PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 03 JUL 2020 6:32PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

Description: Coat of arms of India PNG images free download

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

Description: Image

 

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್ : 60% ದಾಟಿದ ಗುಣಮುಖ ದರ; ದೈನಂದಿನ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಕಳೆದ 24 ಗಂಟೆಗಳಲ್ಲಿ 20,033 ಮಂದಿ ಗುಣಮುಖ; ಸಕ್ರಿಯ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆ 1.5  ಲಕ್ಷ ಹೆಚ್ಚು, 24 ಗಂಟೆಗಳಲ್ಲಿ 2.4 ಲಕ್ಷಕ್ಕೂ ಅಧಿಕ ಪರೀಕ್ಷೆಗಳು

ಕೋವಿಡ್ -19 ಸಿದ್ದತಾ ಸ್ಥಿತಿಯ ಬಗ್ಗೆ ಉನ್ನತ ಮಟ್ಟದ ಪರಾಮರ್ಶನಾ ಸಭೆ ಇಂದು ಸಂಪುಟ ಕಾರ್ಯದರ್ಶಿ ಅವರ ನೇತೃತ್ವದಲ್ಲಿ   ನಡೆಯಿತು. ರಾಜ್ಯಗಳು  ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ಕೋವಿಡ್ -19 ರೋಗಿಗಳಲ್ಲಿ ಗುಣಮುಖ ದರ ಇಂದು 60.73% ಆಗಿದೆ. ಕೋವಿಡ್ -19 ನ್ನು ಸಾಕಷ್ಟು ಮುಂಚಿತವಾಗಿ ಪತ್ತೆ ಹಚ್ಚುವುದರಿಂದಾಗಿ ಮತ್ತು ಸಕಾಲಿಕ ಕ್ಲಿನಿಕಲ್ ನಿರ್ವಹಣೆಯಿಂದಾಗಿ ದೈನಂದಿನ ಗುಣಮುಖ ಮತ್ತು ಚೇತರಿಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಗುಣಮುಖರಾದ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಅವಧಿಯಲ್ಲಿ 20,033 ಕೋವಿಡ್ -19 ರೋಗಿಗಳು ಗುಣಮುಖರಾಗುವುದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ  3,79,891 ಕ್ಕೇರಿದೆ. ಪ್ರಸ್ತುತ 2,27,439 ಸಕ್ರಿಯ ಪ್ರಕರಣಗಳು ಇವೆ. ಮತ್ತು ಅವೆಲ್ಲವೂ ವೈದ್ಯಕೀಯ ನಿಗಾದಲ್ಲಿವೆ. ಇಂದಿನವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಚೇತರಿಸಿಕೊಂಡವರ ಸಂಖ್ಯೆ ಅಧಿಕವಾಗಿದೆ.

ಪ್ರತೀ ದಿನ ಸ್ಯಾಂಪಲ್ ಗಳ ಪರೀಕ್ಷೆಯಲ್ಲಿ ಸತತವಾಗಿ ಹೆಚ್ಚಳವಾಗುತ್ತಿದೆ, ಇದುವರೆಗೆ 93 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2,41,576 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಪರೀಕ್ಷೆ ಮಾಡಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ  92,97,749. ಇದು ಸಾಧ್ಯವಾಗಲು ಮುಖ್ಯ ಕಾರಣ ದೇಶಾದ್ಯಂತ ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ವಿಸ್ತರಣೆ ಮಾಡಿರುವುದು. ಸರಕಾರಿ ವಲಯದಲ್ಲಿ 775 ಪ್ರಯೋಗಾಲಯಗಳು ಮತ್ತು ಖಾಸಗಿ ವಲಯದಲ್ಲಿ 299 ಪ್ರಯೋಗಾಲಯಗಳು ಕಾರ್ಯನಿರತವಾಗಿದ್ದು ಒಟ್ಟು ಸಂಖ್ಯೆ 1074 ಆಗಿದೆ.

ವಿವರಗಳಿಗೆ; https://www.pib.gov.in/PressReleseDetail.aspx?PRID=1636094

ರಾಜ್ಯಗಳಿಗೆ ಕೇಂದ್ರ ಸರಕಾರದಿಂದ 2 ಕೋಟಿಗೂ ಅಧಿಕ ಎನ್ 95 ಮುಖಗವಸುಗಳು ಮತ್ತು 1 ಕೋಟಿಗೂ ಅಧಿಕ ಪಿ.ಪಿ.. ಗಳ ಉಚಿತ ವಿತರಣೆ

ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡಲು ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದರಲ್ಲಿ  ಕೇಂದ್ರ ಸರಕಾರ ಪ್ರಧಾನ ಪಾತ್ರವಹಿಸಿದೆ. 2020 ಏಪ್ರಿಲ್ 1 ರಿಂದ ಕೇಂದ್ರವು 2.02 ಕೋಟಿಗೂ ಅಧಿಕ ಎನ್.95  ಮುಖಗವಸುಗಳನ್ನು ಮತ್ತು 1.18  ಕೋಟಿ ಪಿ.ಪಿ.. ಕಿಟ್ ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು/ ಕೇಂದ್ರೀಯ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಿದೆ. 6.12  ಕೋಟಿ ಎಚ್.ಸಿ.ಕ್ಯು. ಮಾತ್ರೆಗಳನ್ನು ಕೂಡಾ ಅವುಗಳಿಗೆ ವಿತರಿಸಲಾಗಿದೆ. ಇದರ ಜೊತೆ ಇದುವರೆಗೆ 11,300 ’ಮೇಕ್ ಇನ್ ಇಂಡಿಯಾವೆಂಟಿಲೇಟರುಗಳನ್ನು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಇವುಗಳಲ್ಲಿ 6154 ವೆಂಟಿಲೇಟರುಗಳನ್ನು ಈಗಾಗಲೇ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಇದರಿಂದ ಕೋವಿಡ್ .ಸಿ.ಯು. ಸೌಲಭ್ಯಗಳಲ್ಲಿ ವೆಂಟಿಲೇಟರುಗಳ ಲಭ್ಯತೆಗೆ ಸಂಬಂಧಿಸಿ ಇರುವ ಭಾರೀ ಅಂತರವು ನಿವಾರಣೆ ಮಾಡಲು ಸಹಾಯವಾಗಲಿದೆ. ಎಂ..ಎಚ್.ಎಫ್.ಡಬ್ಲ್ಯು. 1.02 ಲಕ್ಷ  ಆಮ್ಲಜನಕ ಸಿಲಿಂಡರುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಿದೆ. ಇವುಗಳಲ್ಲಿ 72,293 ಸಿಲಿಂಡರುಗಳನ್ನು ಈಗಾಗಲೇ ಆಮ್ಲಜನಕ ಹಾಸಿಗೆಗಳ ಸಂಖ್ಯೆಯನ್ನು ಬಲಪಡಿಸಲು ಪೂರೈಸಲಾಗಿದೆ. ಇದುವರೆಗೆ 7.81 ಲಕ್ಷ ಪಿ.ಪಿ.. ಗಳನ್ನು ಮತ್ತು 12.76 ಲಕ್ಷ ಎನ್-95 ಮುಖಗವಸುಗಳನ್ನು ದಿಲ್ಲಿಯಲ್ಲಿ ಪೂರೈಸಲಾಗಿದೆ. 11.78 ಲಕ್ಷ ಪಿ.ಪಿ.. ಗಳನ್ನು ಮತ್ತು 20.64 ಲಕ್ಷ ಎನ್ 95 ಮುಖಗವಸುಗಳನ್ನು ಮಹಾರಾಷ್ಟ್ರಕ್ಕೆ ಹಾಗು 5.39 ಲಕ್ಷ ಪಿ.ಪಿ.. ಗಳು ಮತ್ತು 9.81 ಲಕ್ಷ ಎನ್ 95 ಮುಖಗವಸುಗಳನ್ನು ತಮಿಳುನಾಡಿಗೆ ಎಂ.. ಎಚ್.ಎಫ್. ಡಬ್ಲ್ಯು. ಮೂಲಕ ಒದಗಿಸಲಾಗಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1636094

