ಪ್ರಧಾನ ಮಂತ್ರಿಯವರ ಕಛೇರಿ
750 ಮೆಗಾವ್ಯಾಟ್ ಸಾಮರ್ಥ್ಯದ ರೇವಾ ಸೌರ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕರ್ಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
Posted On:
10 JUL 2020 12:22PM by PIB Bengaluru
ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಅವರೇ; ಮಧ್ಯಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಜಿ; ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಶ್ರೀ ಆರ್.ಕೆ.ಸಿಂಗ್ ಜಿ, ಶ್ರೀ ಥವಾರ್ ಚಂದ್ ಗೆಹ್ಲೋಟ್ ಜಿ, ಶ್ರೀ ನರೇಂದ್ರ ಸಿಂಗ್ ತೋಮರ್ ಜಿ, ಶ್ರೀ ಧರ್ಮೇಂದ್ರ ಪ್ರಧಾನ್ ಜಿ ಮತ್ತು ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಜಿ; ಹಾಗೂ ಮಧ್ಯಪ್ರದೇಶದ ಸಚಿವ ಸಂಪುಟ ಸದಸ್ಯರು, ಸಂಸದರು ಮತ್ತು ಶಾಸಕರೇ!
ರೇವಾ ಸೇರಿದಂತೆ ಮಧ್ಯಪ್ರದೇಶದ ನನ್ನ ಎಲ್ಲಾ ಪ್ರೀತಿಯ ಸಹೋದರ ಸಹೋದರಿಯರೇ! ಇಂದು ರೇವಾ ನಿಜವಾಗಿಯೂ ಇತಿಹಾಸ ನಿರ್ಮಿಸಿದೆ. ರೇವಾವನ್ನು ತಾಯಿ ನರ್ಮದಾ ನದಿ ಮತ್ತು ಬಿಳಿ ಹುಲಿಗಳೊಂದಿಗೆ ಸಾಮಾನ್ಯವಾಗಿ ಗುರುತಿಸಲಾಗಿದೆ. ಆದರೆ, ಈಗ ರೇವಾ ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಯೊಂದಿಗೆ ಸಹ ಸಂಬಂಧ ಜೊತೆಗೂಡಿಸಿದೆ. ನೀವು ವೈಮಾನಿಕ ವಿಡಿಯೊವನ್ನು ನೋಡಿದರೆ, ಸಾವಿರಾರು ಸೌರ ಫಲಕಗಳು ಬೆಳೆಗಳ ಹೊಲಗಳಲ್ಲಿ ತೂಗಾಡುತ್ತಿರುವಂತೆ ತೋರುತ್ತದೆ. ಆಳವಾದ ನೀಲ ಸಮುದ್ರದ ಮೂಲಕ ನಾವು ಹಾದು ಹೋಗುತ್ತಿದ್ದೇವೆಯೋ ಎಂದು ಅನಿಸುತ್ತದೆ. ಇದಕ್ಕಾಗಿ ನಾನು ವಿಶೇಷವಾಗಿ ರೇವಾ ಜನರನ್ನು ಮತ್ತು ಸಾಮಾನ್ಯವಾಗಿ ಮಧ್ಯಪ್ರದೇಶದ ಜನರನ್ನು ಅಭಿನಂದಿಸುತ್ತೇನೆ.
ರೇವಾದ ಈ ಸೌರ ಸ್ಥಾವರವು , ಈ ದಶಕದಲ್ಲಿ ಈ ಇಡೀ ಪ್ರದೇಶವನ್ನು ಪ್ರಮುಖ ಶಕ್ತಿ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡಲಿದೆ. ಈ ಸೌರ ಸ್ಥಾವರದಿಂದ ಮಧ್ಯಪ್ರದೇಶದ ಜನರಿಗೆ ಮತ್ತು ಕೈಗಾರಿಕೆಗಳಿಗೆ ಮಾತ್ರವಲ್ಲ, ದೆಹಲಿಯ ಮೆಟ್ರೋ ರೈಲಿಗೂ ಅನುಕೂಲವಾಗಲಿದೆ. ಜೊತೆಯಲ್ಲಿ ,ರೇವಾ ಮಾತ್ರವಲ್ಲದೆ, ಶಾಜಾಪುರ, ನೀಮುಚ್ ಮತ್ತು ಛತರಪುರಗಳಲ್ಲೂ ದೊಡ್ಡ ಸೌರ ವಿದ್ಯುತ್ ಸ್ಥಾವರಗಳ ಕೆಲಸವೂ ಭರದಿಂದ ನಡೆಯುತ್ತಿದೆ. ಓಂಕಾರೇಶ್ವರ ಅಣೆಕಟ್ಟಿನಲ್ಲಿ ತೇಲುವ ಸೌರ ಸ್ಥಾವರವನ್ನು ಸ್ಥಾಪಿಸುವ ಯೋಜನೆ ಇದೆ. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡಾಗ ಮಧ್ಯಪ್ರದೇಶವು ಖಂಡಿತವಾಗಿಯೂ ಅಗ್ಗದ ಮತ್ತು ಶುದ್ಧ ವಿದ್ಯುತ್ ಕೇಂದ್ರವಾಗಿ ಪರಿಣಮಿಸಲಿದೆ. ಮಧ್ಯಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು, ರೈತರು ಮತ್ತು ಬುಡಕಟ್ಟು ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ.
