ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ECOSOC) ಅಧಿವೇಶನದಲ್ಲಿ ಪ್ರದಾನಮಂತ್ರಿಯವರಿಂದ ಪ್ರಧಾನ  ಭಾಷಣ

Posted On: 17 JUL 2020 8:46PM by PIB Bengaluru

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ECOSOC) ಅಧಿವೇಶನದಲ್ಲಿ ಪ್ರದಾನಮಂತ್ರಿಯವರಿಂದ ಪ್ರಧಾನ  ಭಾಷಣ

ವಿಶ್ವಸಂಸ್ಥೆಯಲ್ಲಿ ಸುಧಾರಿತ ಬಹುಪಕ್ಷೀಯತೆಗೆ ಪ್ರಧಾನಿ ಕರೆ

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ಎಂಬ ನಮ್ಮ ಧ್ಯೇಯವಾಕ್ಯವು

ಯಾರನ್ನೂ ಹಿಂದೆ ಬಿಡದ ಎಸ್ಡಿಜಿಯ ಪ್ರಮುಖ ತತ್ವದೊಂದಿಗೆ ಪ್ರತಿಫಲಿಸುತ್ತದೆ: ಪ್ರಧಾನಿ

ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವಾಗ, ನಮ್ಮ ಭೂಮಿಯ ಬಗೆಗಿನ ನಮ್ಮ ಹೊಣೆಗಾರಿಕೆಯನ್ನು ನಾವು ಮರೆತಿಲ್ಲ: ಪ್ರಧಾನಿ

ನಮ್ಮ ತಳಮಟ್ಟದ ಆರೋಗ್ಯ ವ್ಯವಸ್ಥೆಯು

ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿಶ್ವದ ಅತ್ಯುತ್ತಮ ಚೇತರಿಕೆ ದರವನ್ನು ಸಾಧಿಸಲು ಭಾರತಕ್ಕೆ ನೆರವಾಗುತ್ತಿದೆ: ಪ್ರಧಾನಿ

 

2020 ಜುಲೈ 17 ಶುಕ್ರವಾರದಂದು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ECOSOC) ಅಧಿವೇಶನದ ವರ್ಷದ ಉನ್ನತ ಮಟ್ಟದ ವಿಭಾಗದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವರ್ಚುವಲ್ ಮುಖ್ಯ ಭಾಷಣ ಮಾಡಿದರು.

2021-22 ಅವಧಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯನಾಗಿ ಜೂನ್ 17 ರಂದು ಭಾರತ ಆಯ್ಕೆಯಾದ ನಂತರ ವಿಶ್ವಸಂಸ್ಥೆಯ ಸದಸ್ಯರನ್ನುದ್ದೇಶಿಸಿ ಪ್ರಧಾನಿಯವರು ಮಾಡಿದ ಮೊದಲ ಭಾಷಣ ಇದು.

ವರ್ಷದ ECOSOC ಉನ್ನತ ಮಟ್ಟದ ವಿಭಾಗದ ವಿಷಯಕೋವಿಡ್-19 ನಂತರದ ಬಹುಪಕ್ಷೀಯತೆ: 75 ನೇ ವಾರ್ಷಿಕೋತ್ಸವದಲ್ಲಿ ನಮಗೆ ಯಾವ ರೀತಿಯ ವಿಶ್ವಸಂಸ್ಥೆ ಇರಬೇಕು”.

ವಿಶ್ವಸಂಸ್ಥೆ ಸ್ಥಾಪನೆಯ 75 ನೇ ವಾರ್ಷಿಕೋತ್ಸವದ ಜೊತೆಯಲ್ಲಿ, ವಿಷಯವು ಮುಂಬರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವದಲ್ಲಿ ಭಾರತದ ಆದ್ಯತೆಯನ್ನು ಪ್ರತಿಫಲಿಸುತ್ತದೆ. ಸಮಕಾಲೀನ ಪ್ರಪಂಚದ ವಾಸ್ತವಗಳನ್ನು ಪ್ರತಿಬಿಂಬಿಸುವ ಕೋವಿಡ್-19 ನಂತರದ ಜಗತ್ತಿನಲ್ಲಿಸುಧಾರಿತ ಬಹುಪಕ್ಷೀಯತೆಗಾಗಿ ಭಾರತದ ಕರೆಯನ್ನು ಪ್ರಧಾನಿ ಪುನರುಚ್ಚರಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಒಳಗೊಂಡಂತೆ ECOSOC ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತದ ಸುದೀರ್ಘ ಒಡನಾಟವನ್ನು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಸ್ಮರಿಸಿದರು. ಭಾರತದ ಅಭಿವೃದ್ಧಿಯ ಧ್ಯೇಯವಾಕ್ಯಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ಯಾರನ್ನೂ ಹಿಂದೆ ಬಿಡದ ಎಸ್ಡಿಜಿಯ ಪ್ರಮುಖ ತತ್ತ್ವದೊಂದಿಗೆ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.