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆ 20 ಲಕ್ಷ ತೆರಿಗೆದಾತರ 62,361  ಕೋ.ರೂ.ಗಳನ್ನು ಮರುಪಾವತಿ ಮಾಡಿದ ಆದಾಯ ತೆರಿಗೆ ಇಲಾಖೆ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ತೆರಿಗೆದಾರರಿಗೆ ಸಹಾಯ ಮಾಡಲು ಬಾಕಿ ಇರುವ ಆದಾಯ ತೆರಿಗೆ ಮರುಪಾವತಿಗಳನ್ನು ಬಿಡುಗಡೆ ಮಾಡುವ ಸರಕಾರದ ನಿಲುವಿನ ಅಂಗವಾಗಿ , ಆದಾಯ ತೆರಿಗೆ ಇಲಾಖೆಯು ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸಿದ್ದು, 2020 ಏಪ್ರಿಲ್ 8 ರಿಂದ ಜೂನ್ 30 ರವರೆಗೆ ನಿಮಿಷಕ್ಕೆ 76 ಪ್ರಕರಣಗಳಂತೆ ಇತ್ಯರ್ಥಪಡಿಸಿ ತೆರಿಗೆ ಮರುಪಾವತಿಯನ್ನು ಮಾಡಿದೆ. ಅವಧಿಯಲ್ಲಿ ಬರೇ 56 ದಿನಗಳಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು 20.44 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ 62,361 ಕೋ.ರೂ.ಗಳಿಗೂ ಅಧಿಕ ಮೊತ್ತದ ಮರು ಪಾವತಿಯನ್ನು ಮಾಡಿದೆ. ಆದಾಯ ತೆರಿಗೆ ಇಲಾಖೆಯ ಮುಖದ ಅನುಭವವೂ ತೆರಿಗೆದಾರರಿಗೆ ಆಗುತ್ತಿದ್ದು, ಇಲಾಖೆ ತೆರಿಗೆದಾರ ಸ್ನೇಹಿ ಆಗುತ್ತಿರುವುದು ಮಾತ್ರವಲ್ಲದೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಠಿಣ ಸಂದರ್ಭದಲ್ಲಿ ನಗದು ಒದಗಿಸುತ್ತಿರುವ ಸೌಲಭ್ಯ ಒದಗಣೆದಾರನಾಗಿಯೂ ಕಾರ್ಯನಿರ್ವಹಿಸಿದೆ. 19,07,853 ಪ್ರಕರಣಗಳಲ್ಲಿ 23,453.57 ಕೋ.ರೂ.ಗಳ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆಮತ್ತು 1,36,744 ಪ್ರಕರಣಗಳಲ್ಲಿ 38,908.37 ಕೋ.ರೂ.ಗಳ ಮೊತ್ತದ ಸಾಂಸ್ಥಿಕ ತೆರಿಗೆ ಮರುಪಾವತಿಯನ್ನು ಅವಧಿಯಲ್ಲಿ ಮಾಡಲಾಗಿದೆ.

ವಿವರಗಳಿಗೆ: https://www.pib.gov.in/PressReleseDetail.aspx?PRID=1636095

ರಾಷ್ಟ್ರೀಯ ರಾಜಧಾನಿ ವಲಯಕ್ಕೆ ಏಕೀಕೃತ ಕೋವಿಡ್ 19 ವ್ಯೂಹಕ್ಕೆ ಸಂಬಂಧಿಸಿ ದಿಲ್ಲಿ, ಹರ್ಯಾಣಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವರ ಸಭೆ