ಸ್ನೇಹಿತರೇ, ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಸ್ಥಾನವಿದೆ. पुनातु मां तत्स वितुर् वरेण्यम् ಅಂದರೆ ಸೂರ್ಯ ದೇವರು, ನಮ್ಮನ್ನು ಶುದ್ಧೀಕರಿಸಲಿ. ಅದೇ ಪರಿಶುದ್ಧತೆಯ ಮನೋಭಾವವನ್ನು ಇಂದು ರೇವಾದೆಲ್ಲೆಡೆ ನಾವು ಅನುಭವಿಸಬಹುದು. ಇಂದು ಇಡೀ ರಾಷ್ಟ್ರವು ಸೂರ್ಯ ದೇವರ ಶಕ್ತಿಯನ್ನು ಅನುಭವಿಸಬಹುದು. ಅವರ ಆಶೀರ್ವಾದದಿಂದಾಗಿ, ಸೌರಶಕ್ತಿಯ ವಿಷಯದಲ್ಲಿ ನಾವು ವಿಶ್ವದ ಅಗ್ರ 5 ದೇಶಗಳಲ್ಲಿ ಸ್ಥಾನ ಪಡೆದಿರುತ್ತೇವೆ
ಸ್ನೇಹಿತರೇ,
ಸೌರ ಶಕ್ತಿಯು ಇಂದು ಮಾತ್ರವಲ್ಲ 21 ನೇ ಶತಮಾನದ ಶಕ್ತಿಯ ಅಗತ್ಯಗಳ ಪ್ರಮುಖ ಮೂಲವಾಗಲಿದೆ, ಏಕೆಂದರೆ ಸೌರ ಶಕ್ತಿಯು ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿದೆ. ಖಚಿತವಾಗಿ, ಏಕೆಂದರೆ ಇತರ ಶಕ್ತಿ ಮತ್ತು ವಿದ್ಯುತ್ ಮೂಲಗಳು ಖಾಲಿಯಾಗಬಹುದು, ಆದರೆ ಸೂರ್ಯನು ಪ್ರಪಂಚದಾದ್ಯಂತ ಸುತ್ತುತ್ತಾ ಶಾಶ್ವತವಾಗಿ ಬೆಳಗುತ್ತಾನೆ. ಇದು ಶುದ್ಧ ಏಕೆಂದರೆ ಪರಿಸರವನ್ನು ಕಲುಷಿತಗೊಳಿಸುವ ಬದಲು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಸುರಕ್ಷಿತ, ಏಕೆಂದರೆ ಇದು ಸ್ವಾವಲಂಬನೆಯ ದೊಡ್ಡ ಸಂಕೇತ ಮತ್ತು ಸ್ಫೂರ್ತಿ. ಇದು ನಮ್ಮ ಶಕ್ತಿಯ ಅಗತ್ಯಗಳನ್ನು ಸಹ ಭದ್ರಪಡಿಸುತ್ತದೆ. ಭಾರತವು ಅಭಿವೃದ್ಧಿಯ ಹೊಸ ಉತ್ತುಂಗದತ್ತ ಸಾಗುತ್ತಿರುವಾಗ, ನಮ್ಮ ಆಶಯಗಳು ಮತ್ತು ಆಕಾಂಕ್ಷೆಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ, ನಮ್ಮ ಶಕ್ತಿ ಮತ್ತು ವಿದ್ಯುತ್ ಅಗತ್ಯಗಳೂ ಬೆಳೆಯುತ್ತಿವೆ. ಅಂತಹ ಸನ್ನಿವೇಶದಲ್ಲಿ, ಸ್ವಾವಲಂಬಿ ಭಾರತಕ್ಕೆ ವಿದ್ಯುತ್ ಶಕ್ತಿಯ ಸ್ವಾವಲಂಬನೆ ಬಹಳ ಮುಖ್ಯ. ಇದರಲ್ಲಿ ಸೌರಶಕ್ತಿ, ಸೌರಇಂಧನ ಮತ್ತು ಸರಶಕ್ತಿ ವಿದ್ಯುತ್ ಬಹಳ ದೊಡ್ಡ ಪಾತ್ರ ವಹಿಸಲಿದೆ ಮತ್ತು ನಾವು ಭಾರತದ ಈ ಶಕ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ.
ಸ್ನೇಹಿತರೇ,
ನಾವು ಸ್ವಾವಲಂಬನೆ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಆರ್ಥಿಕತೆಯು ಒಂದು ಪ್ರಮುಖ ಅಂಶವಾಗಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು ಆರ್ಥಿಕತೆ ಅಥವಾ ಪರಿಸರವನ್ನು ಆರಿಸಬೇಕೆ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಈ ಸನ್ನಿವೇಶದಲ್ಲಿ, ಕೆಲವೊಮ್ಮೆ ನಿರ್ಧಾರಗಳನ್ನು ಪರಿಸರದ ಪರವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಕೆಲವೊಮ್ಮೆ ಆರ್ಥಿಕತೆಯ ಪರವಾಗಿ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಇರಡೂ ವಿರೋಧಿಗಳಲ್ಲ ಆದರೆ ಪರಸ್ಪರರ ಮಿತ್ರರು ಎಂದು ಭಾರತ ತೋರಿಸಿದೆ. ಅದು ಸ್ವಚ್ಛ ಭಾರತ್ ಅಭಿಯಾನ್ ಆಗಿರಲಿ, ಅಥವಾ ಪ್ರತಿ ಕುಟುಂಬಕ್ಕೆ ಎಲ್ಪಿಜಿ ಮತ್ತು ಪಿಎನ್ಜಿಯಂತಹ ಶುದ್ಧ ಇಂಧನವನ್ನು ಒದಗಿಸುವ ಅಭಿಯಾನವಾಗಲಿ, ಅಥವಾ ದೇಶಾದ್ಯಂತ ಸಿಎನ್ಜಿ ಆಧಾರಿತ ವಾಹನ ವ್ಯವಸ್ಥೆಗಳ ದೊಡ್ಡ ಜಾಲವನ್ನು ನಿರ್ಮಿಸುವ ಅಭಿಯಾನವಾಗಲಿ, ಅಥವಾ ದೇಶದಲ್ಲಿ ವಿದ್ಯುತ್ ಆಧಾರಿತ ಸಾಗಣೆಗೆ ಪ್ರಯತ್ನಗಳಾಗಲಿ - ಅಂತಹ ದೇಶದ ಸಾಮಾನ್ಯರ ಜೀವನವನ್ನು ಉತ್ತಮ ಮತ್ತು ಪರಿಸರ ಸ್ನೇಹಿಯಾಗಿ ಮಾಡಲು ಹಲವಾರು ಪ್ರಯತ್ನಿಸಲಾಗುತ್ತಿದೆ. ಭಾರತಕ್ಕೆ ಸಂಬಂಧಿಸಿದಂತೆ, ಆರ್ಥಿಕತೆ ಮತ್ತು ಪರಿಸರವು ಎರಡು ವ್ಯತಿರಿಕ್ತ ಘಟಕಗಳಲ್ಲ, ಆದರೆ ಪರಸ್ಪರ ಪೂರಕವಾಗಿವೆ
