PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 22 JUN 2020 6:33PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

Image

ಕೋವಿಡ್-19  ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ಡೇಟ್: ಲಕ್ಷವೊಂದಕ್ಕೆ  ಅತ್ಯಂತ ಕಡಿಮೆ ಪ್ರಮಾಣದಲ್ಲಿ ರೋಗಿಗಳು ಇರುವ  ದೇಶಗಳ ಪಟ್ಟಿಯಲ್ಲಿ ಭಾರತ ಮತ್ತು ಗುಣಮುಖರಾದವರು ಹಾಗು ಸಕ್ರಿಯ ಪ್ರಕರಣಗಳ ನಡುವೆ ಅಂತರ ನಿರಂತರ ಹೆಚ್ಚಳ

2020 ರ ಜೂನ್ 21 ರಂದು ಡಬ್ಲ್ಯು.ಎಚ್.ಒ. ಪರಿಸ್ಥಿತಿ ವರದಿಯು ಭಾರತದಲ್ಲಿ ಜನದಟ್ಟಣೆಯ ಹೊರತಾಗಿಯೂ  ಲಕ್ಷವೊಂದಕ್ಕೆ ಕಡಿಮೆ ಪ್ರಕರಣಗಳಿರುವ ದೇಶ ಎಂಬುದನ್ನು ತೋರಿಸಿದೆ. ಲಕ್ಷವೊಂದಕ್ಕೆ ಭಾರತದ ಪ್ರಕರಣಗಳ ಸಂಖ್ಯೆ 30.04,  ಜಾಗತಿಕ ಸರಾಸರಿ ಇದರ ಮೂರು ಪಟ್ಟಿಗೂ ಅಧಿಕ ಅಂದರೆ 114.67. ಅಮೆರಿಕಾದಲ್ಲಿ ಲಕ್ಷವೊಂದಕ್ಕೆ 671.24 ಪ್ರಕರಣಗಳಿವೆ, ಜರ್ಮನಿ, ಸ್ಪೈನ್ ಮತ್ತು ಬ್ರೆಜಿಲ್ ಗಳಲ್ಲಿ ಈ ಪ್ರಮಾಣ ಅನುಕ್ರಮವಾಗಿ 583.88, 526.22 ಮತ್ತು 489.42.  ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಕೋವಿಡ್ -19 ನಿರ್ವಹಣೆ, ತಡೆ ಮತ್ತು ಪ್ರತಿಬಂಧನಕ್ಕೆ ಸಾಕಷ್ಟು ಮುಂಜಾಗರೂಕತೆಯಿಂದ , ಹಂತ ಹಂತವಾಗಿ ಕೈಗೊಂಡ , ಕ್ರಿಯಾತ್ಮಕ ಧೋರಣೆಯ ಕ್ರಮಗಳಿಗೆ  ಇದು ನಿದರ್ಶನವಾಗಿದೆ.

https://static.pib.gov.in/WriteReadData/userfiles/image/image001JVC1.jpg 

ಇದುವರೆಗೆ 2,37,195 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಟ್ಟು 9,440  ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಕೋವಿಡ್ ರೋಗಿಗಳಲ್ಲಿ ಪ್ರಸ್ತುತ ಗುಣಮುಖ ದರ 55.77 %. ಪ್ರಸ್ತುತ 1,74,387  ಸಕ್ರಿಯ ಪ್ರಕರಣಗಳಿದ್ದು, ಅವೆಲ್ಲವೂ ವೈದ್ಯಕೀಯ ನಿಗಾದಲ್ಲಿವೆ. ಗುಣಮುಖರಾದವರ ಸಂಖ್ಯೆ  ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಗಳ ನಡುವಿನ ಅಂತರ ಹೆಚ್ಚಾಗುತ್ತಿರುವುದನ್ನು ಇಲ್ಲಿರುವ ಗ್ರಾಫ್ ಮೂಲಕ ಕಾಣಬಹುದು. ಇಂದು ಗುಣಮುಖರಾದವರ ಸಂಖ್ಯೆಯು ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ 62,808 ರಷ್ಟು ಹೆಚ್ಚಿದೆ.