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ದಿಲ್ಲಿ, ಹರ್ಯಾಣಾ ಮತ್ತು ಉತ್ತರ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ನಿನ್ನೆ ರಾಷ್ಟ್ರೀಯ ರಾಜಧಾನಿ ವಲಯ (ಎನ್.ಸಿ.ಆರ್.) ದಲ್ಲಿ ಏಕೀಕೃತ ಕೋವಿಡ್ -19 ವ್ಯೂಹಕ್ಕಾಗಿ ಸಭೆ ನಡೆಸಿದರು. ಕೋವಿಡ್ -19 ಸಂಶಯಿತರ ಬಗ್ಗೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕಾದ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಮತ್ತು ಮೂಲಕ ಎನ್.ಸಿ.ಆರ್. ವಲಯದಲ್ಲಿ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಬಹುದೆಂದರು. ತ್ವರಿತ ಆಂಟಿಜೆನ್ ಪರೀಕ್ಷಾ ಕಿಟ್ ಗಳ ಮೂಲಕ ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ಮಾಡಿದಂತೆ ಸೋಂಕಿನ ಹರಡುವಿಕೆಯನ್ನು 10% ಗಿಂತ ಕಡಿಮೆ ಮಾಡಲು ಸಾಧ್ಯವಿದೆ ಎಂದರು. ಬಡವರ ಜೀವವನ್ನು ಉಳಿಸುವಲ್ಲಿ ಮಾನವೀಯ ಧೋರಣೆ ಅನುಸರಿಸುವಂತೆ ಕರೆ ನೀಡಿದ ಅವರು ರೋಗಿಗಳನ್ನು ಸಾಕಷ್ಟು ಮುಂಚಿತವಾಗಿ ಆಸ್ಪತ್ರೆಗಳಿಗೆ ಸೇರಿಸುವುದಕ್ಕೆ ಆದ್ಯತೆ ನೀಡಬೇಕೆಂದರು. ಇದರಿಂದ ಸಾವುಗಳ ಸಂಖ್ಯೆ ನಿಯಂತ್ರಿಸಬಹುದು ಎಂದೂ ಅವರು ಹೇಳಿದರು. ಎನ್.ಸಿ.ಆರ್. ನಲ್ಲಿ ಕೋವಿಡ್ -19 ಮ್ಯಾಪಿಂಗ್ ಗಾಗಿ ಆರೋಗ್ಯ ಸೇತು ಮತ್ತು ಇತಿಹಾಸ್ ಆಪ್ ಗಳನ್ನು ವ್ಯಾಪಕವಾಗಿ ಬಳಸುವಂತೆ  ಸಲಹೆ ಮಾಡಿದ ಅವರು ...ಎಂ.ಎಸ್. ದಿಲ್ಲಿಯು ಅಳವಡಿಸಿಕೊಂಡಿರುವ ಕೋವಿಡ್ ರೋಗಿಗಳಿಗಾಗಿರುವ ಟೆಲಿ ವೈದ್ಯಕೀಯ ಸಲಹಾ ಮಾದರಿಯನ್ನು  ಉತ್ತರ ಪ್ರದೇಶ ಮತ್ತು ಹರ್ಯಾಣಾಗಳು ಕೂಡಾ ಅನುಸರಿಸಬೇಕು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಮತ್ತು ಭಾರತ ಸರಕಾರ , ಉತ್ತರ ಪ್ರದೇಶ, ಹರ್ಯಾಣಾ ಮತ್ತು ದಿಲ್ಲಿ ಸರಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1635978

ಕರ್ನಾಟಕದಲ್ಲಿ ಅಪಾಯ ಸಂಭಾವ್ಯತೆ ನಕ್ಷೆಯಲ್ಲಿ 42,000 ಆಶಾ ಕಾರ್ಯಕರ್ತೆಯರಿಂದ 1.59 ಕೋಟಿ ಮನೆಗಳ ಸಮೀಕ್ಷೆ

ರಾಜ್ಯದ ಕೋವಿಡ್ -19  ವಿರುದ್ದದ  ಹೋರಾಟದಲ್ಲಿ ಕರ್ನಾಟಕದ ಯಶೋಗಾಥೆಯಲ್ಲಿ 42,000 ಆಶಾ ಕಾರ್ಯಕರ್ತೆಯರು  ನಿರ್ಣಾಯಕ ಪಾತ್ರವಹಿಸಿದ್ದಾರೆ. ಅವರು ಕೋವಿಡ್ -19 ಮನೆ ಮನೆ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮತ್ತು ಅಂತರರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು, ಮತ್ತು ಸಮುದಾಯದಲ್ಲಿರುವ ಇತರರನ್ನು ಕೋವಿಡ್ -19 ರೋಗ ಲಕ್ಷಣಗಳಿಗಾಗಿ ತಪಾಸಣೆ ಮಾಡಿದ್ದಾರೆ. ಕೆಲವು ನಿರ್ದಿಷ್ಟ ಜನಸಮುದಾಯಗಳು ಕೋವಿಡ್ -19 ಕ್ಕೆ ತುತ್ತಾಗುವ ಸಂಭಾವ್ಯ ಅಪಾಯದ ಬಗ್ಗೆ ಹಿನ್ನೆಲೆಯಲ್ಲಿ ಹಿರಿಯರು, ಇತರ ಖಾಯಿಲೆಗಳಿಂದ ಬಳಲುತ್ತಿರುವವರು ಮತ್ತು ರೋಗ ನಿರೋಧಕ ಶಕ್ತಿ ಇಲ್ಲದೆ ಬಳಲುತ್ತಿರುವವರನ್ನು ಗುರುತಿಸಲು ಸುಮಾರು 1.59 ಕೋಟಿ ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಇಂತಹ ಅತ್ಯಂತ ಅಪಾಯ ಸಂಭಾವ್ಯತೆ ಇರುವ ಗುಂಪುಗಳ ಮೇಲೆ  ನಿಯಮಿತವಾಗಿ  ನಿಗಾ ಇಟ್ಟಿದ್ದು, ಕಾಲ ಕಾಲಕ್ಕೆ ಹಿಮ್ಮಾಹಿತಿಗಾಗಿ ಕಂಟೈನ್ ಮೆಂಟ್ ವಲಯಗಳಲ್ಲಾದರೆ ದಿನಕ್ಕೊಂದು ಬಾರಿ ಮತ್ತು ಇತರ ಪ್ರದೇಶಗಳಲ್ಲಾದರೆ 15 ದಿನಗಳಿಗೊಂದು ಬಾರಿ ಭೇಟಿ ನೀಡುತ್ತಾರೆ. .ಎಲ್../ ಸಾರಿ ರೋಗ ಲಕ್ಷಣಗಳ ದೂರು ಇರುವಲ್ಲಿಗೆ ಮತ್ತು ರಾಜ್ಯ ಸಹಾಯ ವಾಣಿ ಸಂಖ್ಯೆಗಳಿಗೆ ಕರೆ ಮಾಡಿದ ಸಂಭಾವ್ಯ ಗಂಭೀರ ಅಪಾಯದಲ್ಲಿರುವ ವ್ಯಕ್ತಿಗಳ ಮನೆಗಳಿಗೂ ಭೇಟಿ ನೀಡುತ್ತಾರೆ

