ಸಂಪುಟ

ಉತ್ತಮ ಗುಣಮಟ್ಟದ ಜವಳಿ ಕ್ಷೇತ್ರದ ಸಹಕಾರಕ್ಕಾಗಿ ಭಾರತ ಮತ್ತು ಜಪಾನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

Posted On: 02 SEP 2020 4:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಜವಳಿ ಸಮಿತಿ ಮತ್ತು ಜಪಾನ್ ನ ಮೆ. ನಿಸ್ಸೇನ್ಕೆನ್ ಕ್ವಾಲಿಟಿ ಎವ್ಯಾಲ್ಯುಯೇಷನ್ ಸೆಂಟರ್ ನಡುವೆ ಜಪಾನ್ ಮಾರುಕಟ್ಟೆಗಾಗಿ ಭಾರತೀಯ ಜವಳಿ ಮತ್ತು ವಸ್ತ್ರ ಗುಣಮಟ್ಟ ಸುಧಾರಣೆ ಮತ್ತು ಪರೀಕ್ಷೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಜಪಾನ್ ನ ಮೆ. ನಿಸ್ಸೇನ್ಕೆನ್ ಕ್ವಾಲಿಟಿ ಎವ್ಯಾಲ್ಯುಯೇಷನ್ ಸೆಂಟರ್ ಗೆ ಭಾರತ ಗಣರಾಜ್ಯದಲ್ಲಿ ತಾಂತ್ರಿಕ ಜವಳಿ ಮತ್ತು ದೇಶೀಯ ಮತ್ತು ವಿದೇಶೀ ಗ್ರಾಹಕರು/ಖರೀದಿದಾರರಿಬ್ಬರಿಗಾಗಿ ನಂತರದ ದಿನಗಳಲ್ಲಿ ಪರಸ್ಪರ ಸಮ್ಮತಿಸುವ ಯಾವುದೇ ಉತ್ಪನ್ನಗಳಿಗೂ ಸೇರಿದಂತೆ ಜವಳಿ ಮತ್ತು ವಸ್ತ್ರ ಉತ್ಪನ್ನಗಳಿಗೆ ತಮ್ಮ ಸಹಕಾರಿ ಪರೀಕ್ಷೆ ಮತ್ತು ಪರೀಕ್ಷಾ ಸೇವೆಯಲ್ಲಿ ಜವಳಿ ಸಮಿತಿಯನ್ನು ನಿಯುಕ್ತಿಗೊಳಿಸಿಕೊಳ್ಳಲು ಅವಕಾಶ ನೀಡುತ್ತದೆ.

***



(Release ID: 1650660) Visitor Counter : 207