ಪ್ರಧಾನ ಮಂತ್ರಿಯವರ ಕಛೇರಿ

ಐಸಿಸಿಯ 95ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

Posted On: 11 JUN 2020 12:54PM by PIB Bengaluru

ನಮಸ್ಕಾರ..! ನೀವೆಲ್ಲರೂ ಅತ್ಯುತ್ಸಾಹದಿಂದ ಇದ್ದೀರೆಂದು ನಾನು ಭಾವಿಸಿದ್ದೇನೆ. ದೇಶಕ್ಕೆ ಸತತವಾಗಿ 95 ವರ್ಷ ಸೇವೆ ಸಲ್ಲಿಸುವುದು ಯಾವುದೇ ಸಂಸ್ಥೆಗಾದರೂ ಅತಿ ದೊಡ್ಡ ಕಾರ್ಯವಾಗಿದೆ. ಐಸಿಸಿಭಾರತೀಯ ವಾಣಿಜ್ಯ ಮಹಾಮಂಡಳಿ, ಪೂರ್ವ ಭಾರತ, ಈಶಾನ್ಯ ಭಾರತದ ಅಭಿವೃದ್ಧಿಗೆ ವಿಶೇಷವಾಗಿ ಅಲ್ಲಿನ ಉತ್ಪಾದನಾ ಘಟಕಗಳಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಇದು ನಿಜಕ್ಕೂ ಐತಿಹಾಸಿಕ, ಐಸಿಸಿಗೆ ಕೊಡುಗೆ ನೀಡಿದ ಇಲ್ಲಿರುವ ಪ್ರತಿಯೊಬ್ಬ ಗಣ್ಯರನ್ನು ನಾನು ಅಭಿನಂದಿಸುತ್ತೇನೆ.

ಗೆಳೆಯರೇ ಐಸಿಸಿ 1925ರಲ್ಲಿ ಸ್ಥಾಪನೆಯಾದಂದಿನಿಂದ ಭಾರತದ ಸ್ವಾತಂತ್ರ್ಯಾ ಸಂಗ್ರಾಮಕ್ಕೆ ಸಾಕ್ಷಿಯಾಗಿದೆ. ಇದು ಭೀಕರ ಕ್ಷಾಮ ಮತ್ತು ಆಹಾರ ಬಿಕ್ಕಟ್ಟಿಗೆ ಸಾಕ್ಷಿಯಾಗಿರುವುದಲ್ಲದೆ, ಭಾರತದ ಪ್ರಗತಿ ಗಾಥೆಯ ಭಾಗವಾಗಿದೆ.

ಇದೀಗ ನಮ್ಮ ದೇಶ ಬಹು ಬಗೆಯ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯುತ್ತಿದೆ. ಇಡೀ ವಿಶ್ವವೇ ಇಂದು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಭಾರತವೂ ಕೂಡ ಹೋರಾಡುತ್ತಿದ್ದು, ಅದರ ಜೊತೆಗೆ ನಿರಂತರವಾಗಿ ಇತರೆ ಸವಾಲುಗಳೂ ಸಹ ಎದುರಾಗುತ್ತಿವೆ.

ಕೆಲವೆಡೆ ಪ್ರವಾಹದ ಸವಾಲುಗಳಿದ್ದರೆ, ಕೆಲವೆಡೆ ಮಿಡತೆಗಳ ಹಾವಳಿಯ ಸವಾಲು ಎದುರಾಗಿದೆ. ಇನ್ನೂ ಕೆಲವೆಡೆ ಆಲಿಕಲ್ಲಿನಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದರೆ, ಕೆಲವು ಕಡೆ ತೈಲ ನಿಕ್ಷೇಪಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಕೆಲವೆಡೆ ಸಣ್ಣ ಪ್ರಮಾಣದ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಇದೆಲ್ಲದಕ್ಕೂ ಮಿಗಿಲಾಗಿ ಒಂದರ ಹಿಂದೆ ಒಂದು ಚಂಡಮಾರುತಗಳು ನಮ್ಮ ಪೂರ್ವ ಮತ್ತು ಪಶ್ಚಿಮ ಭಾಗದ ಕಡಲ ತೀರದ ರಾಜ್ಯಗಳಿಗೆ ಅಪ್ಪಳಿಸಿ, ನಿಜವಾದ ಸವಾಲನ್ನು ಸೃಷ್ಟಿಸಿದೆ.

ನಾವು ಎಲ್ಲಾ ದಿಕ್ಕಿನಿಂದಲೂ ಇವುಗಳ ವಿರುದ್ಧ ಹೋರಾಡುತ್ತಿದ್ದೇವೆ. ಎಲ್ಲದಕ್ಕೂ ಮಿಗಿಲಾಗಿ ಕಾಲವೂ ನಮ್ಮನ್ನು ಪರೀಕ್ಷಿಸುತ್ತಿದೆ. ಕೆಲವೊಮ್ಮೆ ಹಲವು ಕಷ್ಟಗಳು ಮತ್ತು ಸವಾಲುಗಳು ಒಮ್ಮೆಲೇ ಎದುರಾಗುತ್ತವೆ.

ಆದರೆ ಅಂತಹ ಸಂದರ್ಭಗಳಲ್ಲಿನ ನಮ್ಮ ನಡವಳಿಕೆಗಳು ಉಜ್ವಲ ಭವಿಷ್ಯ ಖಾತ್ರಿಪಡಿಸುತ್ತದೆ. ನಾವು ಹೇಗೆ ಸವಾಲನ್ನು ಎದುರಿಸುತ್ತಿದ್ದೇವೆಯೋ, ನಾವು ಎಷ್ಟು ಬಲಿಷ್ಠವಾಗಿ ಕಷ್ಟಗಳನ್ನು ಎದುರಿಸುತ್ತಿದ್ದೇವೆಯೋ ಅದರಿಂದ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಗೆಳೆಯರೇ, ಒಂದು ನಾಣ್ಣುಡಿ ಇದೆ मन के हारे हार, मन के जीते जीत, “ಎಲ್ಲಿ ಇಚ್ಛಾಶಕ್ತಿ ಮತ್ತು ಬದ್ಧತೆ ಇರುತ್ತದೆಯೋ ಅಲ್ಲಿ ನಮ್ಮ ಮುಂದಿನ ಹಾದಿ ಕಾಣುತ್ತದೆ ಎಂಬುದು. ಯಾರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೊ ಅವರ ಮುಂದೆ ಕೆಲವು ಅವಕಾಶಗಳು ಇರುತ್ತವೆ. ಆದರೆ ಯಾರು ಗೆಲುವಿಗಾಗಿ ಪರಸ್ಪರ ಬೆಂಬಲದೊಂದಿಗೆ ಮುಂದಡಿಯಿಡುತ್ತಾರೆಯೋ ಅವರ ಮುಂದೆ ಇನ್ನೂ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತವೆ.

ಗೆಳೆಯರೇ, ನಮ್ಮ ಐಕ್ಯತೆ ಅಥವಾ ಒಗ್ಗಟ್ಟಿನ ಸ್ಪೂರ್ತಿ, ಭಾರೀ ವಿಪತ್ತುಗಳನ್ನು ಜೊತೆಯಾಗಿ ಎದುರಿಸುವ ಶಕ್ತಿ ನೀಡುತ್ತದೆ. ನಮ್ಮ ದೃಢತೆ ಮತ್ತು ಇಚ್ಛಾಶಕ್ತಿ ನಮ್ಮ ರಾಷ್ಟ್ರದ ಅತಿದೊಡ್ಡ ಶಕ್ತಿಯಾಗಿದೆ.

