ಪ್ರಧಾನ ಮಂತ್ರಿಯವರ ಕಛೇರಿ

ಗೌರವಾನ್ವಿತ ಶೇಕ್ ನವಾಫ್ ಆಲ್-ಅಹಮದ್ ಅಲ್-ಜಬೇರ್ ಅಲ್-ಸಭಾ ಅವರನ್ನು ಅಭಿನಂದಿಸಿದ ಪ್ರಧಾನಿ

Posted On: 09 OCT 2020 6:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ದೊರೆಯಾಗಿ ಅಧಿಕಾರ ವಹಿಸಿಕೊಂಡಿರುವ ಗೌರವಾನ್ವಿತ ಶೇಕ್ ನವಾಫ್ ಆಲ್-ಅಹಮದ್ ಅಲ್-ಜಬೇರ್ ಅಲ್-ಸಭಾ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಯುವ ದೊರೆಯಾಗಿ ಅಧಿಕಾರವಹಿಸಿಕೊಂಡಿರುವ ಗೌರವಾನ್ವಿತ ಮಿಷಲ್ ಅಲ್-ಅಹಮದ್ ಅಲ್-ಜಬೇರ್ ಅಲ್ಸಭಾ ಅವರಿಗೂ ಸಹ ಪ್ರಧಾನಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕುವೈತ್ ರಾಷ್ಟ್ರದ ದೊರೆ (ಅಮಿರ್ )ಆಗಿ ಅಧಿಕಾರ ವಹಿಸಿಕೊಂಡಿರುವ ಗೌರವಾನ್ವಿತ ಶೇಕ್ ನವಾಫ್ ಆಲ್-ಅಹಮದ್ ಅಲ್-ಜಬೇರ್ ಅಲ್-ಸಭಾ ಅವರಿಗೆ ಅಭಿನಂದನೆಗಳು. ಯುವ ದೊರೆಯಾಗಿ ಅಧಿಕಾರವಹಿಸಿಕೊಂಡಿರುವ ಗೌರವಾನ್ವಿತ ಮಿಷಲ್ ಅಲ್-ಅಹಮದ್ ಅಲ್-ಜಬೇರ್ ಅಲ್ಸಭಾ ಅವರಿಗೂ ನನ್ನ ಶುಭಾಶಯಗಳು.

ಅವರ ನಾಯಕತ್ವದಲ್ಲಿ ಕುವೈತ್ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂಬ ವಿಶ್ವಾಸ ನನಗಿದೆ ಮತ್ತು ಭಾರತ-ಕುವೈತ್ ಐತಿಹಾಸಿಕ ಸಂಬಂಧ ಮತ್ತಷ್ಟು ಬಲವರ್ಧನೆಗೊಳ್ಳಲಿದೆ’’ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***



(Release ID: 1663938) Visitor Counter : 116