ಸ್ನೇಹಿತರೇ,
ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಲಭ ಜೀವನಕ್ಕೆ ಆದ್ಯತೆ ನೀಡಲಾಗಿದೆಯೆಂದು ಇಂದು ನೀವು ನೋಡುತ್ತಿದ್ದೀರಿ. ನಮಗೆ, ಪರಿಸರದ ರಕ್ಷಣೆ ಕೇವಲ ಕೆಲವು ಯೋಜನೆಗಳಿಗೆ ಸೀಮಿತವಾಗಿಲ್ಲ, ಆದರೆ ಇದು ಜೀವನ ವಿಧಾನವಾಗಿದೆ. ನಾವು ನವೀಕರಿಸಬಹುದಾದ ಶಕ್ತಿ/ಇಂಧನಗಳ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸುವಾಗ, ಶುದ್ಧ ಶಕ್ತಿಯ ಕಡೆಗೆ ನಮ್ಮ ದೃಢ ನಿಶ್ಚಯವನ್ನು ಜೀವನದ ಪ್ರತಿಯೊಂದು ಅಂಶಗಳಲ್ಲೂ ನೋಡಿಕೊಳ್ಳಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದರ ಪ್ರಯೋಜನಗಳು ದೇಶದ ಮೂಲೆ ಮೂಲೆಯಲ್ಲಿ, ಸಮಾಜದ ಪ್ರತಿಯೊಂದು ವಿಭಾಗಕ್ಕೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ.
ಸ್ನೇಹಿತರೇ,
ಕಳೆದ 6 ವರ್ಷಗಳಲ್ಲಿ ದೇಶದಲ್ಲಿ ಸುಮಾರು 36 ಕೋಟಿ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ದೇಶಾದ್ಯಂತ 1 ಕೋಟಿಗೂ ಹೆಚ್ಚು ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದು ತುಂಬಾ ಚಿಕ್ಕದಾಗಿದೆ ಏಕೆಂದರೆ ನಾವು ಸೌಲಭ್ಯವನ್ನು ಪಡೆದಾಗ, ನಾವು ಸಾಮಾನ್ಯವಾಗಿ ಅದರ ಪ್ರಭಾವದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮ್ಮಲ್ಲಿ ಆ ವಿಷಯವಿಲ್ಲದಿದ್ದಾಗ ಮಾತ್ರ ಈ ರೀತಿಯ ಚರ್ಚೆ ನಡೆಯುತ್ತದೆ.
ಸ್ನೇಹಿತರೇ,
ಈ ಸಣ್ಣ ಎಲ್ಇಡಿ ಬಲ್ಬ್ ಇಲ್ಲದಿದ್ದಾಗ, ಅದರ ಅಗತ್ಯವನ್ನು ನಾವು ಅನುಭವಿಸಿದ್ದೇವೆ, ಆದರೆ ಬೆಲೆ ಜನಸಾಮಾನ್ಯರಿಗೆ ತಲುಪುವಂತಿರಲಿಲ್ಲ. ಇದು ಹೆಚ್ಚು ಮಾರಾಟವಾಗದ ಕಾರಣ, ತಯಾರಕರು ಇರಲಿಲ್ಲ. ಹಾಗಾದರೆ 6 ವರ್ಷಗಳಲ್ಲಿ ಏನು ಬದಲಾಗಿದೆ? ಎಲ್ಇಡಿ ಬಲ್ಬ್ ಗಳ ಬೆಲೆ ಸುಮಾರು 10 ಪಟ್ಟು ಕಡಿಮೆಯಾಗಿದೆ ಮತ್ತು ಹಲವಾರು ಎಲ್ಇಡಿ ಬಲ್ಬ್ ಉತ್ಪಾದನಾ ಕಂಪನಿಗಳು ಮಾರುಕಟ್ಟೆಗೆ ಬಂದಿವೆ. ಮತ್ತು ನಾವು 100-200 ವ್ಯಾಟ್ ಬಲ್ಬ್ ಗಳಿಂದ ಪಡೆಯುತ್ತಿದ್ದ ಹೊಳಪನ್ನು ಈಗ 9-10 ವ್ಯಾಟ್ ಎಲ್ಇಡಿ ಬಲ್ಬ್ ಗಳಿಂದ ಪಡೆಯಬಹುದು. ಮನೆಗಳು ಮತ್ತು ಬೀದಿಗಳಲ್ಲಿ ಎಲ್ಇಡಿ ಅಳವಡಿಸುವುದರೊಂದಿಗೆ, ವಿದ್ಯುತ್ ಬಳಕೆ ಪ್ರತಿವರ್ಷ ಸುಮಾರು 600 ಬಿಲಿಯನ್ ಯುನಿಟ್ ಗಳಷ್ಟು ಕಡಿಮೆಯಾಗುತ್ತಿದೆ ಮತ್ತು ಜನರು ಉತ್ತಮ ಗುಣಮಟ್ಟದ ಹೊಳಪನ್ನು ಪಡೆಯುತ್ತಿದ್ದಾರೆ. ಇದಲ್ಲದೆ, ದೇಶದ ಜನರು ಪ್ರತಿವರ್ಷ ಸುಮಾರು 24000 ಕೋಟಿ ರೂಪಾಯಿಗಳನ್ನು ವಿದ್ಯುತ್ ಬಿಲ್ ಗಳಲ್ಲಿ ಉಳಿಸುತ್ತಿದ್ದಾರೆ. ಅಂದರೆ, ಎಲ್ಇಡಿ ಬಲ್ಬ್ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿದೆ. ಇದು ಮತ್ತೊಂದು ಪ್ರಮುಖ ಅಂಶವನ್ನು ಹೊಂದಿದೆ. ಎಲ್ಇಡಿ ಬಲ್ಬ್ ಗಳಿಂದಾಗಿ ಸುಮಾರು 4.5 ಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಪರಿಸರಕ್ಕೆ ಬರದಂತೆ ವಾತಾವರಣದಲ್ಲಿ ತಡೆಯಲಾಗಿದೆ. ಅಂದರೆ, ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತಿದೆ.