ಯಾವುದೇ ಬಗೆಯ ತಪ್ಪಸ್ಸಿನಿಂದ ಕಷ್ಟಗಳನ್ನು ಎದುರಿಸುವುದು ನಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ. ಪ್ರತಿಯೊಂದು ಕಷ್ಟಕರ ಸಂದರ್ಭದಲ್ಲೂ ಭಾರತದ ದೃಢತೆ ಇನ್ನಷ್ಟು ಬಲವರ್ಧನೆಗೊಂಡಿದೆ ಮತ್ತು ಅವು ದೇಶದ ಜನರಲ್ಲಿ ಶಕ್ತಿ ಮತ್ತು ನಿರ್ಣಯವನ್ನು ಕೈಗೊಳ್ಳಲು ಉತ್ತೇಜನ ನೀಡುತ್ತಿವೆ. ಇಂದು ನಾನು ನಿಮ್ಮ ಮುಖದ ಮೇಲೆ ಕೆಲವು ಭಾವನೆಗಳನ್ನು ಕಾಣುತ್ತಿದ್ದೇನೆ ಮತ್ತು ಅವು ದೇಶದ ಕೋಟ್ಯಾಂತರ ಜನರ ಪ್ರಯತ್ನಗಳಾಗಿವೆ. ಕೊರೊನಾ ಬಿಕ್ಕಟ್ಟು ಜಗತ್ತಿನಾದ್ಯಂತ ಮುಂದುವರಿದಿದೆ. ಅದರ ವಿರುದ್ಧ ಇಡೀ ವಿಶ್ವವೇ ಸೆಣಸುತ್ತಿದೆ. ನಮ್ಮ ರಾಷ್ಟ್ರ ಕೊರೊನಾ ಯೋಧರ ಸಹಾಯದಿಂದ ಹೋರಾಟ ನಡೆಸುತ್ತಿದೆ.

ಆದರೆ ಇವುಗಳೆಲ್ಲದರ ಮಧ್ಯೆ ಪ್ರತಿಯೊಬ್ಬ ದೇಶವಾಸಿಯೂ ಇಂತಹ ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಂಕಲ್ಪ ಮಾಡಿದ್ದಾರೆ. ನಾವು ದೇಶದಲ್ಲಿ ಅತಿದೊಡ್ಡ ಬದಲಾವಣೆಯ ಪರ್ವವನ್ನು ಆರಂಭಿಸಬೇಕಿದೆ.


ಯಾವುದು ಬದಲಾವಣೆಯ ಮೂಲ ? ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತ, ಸ್ವಾವಲಂಬಿ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಜೀವಂತವಾಗಿದ್ದು, ಅದು ಹಲವು ವರ್ಷಗಳ ಅವರ ಆಶೋತ್ತರವಾಗಿದೆ.

ಆದರೂ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅತಿದೊಡ್ಡ ಬಯಕೆಯಿದೆ. ಅದೆಂದರೆ ನಾವು ವೈದ್ಯಕೀಯ ಉಪಕರಣ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕು ಎಂಬುದು, ರಕ್ಷಣಾ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕು ಎಂಬುದು ಹಾಗೂ ಕಲ್ಲಿದ್ದಲು ಮತ್ತು ಖನಿಜಗಳ ವಲಯದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬುದಾಗಿದೆ.

ತೈಲ ಮತ್ತು ರಸಗೊಬ್ಬರ ವಲಯದಲ್ಲಿ ನಾವು ಸ್ವಾವಲಂಬಿಯಾಗಬೇಕು ಎಂದು ನಾನು ಆಶಿಸಿದ್ದೇನೆ. ವಿದ್ಯುನ್ಮಾನ ಉತ್ಪಾದನೆಯಲ್ಲೂ ನಾವು ಸ್ವಾವಲಂಬಿಯಾಗಬೇಕೆಂದು ಬಯಸುತ್ತೇನೆ. ಅಲ್ಲದೆ, ಸೌರ ಫಲಕಗಳು, ಬ್ಯಾಟರಿ ಮತ್ತು ಚಿಪ್ ಉತ್ಪಾದನೆಯಲ್ಲೂ ನಾವು ಸ್ವಾವಲಂಬನೆ ಸಾಧಿಸಿದ್ದೇವೆ. ವೈಮಾನಿಕ ವಲಯದಲ್ಲೂ ಸಹ ನಾವು ಸ್ವಾವಲಂಬನೆ ಸಾಧಿಸಿದ್ದೇವೆ ಎಂದು ನಾನು ಬಯಸಿದ್ದೇನೆ. ಇಂತಹ ಲೆಕ್ಕವಿಲ್ಲದ ಬಯಕೆಗಳು ಮತ್ತು ಆಕಾಂಕ್ಷೆಗಳು ಪ್ರತಿಯೊಬ್ಬ ಭಾರತೀಯರನ್ನೂ ಸದಾ ಜಾಗೃತ ಗೊಳಿಸುತ್ತವೆ.

ಗೆಳೆಯರೇ, ಕಳೆದ ಐದಾರು ವರ್ಷಗಳಿಂದೀಚೆಗೆ ಭಾರತದ ಸ್ವಾವಲಂಬನೆ ಗುರಿ ದೇಶದ ನೀತಿ ಮತ್ತು ಆಚರಣೆಯಲ್ಲಿ ಮೊದಲ ಆದ್ಯತೆ ವಿಷಯವಾಗಿದೆ. ಇದು ಪ್ರಮುಖ ಕಾರಣವೂ ಹೌದು. ಇದೀಗ ಕೊರೊನಾ ಬಿಕ್ಕಟ್ಟು ನಮಗೆ ಅದನ್ನು ಇನ್ನಷ್ಟು ವೇಗಗೊಳಿಸುವ ಪಾಠ ಕಲಿಸಿದೆ. ಪಾಠದಿಂದ ನಾವುಆತ್ಮನಿರ್ಭರ ಭಾರತ ಅಭಿಯಾನಹುಟ್ಟಿಕೊಂಡಿದೆ.

ಗೆಳೆಯರೇ , ನಾವು ಕುಟುಂಬಗಳಲ್ಲೂ ನೋಡಿದ್ದೇವೆ. ಮಕ್ಕಳಿಗೆ, ಮಗ ಅಥವಾ ಮಗಳು 18-20 ವರ್ಷ ತುಂಬಿದಾಗ ಅವರಿಗೆ ಸ್ವತಂತ್ರವಾಗಿ ಮತ್ತು ಸ್ವಾವಲಂಬನೆಯಿಂದ ಬಾಳುವುದನ್ನು ಕಲಿಯಿರಿ ಎಂದು ಹೇಳುತ್ತೇವೆ. ಅದೇ ರೀತಿಯಲ್ಲಿ ಭಾರತದ ಸ್ವಾವಲಂಬನೆಯ ಮೊದಲ ಪಾಠ ಕುಟುಂಬದಲ್ಲಿಯೇ ಆರಂಭವಾಗುತ್ತದೆ. ಭಾರತವೂ ಕೂಡ ಸ್ವಾವಲಂಬಿಯಾಗಬೇಕಿದೆ.

ಗೆಳೆಯರೇಆತ್ಮನಿರ್ಭರ ಭಾರತ ಅಭಿಯಾನಎಂದರೆ ಸರಳವಾಗಿ ಹೇಳುವುದಾದರೆ ಭಾರತ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು ಎಂಬುದು. ಭಾರತ ಎಲ್ಲವನ್ನೂ ದೇಶದಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು ಮತ್ತು ಯಾವುದೇ ಆಮದು ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗಬಾರದು ಎಂಬುದು. ಭವಿಷ್ಯದಲ್ಲಿ ಭಾರತ ಹೇಗೆ ಅಂತಹ ಉತ್ಪನ್ನಗಳ ರಫ್ತು ರಾಷ್ಟ್ರವಾಗಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕಿದೆ.