ವಿವರಗಳಿಗೆ : https://www.pib.gov.in/PressReleseDetail.aspx?PRID=1633287

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ದಿಲ್ಲಿಯಲ್ಲಿ ಕೋವಿಡ್ -19 ಪ್ರತಿಬಂಧಕ ವ್ಯೂಹವನ್ನು ಒಳಗೊಂಡ ಡಾ. ವಿ.ಕೆ.ಪಾಲ್ ಸಮಿತಿ ವರದಿ ಮಂಡನೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ನಿರ್ದೇಶನಗಳ ಅನ್ವಯ 14-06-2020 ರಂದು ಡಾ. ವಿನೋದ್ ಪೌಲ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು ಮತ್ತು ದಿಲ್ಲಿಯಲ್ಲಿ ಕೋವಿಡ್ -19 ವಿರುದ್ದ ಪ್ರತಿಬಂಧಕ ಕ್ರಮಗಳಿಗೆ ಸಂಬಂಧಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ  ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಡಾ.ಪೌಲ್ ವರದಿಯನ್ನು ನಿನ್ನೆ ಮಂಡಿಸಲಾಯಿತು. ಪ್ರತಿಬಂಧಕ ವ್ಯೂಹದಲ್ಲಿರುವ ಪ್ರಮುಖ ಅಂಶಗಳೆಂದರೆ : ಕಂಟೈನ್ ಮೆಂಟ್ ವಲಯಗಳ ಪರಿಷ್ಕೃತ ಗುರುತಿಸುವಿಕೆ, ಮತ್ತು ಅಂತಹ ವಲಯಗಳಲ್ಲಿ ಕಠಿಣ ನಿಗಾ ಮತ್ತು ನಿಯಂತ್ರಣ ಕಾರ್ಯಚಟುವಟಿಕೆಗಳ ಅನುಷ್ಟಾನ, ಸಂಪರ್ಕ ಪತ್ತೆ, ಮತ್ತು ಸೋಂಕಿತ ಎಲ್ಲಾ ವ್ಯಕ್ತಿಗಳ ಸಂಪರ್ಕಗಳ ಕ್ವಾರಂಟೈನ್, ಇದಕ್ಕೆ ಆರೋಗ್ಯ ಸೇತು ನೆರವು, ಕಂಟೈನ್ ಮೆಂಟ್ ವಲಯದ ಹೊರಗೂ ಪ್ರತಿಯೊಂದು ಮನೆಯ ಮೇಲೂ ನಿಗಾ, ಇದರಿಂದ ದಿಲ್ಲಿಯ ಸಮಗ್ರ ಮಾಹಿತಿ ಲಭಿಸಲು ಸಹಾಯವಾಗಲಿದೆ ಮತ್ತು ಕೋವಿಡ್ -19 ಪಾಸಿಟಿವ್ ಪ್ರಕರಣಗಳನ್ನು ಆಸ್ಪತ್ರೆಗಳಲ್ಲಿ , ಕೋವಿಡ್ ನಿಗಾ ಕೇಂದ್ರಗಳಲ್ಲಿ ಅಥವಾ ಗೃಹ ಐಸೋಲೇಶನ್ ನಲ್ಲಿ ಉಳಿಸಲು ಸಹಾಯವಾಗುತ್ತದೆ. ಕೋವಿಡ್ ನಿಗಾ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸಲಹೆ ಮಾಡಿರುವ ವರದಿಯು ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು, / ಸರಕಾರೇತರ ಸಂಸ್ಥೆಗಳ ನೆರವು ಪಡೆಯುವಂತೆಯೂ ಸಲಹೆ ಮಾಡಿದೆ. ಈ ನಿಟ್ಟಿನಲ್ಲಿ 27-06-2020  ರಿಂದ 10-07-2020  ರವರೆಗೆ ದಿಲ್ಲಿಯಾದ್ಯಂತ  ಸೀರೋಲಾಜಿಕಲ್  (ಸೀರಂ ಶಾಸ್ತ್ರೀಯ ) ಸಮೀಕ್ಷೆ ನಡೆಸಲಾಗುತ್ತದೆ, ಇದರಲ್ಲಿ 20,000 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತದೆ.