ಸ್ನೇಹಿತರೇ,
ವಿದ್ಯುತ್ ಎಲ್ಲರನ್ನೂ ತಲುಪುತ್ತದೆ, ಮತ್ತು ಎಲ್ಲರಿಗೂ ಪೂರೈಸಲು ಸಾಕಷ್ಟು ವಿದ್ಯುತ್ ಲಭ್ಯವಿದೆ, ಮತ್ತು ನಮ್ಮ ಪರಿಸರ, ಗಾಳಿ, ನೀರು ಕೂಡ ಸ್ವಚ್ಛವಾಗಿರಬೇಕು ಎಂಬ ಕಲ್ಪನೆಯ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಕಲ್ಪನೆಯು ನಮ್ಮ ನೀತಿ ಮತ್ತು ಸೌರಶಕ್ತಿ ತಂತ್ರದಲ್ಲೂ ಪ್ರತಿಫಲಿಸುತ್ತದೆ. ಸ್ವಲ್ಪ ಊಹಿಸಿ! 2014 ರಲ್ಲಿ ಸೌರಶಕ್ತಿಯ ಬೆಲೆ ಪ್ರತಿ ಯೂನಿಟ್ ಗೆ ರೂ.7-8. ಇಂದು, ಇದನ್ನು ಪ್ರತಿ ಯೂನಿ ಯೂನಿಟ್ ಗೆ ರೂ. 2.25 ಗೆ ಲಭ್ಯ ರೂ.5 ಇಳಿಸಲಾಗಿದೆ. ಇದರಿಂದ ಉದ್ಯಮಿಗಳು ಕೂಡ ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಅವರು ದೇಶವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಉತ್ಪಾದಿಸುತ್ತಿದ್ದಾರೆ. ಭಾರತದಲ್ಲಿ ಸೌರಶಕ್ತಿ ಎಷ್ಟು ಅಗ್ಗವಾಗಿದೆ ಎಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರು ಈಗ ಚರ್ಚಿಸುತ್ತಿದ್ದಾರೆ! ಭಾರತದಲ್ಲಿ ಸೌರಶಕ್ತಿಯತ್ತ ಕೆಲಸ ಮಾಡುವ ವಿಧಾನವನ್ನು ಇನ್ನಷ್ಟು ಚರ್ಚಿಸಲಾಗುವುದು. ಇಂತಹ ದೊಡ್ಡ ಹೆಜ್ಜೆಗಳಿಂದಾಗಿ, ಭಾರತವನ್ನು ಶುದ್ಧ ಶಕ್ತಿಯ ಅತ್ಯಂತ ಆಕರ್ಷಕ ಮಾರುಕಟ್ಟೆಯೆಂದು ಜಾಗತಿಕವಾಗಿ ಪರಿಗಣಿಸಲಾಗುತ್ತಿದೆ. ಇಂದು, ನವೀಕರಿಸಬಹುದಾದ ಶಕ್ತಿಯ ಕಡೆಗೆ ಪರಿವರ್ತನೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆ ಎಲ್ಲಿ ನಡೆದರೂ, ಅಲ್ಲೆಲ್ಲಾ ಭಾರತವನ್ನು ಒಂದು ಮಾದರಿಯಾಗಿ ನೋಡಲಾಗುತ್ತದೆ.
