PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 08 JUL 2020 6:33PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು ಹೊಸ ಮಾಹಿತಿ: ದೇಶದ ಕೋವಿಡ್ -19 ಚೇತರಿಕೆಯ ಪ್ರಮಾಣವು ತೀವ್ರವಾಗಿ ಸುಧಾರಿಸುತ್ತಿದೆ - 61.53%ರಷ್ಟು ತಲುಪಿದೆ

ಕೋವಿಡ್-19 ಪತ್ತೆಗಾಗಿ ಪರೀಕ್ಷಿಸಲಾಗುತ್ತಿರುವ ಮಾದರಿಗಳ ಸಂಖ್ಯೆ ಪ್ರತಿದಿನ ಗಣನೀಯವಾಗಿ ಬೆಳೆಯುತ್ತಿದೆ.  ಕಳೆದ 24 ಗಂಟೆಗಳಲ್ಲಿ, 2,62,679 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಖಾಸಗಿ  ಪ್ರಯೋಗಾಲಯಗಲ್ಲಿ 53,000 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಿಸಿದ ಮಾದರಿಗಳ ಒಟ್ಟು ಸಂಖ್ಯೆ, ಪ್ರಸ್ತುತ 1,04,73,771 ಆಗಿದೆ. ಸರ್ಕಾರಿ ವಲಯದಲ್ಲಿ 795 ಪ್ರಯೋಗಾಲಯಗಳು ಮತ್ತು 324 ಖಾಸಗಿ ಪ್ರಯೋಗಾಲಯಗಳನ್ನು ಹೊಂದಿರುವ ದೇಶದಲ್ಲಿ 1119 ಪ್ರಯೋಗಾಲಯಗಳಿವೆ. ಹೆಚ್ಚಿನ ಕೋವಿಡ್-19 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ, ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು ದಿನದ ಅಂತ್ಯದವೇಳೆಗೆ 1,91,886 ರಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ, ಒಟ್ಟು 16,883 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದ್ದು, ಒಟ್ಟು 4,56,830 ಚೇತರಿಸಿಕೊಂಡ ಪ್ರಕರಣಗಳಾಗಿವೆ ಕೋವಿಡ್-19 ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು ಹೆಚ್ಚುತ್ತಲೇ ಇದೆ. ಇದು ಇಂದು 61.53% ಕ್ಕೆ ತಲುಪಿದೆ. ಪ್ರಸ್ತುತ, 2,64,944 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1636958

ಕೋವಿಡ್ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಬಲಪಡಿಸಲು, ದೆಹಲಿಯ ಏಮ್ಸ್  ಸಂಸ್ಥೆಯು  ಕೋವಿಡ್ ಕ್ಲಿನಿಕಲ್ ನಿರ್ವಹಣೆ ಕುರಿತು ರಾಜ್ಯಗಳ ವೈದ್ಯರಿಗೆ ಟೆಲಿ-ಕನ್ಸಲ್ಟೇಶನ್ ಮಾರ್ಗದರ್ಶನವನ್ನು ಪ್ರಾರಂಭಿಸಿದೆ

ಕೇಂದ್ರ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ನಿರ್ವಹಿಸುವ ವೈದ್ಯರಿಗೆ ತಜ್ಞರ ಮಾರ್ಗದರ್ಶನ ಮತ್ತು ಜ್ಞಾನದ ಬೆಂಬಲವನ್ನು ಒದಗಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಈಗ ನವದೆಹಲಿಯ ಏಮ್ಸ್ನ ತಜ್ಞ ವೈದ್ಯರನ್ನು ಸೇರಿಸಿದ್ದಾರೆ.  ಕೋವಿಡ್-19ಕ್ಕಾಗಿ ಕ್ಲಿನಿಕಲ್ ಮಧ್ಯಸ್ತಿಕೆ  ಶಿಷ್ಠಚಾರದ ಟೆಲಿ-ಸಮಾಲೋಚನೆಯು ಒಂದು ನಿರ್ಣಾಯಕ ಅಂಶವಾಗಿದೆ. ನವದೆಹಲಿಯ ಏಮ್ಸ್ನ ವೈದ್ಯರ ತಜ್ಞರ ತಂಡವು ಟೆಲಿ / ವಿಡಿಯೋ ಸಮಾಲೋಚನೆಯ ಮೂಲಕ ವಿವಿಧ ರಾಜ್ಯ ಆಸ್ಪತ್ರೆಗಳ ಐಸಿಯುಗಳಲ್ಲಿ ಕೋವಿಡ್-19 ರೋಗಿಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡುತ್ತದೆ.  ಪ್ರಕರಣಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಅವರು ಕೋವಿಡ್-19 ರೋಗಿಗಳ ಕ್ಲಿನಿಕಲ್ ನಿರ್ವಹಣೆಯಲ್ಲಿ ರಾಜ್ಯಗಳಿಗೆ ಸಹಾಯ ಮಾಡುತ್ತಾರೆ ರಾಜ್ಯಗಳಲ್ಲಿನ ವೈದ್ಯರಿಗೆ ಸಮಯೋಚಿತ ಮತ್ತು ತಜ್ಞರ ಮಾರ್ಗದರ್ಶನ ನೀಡುವ ಈ ಟೆಲಿ-ಸಮಾಲೋಚನಾ ಅವಧಿಗಳನ್ನು ಪ್ರತಿ ವಾರ ಎರಡು ಬಾರಿ ಮಂಗಳವಾರ ಮತ್ತು ಶುಕ್ರವಾರದಂದು ನಡೆಸಲಾಗುತ್ತದೆ.  ಈ ತರಬೇತಿಯ ಮೊದಲ ಅಧಿವೇಶನ ಪ್ರಾರಂಭವಾಗಿದೆ. ಮುಂಬೈ (ಮಹಾರಾಷ್ಟ್ರ) ನಿಂದ ಒಂಬತ್ತು ಮತ್ತು ಗೋವಾದ ಒಂದು ಆಸ್ಪತ್ರೆ ಸೇರಿದಂತೆ ಹತ್ತು ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ.

ವಿವರಗಳಿಗಾಗಿ : https://pib.gov.in/PressReleseDetail.aspx?PRID=1637175

ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಪ್ರತಿ ದಶಲಕ್ಷ ಜನಸಂಖ್ಯೆಯ ಚೇತರಿಕೆಯ ಪ್ರಮಾಣವು  ಉತ್ತಮವಾದ ಏರಿಕೆಯನ್ನು ತೋರಿಸುತ್ತಿವೆ