ವಿವರಗಳಿಗೆ: https://pib.gov.in/PressReleasePage.aspx?PRID=1633260

ಭಾರತದ ಮೊದಲ ವರ್ಚುವಲ್ ಆರೋಗ್ಯ ರಕ್ಷಣಾ ಮತ್ತು ನೈರ್ಮಲ್ಯ ವಸ್ತು ಪದರ್ಶನ ಎಕ್ಸ್ಪೋ 2020 ಕ್ಕೆ ಶ್ರೀ ಮಾಂಡವೀಯ ಚಾಲನೆ

ಇದು ಭಾರತದ ಮೊಟ್ಟ ಮೊದಲ ವರ್ಚುವಲ್ ಪ್ರದರ್ಶನವಾಗಿದ್ದು, ಹೊಸ ಆರಂಭಕ್ಕೆ ಮುನ್ನುಡಿಯಿಟ್ಟಂತಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು ಭಾರತದ ಸ್ವಾವಲಂಬನೆಗೆ ಪರಿಸರ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ, ಇದರಿಂದ ಔಷಧೀಯ ಕ್ಷೇತ್ರದಲ್ಲಿ ಮತ್ತು ಆರೋಗ್ಯ ಹಾಗು ನೈರ್ಮಲ್ಯ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆ ಹೆಚ್ಚಲಿದೆ. ಆರೋಗ್ಯ, ನೈರ್ಮಲ್ಯ, ಮತ್ತು ಸ್ವಚ್ಚತೆ , ವೈದ್ಯಕೀಯ ಜವಳಿ, ಮತ್ತು ಸಲಕರಣೆಗಳು , ಆಯುಷ್ ಮತ್ತು ಕ್ಷೇಮ ವಲಯಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದದ ನಮ್ಮ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದರು. ಗೌರವಾನ್ವಿತ ಪ್ರಧಾನ ಮಂತ್ರಿ ಅವರು 2014  ರಿಂದ ಈ ನಿಟ್ಟಿನಲ್ಲಿ ಘೋಷಣೆ ಮಾಡಿರುವ ಪ್ರತೀ ಮನೆಗೂ ಶೌಚಾಲಯ ಒದಗಿಸುವ ಯೋಜನೆ, 10 ಕೋಟಿ ಕುಟುಂಬಗಳನ್ನು ಆರೋಗ್ಯ ರಕ್ಷಣಾ ವ್ಯಾಪ್ತಿಗೆ ತರುವ ಆಯುಷ್ಮಾನ್ ಭಾರತ್, ಸ್ವಚ್ಚ ಭಾರತ್ ಅಭಿಯಾನ, ಸುವಿಧಾ ನ್ಯಾಪ್ ಕಿನ್ ಇತ್ಯಾದಿ ಯೋಜನೆಗಳನ್ನು ಅವರು ಉಲ್ಲೇಖಿಸಿದರು. ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿರುವ ಜನೌಷಧಿ ಕೇಂದ್ರಗಳ ಬಗ್ಗೆಯೂ ಅವರು ಮಾತನಾಡಿದರು. ಈ ಎಲ್ಲಾ ಉಪಕ್ರಮಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸರಕಾರದ ಮುಂಗಾಣ್ಕೆಯಿಂದ ಹೇಗೆ ಸಾಕಾರಗೊಂಡವು ಎಂಬುದನ್ನೂ ಶ್ರೀ ಮಾಂಡವೀಯ ವಿವರಿಸಿದರು.