ಸ್ನೇಹಿತರೇ,
ಭಾರತದ ಕುರಿತು ಪ್ರಪಂಚದ ಈ ನಿರೀಕ್ಷೆಯ ದೃಷ್ಟಿಯಿಂದ, ನಾವು ಇಡೀ ಜಗತ್ತನ್ನು ಸಂಪರ್ಕಿಸುವಲ್ಲಿ ನೂತನ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಈ ಚಿಂತನೆಯ ಫಲಿತಾಂಶವಾಗಿದೆ ಈ ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ) ಸ್ಥಾಪನೆ. ಇದು ಒನ್ ವರ್ಲ್ಡ್, ಒನ್ ಸನ್ ಮತ್ತು ಒನ್ ಗ್ರಿಡ್ ಹಿಂದಿನ ಮುಖ್ಯ ಚೇತನ. ಸೌರಶಕ್ತಿಯ ಉತ್ತಮ ಉತ್ಪಾದನೆ ಮತ್ತು ಬಳಕೆಗಾಗಿ ಇಡೀ ಜಗತ್ತನ್ನು ಒಟ್ಟುಗೂಡಿಸುವ ಪ್ರಯತ್ನ ಇದಾಗಿದ್ದು, ಇದರಿಂದಾಗಿ ನಮ್ಮ ಭೂಮಿಯ ಮುಂದೆ ಇರುವ ಈ ದೊಡ್ಡ ಬಿಕ್ಕಟ್ಟನ್ನು ನಿಭಾಯಿಸಬಹುದು ಮತ್ತು ಸಣ್ಣ ಮತ್ತು ಬಡ ದೇಶಗಳ ತಮ್ಮ ವಿದ್ಯುತ್ ಅಗತ್ಯಗಳನ್ನು ಸಹ ಪೂರೈಸಬಹುದು
ಸ್ನೇಹಿತರೇ,
ಒಂದು ರೀತಿಯಲ್ಲಿ, ಸೌರ ಶಕ್ತಿಯು ಗ್ರಾಹಕರನ್ನು ಉತ್ಪಾದಕರನ್ನಾಗಿ ಮಾಡಿದೆ, ಪವರ್ ಬಟನಿನ ನಿಯಂತ್ರಣವನ್ನು ಅವರಿಗೆ ಸಂಪೂರ್ಣವಾಗಿ ನೀಡುತ್ತದೆ. ಉಳಿದ ರೀತಿಯ ವಿದ್ಯುತ್ ಉತ್ಪಾದನಾ ಮಾಧ್ಯಮಗಳಲ್ಲಿ ನಾಗರಿಕರ ಭಾಗವಹಿಸುವಿಕೆ ನಗಣ್ಯ. ಆದರೆ, ನಾವು ಸೌರಶಕ್ತಿಯನ್ನು ಪರಿಣಾಮಕಾರಿ ಎಂದು ಪರಿಗಣಿಸಿದರೆ, ನಮ್ಮಲ್ಲಿ ಎಲ್ಲಾದರೂ ಸ್ವಲ್ಪ ಜಾಗವಿದ್ದರೆ, ಅದು ಮನೆಯ ಮೇಲ್ಛಾವಣಿಯಾಗಲಿ, ಕಚೇರಿಯ ಮೇಲ್ಛಾವಣಿಯಾಗಲಿ ಅಥವಾ ಕಾರ್ಖಾನೆಯ ಮೇಲ್ಛಾವಣಿಯಾಗಲಿ, ಅಲ್ಲಿ ನಾಗರಿಕರು ತಮಗೆ ಬೇಕಾದ ವಿದ್ಯುತ್ ತಾವೇ ಸ್ವತಃ ಉತ್ಪಾದಿಸಬಹುದು. ಇದಕ್ಕಾಗಿ ಸರ್ಕಾರ ಭಾರಿ ಮೊತ್ತದ ಪ್ರೋತ್ಸಾಹಧನ ನೀಡುತ್ತಿದೆ ಮತ್ತು ಅವರಿಗೆ ಸಹಕರಿಸುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಈ ಅಭಿಯಾನದಲ್ಲಿ, ಈಗ ನಮ್ಮ ರೈತರು ಅಂದರೆ ದೇಶದ ಆಹಾರ ಉತ್ಪಾದಕರು ಸಹ ಶಕ್ತಿ/ಇಂಧನ ಉತ್ಪಾದಕರಾಗಬಹುದು.
ಸ್ನೇಹಿತರೇ,
ನಮ್ಮ ರೈತ ಇಂದು ಎಷ್ಟು ಸಮರ್ಥನಾಗಿದ್ದಾನೆ, ಎಷ್ಟು ಸಂಪನ್ಮೂಲ ಹೊಂದಿದ್ದಾನೆಂದರೆ, ಇಂದು ಅವನು ದೇಶಕ್ಕೆ ಒಂದಲ್ಲ, ಎರಡು ಬಗೆಯ ಸಸ್ಯಗಳನ್ನು ಸಹಾಯ ಮಾಡುತ್ತಿದ್ದಾನೆ. ಒಂದು ಸಸ್ಯವು ಸಾಂಪ್ರದಾಯಿಕ ಕೃಷಿಯಾಗಿದ್ದು, ನಾವೆಲ್ಲರೂ ಆಹಾರವನ್ನು ಪಡೆಯುತ್ತೇವೆ. ಆದರೆ ಈಗ ನಮ್ಮ ರೈತರು ಇತರ ರೀತಿಯ ಸಸ್ಯಗಳನ್ನು ಸಹ ಸ್ಥಾಪಿಸುತ್ತಿದ್ದಾರೆ, ಇದರಿಂದಾಗಿ ವಿದ್ಯುತ್ ಕೂಡ ತಮ್ಮ ಮನೆಗಳನ್ನು ತಲುಪುತ್ತದೆ. ಸಾಂಪ್ರದಾಯಿಕ ಕೃಷಿಯಾದ ಮೊದಲ ಸಸ್ಯವನ್ನು ನಮ್ಮ ರೈತನು ಫಲವತ್ತಾದ ಅಂತಹ ಭೂಮಿಯಲ್ಲಿ ನೆಡುತ್ತಾನೆ. ಆದರೆ ಇತರ ರೀತಿಯ ಸಸ್ಯವೆಂದರೆ ಸೌರಶಕ್ತಿ ಸ್ಥಾವರ, ಇದು ಫಲವತ್ತಾದ ಅಥವಾ ಬೆಳೆಯುತ್ತಿರುವ ಬೆಳೆಗಳ ದೃಷ್ಟಿಯಿಂದ ಉತ್ತಮವಲ್ಲದ ಅಂತಹ ಬರಡು ಭೂಮಿಯಲ್ಲಿ ಸಹ ಸ್ಥಾಪಿಸಬಹುದಾಗಿದೆ. ಅಂದರೆ, ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ರೈತನ ಬಂಜರು ಭೂಮಿಯನ್ನು ಸಹ ಬಳಸಲಾಗುತ್ತದೆ. ಇದು ರೈತನ ಆದಾಯವನ್ನೂ ಹೆಚ್ಚಿಸುತ್ತದೆ.