ಅಲ್ಲದೆ, ಭಾರತದ ಸಣ್ಣ ಉದ್ಯಮದಾರರು, ನಮ್ಮ ಕರಕುಶಲಕರ್ಮಿಗಳು ಮತ್ತು ಸ್ವಯಂಸೇವಾ ಗುಂಪುಗಳೊಂದಿಗೆ ಇರುವ ಸಹಸ್ರಾರು ಮಂದಿ ಬಡವರು ಉತ್ಪಾದಿಸುತ್ತಿರುವ ಮತ್ತು ದಶಕಗಳಿಂದ ಮಾರಾಟ ಮಾಡುತ್ತಿರುವ ಉತ್ಪನ್ನಗಳನ್ನು ನಾವು ಹೆಚ್ಚಾಗಿ ಬಳಸಬೇಕಿದೆ. ನಾವು ಅಂತಹ ವಸ್ತುಗಳನ್ನೇ ವಿದೇಶಗಳಿಂದ ತೆಗೆದುಕೊಳ್ಳುವಂತಹ ಪ್ರವೃತ್ತಿಯನ್ನು ನಿಯಂತ್ರಿಸಿಕೊಳ್ಳಬೇಕು.

ಪದ್ಧತಿಯ ಆಚರಣೆಯೊಂದಿಗೆ ನಾವು ಸಣ್ಣ ಉದ್ದಿಮೆದಾರರಿಂದ ಇಲ್ಲಿನ ಉತ್ಪನ್ನಗಳನ್ನಷ್ಟೇ ಖರೀದಿಸುವುದಲ್ಲದೆ, ಅವರಿಗೆ ಕೇವಲ ಹಣ ನೀಡುವುದು ಮಾತ್ರವಲ್ಲದೆ, ಒಂದು ರೀತಿಯಲ್ಲಿ ಅವರ ಶ್ರಮವನ್ನು ಗೌರವಿಸುತ್ತೇವೆ ಮತ್ತು ಅವರಿಗೆ ಒಂದು ಬಗೆಯ ಗೌರವವನ್ನು ನೀಡುತ್ತೇವೆ. ರೀತಿಯ ನಮ್ಮ ನಡವಳಿಕೆ ಅವರ ಹೃದಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಮತ್ತು ಅವರು ಹೇಗೆ ಹೆಮ್ಮೆಪಡುತ್ತಾರೆ ಎಂಬುದು ನಮಗೆ ತಿಳಿದಿರುವುದಿಲ್ಲ.

ಆದ್ದರಿಂದನಿಮ್ಮ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಲು ಇದು ಸಕಾಲ’. ಪ್ರತಿಯೊಂದು ಗ್ರಾಮ, ಪ್ರತಿಯೊಂದು ಪಟ್ಟಣ, ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ರಾಜ್ಯ ಮತ್ತು ಇಡೀ ದೇಶವನ್ನೇ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಬೇಕಿದೆ.

ಗೆಳೆಯರೇ, ಸ್ವಾಮಿ ವಿವೇಕಾನಂದ ಅವರು ಒಮ್ಮೆ ಪತ್ರದಲ್ಲಿ ಹೀಗೆ ಬರೆದಿದ್ದರು – “'ಪ್ರಸ್ತುತ ನಾವು ಕೆಲಸ ಮಾಡಬೇಕಾದ ಸರಳ ವಿಧಾನವೆಂದರೆ ಭಾರತೀಯರು ತಮ್ಮದೇ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವುದು ಮತ್ತು ಇತರ ದೇಶಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆಗಳನ್ನು ಪಡೆಯುವುದು' ಸ್ವಾಮಿ ವಿವೇಕಾನಂದ ಅವರು ತೋರಿಸಿದ ಮಾರ್ಗ, ಕೋವಿಡ್ ಜಗತ್ತಿನ ನಂತರ ಭಾರತಕ್ಕೆ ಸ್ಫೂರ್ತಿಯಾಗಿದೆ. ಇದೀಗ ದೇಶ ಪಣತೊಟ್ಟಿದೆ ಮತ್ತು ದೇಶವೂ ಕ್ರಮಗಳನ್ನು ಕೈಗೊಂಡಿದೆ.

ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಪ್ರಕಟಿಸಲಾಗಿರುವ ಮಹತ್ವದ ಸುಧಾರಣೆಗಳನ್ನು ಇದೀಗ ವೇಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಎಂಎಸ್ಎಂಇಗಳ ವ್ಯಾಖ್ಯಾನದ ವ್ಯಾಪ್ತಿ ವಿಸ್ತರಣೆ ಮಾಡುವುದಾಗಿರಲೀ ಅಥವಾ ಎಂಎಸ್ಎಂಇಗಳಿಗೆ ಬೆಂಬಲಿಸಲು ಸಹಸ್ರಾರು ಕೋಟಿ ರೂ.ಗಳ ವಿಶೇಷ ನಿಧಿ ವ್ಯವಸ್ಥೆ ಮಾಡುವುದಾಗಿರಲೀ, ಅವೆಲ್ಲ ಇಂದು ವಾಸ್ತವಾಗಿವೆ. ಐಬಿಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವುದಾಗಿರಬಹುದು, ಸಣ್ಣ ತಪ್ಪುಗಳಿಗೆ ಶಿಕ್ಷೆ ವಿಧಿಸುವುದರಿಂದ ವಿನಾಯಿತಿ ನೀಡುವ ನಿರ್ಧಾರವಾಗಿರಬಹುದು. ಹೂಡಿಕೆಗಳನ್ನು ತ್ವರಿತಗೊಳಿಸಲು ಯೋಜನಾ ಅಭಿವೃದ್ಧಿ ಕೋಶಗಳನ್ನು ರಚಿಸಬಹುದಾಗಿರಬಹುದು. ಅಂತಹ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.

ಇದೀಗ ಹಲವು ವಲಯಗಳನ್ನು ವಿಶೇಷವಾಗಿ ಕಲ್ಲಿದ್ದಲು, ಗಣಿಗಾರಿಕೆ ವಲಯಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವುದರ ಜೊತೆಗೆ ಈಗಾಗಲೇ ಘೋಷಿಸಲಾಗಿರುವ ಸುಧಾರಣೆಗಳ ಸಂಪೂರ್ಣ ಲಾಭವನ್ನು ಮಾಡಿಕೊಳ್ಳಲು ಉದ್ಯಮ ಮುಂದೆ ಬರಬೇಕು. ಯುವ ಸ್ನೇಹಿತರು ಕೂಡ ವಿಚಾರದಲ್ಲಿ ಮುಂದಾಗಬೇಕು.

ಗೆಳೆಯರೇ, ರೈತರು ಮತ್ತು ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೈಗೊಂಡ ಕೆಲವು ನಿರ್ಧಾರಗಳಿಂದ ಹಲವು ದಶಕಗಳ ಗುಲಾಮಗಿರಿಯಿಂದ ಕೃಷಿ ಆರ್ಥಿಕತೆಯನ್ನು ಮುಕ್ತಗೊಳಿಸಿದೆ. ಇದೀಗ ಭಾರತದ ರೈತರಿಗೆ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಲಭಿಸಿದೆ.

ಎಪಿಎಂಸಿ ಕಾಯ್ದೆ, ಅವಶ್ಯಕ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡಿರುವುದರಿಂದ ಅವು ರೈತರು ಮತ್ತು ಉದ್ಯಮದ ನಡುವೆ ಪಾಲುದಾರಿಕೆ ಹಾದಿಯನ್ನು ತೆರೆದಿವೆ. ಇದರಿಂದಾಗಿ ಖಂಡಿತ ರೈತರು ಮತ್ತು ಗ್ರಾಮೀಣ ಆರ್ಥಿಕತೆಗೆ ಪುನರುಜ್ಜೀವನ ಸಿಗಲಿದೆ. ನಿರ್ಧಾರಗಳಿಂದಾಗಿ ರೈತರನ್ನು ಓರ್ವ ಉತ್ಪಾದಕನಂತೆ ಗುರುತಿಸಲಾಗಿದ್ದು, ಆತನ ಉತ್ಪನ್ನಗಳನ್ನು ಒಂದು ಉತ್ಪನ್ನ ಎಂದು ಪರಿಗಣಿಸಲಾಗುವುದು.

ಗೆಳೆಯರೇ, ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಹಣ ವರ್ಗಾವಣೆ ಮಾಡುವುದಾಗಿರಬಹುದು, ಎಂಎಸ್ ಪಿ ಕುರಿತ ನಿರ್ಧಾರ ಕೈಗೊಳ್ಳುವುದಾಗಿರಬಹುದು ಅಥವಾ ಅವರ ಪಿಂಚಣಿ ಯೋಜನೆ ಆಗಿರಬಹುದು. ಎಲ್ಲ ಕ್ರಮಗಳು ರೈತರನ್ನು ಸಬಲೀಕರಣಗೊಳಿಸುವ ನಮ್ಮ ಪ್ರಯತ್ನಗಳಾಗಿವೆ. ಇದೀಗ ರೈತರು ದೊಡ್ಡ ಮಾರುಕಟ್ಟೆ ಶಕ್ತಿಯ ಜೊತೆ ಬೆಳೆಯಲು ಸಹಾಯ ಮಾಡಲಾಗುತ್ತಿದೆ.

ಗೆಳೆಯರೇ, ಭಾರತದಲ್ಲಿ ಇದೀಗ ಕ್ಲಸ್ಟರ್ ಆಧಾರಿತ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಪ್ರತಿಯೊಬ್ಬರಿಗೂ ಅವಕಾಶವನ್ನು ಸೃಷ್ಟಿಸಲಿದೆ. ಜಿಲ್ಲೆ ಮತ್ತು ಬ್ಲಾಕ್ ಗಳಲ್ಲಿ ಉತ್ಪತ್ತಿ ಮಾಡಿರುವ ವಸ್ತುಗಳಿಗೆ ಸಮೀಪದಲ್ಲಿ ಕ್ಲಸ್ಟರ್ ಮಾಡಲಾಗುವುದು. ಉದಾಹರಣೆಗೆ ಸೆಣಬು ಆಧಾರಿತ ಕೈಗಾರಿಕೆಗಳನ್ನು ಪಶ್ಚಿಮ ಬಂಗಾಳದ ಸೆಣಬು ರೈತರಿರುವ ಪ್ರದೇಶದ ಸುತ್ತಮುತ್ತ ಬಲವರ್ಧನೆಗೊಳಿಸಲಾಗುವುದು.

ಅಗಾಧ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಬರುವ ಆದಿವಾಸಿಗಳ ನೆಲೆಸಿರುವ ಪ್ರದೇಶಗಳಿಗೆ ಸನಿಹದಲ್ಲಿ ಲಭ್ಯವಾಗುವಂತೆ ಆಧುನಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕು. ಅಲ್ಲದೆ, ಬಿದಿರು ಮತ್ತು ಸಾವಯವ ಉತ್ಪನ್ನಗಳಿಗೆ ಕ್ಲಸ್ಟರ್ ಗಳನ್ನು ಸ್ಥಾಪಿಸಬೇಕು. ಇಡೀ ಈಶಾನ್ಯ ಭಾರತ ಸಿಕ್ಕಿಂನಂತಹ ರಾಜ್ಯಗಳನ್ನು ಸಾವಯವ ಕೃಷಿಯ ಪ್ರಮುಖ ತಾಣವನ್ನಾಗಿ ಮಾಡಬೇಕು. ಸಾವಯವ ರಾಜಧಾನಿಯನ್ನೂ ಸಹ ಅಭಿವೃದ್ಧಿಪಡಿಸಬಹುದು.

ಈಶಾನ್ಯ ಭಾಗದಲ್ಲಿ ಸಾವಯವ ಕೃಷಿ ಒಂದು ಬಹುದೊಡ್ಡ ಆಂದೋಲನವಾಗಬೇಕು. ಇದಕ್ಕೆ ಎಲ್ಲ ಐಸಿಸಿ ಜೊತೆ ಸಹಯೋಗ ಹೊಂದಿರುವ ವರ್ತಕರು ನಿರ್ಣಯಿಸಬೇಕು. ನೀವು ಜಾಗತಿಕ ಗುರುತಿಸುವಿಕೆಯನ್ನು ಮಾಡಬೇಕು ಮತ್ತು ಮೂಲಕ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬೇಕು.

ಗೆಳೆಯರೇ, ನೀವು ಹಲವು ದಶಕಗಳಿಂದ ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ ಕೆಲಸ ಮಾಡುತ್ತಿದ್ದೀರಿ. ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳಿಂದ ಈಶಾನ್ಯ ಮತ್ತು ಪೂರ್ವ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ.

ನನ್ನ ಪ್ರಕಾರ ಕೋಲ್ಕತ್ತಾ ಮತ್ತೊಮ್ಮೆ ಅತಿದೊಡ್ಡ ನಾಯಕ ಆಗಬಹುದು. ಹಿಂದಿನ ಯಶೋಗಾಥೆಯಿಂದ ಸ್ಫೂರ್ತಿಪಡೆದು, ಕೋಲ್ಕತ್ತಾ ಇನ್ನು ಮುಂದೆ ಭವಿಷ್ಯದಲ್ಲಿ ಪ್ರಾಂತ್ಯದ ಅಭಿವೃದ್ಧಿಯ ನೇತೃತ್ವ ವಹಿಸಿಕೊಳ್ಳಬಹುದು.

ಇಲ್ಲಿನ ಕಾರ್ಮಿಕರು ಆಸ್ತಿ ಮತ್ತು ಸಂಪನ್ಮೂಲದ ಸಹಾಯದಿಂದ ಪ್ರಾಂತ್ಯದಲ್ಲಿ ಎಷ್ಟು ಬೆಳವಣಿಗೆ ಸಾಧಿಸಬಹುದು ಎಂಬುದು ಬೇರೆಯವರಿಗಿಂತ ನಿಮಗೆ ಚೆನ್ನಾಗಿ ತಿಳಿದಿದೆ.