ಭಾರತದಲ್ಲಿ, ಕೋವಿಡ್-19ರ ಹೆಚ್ಚಿನ ಪ್ರಕರಣಗಳನ್ನು  ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರಂಭಿಕ ಪ್ರಕರಣಗಳ ಗುರುತಿಸುವಿಕೆ ಮತ್ತು ದೃಡಪಟ್ಟ ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯತ್ತ ತಮ್ಮ ಗಮನವನ್ನು ಹರಿಸುತ್ತಿವೆ. ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಿರಬಹುದು ಆದರೆ ಚೇತರಿಕೆಯ ಪ್ರಮಾಣಗಳು ಕೂಡ ಹೆಚ್ಚಾಗಿವೆ, ಇದರಿಂದಾಗಿ ಸಕ್ರಿಯ ಪ್ರಕರಣಗಳು ಕಡಿಮೆ ಇವೆ ಎಂದು ಇದು ತೋರಿಸುತ್ತದೆ. ಇದರಿಂದಾಗಿ ಕೋವಿಡ್ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದಿಲ್ಲ ಮತ್ತು ವಿಸ್ತಾರವಾಗುವುದಿಲ್ಲ ಎಂದು ಇದು ಖಚಿತಪಡಿಸಿದೆ. ಭಾರತವು ಪ್ರತಿ ದಶಲಕ್ಷಕ್ಕೆ  315.8 ಚೇತರಿಸಿಕೊಂಡ ಪ್ರಕರಣಗಳನ್ನು ಹೊಂದಿದ್ದರೆ,  ಪ್ರತಿ ದಶಲಕ್ಷಕ್ಕೆ ಸಕ್ರಿಯ ಪ್ರಕರಣಗಳು 186.3 ರ ಕಡಿಮೆ ಮಟ್ಟದಲ್ಲಿವೆ. ಆರ್‌ಟಿ-ಪಿಸಿಆರ್ ಪರೀಕ್ಷೆಗಳು, ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳ ನಿಯೋಜನೆಯೊಂದಿಗೆ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನವನ್ನು ರಾಜ್ಯಗಳು ಅನುಸರಿಸಿವೆ. ಹಿರಿಯ ಮತ್ತು ವೃದ್ಧರ ಜನಸಂಖ್ಯೆ, ಇತರ ಕಾಯಿಲೆ ಹೊಂದಿರುವ ಜನರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಸೇರಿದಂತೆ ಹೆಚ್ಚಿನ ಅಪಾಯಕ್ಕೊಳಗಾಗುವ ಜನರನ್ನು  ಗುರುತಿಸಲು ರಾಜ್ಯಗಳು ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿವೆ. ಸ್ಥಳೀಯ ಸರ್ಕಾರದಲ್ಲಿ ಸಮುದಾಯ, ಆಶಾ ಮತ್ತು ಎಎನ್‌ಎಂಗಳ ಒಳಗೊಳ್ಳುವಿಕೆಯು ಸಮುದಾಯದಲ್ಲಿ ಪರಿಣಾಮಕಾರಿ ಕಣ್ಗಾವಲಿಗೆ ಕಾರಣವಾಗಿದೆ.

Screenshot (2).png

ವಿವರಗಳಿಗಾಗಿ: https://pib.gov.in/PressReleasePage.aspx?PRID=1637024

'ಕೃಷಿ ಮೂಲಸೌಕರ್ಯ ನಿಧಿ' ಅಡಿಯಲ್ಲಿ ಹಣಕಾಸು ಸೌಲಭ್ಯದ ಕೇಂದ್ರ ವಲಯ ಯೋಜನೆಗೆ ಸಚಿವಸಂಪುಟವು ಅನುಮೋದನೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಇಂದು ಹೊಸ ಅಖಿಲ ಭಾರತ ಕೇಂದ್ರ ವಲಯ ಯೋಜನೆ -ಕೃಷಿ ಮೂಲಸೌಕರ್ಯ ನಿಧಿಗೆ ಅನುಮೋದನೆ ನೀಡಿದೆ.  ಈ ಯೋಜನೆಯು ಸುಗ್ಗಿಯ ನಂತರದ ನಿರ್ವಹಣೆಗೆ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮಧ್ಯಮ - ದೀರ್ಘಾವಧಿಯ ಸಾಲ ಹಣಕಾಸು ಸೌಲಭ್ಯವನ್ನು ಒದಗಿಸುತ್ತದೆ.   ಪ್ರಸಕ್ತ ವರ್ಷದಲ್ಲಿ ರೂ .10,000 ಕೋಟಿ ಮತ್ತು ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ತಲಾ 30,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವದು

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637221.

ಪಿಎಂಜಿಕೆವೈ/ ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ 2020 ರ ಜೂನ್ ನಿಂದ ಆಗಸ್ಟ್ ವರೆಗೆ ಇಪಿಎಫ್ ಕೊಡುಗೆಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ಸಚಿವ ಸಂಪುಟವು ಅಂಗೀಕರಿಸಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ನೌಕರರ ಭವಿಷ್ಯ ನಿಧಿಯಡಿ 12% ನೌಕರರ ಪಾಲು ಮತ್ತು 12% ಉದ್ಯೋಗದಾತರ ಪಾಲು ಒಟ್ಟು 24% ಅನ್ನು ವಿಸ್ತರಿಸಲು ಅನುಮೋದನೆ ನೀಡಿದೆ,  2020 ರಿಂದ ಜೂನ್ ನಿಂದ ಆಗಸ್ಟ್ ವರೆಗೆ ಇನ್ನೂ 3 ತಿಂಗಳವರೆಗೆ, ರೋಗದ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) / ಆತ್ಮನಿರ್ಭರ ಭಾರತ್  ಅಡಿಯಲ್ಲಿ ಸರ್ಕಾರ ಘೋಷಿಸಿದ ಪ್ಯಾಕೇಜಿನ ಭಾಗವಾಗಿ. ಈ ಅನುಮೋದನೆಯು 15.04.2020 ರಂದು ಅಂಗೀಕರಿಸಲ್ಪಟ್ಟ 2020 ರ ಮಾರ್ಚ್ ನಿಂದ ಮೇ ವರೆಗಿನ ವೇತನಗಳು ಅಸ್ತಿತ್ವದಲ್ಲಿರುವ ಯೋಜನೆಗೆ ಹೆಚ್ಚುವರಿಯಾಗಿರುತ್ತದೆ. ಒಟ್ಟು ಅಂದಾಜು ವೆಚ್ಚ ರೂ .4,860 ಕೋಟಿಯಾಗಿದ್ದು. 3.67 ಲಕ್ಷ ಸಂಸ್ಥೆಗಳಲ್ಲಿ 72 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637219

ನಗರದ ವಲಸಿಗರು/ ಬಡವರಿಗೆ ಕೈಗೆಟುಕುವ ಬಾಡಿಗೆ ಮನೆಯ ವಸತಿ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಲು  ಸಚಿವ ಸಂಪುಟವು ಅನುಮೋದನೆ ನೀಡಿದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ - ಯು) ಅಡಿಯಲ್ಲಿ ಉಪ-ಯೋಜನೆಯಾಗಿ ನಗರ ವಲಸಿಗರು / ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಎಚ್‌ಆರ್‌ಸಿ) ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಸ್ತಿತ್ವದಲ್ಲಿರುವ ಖಾಲಿ ಇರುವ ಸರ್ಕಾರಿ ಅನುದಾನಿತ ವಸತಿ ಸಂಕೀರ್ಣಗಳನ್ನು ಎಆರ್‌ಎಚ್‌ಸಿಗಳಲ್ಲಿ ರಿಯಾಯಿತಿ ಒಪ್ಪಂದಗಳ ಮೂಲಕ 25 ವರ್ಷಗಳವರೆಗೆ ಪರಿವರ್ತಿಸಲಾಗುತ್ತದೆ. ಕೊಠಡಿಗಳ ದುರಸ್ತಿ ,  ಮಾರ್ಪಾಡು ಮತ್ತು ನಿರ್ವಹಣೆಯ ಮೂಲಕ ಮತ್ತು ನೀರು, ಒಳಚರಂಡಿ, ನೈರ್ಮಲ್ಯ, ರಸ್ತೆ ಮುಂತಾದ ಮೂಲಸೌಕರ್ಯಗಳ ಅಂತರವನ್ನು ತುಂಬುವ ಮೂಲಕ ರಿಯಾಯಿತಿಯು ಸಂಕೀರ್ಣಗಳನ್ನು ವಾಸಯೋಗ್ಯವಾಗಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾರದರ್ಶಕ ಬಿಡ್ಡಿಂಗ್ ಮೂಲಕ ರಿಯಾಯಿತಿಯನ್ನು ಆಯ್ಕೆ ಮಾಡುತ್ತದೆ. ಹಿಂದಿನಂತೆ ಪುನರಾರಂಭಿಸಲು  ಅಥವಾ ಸ್ವಂತವಾಗಿ ನಡೆಸಲು  ಕಟ್ಟಡಗಳ ಅನುಮತಿಯು 25 ವರ್ಷಗಳ ನಂತರ ನಗರದ ಸ್ಥಳೀಯ ಸಂಸ್ಥೆ (ಯುಎಲ್‌ಬಿ) ಗೆ ಮರಳುತ್ತವೆ . ಬಳಕೆಯ ಅನುಮತಿ, 50% ಹೆಚ್ಚುವರಿ ಎಫ್‌ಎಆರ್ / ಎಫ್‌ಎಸ್‌ಐ, ಆದ್ಯತೆಯ ವಲಯದ ಸಾಲ ದರದಲ್ಲಿ ರಿಯಾಯಿತಿ ಸಾಲ, ಕೈಗೆಟುಕುವ ವಸತಿಗಳಿಗೆ ಸಮನಾಗಿ ತೆರಿಗೆ ಪರಿಹಾರ ಇತ್ಯಾದಿ ವಿಶೇಷ ಪ್ರೋತ್ಸಾಹಗಳನ್ನು ಖಾಸಗಿ / ಸಾರ್ವಜನಿಕ ಸಂಸ್ಥೆಗಳಿಗೆ 25 ವರ್ಷಗಳ ಕಾಲ ತಮ್ಮದೇ ಆದ ಖಾಲಿ ಭೂಮಿಯಲ್ಲಿ ಎಆರ್‌ಎಚ್‌ಸಿಗಳನ್ನು ಅಭಿವೃದ್ಧಿಪಡಿಸಲು ನೀಡಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637215