ಕುಸುಮ್ ಯೋಜನೆಯ ಮೂಲಕ ಹೆಚ್ಚುವರಿ ಭೂಮಿಯಲ್ಲಿ ಇಂತಹ ಸೌರ ಸ್ಥಾವರಗಳನ್ನು ಸ್ಥಾಪಿಸಲು ಇಂದು ರೈತರಿಗೆ ಸಹಾಯ ಮಾಡಲಾಗುತ್ತಿದೆ. ನಮ್ಮ ರೈತರು ಹೊಲಗಳಲ್ಲಿ ಉತ್ಪತ್ತಿಯಾಗುವ ಶಕ್ತಿಯ ಮೂಲಕ ತಮ್ಮ ವೈಯಕ್ತಿಕ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಆದರೆ ಹೆಚ್ಚುವರಿ ಶಕ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಮಧ್ಯಪ್ರದೇಶದ ರೈತ ಸ್ನೇಹಿತರು ಈ ಹೆಚ್ಚುವರಿ ಆದಾಯದ ವಿಧಾನವನ್ನು ಅಳವಡಿಸಿಕೊಳ್ಳುವ ಮತ್ತು ಭಾರತವನ್ನು ವಿದ್ಯುತ್ ರಫ್ತುದಾರರನ್ನಾಗಿ ಮಾಡುವ ಈ ಬೃಹತ್ ಅಭಿಯಾನವನ್ನು ಸಹ ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಈ ನಂಬಿಕೆ ಹೆಚ್ಚು ಏಕೆಂದರೆ ಮಧ್ಯಪ್ರದೇಶದ ರೈತರು ಅದನ್ನು ಸಾಧನೆಯನ್ನಾಗಿ ಪರಿವರ್ತಿಸುವ ಮೂಲಕ ಸಂಕಲ್ಪವನ್ನು ತೋರಿಸಿದ್ದಾರೆ. ನೀವು ಮಾಡಿದ ಕೆಲಸವು ಚರ್ಚೆಯ ವಿಷಯವಾಗಿದೆ. ನೀವು ಗೋಧಿ ಉತ್ಪಾದನೆಯಲ್ಲಿ ದಾಖಲೆಯನ್ನು ಸೃಷ್ಠಿಸಿದ್ದೀರಿ, ಇತರರನ್ನು ಹಿಂದಿಕ್ಕಿದ ರೀತಿ ಶ್ಲಾಘನೀಯ! ಕೊರೊನ ಸಾಂಕ್ರಾಮಿಕದ ಈ ಕಷ್ಟದ ಸಮಯದಲ್ಲಿ ಮಧ್ಯಪ್ರದೇಶದ ರೈತರು ದಾಖಲಿಸಿದ ಉತ್ಪಾದನೆ ಮತ್ತು ಸರ್ಕಾರವು ಾದನ್ನು ಖರೀದಿಸಿ ಹಿಂದಿನ ದಾಖಲೆಯನ್ನು ಮುರಿದಿರುವುದು ನಿಜವಾಗಿಯೂ ಶ್ಲಾಘನೀಯ. ಆದ್ದರಿಂದ, ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ಮಧ್ಯಪ್ರದೇಶದ ಶಕ್ತಿಯ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಕುಸುಮ್ ಯೋಜನೆಯಡಿ ಒಂದು ದಿನ ಮಧ್ಯಪ್ರದೇಶದ ರೈತರು ದಾಖಲೆಯನ್ನು ಸೃಷ್ಟಿಸಲಿದ್ದಾರೆ, ವಿದ್ಯುತ್ ಉತ್ಪಾದಿಸುವ ಸುದ್ದಿಯೂ ಜಾಗತಿಕವಾಗಿ ಬರಲಿದೆ ಎಂದು ನಿರೀಕ್ಷಿಸುತ್ತೇನೆ.