ವಿವರಗಳಿಗೆ: https://pib.gov.in/PressReleasePage.aspx?PRID=1636106

ಜಲ್ ಜೀವನ್ ಆಂದೋಲನ : ಲಾಕ್ ಡೌನ್ ಅವಧಿಯಲ್ಲಿ 19 ಲಕ್ಷ ಮನೆಗಳಿಗೆ ನಳ್ಳಿ ನೀರು ಸಂಪರ್ಕ

ಇಡೀ ದೇಶವೇ ಕೋವಿಡ್ -19 ವಿರುದ್ದ ಹೋರಾಟದಲ್ಲಿ ನಿರತವಾಗಿರುವಾಗ, ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಗ್ರಾಮೀಣ ಮನೆಗಳಲ್ಲಿ ಅದು ನಳ್ಳಿ ನೀರಿನ ಸಂಪರ್ಕವನ್ನು ಒದಗಿಸಿದೆ. ಇದರಿಂದಾಗಿ ಜಲ್ ಜೀವನ್ ಆಂದೋಲನ (ಜೆ.ಜೆ.ಎಂ.) ಯೋಜನೆ ಅಡಿಯಲ್ಲಿ ಜನರಿಗೆ ಅವರ ಆವರಣದಲ್ಲಿಯೇ ನೀರು ಲಭ್ಯವಾಗುವಂತಾಗಿದೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನೀರು ಹಿಡಿಯಲು ಗುಂಪುಗೂಡುವುದು ತಪ್ಪಿದಂತಾಗಿದೆ. ಹಾಗು ಸ್ಥಳೀಯರಿಗೆ ಉದ್ಯೋಗ ಲಭಿಸಿದಂತಾಗಿದೆ. ಇದು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲಿದೆ. 2020-21 ಮೊದಲ ತ್ರೈಮಾಸಿಕದಲ್ಲಿ ದೇಶಾದ್ಯಂತ ಗ್ರಾಮಗಳಲ್ಲಿ 19 ಲಕ್ಷ ನಳ್ಳಿ ನೀರು ಸಂಪರ್ಕಗಳನ್ನು ಒದಗಿಸಲಾಗಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ  ಕೆಲಸಕ್ಕೆ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ರಾಜ್ಯಗಳ ಪ್ರಯತ್ನಗಳ ಫಲವಾಗಿ ಇದು ಸಾಧ್ಯವಾಗಿದೆ. ಆಂದೋಲನವನ್ನು ರಾಜ್ಯಗಳ ಸಹಭಾಗಿತ್ವದಲ್ಲಿ ಅನುಷ್ಟಾನಿಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1635954

ಪ್ರಾಥಮಿಕ ಹಂತಕ್ಕೆ 8 ವಾರಗಳ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಎಚ್.ಆರ್.ಡಿ. ಸಚಿವರು

ಕೋವಿಡ್ -19 ಅವಧಿಯಲ್ಲಿ ಮನೆಗಳಲ್ಲಿರುವ ವಿದ್ಯಾರ್ಥಿಗಳನ್ನು ಅವರ ಪೋಷಕರು ಮತ್ತು ಶಿಕ್ಷಕರ ಸಹಾಯದೊಂದಿಗೆ  ಶೈಕ್ಷಣಿಕ ಚಟುವಟಿಕೆಗಳಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಾಥಮಿಕ ಮತ್ತು ಮೇಲ್ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಎಂ.ಎಚ್.ಆರ್.ಡಿ. ಮಾರ್ಗದರ್ಶನದಡಿಯಲ್ಲಿ ಎನ್.ಸಿ..ಆರ್.ಟಿ.ಯು ಅಭಿವೃದ್ದಿಪಡಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ಶ್ರೀ ರಮೇಶ ಪೋಖ್ರಿಯಾಲ್ ನಿಶಾಂಕ್ ಅವರು ಪ್ರಾಥಮಿಕ ಹಂತದ 8 ವಾರಗಳ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದರು. ಸಂದರ್ಭದಲ್ಲಿ  ಮಾತನಾಡಿದ ಸಚಿವರು ವೇಳಾಪಟ್ಟಿಯು ಶಿಕ್ಷಕರಿಗೆ ವಿನೋದ ಭರಿತ ಮತ್ತು ಆಸಕ್ತಿಕರವಾಗಿ ಶಿಕ್ಷಣವನ್ನು ಒದಗಿಸಲು ಲಭ್ಯ ಇರುವ ಹಾಗು ಕಲಿಕಾದಾರರು, ಪೋಷಕರು ಮತ್ತು ಶಿಕ್ಷಕರು ಮನೆಯಲ್ಲಿದ್ದಾಗಲೂ  ವಿವಿಧ ತಂತ್ರಜ್ಞಾನ ಸಲಕರಣೆಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಸಲಕರಣೆಗಳನ್ನು ಬಳಸಿ ಶಿಕ್ಷಣ ಒದಗಿಸುವುದಕ್ಕೆ ಮಾರ್ಗದರ್ಶಿಗಳನ್ನು ಒದಗಿಸುತ್ತದೆ ಎಂದರು.

ವಿವರಗಳಿಗೆ: https://www.pib.gov.in/PressReleseDetail.aspx?PRID=1635949

ಆತ್ಮನಿರ್ಭರ ಭಾರತ ಸಾಧಿಸಲು ಕೋವಿಡ್ -19  ಒಂದು ಸ್ಪಷ್ಟ , ಗಟ್ಟಿ ಧ್ವನಿಯ ಕರೆಯಾಗಿ ಕಾರ್ಯ ನಿರ್ವಹಿಸಲಿದೆ , ಎಂದಿದ್ದಾರೆ ಡಾ. ರಘುನಾಥ ಮಾಶೇಲ್ಕರ್