ಗೆಳೆಯರೇ, ಐದು ವರ್ಷಗಳ ನಂತರ ಅಂದರೆ 2025ನೇ ವರ್ಷದಲ್ಲಿ ನಿಮ್ಮ ಸಂಸ್ಥೆ ನೂರು ವರ್ಷಗಳನ್ನು ಪೂರೈಸುತ್ತದೆ. ಮತ್ತೊಂದೆಡೆ 2022ನೇ ವರ್ಷದಲ್ಲಿ ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷ ಪೂರ್ಣಗೊಳ್ಳಲಿದೆ. ಇದು ನಿಮ್ಮ ಸಂಸ್ಥೆ ಮತ್ತು ನಿಮ್ಮ ಸದಸ್ಯರು ದೊಡ್ಡ ಸಂಕಲ್ಪವನ್ನು ಮಾಡಲು ಸೂಕ್ತ ಸಮಯ, ನಾನು ಐಸಿಸಿಗೆ ಆಗ್ರಹಿಸುವುದೆಂದರೆ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ತನ್ನ ಮಟ್ಟದಲ್ಲಿ 50 ರಿಂದ 100 ಹೊಸ ಗುರಿಗಳನ್ನು ತಾನೇ ನಿಗದಿಪಡಿಸಿಕೊಳ್ಳಬೇಕೆಂದು.

ಗುರಿಗಳು, ಸಂಸ್ಥೆಗಳು, ಉದ್ಯಮದ ಪ್ರತಿಯೊಬ್ಬರು ಮತ್ತು ವಾಣಿಜ್ಯ ಘಟಕಕ್ಕೆ ಸಂಬಂಧಿಸಿದವುಗಳಾಗಿದ್ದು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದಾಗಿರಬೇಕು. ನೀವು ನಿಮ್ಮ ಗುರಿಗಳತ್ತ ಸಾಗುತ್ತಿರುವಂತೆಯೇ ಅಭಿಯಾನ ಈಶಾನ್ಯ ಭಾರತ ಮತ್ತು ಈಶಾನ್ಯ ಭಾಗದಲ್ಲಿ ಪ್ರಗತಿ ಸಾಧಿಸಲಿದೆ.

ಗೆಳೆಯರೇ, ಉತ್ಪಾದನೆಯಲ್ಲಿ ಬಂಗಾಳದ ಐತಿಹಾಸಿಕ ಶ್ರೇಷ್ಠತೆಯನ್ನು ಪುನರುಜ್ಜೀವನಗೊಳಿಸಬೇಕಿದೆ. ನಾವು ಸದಾಬಂಗಾಳ ಇಂದು ಏನು ಯೋಚನೆ ಮಾಡುತ್ತದೆಯೋ ಅದನ್ನು ಭಾರತ ನಾಳೆ ಯೋಚಿಸುತ್ತದೆಎಂಬ ಮಾತನ್ನು ಕೇಳುತ್ತಿರುತ್ತೇವೆ. ಇದರಿಂದ ನಾವು ಸ್ಫೂರ್ತಿ ಪಡೆಯಬೇಕಿದೆ ಮತ್ತು ಮುನ್ನಡೆಯಬೇಕಿದೆ. ಇದು ಭಾರತೀಯ ಆರ್ಥಿಕತೆಯನ್ನು 'ಕಮಾಂಡ್ ಅಂಡ್ ಕಂಟ್ರೋಲ್' ಮೋಡ್ನಿಂದ ಹೊರತೆಗೆದು ಅದನ್ನು 'ಪ್ಲಗ್ ಅಂಡ್ ಪ್ಲೇ' ಮೋಡ್ನತ್ತ ಕೊಂಡೊಯ್ಯುವ ಕಾಲ. ಇದು ಸಂಕುಚಿತ ಮನೋಭಾವದ ಸಮಯವಲ್ಲ. ದಿಟ್ಟ ನಿರ್ಧಾರಗಳನ್ನು ಕೈಗೊಂಡು ದಿಟ್ಟ ರೀತಿಯಲ್ಲಿ ಹೂಡಿಕೆಗಳನ್ನು ಆಕರ್ಷಿಸುವುದಕ್ಕೆ ಸಕಾಲ.

ಭಾರತದಲ್ಲಿ ಜಾಗತಿಕ ಸ್ಪರ್ಧಾತ್ಮಕ ದೇಶೀಯ ಪೂರೈಕೆ ಸರಣಿಯನ್ನು ಸ್ಥಾಪಿಸುವುದಕ್ಕೆ ಇದು ಸಕಾಲ.

ಅದಕ್ಕಾಗಿ ಉದ್ಯಮ, ಹಾಲಿ ಇರುವ ಪೂರೈಕೆ ಸರಣಿಯ ಎಲ್ಲ ಭಾಗೀದಾರರಿಗೆ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡಬೇಕು ಮತ್ತು ಮೌಲ್ಯವರ್ಧನೆ ಮೂಲಕ ಅವರನ್ನು ಬೆಂಬಲಿಸಬೇಕು.

ಗೆಳೆಯರೇ,

ಆತ್ಮನಿರ್ಭರ ಭಾರತ ಅಭಿಯಾನ ಮತ್ತು ಕೊರೊನಾ ಸಂಕಷ್ಟದಲ್ಲಿ ಹೋರಾಟ ನಡೆಸುತ್ತ ಮುನ್ನಡೆಯುತ್ತಿರುವುದರ ನಡುವೆಯೇ ಇಂದಿನ ಸರ್ವ ಸದಸ್ಯರ ಸಭೆಯಲ್ಲಿ ಜನತೆ, ಭೂಮಿ ಮತ್ತು ಲಾಭ, ವಿಷಯಗಳು ಪ್ರಮುಖವಾಗಿ ಚರ್ಚೆಯಾಗಬೇಕು. ಕೆಲವು ಜನರು ಯೋಚಿಸಬಹುದು, ಮೂರು ಒಂದಕ್ಕೊಂದು ತದ್ವಿರುದ್ಧ ಹಾಗೂ ವ್ಯತಿರಿಕ್ತ ಎನ್ನಬಹುದು. ಆದರೆ ಅದು ಹಾಗಲ್ಲ, ಜನತೆ, ಭೂಮಿ ಮತ್ತು ಲಾಭ ಮೂರು ಒಂದಕ್ಕೊಂದು ಸಂಬಂಧವಿದೆ. ಮೂರು ಕ್ರಮೇಣ ಚೆನ್ನಾಗಿ ಬೆಳವಣಿಗೆ ಹೊಂದಬಹುದು ಮತ್ತು ಸಹಬಾಳ್ವೆ ನಡೆಸಬಹುದು.

ನಾನು ನಿಮಗೆ ಎಲ್ಇಡಿ ಬಲ್ಬ್ ನಂತಹ ಕೆಲವು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ಐದಾರು ವರ್ಷಗಳ ಹಿಂದೆ ಎಲ್ಇಡಿ ಬಲ್ಬ್ 350 ರೂ.ಗೂ ಅಧಿಕ ಬೆಲೆಗೆ ಲಭ್ಯವಿತ್ತು, ಇಂದು ಅದೇ ಬಲ್ಬ್ 50 ರೂ.ಗೆ ಲಭ್ಯವಿದೆ. ಸುಮ್ಮನೆ ಊಹಿಸಿಕೊಳ್ಳಿ, ಎಲ್ಇಡಿ ಬಲ್ಬ್ ಗಳ ಬೆಲೆ ಇಳಿಕೆ ಮಾಡಿದ್ದರಿಂದ ಅವು ದೇಶದ ಕೋಟ್ಯಾಂತರ ಮನೆಗಳನ್ನು ತಲುಪಲು ಸಹಕಾರಿಯಾಯಿತು ಮತ್ತು ಇದೀಗ ಅವುಗಳನ್ನು ಬೀದಿ ದೀಪಗಳಲ್ಲಿ ಅಳವಡಿಸಲಾಗುತ್ತಿದೆ. ಅವುಗಳ ಬಳಕೆ ವ್ಯಾಪ್ತಿ ಹೆಚ್ಚಾಗಿರುವುದರಿಂದ ಅವುಗಳ ಉತ್ಪಾದನಾ ವೆಚ್ಚ ತಗ್ಗಿದೆ ಮತ್ತು ಲಾಭವೂ ಹೆಚ್ಚಳವಾಗಿದೆ. ಇದರಿಂದ ಯಾರಿಗೆ ಪ್ರಯೋಜನವಾಗಿದೆ ?