ಉಜ್ವಲಾ ಫಲಾನುಭವಿಗಳಿಗೆ "ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ" ಯ ಪ್ರಯೋಜನಗಳನ್ನು ಪಡೆಯಲು 01.07.2020ರಿಂದ ಸಮಯ ಮಿತಿಯನ್ನು ವಿಸ್ತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ

ಪಿಎಂಜಿಕೆವೈ-ಉಜ್ವಲಾ ಅಡಿಯಲ್ಲಿ ಉಜ್ವಲಾ ಫಲಾನುಭವಿಗಳಿಗೆ “ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ” ಯ ಪ್ರಯೋಜನಗಳನ್ನು ಪಡೆಯಲು.  1.07.2020ರಿಂದ ಸಮಯ ಮಿತಿಯನ್ನು ಮೂರು ತಿಂಗಳು ವಿಸ್ತರಿಸುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ,/ ಪಿಎಂಯುವೈ ಗ್ರಾಹಕರಿಗೆ 3 ತಿಂಗಳ ಅವಧಿಗೆ 01.04.2020ರಿಂದ  ಉಚಿತ ಸಿಲಿಂಡರುಗಳನ್ನು  ಪೋರೈಸಲು ತೀರ್ಮಾನಿಸಲಾಗಿದೆ.   ಏಪ್ರಿಲ್ ನಿಂದ ಜೂನ್ 2020 ರ ಅವಧಿಯಲ್ಲಿ 9709.86 ಕೋಟಿ ರೂಪಾಯಿಗಳನ್ನು ನೇರವಾಗಿ ಉಜ್ವಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು ಮತ್ತು 11.97 ಕೋಟಿ ಸಿಲಿಂಡರ್‌ಗಳನ್ನು ಪಿಎಂಯುವೈ ಫಲಾನುಭವಿಗಳಿಗೆ ತಲುಪಿಸಲಾಯಿತು.  ಪಿಎಂಯುವೈ ಫಲಾನುಭವಿಗಳ ಒಂದು ಭಾಗದವರು  ತಮ್ಮ ಖಾತೆಗೆ ಜಮಾ ಮಾಡಿದ ಮುಂಗಡವನ್ನು ಇನ್ನೂ ಖರೀದಿಸಲು ಬಳಸುತ್ತಿಲ್ಲ ಎಂದು ಗಮನಿಸಲಾಗಿದೆ. ಯೋಜನೆಯ ಅವಧಿಯೊಳಗೆ ಸಿಲಿಂಡರ್ ಮರುಪೂರಣ. ಮುಂಗಡವನ್ನು ಪಡೆಯಲು ಸಮಯ ಮಿತಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ಸಚಿವ ಸಂಪುಟ ಅಂಗೀಕರಿಸಿದೆ. ಹೀಗಾಗಿ, ಈಗಾಗಲೇ ತಮ್ಮ ಖಾತೆಗೆ ಮುಂಗಡವನ್ನು ವರ್ಗಾಯಿಸಿರುವ ಫಲಾನುಭವಿಗಳು ಈಗ ಸೆಪ್ಟೆಂಬರ್  30 ರವರೆಗೆ ಉಚಿತ ಮರುಪೂರಣ ವಿತರಣೆಯನ್ನು ತೆಗೆದುಕೊಳ್ಳಬಹುದು.

ವಿವರಗಳಿಗಾಗಿ : https://pib.gov.in/PressReleseDetail.aspx?PRID=1637214

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ -ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ - 2020 ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳವರೆಗೆ ಕಡಲೇಕಾಳನ್ನು  ಉಚಿತವಾಗಿ ವಿತರಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ

ಕೋವಿಡ್-19 ಆರ್ಥಿಕ ಪರಿಹಾರದ ಭಾಗವಾಗಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಯನ್ನು 2020 ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ ಮುಂದಿನ ಐದು ತಿಂಗಳವರೆಗೆ ತಿಂಗಳಿಗೆ 1 ಕೆ.ಜಿ ಯಂತೆ  ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ  ಎಲ್ಲಾ ಫಲಾನುಭವಿ ಕುಟುಂಬಗಳಿಗೆ ಉಚಿತವಾಗಿ   2020 ಜುಲೈನಿಂದ ನವೆಂಬರ್ ವರೆಗೆ ಒಟ್ಟು ಅಂದಾಜು ರೂ .6,849.24 ಕೋಟಿ ವೆಚ್ಚದಲ್ಲಿ  9.7 ಲಕ್ಷ ಎಂ.ಟಿ ಸ್ವಚ್ಛಗೊಳಿಸಿದ ಕಡಲೇಕಾಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಸುಮಾರು 19.4 ಕೋಟಿ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ವಿಸ್ತೃತ ಪಿಎಂಜಿಕೆಎಯಲ್ಲಿನ ಎಲ್ಲಾ ವೆಚ್ಚಗಳನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಮುಂದಿನ ಐದು ತಿಂಗಳಲ್ಲಿ ಅಡಚಣೆಗಳಿಂದಾಗಿ ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಯಾರೇ ಆಗಲಿ, ವಿಶೇಷವಾಗಿ ಯಾವುದೇ ಬಡ ಕುಟುಂಬವು ತೊಂದರೆಗೊಳಗಾಗುವುದನ್ನು ತಪ್ಪಿಸಲು   ಭಾರತ ಸರ್ಕಾರದ ಬದ್ಧತೆಗಳಿಗೆ ಅನುಗುಣವಾಗಿ ಯೋಜನೆಯ ವಿಸ್ತರಣೆಯಾಗಿoooooದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637211

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯ ವಿಸ್ತರಣೆಗೆ ಸಚಿವ ಸಂಪುಟವು   ಅನುಮೋದನೆ ನೀಡಿದೆ - ಜುಲೈ ನಿಂದ ನವೆಂಬರ್ 220ರವರೆಗೆ ಇನ್ನೂ ಐದು ತಿಂಗಳು ಹೆಚ್ಚುವರಿ ಆಹಾರ ಧಾನ್ಯ ವಿತರಣೆ