ವಿವರಗಳಿಗೆ : https://pib.gov.in/PressReleasePage.aspx?PRID=1633323

ಆಹಾರ ಸಂಸ್ಕರಣ ವಲಯದಲ್ಲಿ ಹೊಸ ಅವಕಾಶಗಳ ಅನಾವರಣ : ಹರ್ಸಿಮ್ರಾತ್ ಕೌರ್ ಬಾದಲ್

ಭಾರತ ಸರಕಾರದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ಏಜೆನ್ಸಿ , ಇನ್ವೆಸ್ಟ್ ಇಂಡಿಯಾದ ಹೂಡಿಕೆ ವೇದಿಕೆಯ ಆಹಾರ ಸಂಸ್ಕರಣಾ ಆವೃತ್ತಿಯನ್ನು  ಕೇಂದ್ರ ಎಫ್.ಪಿ.ಐ. ಸಚಿವರಾದ ಶ್ರೀಮತಿ ಹರ್ಸಿಮ್ರಾತ್ ಕೌರ್ ಬಾದಲ್ ಅವರು  ಇಂದು ಉದ್ಘಾಟಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಈ ವಲಯ ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಮತ್ತು ಲಾಕ್ ಡೌನ್ ಯಶಸ್ಸನ್ನು ಖಾತ್ರಿಪಡಿಸುವಲ್ಲಿ ತನ್ನದೇ ಆದ ಪ್ರಮುಖ ಪಾತ್ರವನ್ನೂ  ಅದು ವಹಿಸಿದೆ ಎಂದು ಹೇಳಿದರು. ದೇಶೀಯ ಬೇಡಿಕೆಯಲ್ಲಿ ಕುಸಿತವಾಗಿರುವುದರಿಂದ ಮತ್ತು ಅದರ ಜೊತೆಯಲ್ಲೇ ಜಾಗತಿಕ ವ್ಯಾಪಾರದಲ್ಲಿಯೂ ಪರಿಣಾಮ ಬೀರಿರುವುದರಿಂದ ಇಂದು ಕೆಲವು ಸವಾಲುಗಳು ಎದುರಾಗಿವೆ ಎಂದ ಶ್ರೀಮತಿ ಬಾದಲ್ ಅವರು ಈ ಸವಾಲುಗಳು ಹೊಸ ಅವಕಾಶಗಳನ್ನು ತೆರೆಯಲಿವೆ ಎಂದು ಅಭಿಪ್ರಾಯಪಟ್ಟರು. ಈ ವಿಶೇಷ ವೇದಿಕೆಯು 180  ಹೂಡಿಕೆದಾರರು, ಆರು ರಾಜ್ಯ ಸರಕಾರಗಳು  ಮತ್ತು ಕೇಂದ್ರ ಸರಕಾರಗಳು ಏಕ ಕಾಲದಲ್ಲಿ ಏಕ ಸ್ಥಳದಲ್ಲಿ ಸೇರಲು ಸಾಧ್ಯವಾಗುವಂತೆ  ಮಾಡಿದೆ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1633367