ಆತ್ಮನಿರ್ಭರ ಭಾರತವನ್ನು ಸಾಧಿಸಲು ಕೋವಿಡ್ -19 ದೇಶದಲ್ಲಿಯ ಪ್ರತಿಯೊಬ್ಬರಿಗೂ ಮರು ನಿರ್ಮಾಣ, ಚೇತರಿಕೆ ಮತ್ತು ತಮ್ಮನ್ನು ತಾವೇ ಮರು ಕಲ್ಪಿಸಿಕೊಳ್ಳಲು ಒಂದು ಸ್ಪಷ್ಟ ಮತ್ತು ಗಟ್ಟಿ ಧ್ವನಿಯ ಕರೆಯನ್ನು ನೀಡಿದೆ ಎಂದು ಪದ್ಮ ವಿಭೂಷಣ ಡಾ. ರಘುನಾಥ ಅನಂತ ಮಾಶೇಲ್ಕರ್ ಹೇಳಿದ್ದಾರೆ. “ಆತ್ಮವಿಶ್ವಾಸದೊಂದಿಗೆ ಆತ್ಮನಿರ್ಭರ ಭಾರತ ನಿರ್ಮಾಣಕುರಿತಂತೆ ಉಪನ್ಯಾಸ ನೀಡಿದ ಅವರು ಸ್ವಾವಲಂಬನೆ ಅಥವಾ ಆತ್ಮನಿರ್ಭರ ಭಾರತ ಸಾಧಿಸುವ ನಮ್ಮ ಪ್ರಯತ್ನದಲ್ಲಿ ನಾವು ವಿಶ್ವದಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳಲಾಗದು, ಬದಲು ಜಾಗತಿಕ ಪೂರೈಕೆ ಸರಪಳಿಯ ಜೊತೆ ಸಂಯೋಜನೆಗೊಳ್ಳಬೇಕು ಎಂದರು. ಖರೀದಿ, ಉತ್ಪಾದನೆ, ಉತ್ತಮವಾಗಿಸುವುದಕ್ಕಾಗಿ ಖರೀದಿ, ಉತ್ತಮ ಖರೀದಿಗಾಗಿ ಉತ್ತಮ ಉತ್ಪಾದನೆಗಳು  ಮತ್ತು ಒಟ್ಟಾಗಿ ಉತ್ಪಾದನೆ (ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳ ನಿರ್ಮಾಣ) ಎಂಬ ಆತ್ಮನಿರ್ಭರ ಭಾರತ ಐದು ಸ್ತಂಭಗಳ ಬಗ್ಗೆ ಅವರು ಹೆಚ್ಚು ಒತ್ತು ನೀಡಿ ಮಾತನಾಡಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1636108

ಕೇಂದ್ರೀಯ ಸಂರಕ್ಷಿತ ಎಲ್ಲಾ .ಎಸ್.. ಸ್ಮಾರಕಗಳು 2020 ಜುಲೈ 6 ರಿಂದ ತೆರೆಯಲ್ಪಡಲಿವೆ: ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್

ಸಂಸ್ಕೃತಿ ಮತ್ತು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ (.ಎಸ್..) ಸಚಿವಾಲಯವು ಎಲ್ಲಾ ಕೇಂದ್ರೀಯ ಸಂರಕ್ಷಿತ ಸ್ಮಾರಕಗಳನ್ನು ಎಲ್ಲಾ ಸುರಕ್ಷಾ ಶಿಷ್ಟಾಚಾರಗಳನ್ನು ಅನುಸರಿಸಿಕೊಂಡು 2020 ಜುಲೈ 6 ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆಯಲು ನಿರ್ಧರಿಸಿದೆ ಎಂದು  ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ (ಪ್ರಭಾರ) ಸಹಾಯಕ ಸಚಿವರಾದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಹೇಳಿದ್ದಾರೆ. ಕಂಟೈನ್ ಮೆಂಟ್ ವಲಯದ ಹೊರಗಿರುವ ಸ್ಮಾರಕಗಳು/ ವಸ್ತು ಸಂಗ್ರಹಾಲಯಗಳು ಸಂದರ್ಶಕರಿಗೆ ತೆರೆದಿರುತ್ತವೆ ಎಂದವರು ತಿಳಿಸಿದ್ದಾರೆ. ಎಲ್ಲಾ ಕೇಂದ್ರೀಯ ಸಂರಕ್ಷಿತ ಸ್ಮಾರಕಗಳು ಮತ್ತು ನಿವೇಶನಗಳು ಸ್ಯಾನಿಟೈಸೇಶನ್ , ಸಾಮಾಜಿಕ ಅಂತರ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಸಚಿವಾಲಯಗಳು ಹೊರಡಿಸಿದ ಇತರ ಆರೋಗ್ಯ ಶಿಷ್ಟಾಚಾರಗಳನ್ನು ಅನುಷ್ಟಾನಿಸಲು ಬದ್ದವಾಗಿರುತ್ತವೆ. ರಾಜ್ಯಗಳು ಅಥವಾ ಜಿಲ್ಲಾ ಆಡಳಿತಗಳು ನೀಡುವ ಯಾವುದೇ ನಿರ್ದಿಷ್ಟ ಆದೇಶಗಳನ್ನು ಕೂಡಾ ಕಟ್ಟು ನಿಟ್ಟಾಗಿ ಅನುಷ್ಟಾನಿಸಲಾಗುವುದು. ಎಂದವರು ಹೇಳಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1636161