ಸಹೋದರರು ಮತ್ತು ಸಹೋದರಿಯರು,
ನಮ್ಮಲ್ಲಿ ಉತ್ತಮ ಸೌರ ಫಲಕಗಳು, ಉತ್ತಮ ಬ್ಯಾಟರಿಗಳು ಮತ್ತು ಉತ್ತಮ ಗುಣಮಟ್ಟದ ಶೇಖರಣಾ ಸಾಮರ್ಥ್ಯವಿಲ್ಲದಿದ್ದರೆ ನಾವು ಸೌರಶಕ್ತಿಯ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗ ಕೆಲಸವು ಈ ದಿಕ್ಕಿನಲ್ಲಿ ವೇಗವಾಗಿ ನಡೆಯುತ್ತಿದೆ. 'ಆತ್ಮನಿರ್ಭಾರ ಭಾರತ್ ಅಭಿಯಾನ್' ಅಡಿಯಲ್ಲಿ, ಸೌರ ಫಲಕಗಳು ಸೇರಿದಂತೆ ಎಲ್ಲಾ ಸಾಧನಗಳಿಗೆ ಆಮದಿನ ಮೇಲಿನ ಅವಲಂಬನೆಯನ್ನು ತೊಡೆದುಹಾಕಲು ದೇಶವು ಈಗ ಉದ್ದೇಶಿಸಿದೆ. ದೇಶದ ಸೌರ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸುವುದು ಗುರಿಯಾಗಿದೆ. ಆದ್ದರಿಂದ, ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ, ಕುಸುಮ್ ಯೋಜನೆಯಡಿಯಲ್ಲಿ ಸ್ಥಾಪಿಸಲಾದ ಪಂಪ್ ಗಳಲ್ಲಿ ಮತ್ತು ಮನೆಗಳಲ್ಲಿ ಸ್ಥಾಪಿಸಲಾದ ಛಾವಣಿಯ ಮೇಲ್ಭಾಗದ ಫಲಕಗಳಲ್ಲಿ ಸೌರ ಫೋಟೋ ವೋಲ್ಟಾಯಿಕ್ ಕೋಶಗಳು ಮತ್ತು ಮಾಡ್ಯೂಲ್ಗಳನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳು 'ಮೇಕ್ ಇನ್ ಇಂಡಿಯಾ' ಸೌರ ಕೋಶಗಳು ಅಥವಾ ಮಾಡ್ಯೂಲ್ಗಳನ್ನು ಖರೀದಿಸುತ್ತವೆ ಎಂದು ಖಚಿತಪಡಿಸಲಾಗಿದೆ. ಇದಲ್ಲದೆ, ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಸೌರ ಪಿವಿ ತಯಾರಿಸಲು ಪ್ರೋತ್ಸಾಹಿಸಲಾಗಿದೆ. ಇಂದು, ಈ ಅವಕಾಶದ ಲಾಭವನ್ನು ಯುವಕರು, ಈ ವಲಯಕ್ಕೆ ಸಂಬಂಧಿಸಿದ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಎಂಎಸ್ಎಂಇಗಳು ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು, ಈ ವಲಯದ ಎಲ್ಲರಲ್ಲೂ ಕೋರುತ್ತೇನೆ.
ಸಹೋದರರೇ, ನಮ್ಮಲ್ಲಿ ವಿಶ್ವಾಸ ಇದ್ದಾಗ ಮಾತ್ರ ಸ್ವಾವಲಂಬನೆ ನಿಜಕ್ಕೂ ಸಾಧ್ಯ. ಇಡೀ ದೇಶ, ಇಡೀ ವ್ಯವಸ್ಥೆಯು ಪ್ರತಿಯೊಬ್ಬ ದೇಶವಾಸಿಗಳನ್ನು ಬೆಂಬಲಿಸಿದಾಗ ಮಾತ್ರ ವಿಶ್ವಾಸ ಬರುತ್ತದೆ. ಕೊರೊನ ಬಿಕ್ಕಟ್ಟಿನಿಂದ ಸೃಷ್ಟಿಯಾದ ಪರಿಸ್ಥಿತಿಗಳ ಮಧ್ಯೆ ಭಾರತವು ಇದನ್ನೇ ಮಾಡುತ್ತಿದೆ. ಸರ್ಕಾರವೇ ವಿಶ್ವಾಸ ಬೆಳೆಸಲು ಪ್ರಯತ್ನಿಸುತ್ತಿದೆ. ಇಂದು, ಸರ್ಕಾರದ ಸಂಪನ್ಮೂಲಗಳು ಮತ್ತು ಸಂವೇದನೆಗಳು ಎರಡೂ ಸರ್ಕಾರಗಳು ಆಗಾಗ್ಗೆ ತಲುಪಲು ಸಾಧ್ಯವಾಗದ ಸಮಾಜದ ವಿಭಾಗಗಳನ್ನು ತಲುಪುತ್ತಿವೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯ ಉದಾಹರಣೆಯನ್ನು ಈಗ ಪರಿಗಣಿಸೋಣ. ಲಾಕ್ ಡೌನ್ ಆದ ಕೂಡಲೇ ತೆಗೆದುಕೊಂಡ ಮೊದಲ ಹೆಜ್ಜೆ, 80 ಕೋಟಿಗೂ ಹೆಚ್ಚು ಬಡ ಭಾರತೀಯರಿಗೆ ಉಚಿತ ಆಹಾರವನ್ನು ತಲುಪಿಸುವುದು ಮತ್ತು ದೈನಂದಿನ ಚಲಾವಣೆಗಾಗಿ ಸ್ವಲ್ಪ ಹಣವನ್ನು ಅವರ ಜೇಬಿಗೆ ಹಾಕುವುದು, ಒಂದು ಮಹತ್ ಕಾರ್ಯವಾಗಿದೆ. ಮತ್ತು ಲಾಕ್ಡೌನ್ ಅನ್ನು ತೆಗೆದುಹಾಕಿದಾಗ, ಮಾನ್ಸೂನ್ ಬರಲಿದೆ ಎಂದು ಸರ್ಕಾರ ಭಾವಿಸಿತು. ಇದಲ್ಲದೆ, ಹಬ್ಬಗಳ ಋತುಮಾನವೂ ಪ್ರಾರಂಭವಾಗಲಿದೆ. ನಮ್ಮಲ್ಲಿ ದೀಪಾವಳಿ ಮತ್ತು ಛಾಟ್ ಪೂಜೆಯವರೆಗೆ ಹಬ್ಬಗಳು ನಡೆಯುತ್ತಿವೆ. ಮತ್ತು ಎಲ್ಲಾ ಪಂಥಗಳು ಮತ್ತು ಧರ್ಮಗಳಲ್ಲೂ ವಿವಿಧ ಹಬ್ಬಗಳು ನಡೆಯಲಿವೆ.