ಜುಲೈನಿಂದ ನವೆಂಬರ್ 2020ರವರೆಗೆ ಇನ್ನೂ ಐದು ತಿಂಗಳ ಕಾಲ ಕೇಂದ್ರದ ಉಗ್ರಾಣದಿಂದ  ಆಹಾರ-ಧಾನ್ಯಗಳನ್ನು ಹೆಚ್ಚುವರಿ ಹಂಚಿಕೆಗಾಗಿ ಕೋವಿಡ್-19ರ ಆರ್ಥಿಕ ಪರಿಹಾರದ ಭಾಗವಾಗಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎ) ಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದಲ್ಲಿ ಕೋವಿಡ್ -19ರಿಂದ ಉಂಟಾದ ಆರ್ಥಿಕ ಅಡೆತಡೆಗಳಿಂದಾಗಿ ಬಡವರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸಲು ಭಾರತ ಸರ್ಕಾರ 'ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್' ಅನ್ನು ಮಾರ್ಚ್ 2020 ರಲ್ಲಿ ಘೋಷಿಸಿತು. ಈ ಪ್ಯಾಕೇಜ್, ಇತರ ಪರಿಹಾರಗಳ ಜೊತೆಗೆ "ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ (ಪಿಎಂ-ಜಿಕೆಎ)" ಯ ಅನುಷ್ಠಾನವನ್ನು ಒಳಗೊಂಡಿದೆ, ಇದರ ಮೂಲಕ ಹೆಚ್ಚುವರಿ ಉಚಿತ ಆಹಾರ ಧಾನ್ಯಗಳು (ಅಕ್ಕಿ / ಗೋಧಿ) ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಯಂತೆ ಸುಮಾರು 81 ಕೋಟಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ, ಇದರಿಂದಾಗಿ ಬಡ ಮತ್ತು ದುರ್ಬಲ ಕುಟುಂಬಗಳು,  ಫಲಾನುಭವಿಗಳು ಯಾವುದೇ ಹಣಕಾಸಿನ ತೊಂದರೆಯನ್ನು ಎದುರಿಸದೆ ಸುಲಭವಾಗಿ ಆಹಾರ-ಧಾನ್ಯಗಳನ್ನು ಹೊಂದಲು  ಸಾಧ್ಯವಾಗುತ್ತದೆ.ಈ ಕಾರ್ಯಕ್ರಮದ ಆರಂಭದಲ್ಲಿ, ಮೂರು ತಿಂಗಳವರೆಗೆ ಅಂದರೆ ಏಪ್ರಿಲ್, ಮೇ ಮತ್ತು ಜೂನ್ವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637207

ಕೋವಿಡ್-19 ವಿರುದ್ಧ ಹೋರಾಡಲು ಇಸಿಎಚ್ ಎಸ್ ಅಡಿಯಲ್ಲಿ ಅನುಮತಿಸಲಾದ ಪ್ರತಿ ಕುಟುಂಬಕ್ಕೆ ಒಂದು ಪಲ್ಸ್  ಆಕ್ಸಿಮೀಟರ್ ವೆಚ್ಚದ ಮರುಪಾವತಿ

ಕೋವಿಡ್-19 ರೋಗಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ಮಾನದಂಡಗಳಲ್ಲಿ   ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಅಳೆಯುವ ಪಲ್ಸ್ಆಕ್ಸಿಮೀಟರನ್ನು ಖರೀದಿಸಿದ ವೆಚ್ಚವನ್ನು ಇಸಿಎಚ್ಎಸ್ ಫಲಾನುಭವಿಗಳಿಗೆ ಮರುಪಾವತಿಸಲು, ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಯೋಜನೆ. ಕೋವಿಡ್-19 ಸೋಂಕು ದೃಢಪಡಿಸಲ್ಪಟ್ಟ ಇಸಿಎಚ್ಎಸ್ ಫಲಾನುಭವಿಗಳಿಗೆ ಪ್ರತಿ ಕುಟುಂಬಕ್ಕೆ ಒಂದು ಪಲ್ಸ್ ಆಕ್ಸಿಮೀಟರ್ ಖರೀದಿಸಲು ಅನುಮತಿ ಇದೆ.  1,200 ರೂ.ಗಳ ಮಿತಿಗೆ ಒಳಪಟ್ಟು ಪಲ್ಸ್  ಆಕ್ಸಿಮೀಟರ್ನ ವೆಚ್ಚದ ಪ್ರಕಾರ ಮರುಪಾವತಿಯನ್ನು ಪಡೆಯಲಾಗುತ್ತದೆ.

ವಿವರಗಳಿಗಾಗಿ : https://pib.gov.in/PressReleseDetail.aspx?PRID=1637171

ಸಿಎಸ್ಐಆರ್ ಸಂಸ್ಥೆಯು  ಲಕ್ಷೈ ಸೈನ್ಸಸ್ ಸಹಭಾಗಿತ್ವದಲ್ಲಿ ಆಂಟಿವೈರಲ್ ಮತ್ತು ಹೋಸ್ಟ್ ನಿರ್ದೇಶಿತ ಚಿಕಿತ್ಸೆಗಳ ಸಂಯೋಜನೆಯನ್ನು ಬಳಸಿಕೊಂಡು ಕೋವಿಡ್ -19 ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಕೈಗೊಳ್ಳಲು ನಿಯಂತ್ರಣ ಮಂಡಳಿಯ  ಅನುಮೋದನೆಗಾಗಿ ಕೋರಲಿದೆ

ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ಲಕ್ಷೈ ಲೈಫ್ ಸೈನ್ಸಸ್ ಪ್ರೈ. ಲಿಮಿಟೆಡ್ ಹೈದರಾಬಾದ್, ಫೋರ್ ಆರ್ಮ್ಡ್ ಯಾದೃಚ್ಛಿಕ ನಿಯಂತ್ರಿತ ಹಂತ 3ರ  ಕ್ಲಿನಿಕಲ್ ಪ್ರಯೋಗವನ್ನು ಕೈಗೊಳ್ಳಲು ನಿಯಂತ್ರಣ ಮಂಡಳಿಯ ಅನುಮೋದನೆಯನ್ನು ಕೋರಿದೆ. ರೋಗದ ಹರಡುವಿಕೆ ಮತ್ತು ರೋಗಶಾಸ್ತ್ರವನ್ನು ಏಕಕಾಲದಲ್ಲಿ ಪರಿಹರಿಸುವ ಆಂಟಿವೈರಲ್‌ಗಳು (ವೈರಲ್ ಎಂಟ್ರಿ ಮತ್ತು ರೆಪ್ಲಿಕೇಶನ್ ಇನ್ಹಿಬಿಟರ್ಗಳು) ಮತ್ತು ಹೋಸ್ಟ್ ಡೈರೆಕ್ಟ್ ಥೆರಪಿಗಳು (ಎಚ್‌ಡಿಟಿಗಳು) ತರ್ಕಬದ್ಧವಾಗಿ ಸಂಯೋಜಿಸುವುದು ಮತ್ತು ಪುನರಾವರ್ತಿಸುವುದು ಮತ್ತು ಮೂರು ಸಂಯೋಜನೆಯ ಔಷಧಿಗಳ (ಫವಿಪಿರಾವೀರ್ + ಕೊಲ್ಚಿಸಿನ್, ಉಮಿಫೆನೋವಿರ್ + ಕೊಲ್ಚಿಸಿನ್ ಮತ್ತು ನಫಾಮೊಸ್ಟಾಟ್ + 5-ಎಎಲ್ಎ) ಸುರಕ್ಷತೆ ಮತ್ತು ಹಾಗೂ ಒಂದು ಕಂಟ್ರೋಲ್ ಆರ್ಮ್ ಜೊತೆಗೆ ಕೋವಿಡ್-19 ರೋಗಿಗಳ   ಗುಣಮಟ್ಟದ ಆರೈಕೆಯೊಂದಿಗೆ ಪರಿಣಾಮಕಾರಿತ್ವವನ್ನು ನಿರ್ಧರಿಸುವುದು ಅಧ್ಯಯನದ ವಿನ್ಯಾಸ ತತ್ವವಾಗಿದೆ. ಮೆಡಾಂಟಾ ಮೆಡಿಸಿಟಿಯ ಸಹಭಾಗಿತ್ವದಲ್ಲಿ ನಡೆಸಬೇಕಾದ ಮ್ಯುಕೋವಿನ್ (MUCOVIN) ಹೆಸರಿನ ಕ್ಲಿನಿಕಲ್ ಪ್ರಯೋಗವು 75 ರೋಗಿಗಳ ನಾಲ್ಕು ವಿಭಿನ್ನ ಗುಂಪುಗಳಲ್ಲಿ ಒಟ್ಟು 300 ರೋಗಿಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 17 ರಿಂದ 21 ದಿನಗಳವರೆಗೆ ಸ್ಕ್ರೀನಿಂಗ್ ಮತ್ತು ಚಿಕಿತ್ಸೆ ಸೇರಿದಂತೆ ನಡೆಸಲಾಗುವುದು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1637016