ಜನರಿಗೆ ಅನುಕೂಲವಾಗಿದೆ. ಸಾಮಾನ್ಯ ಜನರಿಗೆ ಕಡಿಮೆ ವಿದ್ಯುತ್ ಬಿಲ್ ನಿಂದ ಪ್ರಯೋಜನವಾಗಿದೆ. ಇಂದು ಕಡಿಮೆ ವಿದ್ಯುತ್ ಬಿಲ್ ನಿಂದಾಗಿ ಪ್ರತಿ ವರ್ಷ ದೇಶದ ಜನರು ಸುಮಾರು 19 ಸಾವಿರ ಕೋಟಿ ರೂ. ಹಣವನ್ನು ಉಳಿಸುತ್ತಿದ್ದಾರೆ. ಎಲ್ಇಡಿ ಬಲ್ಬ್ ಗಳಿಗೆ ಧನ್ಯವಾದಗಳು. ಉಳಿತಾಯದಿಂದಾಗಿ ಬಡವರು ಮತ್ತು ದೇಶದ ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲವಾಗಿದೆ.

ಭೂಮಿಗೂ ಕೂಡ ಇದರಿಂದ ಅನುಕೂಲವಾಗಿದೆ. ಸರ್ಕಾರದ ಏಜೆನ್ಸಿಗಳು ಎಲ್ಇಡಿ ಬಲ್ಬ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಪ್ರತಿ ವರ್ಷ 40 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ (ಇಂಗಾಲ ಹೊರಸೂಸುವುದು) ಹೊರ ಹೋಗುವುದನ್ನು ತಪ್ಪಿಸಿದೆ.

ಮೂಲಕ ಎರಡಕ್ಕೂ ಲಾಭವಾಗಿದೆ. ಎರಡಕ್ಕೂ ಗೆಲ್ಲುವ ಸಮಾನ ಅವಕಾಶಗಳಿವೆ. ನೀವು ಸರ್ಕಾರದ ಇತರೆ ಯೋಜನೆಗಳು ಮತ್ತು ನಿರ್ಧಾರಗಳನ್ನು ಗಮನಿಸಿರಬಹುದು. ಆಗ ನಿಮಗೆ ಜನತೆ, ಭೂಮಿ ಮತ್ತು ಲಾಭದ ಪರಿಕಲ್ಪನೆ ಅರ್ಥವಾಗುತ್ತದೆ. ಕಳೆದ ಐದಾರು ವರ್ಷಗಳಲ್ಲಿ ಮೂರನ್ನು ಅತ್ಯಂತ ಬಲಿಷ್ಠವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಇದೀಗ ನೀವು ಸರ್ಕಾರ ಒಳನಾಡು ಜಲಮಾರ್ಗಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಕಾಣಬಹುದು. ಹಲ್ದಿಯಾ ಮತ್ತು ಬನಾರಸ್ ನಡುವೆ ಜಲಮಾರ್ಗವನ್ನು ಕಾರ್ಯಾಚರಣೆ ಮಾಡಲಾಗಿದೆ. ಇದೀಗ ಈಶಾನ್ಯ ರಾಜ್ಯಗಳಲ್ಲೂ ಜಲಮಾರ್ಗಗಳನ್ನು ವಿಸ್ತರಿಸಲಾಗುತ್ತಿದೆ.

ಜನರು ಜಲಮಾರ್ಗಗಳಿಂದ ಪ್ರಯೋಜನ ಪಡೆಯುತ್ತಾರೆ. ಕಾರಣ ಇದರಿಂದ ಸಾಗಾಣೆ ವೆಚ್ಚ ತಗ್ಗಲಿದೆ.

ಗ್ರಹಗಳಿಗೂ ಕೂಡ ಜಲಮಾರ್ಗಗಳಿಂದ ಅನುಕೂಲವಾಗಲಿದೆ. ಏಕೆಂದರೆ ಅವು ಕಡಿಮೆ ಇಂಧನವನ್ನು ಉರಿಸುತ್ತವೆ. ಇದರಿಂದ ಪೆಟ್ರೋಲ್ ಮತ್ತು ಡೀಸಲ್ ಆಮದು ತಗ್ಗಲಿದೆ ಮತ್ತು ರಸ್ತೆ ಮೇಲಿನ ವಾಹನ ದಟ್ಟಣೆಯೂ ತಗ್ಗಲಿದೆ ಎಂಬುದನ್ನು ನಾವು ಮರೆಯಬಾರದು.

ಸರಕುಗಳ ಬೆಲೆ ತಗ್ಗಲಿದೆ ಮತ್ತು ಅವು ಅತ್ಯಂತ ಕಿರಿದಾದ ಮಾರ್ಗದಲ್ಲಿ ತ್ವರಿತವಾಗಿ ತಲುಪಬೇಕಾದ ಸ್ಥಳವನ್ನು ತಲುಪಲಿವೆ. ಇದರಿಂದ ಖರೀದಿದಾರರು ಮತ್ತು ಮಾರಾಟಗಾರರು ಇಬ್ಬರು ಲಾಭ ಮಾಡಿಕೊಳ್ಳಬಹುದು.

ಗೆಳೆಯರೇ, ಭಾರತದಲ್ಲಿ ಮತ್ತೊಂದು ಅಭಿಯಾನ ನಡೆಯುತ್ತಿದೆ. ಅದೆಂದರೆ ಬಿಡಿ ಪ್ಲಾಸ್ಟಿಕ್ ಬಳಕೆಯಿಂದ ದೇಶವನ್ನು ಮುಕ್ತಗೊಳಿಸುವುದು. ವಿಚಾರದಲ್ಲಿ ಜನತೆ, ಭೂಮಿ ಮತ್ತು ಲಾಭ ಮೂರು ವಿಷಯಗಳು ಒಳಗೊಂಡಿವೆ.

ಇದು ವಿಶೇಷವಾಗಿ ಪಶ್ಚಿಮಬಂಗಾಳಕ್ಕೆ ತುಂಬಾ ಅನುಕೂಲಕಾರಿ. ಇದು ನಿಮ್ಮ ಸೆಣಬು ಉದ್ಯಮ ಬಳಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ನೀವು ಅದರ ಪ್ರಯೋಜನ ಪಡೆದುಕೊಳ್ಳುತ್ತೀರಾ? ನೀವು ಸೆಣಬಿನ ಪ್ಯಾಕಿಂಗ್ ಸಾಮಗ್ರಿ ಉತ್ಪಾದನೆಯನ್ನು ಆರಂಭಿಸಿದ್ದೀರಾ ? ಒಂದು ರೀತಿಯಲ್ಲಿ ನೀವು ಅತಿ ಹೆಚ್ಚಿನ ಅನುಕೂಲಕರ ಸ್ಥಿತಿಯಲ್ಲಿದೀರಿ.