ಇಂತಹ ಪರಿಸ್ಥಿತಿಯಲ್ಲಿ ಬಡವರಿಗೆ ಈ ರೀತಿಯ ಸಹಾಯ ಸಿಗಬೇಕು. ಆದ್ದರಿಂದ, ಯೋಜನೆಯನ್ನು ಮುಂದುವರಿಸಲಾಯಿತು. ಈಗ ಬಡ ಕುಟುಂಬಗಳಿಗೆ ನವೆಂಬರ್ ವರೆಗೆ ಉಚಿತ ಪಡಿತರ ಸಿಗುತ್ತದೆ. ಇದಲ್ಲದೆ, ಲಕ್ಷಾಂತರ ಖಾಸಗಿ ವಲಯದ ನೌಕರರ ಇಪಿಎಫ್ ಖಾತೆಗಳಿಗೆ ಸರ್ಕಾರ ಸಂಪೂರ್ಣ ಕೊಡುಗೆ ನೀಡುತ್ತಿದೆ. ಅಂತೆಯೇ, ಪಿಎಂ-ಸ್ವನಿಧಿ ಯೋಜನೆಯ ಮೂಲಕ, ವ್ಯವಹಾರಿಕ – ವ್ಯಾಪಾರ ವ್ಯವಸ್ಥೆಗೆ ಕನಿಷ್ಠ ಪ್ರವೇಶವನ್ನು ಹೊಂದಿರುವ ಆ ಸ್ನೇಹಿತರನ್ನು ಸೇರಿಸಿಕೊಳ್ಳಲಾಗಿದೆ. ಇಂದು, ಈ ಯೋಜನೆಯೊಂದಿಗೆ, ಲಕ್ಷಾಂತರ ಮಾರಾಟಗಾರರು ಮತ್ತು ವ್ಯಾಪಾರಿಗಳು ರೂ.10,000ಗಳವರೆಗೆ ಅಗ್ಗದ ಸಾಲವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅಷ್ಟು ಪ್ರಾಮುಖ್ಯತೆ ಹೊಂದಿರುವ ಮತ್ತು ಅವರ ಸಣ್ಣ ಉದ್ಯಮಗಳನ್ನು ನಮಗಾಗಿ ನಡೆಸುತ್ತಿರುವ ಈ ಸ್ನೇಹಿತರ ಬಗ್ಗೆ ನಾವು ಯಾವಾಗ ಯೋಚಿಸಿದ್ದೇವೆ? ಅಂದರೆ, ನಾವು ಒಂದು ಕಡೆ ಎಂ.ಎಸ್.ಎಂ.ಇ.ಗಳು, ಕಾಟೇಜ್ ಕೈಗಾರಿಕೆಗಳು ಮತ್ತು ದೊಡ್ಡ ಕೈಗಾರಿಕೆಗಳನ್ನು ನೋಡಿಕೊಂಡಿದ್ದೇವೆ, ಮತ್ತೊಂದೆಡೆ ನಾವು ಈ ಸಣ್ಣ ಆದರೆ ಉಪಯುಕ್ತ ವ್ಯವಹಾರಗಳ ಬಗ್ಗೆಯೂ ಯೋಚಿಸಿದ್ದೇವೆ.
ಸ್ನೇಹಿತರೇ,
ಸರ್ಕಾರವಾಗಲಿ, ಸಮಾಜವಾಗಲಿ, ಈ ಕಠಿಣ ಸವಾಲನ್ನು ಎದುರಿಸಲು ಸಹಾನುಭೂತಿ ಮತ್ತು ಜಾಗರೂಕತೆಯು ನಮ್ಮ ದೊಡ್ಡ ಪ್ರೇರಣೆಯ ಮೂಲಗಳಾಗಿವೆ. ಇಂದು, ಮಧ್ಯಪ್ರದೇಶ ಮತ್ತು ಇಡೀ ದೇಶವು ಪ್ರಗತಿಗೆ ಸಹಾಯ ಮಾಡಲು ನೀವು ನಿಮ್ಮ ಮನೆಗಳಿಂದ ಹೊರಬರುತ್ತಿರುವಾಗ, ಯಾವಾಗಲೂ ಇನ್ನೊಂದು ವಿಷಯವನ್ನು ನೆನಪಿಡಿ. ನಾವು ಯಾವಾಗಲೂ 'ಡು ಗಾಜ್ ಡೋರ್' ಅಥವಾ ಸಾಮಾಜಿಕ ಅಂತರ, ಮುಖದ ಮುಖಗವಸು ಮತ್ತು 20 ಸೆಕೆಂಡುಗಳ ಕಾಲ ಸೋಪಿನಿಂದ ಕೈ ತೊಳೆಯುವುದು ಎಂಬ ನಿಯಮಗಳನ್ನು ಪಾಲಿಸಬೇಕು. ಮತ್ತೊಮ್ಮೆ, ಈ ಸೌರ ವಿದ್ಯುತ್ ಸ್ಥಾವರಕ್ಕಾಗಿ ಮಧ್ಯಪ್ರದೇಶಕ್ಕೆ ಅಭಿನಂದನೆಗಳು.
ಜಾಗರೂಕರಾಗಿರಿ, ಸುರಕ್ಷಿತವಾಗಿರಿ, ಆರೋಗ್ಯವಾಗಿರಿ!
ತುಂಬಾ ಧನ್ಯವಾದಗಳು!
***
(Release ID: 1648665)
Visitor Counter : 487
Read this release in:
Punjabi
,
Gujarati
,
Odia
,
Telugu
,
Malayalam
,
Assamese
,
English
,
Urdu
,
Marathi
,
Hindi
,
Bengali
,
Manipuri
,
Tamil