2020-21ರ ಶೈಕ್ಷಣಿಕ ವರ್ಷಕ್ಕಾಗಿ  9ರಿಂದ 12ನೇ ತರಗತಿಗಳಿಗೆ ಸಿಬಿಎಸ್‌ಇಯಿಂದ ಆದ ಪಠ್ಯಕ್ರಮದ ಪರಿಷ್ಕರಣೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪ್ರಕಟಿಸಿದ್ದಾರೆ

ದೇಶ ಮತ್ತು ಜಗತ್ತಿನಲ್ಲಿ ಇರುವ ಅಸಾಮಾನ್ಯ ಪರಿಸ್ಥಿತಿಯನ್ನು ಗಮನಿಸಿದರೆ ಸಿಬಿಎಸ್‌ಇಗೆ  ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಕಡಿಮೆ ಮಾಡಲು ಸೂಚಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಹೇಳಿದ್ದಾರೆ. ಅದರಂತೆ, 2020-21ರ ಶೈಕ್ಷಣಿಕ ವರ್ಷಕ್ಕಾಗಿ ಸಿಬಿಎಸ್‌ಇ ಯು 9ರಿಂದ 12ನೇ  ತರಗತಿಗಳಿಗೆ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ಕೆಲವು ವಾರಗಳ ಹಿಂದೆ ಅವರು #SyllabusForStudents2020 ಅನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಎಲ್ಲಾ ಶಿಕ್ಷಣ ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದ್ದೆ ಎಂದು ಅವರು ಮಾಹಿತಿ ನೀಡಿದರು. ಪಠ್ಯಕ್ರಮದಲ್ಲಿ ಮಾಡಿದ ಬದಲಾವಣೆಗಳನ್ನು ಆಯಾ ಕೋರ್ಸ್ ಸಮಿತಿಗಳು ಅಂತಿಮಗೊಳಿಸಿದ್ದು, ಪಠ್ಯಕ್ರಮ ಸಮಿತಿ ಮತ್ತು ಮಂಡಳಿಯ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಸಚಿವರು ಹೇಳಿದರು. ಕಲಿಕೆಯ ಮಟ್ಟವನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪಠ್ಯಕ್ರಮವನ್ನು ಮುಖ್ಯ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ 30% ವರೆಗೆ ಸಾಧ್ಯವಾದಷ್ಟು ತರ್ಕಬದ್ಧಗೊಳಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1637012

ಚಲನಚಿತ್ರ ನಿರ್ಮಾಣವನ್ನು ಪುನರಾರಂಭಿಸಲು ಸರ್ಕಾರ ಮಾನದಂಡಗಳನ್ನು ಘೋಷಿಸಲಿದೆ: ಶ್ರೀ ಪ್ರಕಾಶ್ ಜಾವಡೇಕರ್

ಅನ್ಲಾಕ್ ಹಂತದಲ್ಲಿ ಚಲನಚಿತ್ರ ನಿರ್ಮಾಣವನ್ನು ಪುನರಾರಂಭಿಸುವುದನ್ನು ತ್ವರಿತಗೊಳಿಸಲು ಸರ್ಕಾರವು ಶೀಘ್ರದಲ್ಲೇ ಮಾನದಂಡಗಳನ್ನು (ಎಸ್.ಒ.ಪಿ) ಘೋಷಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. “ಕೋವಿಡ್ ಪರಿಣಾಮವಾಗಿ ಸ್ಥಗಿತಗೊಂಡಿದ್ದ ಚಲನಚಿತ್ರ ನಿರ್ಮಾಣದ ಪುನರಾರಂಭವನ್ನು ವೇಗಗೊಳಿಸಲು, ನಾವು ಟಿವಿ ಧಾರಾವಾಹಿಗಳು, ಚಲನಚಿತ್ರ ತಯಾರಿಕೆ, ಸಹ ನಿರ್ಮಾಣ, ಅನಿಮೇಷನ್, ಗೇಮಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಪಾದನೆಯ ಪ್ರೋತ್ಸಾಹಧನದೊಂದಿಗೆ ಬರುತ್ತಿದ್ದೇವೆ. ನಾವು ಶೀಘ್ರದಲ್ಲೇ ಈ ಕ್ರಮಗಳನ್ನು ಪ್ರಕಟಿಸಲಿದ್ದೇವೆ"ಎಂದು ನಿನ್ನೆ ‘ಎಫ್ಐಸಿಸಿಐ  ಫ್ರೇಮ್‌’ನ 21 ನೇ ಆವೃತ್ತಿಯನ್ನುದ್ದೇಶಿಸಿ  ಶ್ರೀ ಜಾವಡೇಕ ರ್ ಹೇಳಿದರು. ಕೋವಿಡ್ -19 ಸಾಂಕ್ರಾಮಿಕದಿಂದಾಗಿ   ಮಾಧ್ಯಮ ಮತ್ತು ಮನರಂಜನಾ ಉದ್ಯಮದ ವಾರ್ಷಿಕ ಸಭೆಯ 2020 ಆವೃತ್ತಿಯನ್ನು ಅದರ ಎಂದಿನ ಸ್ಥಳ ಮುಂಬೈನ ಪೊವಾಯಿ ಸರೋವರದ ಬದಲು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಗುತ್ತಿದೆ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1637005