ನೀವು ಅವಕಾಶವನ್ನು ಮತ್ತಷ್ಟು ಬಳಸಿಕೊಳ್ಳಬೇಕಿದೆ. ನೀವು ಅವಕಾಶವನ್ನು ಬಿಟ್ಟರೆ. ನಿಮಗೆ ಯಾರು ಸಹಾಯ ಮಾಡುತ್ತಾರೆ ? ಸುಮ್ಮನೆ ಊಹಿಸಿಕೊಳ್ಳಿ, ಪಶ್ಚಿಮ ಬಂಗಾಳದಲ್ಲಿ ಮಾಡಿದ ಸೆಣಬಿನ ಕೈಚೀಲ ಪ್ರತಿಯೊಬ್ಬರ ಕೈಯಲ್ಲೂ ಕಾಣಿಸಿಕೊಂಡರೆ ಅದರಿಂದ ಬಂಗಾಳದ ಜನರಿಗೆ ಎಷ್ಟು ದೊಡ್ಡ ಲಾಭವಾಗುತ್ತದೆ ಎಂಬುದನ್ನು!.

ಗೆಳೆಯರೇ, ಜನಕೇಂದ್ರಿತ, ಜನ ಆಧಾರಿತ ಮತ್ತು ಭೂ ಸ್ನೇಹಿ ಅಭಿವೃದ್ಧಿ ನಿಲುವುಗಳು ದೇಶದಲ್ಲಿ ಇದೀಗ ಆಡಳಿತದ ಭಾಗವಾಗಿದೆ. ನಮ್ಮ ತಾಂತ್ರಿಕ ಹಸ್ತಕ್ಷೇಪಗಳು, ಜನತೆ, ಭೂಮಿ ಮತ್ತು ಲಾಭದ ಆಲೋಚನೆಗೆ ಹೊಂದಿಕೊಳ್ಳುತ್ತವೆ.

ಯುಪಿಐ ಮೂಲಕ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಟಚ್ ಲೆಸ್, ಸಂಪರ್ಕ ರಹಿತ, ನಗದು ರಹಿತ ಮತ್ತು 24X7 ಮಾಡಲಾಗಿದೆ. ಭೀಮ್ ಆಪ್ ಮೂಲಕ ವಹಿವಾಟುಗಳು ಹೊಸ ದಾಖಲೆಗಳನ್ನು ಬರೆಯುತ್ತಿವೆ. ರುಪೆ ಕಾರ್ಡ್ ಇದೀಗ ಬಡವರು, ರೈತರು, ಮಧ್ಯಮವರ್ಗ ಮತ್ತು ದೇಶದ ಪ್ರತಿಯೊಂದು ವರ್ಗದ ನೆಚ್ಚಿನ ಕಾರ್ಡ್ ಆಗಿ ಬದಲಾಗಿದೆ. ನಾವು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಾಗ ನಾವೇಕೆ ರುಪೆ ಕಾರ್ಡ್ ಅನ್ನು ಹೆಮ್ಮೆಯಿಂದ ಬಳಸಬಾರದು ?

ಗೆಳೆಯರೇ, ಇದೀಗ ದೇಶದಲ್ಲಿ ಬ್ಯಾಂಕಿಂಗ್ ಸೇವೆಗಳ ವ್ಯಾಪ್ತಿ ದೀರ್ಘಕಾಲ ಉಳ್ಳದವರ ವರ್ಗದಲ್ಲೇ ಇದ್ದಂತಹ ಜನರನ್ನು ತಲುಪಿದೆ. ಡಿಬಿಟಿ, ಜೆಎಎಂ ಅಂದರೆ ಜನಧನ್ ಆಧಾರ್ ಮೊಬೈಲ್ ಮೂಲಕ ಯಾವುದೇ ಸೋರಿಕೆಯಿಲ್ಲದೆ, ಕೋಟ್ಯಾಂತರ ಫಲಾನುಭವಿಗಳಿಗೆ ಅಗತ್ಯ ಸೇವೆಗಳ ಬೆಂಬಲವನ್ನು ಒದಗಿಸಲು ಸಾಧ್ಯವಾಗಿದೆ.

ಅದೇ ರೀತಿ ಸರ್ಕಾರದ -ಮಾರುಕಟ್ಟೆ ತಾಣ ಅಂದರೆ ಜೆಇಎಂ ಅಡಿಯಲ್ಲಿ ಸರ್ಕಾರದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಸಾರ್ವಜನಿಕರಿಗೆ ಲಾಭ ಗಳಿಕೆಗೆ ಅವಕಾಶ ಮಾಡಿಕೊಟ್ಟಿದೆ. ನೀವು ಸ್ವಸಹಾಯ ಗುಂಪುಗಳು, ಎಂಎಸ್ಎಂಇಗಳು ಜೆಇಎಂ ವೇದಿಕೆಯ ಮೂಲಕ ನೇರವಾಗಿ ಭಾರತ ಸರ್ಕಾರಕ್ಕೆ ಸರಕು ಮತ್ತು ಸೇವೆಗಳನ್ನು ಒದಗಿಸುತ್ತಿರುವ ಬಗ್ಗೆ ಕೇಳಿರಬಹುದು. ಇಲ್ಲವಾದರೆ ಕೆಲವೇ ಕೆಲವು ಲಕ್ಷಗಳ ವಹಿವಾಟು ಹೊಂದಿರುವ ಉದ್ದಿಮೆದಾರರು ಕೇಂದ್ರ ಸರ್ಕಾರಕ್ಕೆ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ.

ಆದ್ದರಿಂದ ನಾನು ನಿಮ್ಮ ಐಸಿಸಿ ಸದಸ್ಯರು ಮತ್ತು ಸಂಬಂಧಿಸಿದ ಉತ್ಪಾದಕರು ಗರಿಷ್ಠ ಸಂಖ್ಯೆಯಲ್ಲಿ ಜಿಇಎಂ ಸೇರ್ಪಡೆಯಾಗಬೇಕು ಎಂದು ಆಗ್ರಹಿಸಲು ಬಯಸುತ್ತೇನೆ. ಪ್ರತಿಯೊಬ್ಬ ಉತ್ಪಾದಕರೂ ಜಿಇಎಂ ಸೇರ್ಪಡೆಯಾದರೆ ಸಣ್ಣ ಉದ್ದಿಮೆದಾರರೂ ಸಹ ಸರ್ಕಾರಕ್ಕೆ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಗೆಳೆಯರೇ, ನಾವು ನಮ್ಮ ಭೂಮಿಯ ಬಗ್ಗೆ ಮಾತನಾಡುವಾಗ ನೀವು ಇಂದಿನ ಐಎಸ್ಎ ಅಂದರೆ ಅಂತಾರಾಷ್ಟ್ರೀಯ ಸೌರ ಮೈತ್ರಿಯನ್ನು ಗಮನಿಸಿರಬಹುದು. ಅದು ಇಂದು ದೊಡ್ಡ ಜಾಗತಿಕ ಚಳವಳಿಯಾಗಿದೆ. ಸೌರಶಕ್ತಿ ವಲಯದಲ್ಲಿ ಭಾರತ ತಾನು ಮಾಡಿಕೊಂಡಿರುವ ಲಾಭದ ಪ್ರಯೋಜನಗಳನ್ನು ಇಡೀ ವಿಶ್ವದೊಂದಿಗೆ ಹಂಚಿಕೊಳ್ಳುವ ಪ್ರಯತ್ನಗಳು ನಡೆದಿವೆ. ನವೀಕರಿಸಬಹುದಾದ ಇಂಧನ, ದೇಶದಲ್ಲಿ ಸೌರಶಕ್ತಿ ಉತ್ಪಾದನೆಗೆ ನಿಗದಿಪಡಿಸಿರುವ ಗುರಿಗಳಿಗೆ ಹೂಡಿಕೆ ಮತ್ತು ಕೊಡುಗೆಯನ್ನು ವಿಸ್ತರಿಸುವಂತೆ ನಾನು ಭಾರತೀಯ ವಾಣಿಜ್ಯ ಮಹಾಮಂಡಳಿಯ ಎಲ್ಲ ಸದಸ್ಯರಲ್ಲಿ ಮನವಿ ಮಾಡುತ್ತೇನೆ.