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ರಾಜ್ಯವು ರಾಜಧಾನಿ ತಿರುವನಂತಪುರಂ ಜಿಲ್ಲೆಯಲ್ಲಿ ಶೀಘ್ರವೇ ಆಂಟಿಜೆನ್ ಪರೀಕ್ಷೆಯನ್ನು ಆರಂಭಿಸಲಿದೆ. ಸಾಕ್ಷ್ಯಾಧಾರಗಳಿಲ್ಲದ ರೀತಿಯಲ್ಲಿರುವ ಕೋವಿಡ್ -19 ಪ್ರಕರಣಗಳನ್ನು ನಿಭಾಯಿಸಲು ಕ್ರಮ ಅನುಸರಿಸಲಾಗುತ್ತಿದೆ. ನಗರದಲ್ಲಿಯ 18 ವಾರ್ಡ್ ಗಳನ್ನು ಕಂಟೈನ್ ಮೆಂಟ್  ವಲಯಗಳನ್ನಾಗಿ ಘೋಷಿಸಲಾಗಿದೆ. ಇಬ್ಬರು ಸಿಬ್ಬಂದಿಗಳಲ್ಲಿ  ವೈರಸ್ ಪಾಸಿಟಿವ್ ಆಗಿರುವ ಕಾರಣದಿಂದ ವಿ.ಎಸ್.ಎಸ್.ಸಿ. ಯಲ್ಲಿ ಇನ್ನಷ್ಟು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು. ಓರ್ವ ನನ್ ಸೇರಿದಂತೆ ಆರು ಮಂದಿ ಕೇರಳೀಯರು ರಾಜ್ಯದಿಂದ ಹೊರಗೆ ಮೃತಪಟ್ಟಿದ್ದಾರೆ. ನಿನ್ನೆ ಕೋವಿಡ್ ನಿಂದ ಗುಣಮುಖರಾದವರ ಸಂಖ್ಯೆ ಹೊಸದಾಗಿ ವೈರಸ್ ಬಾಧಿತರಾದವರ ಸಂಖ್ಯೆಗಿಂತ ಹೆಚ್ಚಾಗಿದೆ. 202 ಮಂದಿ ಗುಣಮುಖರಾಗಿದ್ದರೆ,160 ಹೊಸ ಪ್ರಕರಣಗಳು ವರದಿಯಾಗಿವೆ. ವಿವಿಧ ಜಿಲ್ಲೆಗಳಲ್ಲಿ 2,088 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ 93 ವರ್ಷದ ಮಹಿಳೆ ಕೋವಿಡ್ -19 ರಿಂದಾಗಿ ಮೃತಪಟ್ಟಿದ್ದಾರೆ. 24 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 824 ಕ್ಕೇರಿದೆ. ಹೊಸ ಪ್ರಕರಣಗಳಲ್ಲಿ 23 ಪುದುಚೇರಿಯಲ್ಲಿ ವರದಿಯಾಗಿದ್ದರೆ ಒಂದು ಪ್ರಕರಣ ಕರೈಕಲ್ ನಿಂದ ವರದಿಯಾಗಿದೆ. ಮಧುರೈ ಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಏರಿಕೆಯಾಗುತ್ತಿದೆ. ಗಂಭೀರವಲ್ಲದ ರೋಗ ಲಕ್ಷಣಗಳಿರುವ ರೋಗಿಗಳನ್ನು ಗೃಹ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ. ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನದಲ್ಲಿ ಗರಿಷ್ಟ ಪ್ರಮಾಣದ ಅಂದರೆ 4,343 ಪ್ರಕರಣಗಳು ವರದಿಯಾಗಿವೆ ಮತ್ತು 57 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 2027 ಹೊಸ ಪ್ರಕರಣಗಳು ಚೆನೈಯೊಂದರಲ್ಲಿಯೇ ವರದಿಯಾಗಿವೆ. ರಾಜ್ಯದಲ್ಲಿ ಕೋವಿಡ್ ಬಾಧಿತರ ಒಟ್ಟು ಸಂಖ್ಯೆ ಈಗ 98,392 . ಅದರಲ್ಲಿ 41047  ಪ್ರಕರಣಗಳು ಸಕ್ರಿಯ ಪ್ರಕರಣಗಳು. ಜಾಗತಿಕ ಸಾಂಕ್ರಾಮಿಕಕ್ಕೆ ಇದುವರೆಗೆ ಒಟ್ಟು 1321 ಮಂದಿ ಬಲಿಯಾಗಿದ್ದಾರೆ.
  • ಕರ್ನಾಟಕ: ರಾಜ್ಯ ಸರಕಾರದ ಹೊಸ ಮಾರ್ಗದರ್ಶಿಗಳ ಪ್ರಕಾರ ರೋಗ ಲಕ್ಷಣ ತೋರ್ಪಡಿಸದ ಕೋವಿಡ್ -19 ರೋಗಿಗಳು ಅವರು 50 ವರ್ಷಕ್ಕಿಂತ ಕೆಳಗಿನವರಾಗಿದ್ದರೆ ಹಾಗು ಆಮ್ಲಜನಕ   ಶುದ್ದತ್ವ  ಪ್ರಮಾಣ 95  ಶೇಕಡಾದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದರೆ ಅವರನ್ನು ಗೃಹ ಕ್ವಾರಂಟೈನಿನಲ್ಲಿಡಲಾಗುತ್ತದೆ. ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಮಂಡಿಸಿರುವ ಬೇಡಿಕೆಯನ್ನು ಈಡೇರಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಪ್ರತಿಭಟಿಸಿ ಜುಲೈ 8 ರಿಂದ ಮುಷ್ಕರ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುತ್ತಿಗೆ ವೈದ್ಯರು ಹಾಕಿರುವ ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಗುರುವಾರದಂದು ಅವರ ವೇತನವನ್ನು ತಿಂಗಳೊಂದರ 45,000 ರೂಪಾಯಿಗಳಿಂದ 60,000 ರೂ. ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ನಿನ್ನೆ 1502 ಹೊಸ ಪ್ರಕರಣಗಳು, 271 ಬಿಡುಗಡೆಗಳು, ಮತ್ತು 19 ಸಾವುಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 18,016, ಸಕ್ರಿಯ ಪ್ರಕರಣಗಳು: 9406, ಸಾವುಗಳು: 272. 