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ತನ್ನ ಕೋವಿಡ್ ನಿರ್ವಹಣೆ ಮತ್ತು ಆರೈಕೆ ಕಾರ್ಯತಂತ್ರವನ್ನು ಮತ್ತಷ್ಟು ಹೆಚ್ಚಿಸಲು, ಪಂಜಾಬ್ ಸರ್ಕಾರವು ಸಲಹೆಗಾರ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಕಾರರಾದ  ಡಾ.ಕೆ.ಕೆ.ತಲ್ವಾರ್ ಅವರ ಒಟ್ಟಾರೆಯ ಮಾರ್ಗದರ್ಶನದಲ್ಲಿ ಎರಡು ‘ತಜ್ಞರ ಸಲಹಾ ಸಮಿತಿಗಳನ್ನು’ ರಚಿಸಿದೆ. ಪಟಿಯಾಲ ಮತ್ತು ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವಿವಿಧ ಕೋವಿಡ್ ಆರೈಕೆ ಸಂಬಂಧಿತ ವಿಷಯಗಳ ಉತ್ತಮವಾಗಿ ನಿಭಾಯಿಸುವುದನ್ನು ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಗಳನ್ನು ರಚಿಸಲಾಗಿದೆ.
  • ಹರಿಯಾಣ: ಹರಿಯಾಣದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಡಿಯಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಯುವ ಉದ್ಯಮಿಗಳಿಗೆ ಹರಿಯಾಣ ಮುಖ್ಯಮಂತ್ರಿ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡಿದ್ದು, ಎಲ್ಲಾ ವಿಭಾಗಗಳಲ್ಲಿ ಸ್ಥಾಪಿಸಬೇಕಾದ ವಿವಿಧ ವರ್ಗಗಳ 56 ಕ್ಲಸ್ಟರ್‌ಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ ಎಂದು ಹೇಳಿದರು. ಇದು ರಾಜ್ಯದ 22 ಜಿಲ್ಲೆಗಳು ರಾಜ್ಯದಲ್ಲಿ ಸುಮಾರು 70,000 ಎಂಎಸ್‌ಎಂಇಗಳಿಗೆ ಪ್ರಯೋಜನವನ್ನು ನೀಡುತ್ತವೆ. ಕೋವಿಡ್-19 ಕಾರಣದಿಂದಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಂಎಸ್‌ಎಂಇಗಳ ಕಾರ್ಯನಿರ್ವಹಣೆಗೆ ತೊಂದರೆಯಾಗದಂತೆ ಸರ್ಕಾರ ಸಹ ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
  • ಹಿಮಾಚಲ ಪ್ರದೇಶ: ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ಮತ್ತು ಕೋವಿಡ್-19 ಸಾಂಕ್ರಾಮಿಕದಿಂದಾಗಿ  ರಾಜ್ಯದ ಕ್ಷೇತ್ರಕ್ಕೆ ಪರಿಹಾರ ನೀಡುವ ಸಲುವಾಗಿ, ರಾಜ್ಯ ಸರ್ಕಾರವು ಆತಿಥ್ಯ ವಲಯಕ್ಕೆ ಕಾರ್ಯವಾಹಿ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸಾಲದ ಮೇಲಿನ ಬಡ್ಡಿಯ ಸಹಾಯಧನದ  ಯೋಜನೆಯನ್ನು ಪರಿಚಯಿಸಿದೆ.
  • ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 5,134 ಹೊಸ ರೋಗಿಗಳ ವರದಿಯೊಂದಿಗೆ ಮಹಾರಾಷ್ಟ್ರದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ 2,17,121 ಕ್ಕೆ ಏರಿದೆ. ಮುಂಬೈನಿಂದ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಕುಸಿದಿದೆ, ಕೊನೆಯ ಸುದ್ಧಿಯ ಪ್ರಕಾರ 806 ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ, ರಾಜ್ಯದಲ್ಲಿ ಒಟ್ಟು 1,18,558 ರೋಗಿಗಳು ಕೋವಿಡ್-19ರಿಂದ ಚೇತರಿಸಿಕೊಂಡಿದ್ದಾರೆ, 89294 ಸಕ್ರಿಯ ಪ್ರಕರಣಗಳು ಉಳಿದಿವೆ.  ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಮೂರನೇ ಒಂದು ಭಾಗದಷ್ಟು ಜನರು ಸೇರುವ ನಿಯಮದಂತೆಮುಂಬೈನ ಹೋಟೆಲ್‌ಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ,  ಉದ್ಯೋಗ. ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಂಜೆ 7 ಗಂಟೆಯವರೆಗೆ ತೆರೆದಿರಲು ಅವಕಾಶವಿದೆ. ನಿಯಂತ್ರಣವಿಲ್ಲದ ವಲಯಗಳಲ್ಲಿ. ಈ ಮೊದಲು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅವರಿಗೆ ಅವಕಾಶವಿತ್ತು.
  • ಗುಜರಾತ್: ಗುಜರಾತ್‌ನಲ್ಲಿ 778 ಸೋಂಕು ಪ್ರಕರಣಗಳು   ಮತ್ತು 17 ಸಾವುಗಳು ವರದಿಯಾಗಿವೆ. 26,744 ಗುಣಮುಖ / ಆಸ್ಪತ್ರೆಯಿಂದ ಬಿಡುಗಡೆ ಮತ್ತು 1,979 ಸಾವುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಸಂಖ್ಯೆ 37,636ಕ್ಕೆ ತಲುಪಿದೆ. ಕೋವಿಡ್ ಚೇತರಿಕೆಯ ಪ್ರಮಾಣವು ರಾಜ್ಯದಲ್ಲಿ 71.41% ತಲುಪಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಇಂದಿನಿಂದ ಸೂಪರ್ ಸ್ಪ್ರೆಡರ್‌ಗಳ ಎರಡನೇ ಸುತ್ತಿನ ಸಾಮೂಹಿಕ ಪ್ರತಿಜನಕ (ಮಾಸ್ ಆ್ಯಂಟಿಜೆನ್) ಪರೀಕ್ಷೆಗಳನ್ನು ಪ್ರಾರಂಭಿಸಿದೆ. ತರಕಾರಿಗಳು, ಹಣ್ಣುಗಳು, ಹಾಲು, ದಿನಸಿ ಮತ್ತು ವೈದ್ಯಕೀಯ ಅಂಗಡಿ ಮಾಲೀಕರ ಮಾರಾಟಗಾರರನ್ನು ಸಾಮೂಹಿಕ ಪ್ರತಿಜನಕ  ಪರೀಕ್ಷೆಗಳ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಹೇರ್ ಕಟಿಂಗ್ ಅಂಗಡಿಗಳು, ಪಾನ್ ಅಂಗಡಿಗಳು, ವ್ಯಾಪಾರಿಗಳು ಮತ್ತು ರಸ್ತೆಬದಿಯ ಆಹಾರ ಮಾರಾಟಗಾರರನ್ನು ಸಹ ಈ ಅಭಿಯಾನದಲ್ಲಿ ಸೇರಿಸಲಾಗಿದೆ.