ಕಳೆದ ಎರಡು ಹಣಕಾಸು ವರ್ಷಗಳಲ್ಲಿ .ಪಿ.ಎಫ್..ಗೆ 1.39 ಕೋಟಿ  ಚಂದಾದಾರರ ಸೇರ್ಪಡೆ

ಇತ್ತೀಚೆಗೆ ಪ್ರಕಟವಾದ ಇ.ಪಿ.ಎಫ್.ಒ. ತಾತ್ಕಾಲಿಕ ವೇತನ ಪಟ್ಟಿ ದತ್ತಾಂಶಗಳಲ್ಲಿ ಇ.ಪಿ.ಎಫ್.ಒ. ನ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. 2017  ಸೆಪ್ಟೆಂಬರ್ ತಿಂಗಳಿಂದ ವೇತನ ಪಟ್ಟಿ ದತ್ತಾಂಶಗಳು ಸಂಯೋಜನೆ  ಆದಂದಿನಿಂದ ಹೆಚ್ಚಳ ಕಂಡು ಬಂದಿದೆ. ಚಂದಾದಾರರ ನೆಲೆಗೆ ನಿವ್ವಳ ಸೇರ್ಪಡೆಯು 2018-19 ರಲ್ಲಿ 61,12 ಲಕ್ಷ ಇದ್ದು, ಅದು 2019-20 ರಲ್ಲಿ ಅದು 78.58 ಲಕ್ಷಕ್ಕೇರಿ  28 % ಬೆಳವಣಿಗೆ ದಾಖಲಿಸಿದೆ. 2019-20ರಲ್ಲಿ  ವಯೋಮಾನವಾರು ವಿಶ್ಲೇಷಣೆಯು 26-28, 29-35 ಮತ್ತು 35 ವರ್ಷದ ಬಳಿಕದ ವಯೋಮಾನದವರ ಗುಂಪಿನಲ್ಲಿ  ನಿವ್ವಳ ನೋಂದಣಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 50% ಗೂ ಅಧಿಕ ಪ್ರಮಾಣದಲ್ಲಿ ಹೆಚ್ಚಳ ದಾಖಲಿಸಿದೆ. ಆನ್ ಲೈನ್ ಮಾದರಿಯಲ್ಲಿ ಸೇವಾ ಪೂರೈಕೆ,  ತ್ವರಿತ ಗತಿಯ ಗುಣಮಟ್ಟ ಸುಧಾರಣೆ ದೇಶದ ಕಾರ್ಮಿಕ ಶಕ್ತಿಯು ಇ.ಪಿ.ಎಫ್.ಒ. ದತ್ತ ಆಕರ್ಷಿಸುವಂತೆ ಮಾಡಿದೆ. ಇದಲ್ಲದೆ ಪಿ.ಎಫ್. ಸಂಗ್ರಹವು ಹಣವನ್ನು ಬಂಧಿಸಿಡುವುದು ಎಂಬ ನಂಬಿಕೆಯೂ ಶಿಥಿಲವಾಗಿರುವುದಕ್ಕೆ ಇದು ಉದಾಹರಣೆಯಾಗಿದೆ. ಇ.ಪಿ.ಎಫ್.ಒ. 3 ದಿನಗಳ ಒಳಗೆ ಕೋವಿಡ್ -19  ಮುಂಗಡವನ್ನು ಇತ್ಯರ್ಥ ಮಾಡುತ್ತಿರುವುದರಿಂದ ಪಿ.ಎಫ್. ಸಂಗ್ರಹವನ್ನು ಈಗ ಬಿಕ್ಕಟ್ಟಿನ ಸಂದರ್ಭದಲ್ಲಿ ಚಂದಾದಾರರ ಅಗತ್ಯವನ್ನು ಸಕಾಲದಲ್ಲಿ ಪೂರೈಸುವ ನಗದು ಆಸ್ತಿ ಎಂದು ಪರಿಗಣಿಸಲಾಗುತ್ತಿದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1633325

ಆಶೋತ್ತರಗಳ ಜಿಲ್ಲೆಗಳಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಪರಾಮರ್ಶಿಸಿದ ಡಾ. ಜಿತೇಂದ್ರ ಸಿಂಗ್

ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ನಿನ್ನೆ ಈಶಾನ್ಯಕ್ಕೆ ವಿಶೇಷ ಒತ್ತು ನೀಡಿ  “ಆಶೋತ್ತರಗಳ “ ಜಿಲ್ಲೆಗಳಲ್ಲಿರುವ ಆರೋಗ್ಯ ಸವಲತ್ತುಗಳು ಮತ್ತು ಕೋವಿಡ್ ಸ್ಥಿತಿ ಗತಿಯ ಬಗ್ಗೆ ಪರಾಮರ್ಶೆ ನಡೆಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈಶಾನ್ಯ ಸಚಿವಾಲಯವು ಎಂಟು ಈಶಾನ್ಯ ರಾಜ್ಯಗಳಲ್ಲಿ ಆರೋಗ್ಯ ರಕ್ಷಣಾ ಸವಲತ್ತುಗಳನ್ನು ಬಲಪಡಿಸುವುದಕ್ಕಾಗಿ 190 ಕೋ.ರೂ.ಗಳನ್ನು ಮಂಜೂರು ಮಾಡಲು ನಿರ್ಧರಿಸಿದೆ , ಇದು ನಿರ್ದಿಷ್ಟವಾಗಿ ಸೋಂಕು ರೋಗಗಳ ನಿರ್ವಹಣೆಗೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಬಳಕೆಯಾಗಲಿದೆ ಎಂದರು. ಆರೋಗ್ಯ ಕಾರ್ಯದರ್ಶಿಗಳು, ಈಶಾನ್ಯದ 14 ಆಶೋತ್ತರಗಳ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು   ಭಾಗವಹಿಸಿದ್ದ  ವರ್ಚುವಲ್ ಸಭೆಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ 49 ಪ್ರಮುಖ ಸೂಚ್ಯಂಕಗಳ ಮೇಲೆ ಆಶೋತ್ತರಗಳ ಜಿಲ್ಲೆ ಚಿಂತನೆಯನ್ನು ಮಂಡಿಸಲಾಗಿದೆ, ಇದರಲ್ಲಿ ಆರೋಗ್ಯ ರಕ್ಷಣಾ ಸ್ಥಿತಿ ಗತಿಗಳು ಪ್ರಮುಖ ಘಟಕಾಂಶವಾಗಿವೆ ಎಂದರು. ಈಶಾನ್ಯ ರಾಜ್ಯಗಳಿಗೆ ಆರೋಗ್ಯ ಸಂಬಂಧಿ ಯೋಜನೆಗಳ ಪ್ರಸ್ತಾವನೆಗಳನ್ನು ಕಳುಹಿಸುವ ಅವಕಾಶ ನೀಡಲಾಗಿದೆ. ಇದಕ್ಕೆ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ದಿ ಯೋಜನೆಯಿಂದ 500 ಕೋ.ರೂ.ಗಳಿಗೂ ಅಧಿಕ ಹಣಕಾಸು ಲಭ್ಯವಿದೆ ಎಂದೂ ಸಚಿವರು ಹೇಳಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1633215

ಸಮುದ್ರ ಸೇತು ಕಾರ್ಯಾಚರಣೆ: .ಎನ್.ಎಸ್. ಐರಾವತ ಹಡಗನ್ನೇರಿದ ಮಾಲ್ದೀವ್ಸ್ ನಲ್ಲಿಯ ಭಾರತೀಯರು

ಭಾರತೀಯ ನೌಕಾದಳದ ಹಡಗು ಐರಾವತವು ನಿನ್ನೆ ಮಾಲ್ದೀವ್ಸ್ ನ ಮಾಲೆ ಬಂದರನ್ನು ಪ್ರವೇಶಿಸಿದೆ. ವಿದೇಶೀ ತೀರಗಳಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ  ಭಾರತ ಸರಕಾರದ ಚಾಲ್ತಿಯಲ್ಲಿರುವ ವಂದೇ ಭಾರತ್ ಯೋಜನೆಯ  ಅಂಗವಾಗಿ ನಡೆಯುತ್ತಿರುವ ಸಮುದ್ರ ಸೇತು ಕಾರ್ಯಾಚರಣೆಯ ಭಾಗವಾಗಿ ಈ ಹಡಗು ಅಲ್ಲಿಗೆ ತೆರಳಿದೆ. ತಮಿಳುನಾಡಿನ ಟ್ಯುಟಿಕೋರಿನ್ ಗೆ ಅದು ಒಟ್ಟು 198 ಭಾರತೀಯ ನಾಗರಿಕರನ್ನು ಕರೆತರಲಿದ್ದು, ಅವರು ಹಡಗನ್ನೇರಿದ್ದಾರೆ. ನೌಕಾದಳದ ಹಡಗು  ಸಮುದ್ರಸೇತು ಕಾರ್ಯಾಚರಣೆ ಅಡಿಯಲ್ಲಿ ಮಾಲೆ ಪ್ರವೇಶಿಸುತ್ತಿರುವ ಐದನೇ ಪ್ರಕರಣ ಇದಾಗಿದೆ. ಇದುವರೆಗೆ ಭಾರತೀಯ ನೌಕಾದಳವು ಮಾಲ್ದೀವ್ಸ್ ಒಂದರಿಂದಲೇ ಒಟ್ಟು 2386 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ. ಹಡಗನ್ನೇರಿರುವವರಲ್ಲಿ 195  ಮಂದಿ ತಮಿಳುನಾಡಿನವರು ಮತ್ತು ಉಳಿದವರು ಪುದುಚೇರಿಯವರು.