  • ಆಂಧ್ರ ಪ್ರದೇಶ: .ಸಿ.ಎಂ.ಆರ್. ಮತ್ತು ಭಾರತ್ ಬಯೋಟೆಕ್ ಇಂಟರ್ ನ್ಯಾಶನಲ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ದಿಪಡಿಸಿದ ದೇಶೀಯ ಕೋವಿಡ್-19 (ಬಿ.ಬಿ.ವಿ. 152 ಕೋವಿಡ್ ಲಸಿಕೆ) ಲಸಿಕೆಯ ಕ್ಲಿನಿಕಲ್ ಪರೀಕ್ಷೆಗಾಗಿ .ಸಿ.ಎಮ್.ಆರ್. 12 ಕೆಂದ್ರಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆ ಒಂದಾಗಿದೆ. ಲಸಿಕೆಯನ್ನು ಎಲ್ಲಾ ಕ್ಲಿನಿಕಲ್ ಪರೀಕ್ಷೆಗಳನ್ನು ಪೂರೈಸಿದ ಬಳಿಕ , 2020 ಆಗಸ್ಟ್ 15 ರಂದು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಬಿಡುಗಡೆ ಮಾಡುವ ಯೋಜನೆ ಇದೆ. ಡಿಸಿಲ್ ಲೋಕೋ ಶೆಡ್ , ವಿಶಾಖಪಟ್ಟಣಂ ಸಂಸ್ಥೆಯು ಕರೆನ್ಸಿ ನೋಟುಗಳು, ಪೇಪರುಗಳು, ಮತ್ತು ಸಲಕರಣೆಗಳನ್ನು ಕ್ರಿಮಿಮುಕ್ತಗೊಳಿಸಲು  ಅಲ್ಟ್ರಾವಾಯ್ಲೆಟ್  ವಿಕಿರಣ ಆಧಾರಿತ ಕ್ರಿಮಿನಾಶಕವನ್ನು ರೂಪಿಸಿದೆ. ಉಪಕರಣವು  ಕ್ರಿಮಿನಾಶಕ ಅಲ್ಟ್ರಾವಾಯ್ಲೆಟ್ ಬೆಳಕನ್ನು ಹೊರ ಸೂಸುವ ಮೂಲಕ 99.9 ಪತಿಶತ ವೈರಸ್ ಗಳನ್ನು, ವಾಯುವಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಬಲ್ಲುದು. ಕಳೆದ 24 ಗಂಟೆಗಳಲ್ಲಿ 38,898  ಸ್ಯಾಂಪಲ್ ಗಳ ಪರೀಕ್ಷೆಯ ಬಳಿಕ 837 ಹೊಸ ಪ್ರಕರಣಗಳು ವರದಿಯಾಗಿವೆ , 258 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಮತ್ತು ಐದು ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. 837 ಪ್ರಕರಣಗಳ ಪೈಕಿ 46 ಪ್ರಕರಣಗಳು ಅಂತಾರಾಜ್ಯದವು ಮತ್ತು ಎರಡು ಪ್ರಕರಣಗಳು ವಿದೇಶದವು. ಒಟ್ಟು ಪ್ರಕರಣಗಳು 16,934 . ಸಕ್ರಿಯ ಪ್ರಕರಣಗಳು 9096, ಗುಣಮುಖರಾಗಿ ಬಿಡುಗಡೆಯಾದವರು 7632, ಸಾವುಗಳು: 206.
  • ತೆಲಂಗಾಣ: ರಾಜ್ಯದಲ್ಲಿ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳ ವ್ಯವಸ್ಥೆಯನ್ನು ಜಾರಿಗೆ ತರುವ ಯಾವುದೇ ಯೋಜನೆ ಇಲ್ಲವೆಂದು ರಾಜ್ಯ ಸರಕಾರವು ಹೈಕೋರ್ಟಿಗೆ ತಿಳಿಸಿದೆ ಮತ್ತು ಆರ್.ಟಿ.-ಪಿ.ಸಿ.ಆರ್. ಪರೀಕ್ಷೆಗಳು ಹೆಚ್ಚು ನಿಖರವಾಗಿರುವುದರಿಂದ ಅವುಗಳಿಗೇ ಬದ್ದವಾಗಿರುವುದಾಗಿ ಅದು ಹೇಳಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿದ ಕೋವಿಡ್ -19 ವಿರುದ್ದದ ಮೊದಲ ಲಸಿಕೆಯನ್ನು 2020 ಆಗಸ್ಟ್ 15 ರಂದು ಬಿಡುಗಡೆ ಮಾಡಲು .ಸಿ.ಎಂ.ಆರ್. ಯೋಜನೆ ಹಾಕಿಕೊಂಡಿದೆ. ಕೊವ್ಯಾಕ್ಸಿನ್ ಹೆಸರಿನ ಲಸಿಕೆಯ ಮಾನವ ಕ್ಲಿನಿಕಲ್ ಪರೀಕ್ಷೆಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಪುಂಜಗುಟ್ಟದ ಎನ್..ಎಂ.ಎಸ್. ಇಂತಹ ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ : 18,570, ಸಕ್ರಿಯ ಪ್ರಕರಣಗಳು: 9226. ಸಾವುಗಳು: 275. ಬಿಡುಗಡೆಯಾದವರು: 9069.
  • ಮಹಾರಾಷ್ಟ್ರ: ಗುರುವಾರದಂದು ರಾಜ್ಯದಲ್ಲಿ ಕೋವಿಡ್ -19 ರಿಂದ ಗುಣಮುಖರಾದವರ ಸಂಖ್ಯೆ 1 ಲಕ್ಷ ದಾಟಿತು. 6,330 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,86,626 ಕ್ಕೇರಿತು. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 77260. ಮುಂಬಯಿಯಲ್ಲಿ 1554 ಹೊಸ ಪ್ರಕರಣಗಳು ಪತ್ತೆಯಾಗಿವೆ, ಇಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 80,262.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ 681 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಗುಜರಾತಿನಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 33,999 ಕ್ಕೇರಿತು. 19 ರೋಗಿಗಳು ತಮ್ಮ ಜೀವ ಕಳೆದುಕೊಳ್ಳುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ರಿಂದಾಗಿ ಮೃತಪಟ್ಟವರ ಸಂಖ್ಯೆ 1,888 ಕ್ಕೇರಿದೆ. ಅಹ್ಮದಾಬಾದ್ ನಗರದಿಂದ ಗರಿಷ್ಟ ಸಂಖ್ಯೆಯಲ್ಲಿ ಅಂದರೆ 202 ಹೊಸ ಪ್ರಕರಣಗಳು ವರದಿಯಾಗಿವೆ, ಸೂರತ್ತಿನಲ್ಲಿ 191 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ 7,510 ಸಕ್ರಿಯ ಪ್ರಕರಣಗಳಿವೆ. ರಾಜ್ಯವು ಇದುವರೆಗೆ 3.88 ಲಕ್ಷ ಪರೀಕ್ಷೆಗಳನ್ನು ನಡೆಸಿದೆ.
