ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಲಾಲ್ ಜಿ ಟಂಡನ್ ನಿಧನಕ್ಕೆ ಪ್ರಧಾನಿ ಕಂಬನಿ

Posted On: 21 JUL 2020 11:19AM by PIB Bengaluru

ಶ್ರೀ ಲಾಲ್ ಜಿ ಟಂಡನ್ ನಿಧನಕ್ಕೆ ಪ್ರಧಾನಿ ಕಂಬನಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಲಾಲ್ ಜಿ ಟಂಡನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಟಂಡನ್ ಅವರುಸಾಂವಿಧಾನಿಕ ವಿಚಾರಗಳಲ್ಲಿ ನಿಷ್ಣಾತರಾಗಿದ್ದರುಎಂದು ಟ್ವೀಟ್ ನಲ್ಲಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.

ಶ್ರೀ ಲಾಲ್ ಜಿ ಟಂಡನ್ ಅವರು ಸಮಾಜಕ್ಕೆ ಅವಿಶ್ರಾಂತವಾಗಿ ಸಲ್ಲಿಸಿದ ಸೇವೆಯಿಂದ ಸ್ಮರಿಸಲ್ಪಡುತ್ತಾರೆ, ಅವರು ಸದಾ ಸಾರ್ವಜನಿಕ ಕಲ್ಯಾಣಕ್ಕೆ ಮಹತ್ವ ನೀಡುತ್ತಿದ್ದರು. ಅವರ ಅಗಲಿಕೆಯಿಂದ ತೀವ್ರ ದುಃಖಿತನಾಗಿದ್ದೇನೆ.ಎಂದು ಅವರು ತಿಳಿಸಿದ್ದಾರೆ.

ಶ್ರೀ ಟಂಡನ್ ಅವರು ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಹೊಂದಿದ್ದ ನಂಟನ್ನೂ ಪ್ರಧಾನಮಂತ್ರಿ ಸ್ಮರಿಸಿದ್ದಾರೆ.

***



(Release ID: 1640222) Visitor Counter : 160