ದೇಶದಲ್ಲಿ ಸೌರ ಫಲಕಗಳ ಮೂಲಕ ವಿದ್ಯುತ್ ಸಂಗ್ರಹ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತಮ ಬ್ಯಾಟರಿ ಉತ್ಪಾದನೆ ಮತ್ತು ಅಭಿವೃದ್ಧಿ ಹಾಗೂ ಸಂಶೋಧನೆಯಲ್ಲಿ ಹೂಡಿಕೆ ಮಾಡುವಂತೆ ಕೋರುತ್ತೇನೆ. ನೀವು ಕೆಲಸದಲ್ಲಿ ತೊಡಗಿರುವಂತಹ ಸಂಸ್ಥೆಗಳು, ಎಂಎಸ್ಎಂಇಗಳನ್ನು ಕೈಹಿಡಿದು ಬೆಂಬಲಿಸುತ್ತೀರ ಎಂದುಕೊಂಡಿದ್ದೇನೆ. ಬದಲಾಗುತ್ತಿರುವ ಜಗತ್ತಿನಲ್ಲಿ ಸೋಲಾರ್ ರೀಚಾರ್ಜಬಲ್ ಬ್ಯಾಟರಿಗಳಿಗೆ ಬಹುದೊಡ್ಡ ಮಾರುಕಟ್ಟೆ ಇದೆ. ಭಾರತೀಯ ಉದ್ಯಮ ಇದನ್ನು ಮುನ್ನಡೆಸಲು ಸಾಧ್ಯವೇ? ಭಾರತ ಕ್ಷೇತ್ರದಲ್ಲಿ ದೊಡ್ಡ ತಾಣವಾಗಬಹುದೆ ?

2022 ವೇಳೆಗೆ ಭಾರತ ಸ್ವಾತಂತ್ರ್ಯಗಳಿಸಿ, 75 ವರ್ಷ ಪೂರ್ಣಗೊಳ್ಳುತ್ತದೆ ಮತ್ತು 2025 ವೇಳೆಗೆ ಐಸಿಸಿ ನೂರು ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಇವೆರಡನ್ನೂ ಜೋಡಿಸಿಕೊಂಡು ಐಸಿಸಿ ಹಾಗೂ ಅದರ ಸದಸ್ಯರು ವಿಷಯಗಳಲ್ಲಿ ತಾವೇ ತಮ್ಮ ಗುರಿಗಳನ್ನು ನಿಗದಿಪಡಿಸಿಕೊಳ್ಳಬಹುದಲ್ಲವೇ ?

ಗೆಳೆಯರೇ, ಇದು ನಾವು ಅವಕಾಶಗಳನ್ನು ಗುರುತಿಸುವಂತಹ ಕಾಲ. ನೀವು ನಿಮ್ಮ ಶಕ್ತಿಯನ್ನು ನಿರೂಪಿಸಿರಿ ಮತ್ತು ಹೊಸ ಎತ್ತರಕ್ಕೆ ಬೆಳೆಯಿರಿ. ಇದು ಅತಿದೊಡ್ಡ ಬಿಕ್ಕಟ್ಟು ಎಂದುಕೊಂಡರೆ ನಾವು ಅದರ ಸಂಪೂರ್ಣ ಲಾಭವನ್ನು ಮಾಡಿಕೊಳ್ಳಬೇಕಿದೆ ಮತ್ತು ಅದರಿಂದ ಅತಿದೊಡ್ಡ ಪಾಠಗಳನ್ನು ಕಲಿಯಬೇಕಿದೆ.

ಸರ್ಕಾರ ಧ್ಯೇಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಅದಕ್ಕಾಗಿ ಸರ್ಕಾರ ನಿಮ್ಮೊಡನಿರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಹೊಸ ನಿರ್ಣಯಗಳೊಂದಿಗೆ ಮುನ್ನುಗಲು ಯಾವುದೇ ಹಿಂಜರಿಕೆ ಬೇಡ. ಮುಕ್ತವಾಗಿ ಮುನ್ನುಗ್ಗಿ ಹೊಸ ವಿಶ್ವಾಸದೊಂದಿಗೆ ಮುಂದಡಿ ಇಡಿ. ಸ್ವಾವಲಂಬಿ ಭಾರತದ ಮೂಲ ಭಾರತದ ಸ್ವಾವಲಂಬನೆಯಲ್ಲಿದೆ.

ಗುರುದೇವ್ ರವೀಂದ್ರನಾಥ್ ಠಾಗೂರ್ ಜಿ ಅವರು ತಮ್ಮನೂತನ್ ಜುಗರ್ ಭೋರ್- ಪದ್ಯದಲ್ಲಿ Nooton Juger Bhor' - "Cholai Cholai Bajbe Joyer Bheri, Paer Begei Poth Kete Jaay Korish Na Ar Deri" ಎಂದು ಹೇಳಿದ್ದಾರೆ. ಅಂದರೆ ಪ್ರತಿಯೊಂದು ಹೆಜ್ಜೆಯೂ ನಿರ್ಣಾಯಕ, ಮುಂದಡಿ ಇಡುವ ಪ್ರತಿಯೊಂದು ಹೆಜ್ಜೆಯೂ
ಹೊಸ ಮಾರ್ಗವನ್ನು ಸೃಷ್ಟಿಸಲಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿಎಂದು.

ನೀವು ಸುಮ್ಮನೆ ಊಹಿಸಿಕೊಳ್ಳಿ ಮಂತ್ರ ಎಷ್ಟು ದೊಡ್ಡದು ಎಂಬುದನ್ನು ಚಲಿಸುವ ಹೆಜ್ಜೆ ಹೊಸ ಮಾರ್ಗ ಸೃಷ್ಟಿಸುತ್ತದೆ ಎಂಬುದನ್ನು, ಅಂತಹ ದೊಡ್ಡ ಸ್ಫೂರ್ತಿ ನಮ್ಮ ಮುಂದಿರುವಾಗ ಯಾವುದೇ ಕಾರಣಕ್ಕೂ ನಿಲ್ಲುವ ಪ್ರಶ್ನೆಯೇ ಇಲ್ಲ.

ನಿಮ್ಮ ಸಂಸ್ಥೆ ನೂರು ವರ್ಷ ಪೂರೈಸಿದೆ ಆಚರಣೆ ಸಂದರ್ಭದಲ್ಲಿ, ದೇಶ ಸ್ವಾತಂತ್ರ್ಯಗಳಿಸಿ 75 ವರ್ಷ ಪೂರ್ಣಗೊಳಿಸುವ ವೇಳೆಗೆ ನಮ್ಮ ದೇಶ ಸ್ವಾವಲಂಬಿ ಭಾರತದ ಹಾದಿಯಲ್ಲಿ ಮುನ್ನಡೆದಿರುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ಮತ್ತೊಮ್ಮೆ ನಿಮಗೆಲ್ಲರಿಗೂ ಶುಭಾಶಯಗಳು

ಆರೋಗ್ಯದಿಂದಿರಿ ಮತ್ತು ಸುರಕ್ಷಿತವಾಗಿರಿ

ತುಂಬಾ ಧನ್ಯವಾದಗಳು.

ಎಚ್ಚರಿಕೆಯಿಂದಿರಿ

***



(Release ID: 1655007) Visitor Counter : 228