  • ರಾಜಸ್ಥಾನ: ಇಂದು ಮುಂಜಾನೆವರೆಗೆ ರಾಜಸ್ಥಾನದಲ್ಲಿ 123 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಮತ್ತು 5 ಸಾವುಗಳು ವರದಿಯಾಗಿವೆ. ಗುರುವಾರದಂದು , 350 ಹೊಸ ಪ್ರಕರಣಗಳು ಮತ್ತು 9 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಂಖ್ಯೆ 18,785, ಸಕ್ರಿಯ ಪ್ರಕರಣಗಳ ಸಂಖ್ಯೆ 3,307.
  • ಮಧ್ಯ ಪ್ರದೇಶ: 245 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆ 14,106 ಕ್ಕೇರಿದೆ. ರಾಜ್ಯದಲ್ಲಿ 2,702 ಸಕ್ರಿಯ ಪ್ರಕರಣಗಳಿವೆ. ಮೃತಪಟ್ಟವರ ಒಟ್ಟು ಸಂಖ್ಯೆ 589. 
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ 72 ಹೊಸ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3,013 ಕ್ಕೇರಿದೆ. ಇತ್ತೀಚಿನ ವರದಿಗಳ ಪ್ರಕಾರ ಅಲ್ಲಿ ಒಟ್ಟು 637 ಸಕ್ರಿಯ ಪ್ರಕರಣಗಳಿವೆ
  • ಗೋವಾ: ಗುರುವಾರದಂದು ರಾಜ್ಯದಲ್ಲಿ 95 ಸ್ಯಾಂಪಲ್ ಗಳು ಪಾಸಿಟಿವ್ ಆಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 1,482 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 744. 
  • ಅಸ್ಸಾಂ: ಗುವಾಹಟಿಯ ಜಿ.ಎಂ.ಸಿ.ಎಚ್. ನಲ್ಲಿ ಪ್ಲಾಸ್ಮಾ ಬ್ಯಾಂಕ್ ಆರಂಭಿಸಲಾಗಿದೆ. ಚೇತರಿಸಿಕೊಂಡಿರುವ ಮೊದಲ ದಾನಿ ಡಾ. ಲಿಥಿಕೇಶ್ ಓರ್ವ ವೈದ್ಯರು.
  • ಮಣಿಪುರ: ಮಣಿಪುರದ ಬಾಕ್ಸಿಂಗ್ ತಾರೆ ಮತ್ತು ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾದ ಡಿಂಗ್ಕೋ ಸಿಂಗ್ ಅವರು ಗುಣಮುಖರಾಗಿದ್ದು, ಈಗ ಕೋವಿಡ್ -19 ಮುಕ್ತರಾಗಿದ್ದಾರೆ.
  • ಮೇಘಾಲಯ: ಮೇಘಾಲಯದಲ್ಲಿ ಮತ್ತೆ 3 ಮಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇವರಲ್ಲಿ ಇಬ್ಬರು ಪೂರ್ವ ಖಾಸಿ ಗಿರಿ (ಬಿ.ಎಸ್.ಎಫ್. ) ಪ್ರದೇಶದವರು ಮತ್ತು ಓರ್ವರು ರೀ ಭೋಯಿಯ ಅಪಾಯಕಾರಿ ಸಂಪರ್ಕದಲ್ಲಿದ್ದವರು. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 18 ಮತ್ತು ಇದುವರೆಗೆ 43 ಮಂದಿ ಗುಣಮುಖರಾಗಿದ್ದಾರೆ.
  • ಮಿಜೋರಾಂ: ಮಿಜೋರಾಂನಲ್ಲಿ ಗುಣಮುಖರಾದ ಕೋವಿಡ್ -19  ರೋಗಿಯನ್ನು ಇಂದು ಬಿಡುಗಡೆ ಮಾಡಲಾಯಿತು. ಈಗ ಅಲ್ಲಿರುವ ಸಕ್ರಿಯ  ಪ್ರಕರಣಗಳ ಸಂಖ್ಯೆ 35. ಇದುವರೆಗೆ 127 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 162 ಕ್ಕೇರಿದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡಿನಲ್ಲಿ ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 539 ಕ್ಕೇರಿದೆ, 342 ಸಕ್ರಿಯ ಪ್ರಕರಣಗಳಿದ್ದರೆ , 197 ಮಂದಿ ಗುಣಮುಖರಾಗಿದ್ದಾರೆ.
  • ಪಂಜಾಬ್: ಪಂಜಾಬ್ ಮುಖ್ಯಮಂತ್ರಿಗಳು ಪಂಜಾಬ್ ಕೋವಿಡ್ -19 ಕ್ಲಿನಿಕಲ್ ನಿರ್ವಹಣಾ ಮ್ಯಾನುವಲ್ ಬಿಡುಗಡೆ ಮಾಡಿದ್ದಾರೆ.ಎಲ್ಲಾ ಆರೋಗ್ಯ ಸೇವಾ ದಾತರಿಗೆ ಏಕ ಪರಾಮರ್ಶನ ಬಿಂದುವಾಗಿ ಇದನ್ನು ರೂಪಿಸಲಾಗಿದೆ. ಜಾಗತಿಕ ಸಾಂಕ್ರಾಮಿಕವನ್ನು ಎಲ್ಲಾ ಕೋನಗಳಿಂದಲೂ ಸಮನ್ವಯ ಕ್ರಮಗಳ ಮೂಲಕ ಎದುರಿಸಿ,  ಮೃತ್ಯು ಪ್ರಮಾಣವನ್ನು ಕಡಿಮೆ ಮಾಡುವುದು ಇದರ ಒಟ್ಟಾರೆ ಉದ್ದೇಶವಾಗಿದೆ. ಮ್ಯಾನುವಲ್ ನ್ನು ತಮ್ಮ  ಸರಕಾರದ  ಬಲ ವೃದ್ದಿಯ ಕ್ರಮ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಇದು ರಾಷ್ಟ್ರೀಯ ಶಿಷ್ಟಾಚಾರ ಮತ್ತು ಕೋವಿಡ್ ನಿರ್ವಹಣೆಗಾಗಿ ರಾಜ್ಯದ ಆವಶ್ಯಕತೆಗಳನ್ನು ಪರಸ್ಪರ ಜೋಡಿಸುತ್ತದೆ ಎಂದಿದ್ದಾರೆ. ಇದು ಆರೋಗ್ಯ ಸೇವಾ  ಪೂರೈಕೆದಾರರಿಗೆ ಕೊರೊನಾ ವೈರಸ್ ಪಾಸಿಟಿವ್ ರೋಗಿಗಳಿಗೆ ಉತ್ತಮ ಆರೋಗ್ಯ ಶುಶ್ರೂಷೆ ನೀಡಲು ಮತ್ತು ಅವರನ್ನು ಉತ್ತಮವಾಗಿ ನಿಭಾಯಿಸಲು ಅವಶ್ಯ ಸಲಕರಣೆಗಳ ಸುಲಭ ಲಭ್ಯತೆಯನ್ನು  ಒದಗಿಸುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಾಸ್ತವ ಪರಿಶೀಲನೆ

***



(Release ID: 1636730) Visitor Counter : 207