗಿದ್ದು, ರಾಷ್ಟ್ರೀಯ ಚೇತರಿಕೆ ದರ ಮತ್ತಷ್ಟು ಸುಧಾರಣೆ ಕಂಡು, 90.62%ಗೆ ಏರಿಕೆ ಕಂಡಿದೆ.

ಹೊಸ ಪ್ರಕರಣಗಳ ಪೈಕಿ 78% ಪ್ರಮಾಣವು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಪತ್ತೆಯಾಗಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 9,000ಕ್ಕಿಂತ ಅಧಿಕ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಅದೀಗ ಅಗ್ರಸ್ಥಾನದಲ್ಲಿದೆ. 8,000ಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿರುವ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ.

http://static.pib.gov.in/WriteReadData/userfiles/image/image003B6DV.jpg

ಕಳೆದ 24 ತಾಸುಗಳಲ್ಲಿ ಪತ್ತೆಯಾಗಿರುವ ಹೊಸ ಪ್ರಕರಣಗಳ ಪೈಕಿ 76% ಕೇಸ್ ಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ.

ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರತಿನಿತ್ಯ 4,000ಕ್ಕಿಂತ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಿತ್ಯ 3 ಸಾವಿರಕ್ಕಿಂತ ಹೆಚ್ಚಿನ ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

http://static.pib.gov.in/WriteReadData/userfiles/image/image004TAPE.jpg

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ ಒಟ್ಟು 488 ಸೋಕಿತರು ಮೃತಪಟ್ಟಿದ್ದಾರೆ. ಅದರಲ್ಲಿ ಸುಮಾರು 80% ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಸಂಭವಿಸಿವೆ. ಸತತ ಎರಡನೇ ದಿನವೂ ಸಾವಿನ ಪ್ರಮಾಣ 500 ಮಟ್ಟದಿಂದ ಕೆಳಗಿರುವುದು ಗಮನಾರ್ಹ.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಗರಿಷ್ಠ 84 ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಕೋವಿಡ್-19 ಮರಣ ಪ್ರಮಾಣ ಶೇಕಡ 1.50ಗೆ ತಗ್ಗಿದೆ.

http://static.pib.gov.in/WriteReadData/userfiles/image/image0057CHV.jpg

***


(Release ID: 1667792) Visitor Counter : 226