  • ರಾಜಸ್ಥಾನ: ಇಂದು ಬೆಳಿಗ್ಗೆ 173 ಹೊಸ ಪ್ರಕರಣಗಳ ವರದಿಯೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆಯು 21,577 ಕ್ಕೆ ಏರಿದೆ. ಇಂದು ಅಲ್ವಾರ್ ಜಿಲ್ಲೆ ಗರಿಷ್ಠ  81 ಪ್ರಕರಣಗಳನ್ನುದಾಖಲಿಸಿದ, ಜೈಪುರದಲ್ಲಿ 34 ಪ್ರಕರಣಗಳು ಮತ್ತು ಕೋಟಾದಲ್ಲಿ 12 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ  ಚೇತರಿಕೆಯ ಪ್ರಮಾಣವು 77.43 ಆಗಿದೆ, ಇದು ಎಲ್ಲಾ ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು.
  • ಮಧ್ಯಪ್ರದೇಶ: 343 ಹೊಸ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಒಟ್ಟು ಸಂಖ್ಯೆ  15,627  ಆಗಿದೆ ಎಂದು ವರದಿಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 3,237 ಸಕ್ರಿಯ ಪ್ರಕರಣಗಳಿದ್ದು, 11,768 ರೋಗಿಗಳು ಚೇತರಿಸಿಕೊಂಡಿದ್ದಾರೆ.  ರಾಜ್ಯವು ಇಲ್ಲಿಯವರೆಗೆ 622 ಕೋವಿಡ್-19 ನಿಂದ ಸಾವುಗಳನ್ನು ಕಂಡಿದೆ.
  • ಛತ್ತೀಸ್ಗಢ್ t ರಾಜ್ಯದಲ್ಲಿ ಮಂಗಳವಾರ 99 ಹೊಸ ಪ್ರಕರಣಗಳು ವರದಿಯಾಗಿವೆ, ಇದರಿಂದಾಗಿ  ಒಟ್ಟು ಕೋವಿಡ್-19 ರೋಗಿಗಳ ಸಂಖ್ಯೆಯು 3,415 ಆಗಿದೆ. ಪ್ರಸ್ತುತ ರಾಜ್ಯದಲ್ಲಿ 673 ಸಕ್ರಿಯ ರೋಗಿಗಳಿದ್ದಾರೆ.
  • ಕೇರಳ: ಕರ್ನಾಟಕದ ಹುಬ್ಬಳ್ಳಿಯಿಂದ ನಿನ್ನೆ ಬಂದಿದ್ದ 53 ವರ್ಷದ ಕಾಸರಗೋಡು ಮೂಲದವರು ನಿಧನರಾದ ನಂತರ ರಾಜ್ಯವು ತನ್ನ 29 ನೇ ಕೋವಿಡ್ ಸಾವನ್ನು ಇಂದು ದಾಖಲಿಸಿದೆ. ಏತನ್ಮಧ್ಯೆ, ರಾಜಧಾನಿ ತಿರುವನಂತಪುರಂನ ಹೊರವಲಯದಲ್ಲಿರುವ ಪೂಂಟುರಾದ ಮೀನುಗಾರಿಕಾ ಗ್ರಾಮವು ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ, ಕಳೆದ ಐದು ದಿನಗಳಲ್ಲಿ ಪರೀಕ್ಷಿಸಿದ 600 ಮಾದರಿಗಳಲ್ಲಿ 119ರಲ್ಲಿ ಸೋಂಕು ದೃಢವಾಗಿದೆ. ಕೇರಳ ಮತ್ತು ತಮಿಳುನಾಡಿನ ಮೀನುಗಾರರು ಗಡಿ ದಾಟಲು ತಡೆಯಲು ಕಮಾಂಡೋಗಳನ್ನು ನಿಯೋಜಿಸಿ ಸಮುದ್ರದ ದಳವನ್ನು  ಬಲಪಡಿಸುವುದರೊಂದಿಗೆ ಈ ಪ್ರದೇಶದಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಎರ್ನಾಕುಲಂ ಉಸ್ತುವಾರಿ ಸಚಿವ ವಿ.ಎಸ್. ಸುನಿಲ್ ಕುಮಾರ್ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪೂರ್ವ ಸೂಚನೆ ಇಲ್ಲದೆ ಕೊಚ್ಚಿಯಲ್ಲಿ ಲಾಕ್‌ಡೌನ್ ಅನ್ನು ಕ್ಲ್ಯಾಂಪ್ ಮಾಡಬಹುದು ಎಂದು ಹೇಳಿದ್ದಾರೆ. ಕೋವಿಡ್‌ನಿಂದಾಗಿ ಓಮನ್‌ನಲ್ಲಿ ಮತ್ತೊಬ್ಬ ಕೇರಳೀಯರು ಸಾವನ್ನಪ್ಪಿದರು, ಇದರಿಂದಾಗಿ ಕೊಲ್ಲಿಯಲ್ಲಿ ಸಾವಿನ ಸಂಖ್ಯೆಯು 307 ಕ್ಕೆ ತಲುಪಿದೆ. ಕೇರಳವು ಮಂಗಳವಾರ 272 ಕೋವಿಡ್-19ಪ್ರಕರಣಗಳನ್ನು ದಾಖಲಿಸಿದೆ. 2,411 ರೋಗಿಗಳು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ರಾಜ್ಯದಾದ್ಯಂತ ಒಟ್ಟು 1,86,576 ಜನರು (quarantine) ಸಂಪರ್ಕತಡೆಯಲ್ಲಿದ್ದಾರೆ.
  • ತಮಿಳುನಾಡುಪುದುಚೇರಿಯಲ್ಲಿ ರಾಜ್ ನಿವಾಸ್ 2 ದಿನಗಳ ಕಾಲ ಮುಚ್ಚಲಾಗಿತ್ತು, ಅಲ್ಲಿನ ಜವಾನನಿಗೆ ಸೋಂಕು ದೃಢಪಟ್ಟ ನಂತರ, ಎಲ್ಜಿಯವರನ್ನು ಪರೀಕ್ಷಿಸಲಾಗುವುದು. ಪುದುಚೇರಿ ಅತಿದೊಡ್ಡ ಸೋಂಕಿನ ಪ್ರಕರಣಗಳ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಗಂಟಲು ದ್ರವದ ಸಂಗ್ರಹವನ್ನು ಹೆಚ್ಚಿಸಿದೆ; ಕೇಂದ್ರಾಡಳಿತ ಪ್ರದೇಶದಲ್ಲಿ  ಒಟ್ಟು 111 ಪ್ರಕರಣಗಳಿಂದಾಗಿ ಒಟ್ಟು ಸಂಖ್ಯೆ 1151 ಕ್ಕೆ ಏರಿದೆ ಎಂದು ವರದಿಯಾಗಿದೆ. ರಾಜ್ಯ ವಿದ್ಯುತ್ ಸಚಿವ ಪಿ.ತಂಗಮಣಿಯವರಿಗೆ ಬುಧವಾರ ಕೋವಿಡ್ -19  ಸೋಂಕು ದೃಢಪಟ್ಟಿದೆ. ಉನ್ನತ ಶಿಕ್ಷಣ ಸಚಿವ ಕೆ.ಪಿ.ಅನ್ಬಳಗನ್ ನಂತರ ವೈರಸ್ ಸೋಂಕಿಗೆ ಒಳಗಾದ ಎರಡನೇ ಸಚಿವರು ಇವರು; ಈವರೆಗೆ 10 ಶಾಸಕರು ಸಹ ಸೋಂಕಿಗೆ ಒಳಗಾಗಿದ್ದರು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಜುಲೈ 13 ರಿಂದ ಪ್ರಾರಂಭವಾಗಲಿದೆ ಎಂದು ತಮಿಳು ನಾಡಿನ ಶಿಕ್ಷಣ ಸಚಿವರು ಹೇಳಿದ್ದಾರೆ. 3616 ಹೊಸ ಪ್ರಕರಣಗಳು, 4545 ಚೇತರಿಕೆ ಮತ್ತು 61 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 1,18,594 ಸಕ್ರಿಯ ಪ್ರಕರಣಗಳು: 45,839 ಸಾವುಗಳು: 1571 ಆಸ್ಪತ್ರೆಯಿಂದ ಬಿಡುಗಡೆ: 71,116.  ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 22,374.
  • ಕರ್ನಾಟಕ: ಎಲ್‌ಕೆಜಿಯಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಆನ್‌ಲೈನ್ ತರಗತಿಗಳನ್ನು ನಿಷೇಧಿಸಿರುವುದನ್ನು ಕರ್ನಾಟಕ ಹೈಕೋರ್ಟ್ ತಡೆಹಿಡಿದಿದೆ. ಕೋವಿಡ್-19 ಪ್ರಕರಣಗಳಲ್ಲಿ ಕರ್ನಾಟಕವು 25 ಸಾವಿರ ಸಂಖ್ಯೆಯನ್ನು ದಾಟಿರುವುದರಿಂದ, ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಜ್ಯದ ಕಾರ್ಯತಂತ್ರಗಳ ಬಗ್ಗೆ ವಿವಿಧ ಭಾಗಗಳಿಂದ ಕಳವಳ ವ್ಯಕ್ತಪಡಿಸಲಾಗಿದೆ. ಪರೀಕ್ಷಾ ವಿಳಂಬವನ್ನು ಕಡಿಮೆ ಮಾಡಲು, ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಕ್ಲಸ್ಟರ್‌ಗಳತ್ತ ಗಮನಹರಿಸಲು ಕೇಂದ್ರ ತಂಡ ರಾಜ್ಯ ಸರ್ಕಾರಕ್ಕೆ ಹೇಳುತ್ತಿದೆ. 1498 ಹೊಸ ಪ್ರಕರಣಗಳು, ಆಸ್ಪತ್ರೆಯಿಂದ ಬಿಡುಗಡೆಯಾದವರು   571 ಮತ್ತು 15 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಸೋಂಕಿನ ಪ್ರಕರಣಗಳು: 26,815 ಸಕ್ರಿಯ ಪ್ರಕರಣಗಳು: 15,297 ಸಾವುಗಳು: 416, ಆಸ್ಪತ್ರೆಯಿಂದ ಬಿಡುಗಡೆಯಾದವರು: 11,098. 