ಭಾರತದ ವ್ಯಾಪಕ ಜನಸಂಖ್ಯೆಯ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಸುಧಾರಿಸುವಲ್ಲಿ ಭಾರತದ ಯಶಸ್ಸು ಜಾಗತಿಕ ಎಸ್ಡಿಜಿ ಗುರಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದರು. ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಅವುಗಳ ಎಸ್ಡಿಜಿ ಗುರಿಗಳನ್ನು ಸಾಧಿಸಲು ಸಹಕರಿಸುವ ಭಾರತದ ಬದ್ಧತೆಯ ಬಗ್ಗೆ ಅವರು ಮಾತನಾಡಿದರು.

"ಸ್ವಚ್ಛ ಭಾರತ ಅಭಿಯಾನ" ಮೂಲಕ ನೈರ್ಮಲ್ಯ ಸುಧಾರಣೆ, ಮಹಿಳೆಯರ ಸಬಲೀಕರಣ, ಆರ್ಥಿಕ ಸೇರ್ಪಡೆ ಖಾತ್ರಿ ಮತ್ತು "ಎಲ್ಲರಿಗೂ ವಸತಿ" ಹಾಗೂಆಯುಷ್ಮಾನ್ ಭಾರತಕಾರ್ಯಕ್ರಮಗಳಂತಹ ಪ್ರಮುಖ ಯೋಜನೆಗಳ ಮೂಲಕ ವಸತಿ ಮತ್ತು ಆರೋಗ್ಯದ ಲಭ್ಯತೆಯ ವಿಸ್ತರಣೆ ಸೇರಿದಂತೆ ಭಾರತದ ಪ್ರಸ್ತುತ ಅಭಿವೃದ್ಧಿ ಪ್ರಯತ್ನಗಳ ಕುರಿತು ಅವರು ಮಾತನಾಡಿದರು.

ಪರಿಸರ ಸುಸ್ಥಿರತೆ ಮತ್ತು ಜೈವಿಕ ವೈವಿಧ್ಯತೆಯ ಸಂರಕ್ಷಣೆಯ ಬಗ್ಗೆ ಭಾರತದ ದೃಷ್ಟಿಯನ್ನು ಪ್ರಧಾನಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟ ಸ್ಥಾಪನೆಯಲ್ಲಿ ಭಾರತದ ಪ್ರಮುಖ ಪಾತ್ರವನ್ನು ಸ್ಮರಿಸಿಕೊಂಡರು.

ತನ್ನ ಪ್ರದೇಶದಲ್ಲಿ ಮೊದಲ ಪ್ರತಿಸ್ಪಂದಕನಾಗಿ ಭಾರತದ ಪಾತ್ರದ ಬಗ್ಗೆ ಮಾತನಾಡಿದ ಪ್ರಧಾನಿ, ವಿವಿಧ ದೇಶಗಳಿಗೆ ಔಷಧಿ ಸರಬರಾಜು ಖಾತ್ರಿಪಡಿಸಿಕೊಳ್ಳಲು ಮತ್ತು ಸಾರ್ಕ್ ದೇಶಗಳಲ್ಲಿ ಜಂಟಿ ಪ್ರತಿಕ್ರಿಯೆ ತಂತ್ರವನ್ನು ಸಂಘಟಿಸಲು ಭಾರತ ಸರ್ಕಾರ ಮತ್ತು ಭಾರತೀಯ ಔಷಧ ಕಂಪನಿಗಳು ನೀಡಿದ ಬೆಂಬಲವನ್ನು ನೆನಪಿಸಿಕೊಂಡರು.

ECOSOC ಉದ್ದೇಶಿಸಿ ಇದು ಪ್ರಧಾನಿಯವರ ಎರಡನೇ ಭಾಷಣ. ಹಿಂದೆ ಅವರು 2016 ಜನವರಿಯಲ್ಲಿ ECOSOC 70 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ್ದರು.

***


(Release ID: 1639506) Visitor Counter : 516