  • ಆಂಧ್ರಪ್ರದೇಶ: ಗುಂಟೂರಿನ ಸರ್ಕಾರಿ ವೈದ್ಯರು ಕೋವಿಡ್ -19 ಗೆ ಬಲಿಯಾಗಿದ್ದಾರೆ, ಜಿಲ್ಲೆಯಲ್ಲಿ ಪುರಸಭೆಯ ಆಯುಕ್ತ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ . ಈಗಿರುವ 20 ಸಂಚಾರಿ ಪರೀಕ್ಷಾ ವಾಹನಗಳ ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಲಭ್ಯವಿರುವ 50 ಸಂಚಾರಿ ಪರೀಕ್ಷಾ ವಾಹನಗಳನ್ನು ಸೇರಿಸಲು ರಾಜ್ಯ ಯೋಜಿಸುತ್ತಿದೆ. ಕೋವಿಡ್ ಮುಂಚೂಣಿ ಕಾರ್ಮಿಕರ ವಿರುದ್ಧ ತಾರತಮ್ಯ ಮುಂದುವರೆದಂತೆ, ಸೋಂಕಿತ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದ 10 ನೈರ್ಮಲ್ಯ ಕಾರ್ಮಿಕರಿಗೆ ಶ್ರೀಕಾಕುಲಂ ಜಿಲ್ಲೆಯ ತೆಕ್ಕಳಿ ಗ್ರಾಮದಲ್ಲಿ ತಮ್ಮ ವಾಸಸ್ಥಳಕ್ಕೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ. 27,643 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 1062 ಹೊಸ ಪ್ರಕರಣಗಳು, 1332  ಮತ್ತು 12 ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 22,259, ಸಕ್ರಿಯ ಪ್ರಕರಣಗಳು: 10,894 ಬಿಡುಗಡೆಯಾದವರ ಸಂಖ್ಯೆ: 11,101, ಸಾವು: 264.
  •  ತೆಲಂಗಾಣ: ಶೀಘ್ರ ಪ್ರತಿಜನಕ ಪರೀಕ್ಷೆಗಳನ್ನು (antigen tests) ನಡೆಸುತ್ತಿರುವ ರಾಜ್ಯಗಳ ಪಟ್ಟಿಗೆ ಶೀಘ್ರದಲ್ಲೇ  ತೆಲಂಗಾಣವು ಸೇರಲಿದೆ. ತೆಲಂಗಾಣ ಸರ್ಕಾರ ಒಂದು ಲಕ್ಷಕ್ಕಿಂತ ಹೆಚ್ಚು ಪ್ರತಿಜನಕ ಪರೀಕ್ಷಾ ಕಿಟ್‌ಗಳನ್ನು ಸಂಗ್ರಹಿಸಲು ಸಜ್ಜಾಗಿದೆ. ಆದಾಗ್ಯೂ, ಪ್ರತಿಜನಕ ಪರೀಕ್ಷೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿನ್ನೆ ತನಕ ಒಟ್ಟು ವರದಿಯಾದ ಪ್ರಕರಣಗಳು: 27,612 ;  ಸಕ್ರಿಯ ಪ್ರಕರಣಗಳು: 11,012; ಸಾವುಗಳು: 313 , ಬಿಡುಗಡೆಯಾದವರ ಸಂಖ್ಯೆ: 16,287. 
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಮುಖ್ಯ ಮಂತ್ರಿ ಶ್ರೀ ಪೆಮಾ ಖಂಡು ಅವರು ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಆರೋಗ್ಯ ಸಾಮರ್ಥ್ಯ ಮತ್ತು ಪರೀಕ್ಷೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ರಾಜ್ಯವು ಸಜ್ಜಾಗುತ್ತಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳು ಎನ್‌ಎಚ್‌ಎಂ ಅಡಿಯಲ್ಲಿ ಹೆಚ್ಚುವರಿ 250 ದಾದಿಯರ ಹುದ್ದೆಗಳನ್ನು ಸೃಷ್ಟಿಸಲು ಅನುಮೋದನೆ ನೀಡಿದ್ದಾರೆ.
  • ಮಣಿಪುರ: ಮಣಿಪುರದ ಸಿಎಂ, ಶ್ರೀ ಎನ್ ಬೀರೆನ್ ಸಿಂಗ್ ಅವರು 5 ಪಿಎಚ್‌ಇಡಿ ಯೋಜನೆಗಳು, 1 ಸಿಎಎಫ್ ಮತ್ತು ಪಿಡಿ ಯೋಜನೆ ಮತ್ತು 1 ರಾಪಿಡ್ ಆಂಟಿಜೆನ್ ಪರೀಕ್ಷಾ ಕೇಂದ್ರವನ್ನು ಜಿರಿಬಾಮ್‌ನಲ್ಲಿ ಉದ್ಘಾಟಿಸಿದರು. ಜಿಲ್ಲೆಯ ಕೋವಿಡ್-19 ಸಂಬಂಧಿತ ಸುರಕ್ಷತಾ ಕ್ರಮಗಳ ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಕೋವಿಡ್‍ ಆರೈಕೆ ಕೇಂದ್ರವನ್ನು ಸ್ಥಾಪಿಸಲು ವೈದ್ಯಕೀಯ ವಿಭಾಗದ ಜಂಟಿ ನಿರ್ದೇಶಕರ ನೇತೃತ್ವದ 5 ಸದಸ್ಯರ ವೈದ್ಯರ ತಂಡ ಮಣಿಪುರದ ಜಿರಿಬಾಮ್‌ನಲ್ಲಿದೆ. 
  • ಮೇಘಾಲಯ: ಮೇಘಾಲಯದ ನೈಋತ್ಯ ಗಾರೋ ಬೆಟ್ಟಗಳಿಗೆ ಸೇರಿದ ಇಬ್ಬರು ವ್ಯಕ್ತಿಗಳು ಇಂದು  ಕೋವಿಡ್- 19ರಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ  ಈಗ ಸಕ್ರಿಯ ಪ್ರಕರಣಗಳ ಸಂಖ್ಯೆಯು  52 ಮತ್ತು ಈವರೆಗೆ 45 ಜನರು ಚೇತರಿಸಿಕೊಂಡಿರುವರು.
  • ಮಿಜೋರಾಂ: ಮಿಜೋರಾಂನಲ್ಲಿ ಇನ್ನೂ ಮೂರು ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಈಗ ಒಟ್ಟು 201 ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 58 ಇವೆ,
  • ನಾಗಾಲ್ಯಾಂಡ್: ಪೆರೆನ್ ಜಿಲ್ಲೆಯ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸಾಂಕ್ರಾಮಿಕ ರೋಗವನ್ನು ಸಮುದಾಯ ಮಟ್ಟಕ್ಕೆ ಹರಡದೇ ಇರುವಂತೆ ಪರಿಣಾಮಕಾರಿಯಾದ ಕಾರ್ಯತಂತ್ರವನ್ನು ರೂಪಿಸಲು ನಾಗಾಲ್ಯಾಂಡ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಪರಿಶೀಲನಾ ಸಭೆ ಕರೆದರು. ನಾಗಾಲ್ಯಾಂಡ್‌ನಲ್ಲಿ ಕೋವಿಡ್-19ರ  12 ಹೊಸ ಪ್ರಕರಣಗಳು ದೃಢಪಟ್ಟಿವೆ. ದೃಢಪಟ್ಟ ಪ್ರಕರಣಗಳ ಒಟ್ಟು ಸಂಖ್ಯೆಯು ರಾಜ್ಯದಲ್ಲಿ 656 ಇದ್ದು, ಇದು 356 ಸಕ್ರಿಯ ಪ್ರಕರಣಗಳು ಮತ್ತು 303 ಚೇತರಿಕೆಯ ಪ್ರಕರಣಗಳನ್ನೊಳಗೊಂಡಿದೆ.

***



(Release ID: 1638279) Visitor Counter : 233