ವಿವರಗಳಿಗೆ : https://www.pib.gov.in/PressReleseDetail.aspx?PRID=1633284

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಪಂಜಾಬ್: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಪಂಜಾಬ್ ಸರಕಾರದಿಂದ ದರ ನಿಗದಿ, ಅದನ್ನು ಪಾಲಿಸದಿದ್ದರೆ ಅವುಗಳ ಮುಚ್ಚುಗಡೆ. ಖಾಸಗಿ ಆಸ್ಪತ್ರೆಗಳು ಭಾರೀ ಮೊತ್ತದ ಬಿಲ್ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ , ಮುಖ್ಯಮಂತ್ರಿಗಳು ಇಂತಹ ಕ್ರಮಗಳನ್ನು ಜನ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಹೇಳಿರುವುದಲ್ಲದೆ , ಜನರ ಜೀವದ ಜೊತೆ ಚೆಲ್ಲಾಟವಾಡಿ, ಇಂತಹ ನಾಚಿಕೆಗೇಡಿನ ಲಾಭ ಮಾಡುವ ಖಾಸಗಿ ಸಂಸ್ಥೆಗಳನ್ನು ಕಾರ್ಯಾಚರಿಸಲು ಬಿಡಲಾಗದು ಎಂದಿದ್ದಾರೆ
 • ಹರ್ಯಾಣಾ: ಆರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಯಾಣಾ ಮುಖ್ಯಮಂತ್ರಿ 2015  ರಿಂದ ರಾಜ್ಯವು ಅಂತಾರಾಷ್ಟ್ರೀಯ ಯೋಗ ದಿನವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿತ್ತು, ಇದರಡಿ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ , ಜಿಲ್ಲಾ ಮಟ್ಟದಲ್ಲಿಯೂ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿತ್ತು, ಮತ್ತು ಜನರು ಸಾಮೂಹಿಕವಾಗಿ ಯೋಗವನ್ನು ಕೈಗೊಳ್ಳುತ್ತಿದ್ದರು ಮಾತ್ರವಲ್ಲದೆ ಇತರರಿಗೂ ಯೋಗ ಮಾಡಲು ಪ್ರೇರಣೆ ಒದಗಿಸುತ್ತಿದ್ದರು. ಆದರೆ ವರ್ಷ ಕೋವಿಡ್ -19 ರಿಂದಾಗಿ ಕಾರ್ಯಕ್ರಮಗಳನ್ನು ಸಂಘಟಿಸುವುದಕ್ಕೆ ಬದಲಾಗಿ ಜನತೆಗೆ ಅವರ ಮನೆಯಲ್ಲಿಯೇ ಯೋಗ ನಡೆಸುವಂತೆ ತಿಳಿಸಲಾಗಿತ್ತು, ಮತ್ತು ಮೂಲಕವಷ್ಟೇ ನಾವು ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಬಹುದಾಗಿದೆ ಎಂದು ಹೇಳಿದರು.
 • ಮಹಾರಾಷ್ಟ್ರ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್ -19 ರೋಗಿಗಳ ಸಂಖ್ಯೆ 1,32,075  ಕಳೆದ 24 ಗಂಟೆಗಳಲ್ಲಿ 3,870 ಹೊಸ ರೋಗಿಗಳು  ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. 1,591 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 65744. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 60,147. ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ಭಿ.ಎಂ.ಸಿ. ಅಂಧೇರಿಯ ಶಹಾಜಿ ರಾಜೇ  ಭೋಸ್ಲೇ ಕ್ರೀಡಾ ಸಂಕೀರ್ಣದಲ್ಲಿ ಮಿಷನ್ ಜೀರೋ ತ್ವರಿತ ಕ್ರಿಯಾ ಯೋಜನೆಯನ್ನು ಕಾರ್ಯಾರಂಭಗೊಳಿಸಿದೆ. 50 ಸಂಚಾರಿ ಡಿಸ್ಪೆನ್ಸರಿ ವಾಹನಗಳು ಮುಲುಂಡ್, ಭಾಂಡುಪ್, ಅಂಧೇರಿ, ಮಲಾಡ್ , ಬೊರಿವಲಿ, ದಹಿಸರ್, ಮತ್ತು ಕಾಂದಿವಲಿಗಳಲ್ಲಿ 2-3 ವಾರಗಳ ಕಾಲ ರೋಗಿಗಳ ಪ್ರಾಥಮಿಕ ಪರೀಕ್ಷೆ/ತಪಾಸಣೆಗಳನ್ನು ನಡೆಸಲಿವೆ.
 • ಗುಜರಾತ್: ಭಾನುವಾರದಂದು ಗುಜರಾತಿನಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳಲ್ಲಿ ಬಹಳಷ್ಟು ಏರಿಕೆಯಾಗಿದೆ. 580 ಹೊಸ ಪ್ರಕರಣಗಳು, 25 ಸಾವುಗಳು ವರದಿಯಾಗಿವೆ. ಇದರಿಂದ ಒಟ್ಟು ಸಂಖ್ಯೆ 27,317 ಕ್ಕೇರಿದೆ ಮತ್ತು ಒಟ್ಟು ಸಾವುಗಳ ಸಂಖ್ಯೆ 1,664 ಕ್ಕೇರಿದೆ. 655 ಮಂದಿ ಗುಣಮುಖರಾಗಿ ಬಿಡುಗಡೆಯಾಗುವುದರೊಂದಿಗೆ ಒಟ್ಟು ಬಿಡುಗಡೆಯಾದ ರೋಗಿಗಳ ಸಂಖ್ಯೆ 19,357 ಕ್ಕೇರಿದೆ.
 • ರಾಜಸ್ಥಾನ: ಇಂದು 67 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 14,997 ಕ್ಕೇರಿದೆ. ಆದಾಗ್ಯೂ 11,6611 ರೋಗಿಗಳು ಗುಣಮುಖರಾಗಿದ್ದಾರೆ ಮತ್ತು 349 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 2,987 ಮಾತ್ರ.
 • ಮಧ್ಯ ಪ್ರದೇಶ: 179 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 11,903 ಕ್ಕೇರಿದೆ. 9,015 ರೋಗಿಗಳು ಗುಣಮುಖರಾಗಿದ್ದಾರೆ. ಮತ್ತು ಭಾನುವಾರದವರೆಗೆ 515 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2373. ಇಂಧೋರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,329 ಮತ್ತು ಭೋಪಾಲಿನಲ್ಲಿ 2,504.
 • ಛತ್ತೀಸ್ ಗಢ: ಭಾನುವಾರದಂದು ಒಟ್ಟು 139 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 2,273 ಕ್ಕೇರಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 841.
 • ಗೋವಾ: ಗೋವಾ ರಾಜ್ಯದಲ್ಲಿ ಮೊದಲ ಕೋವಿಡ್ ಸಾವು ವರದಿಯಾಗಿದೆ. ಉತ್ತರ ಗೋವಾದ 85 ವರ್ಷದ ವ್ಯಕ್ತಿಯು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ. 64 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 818 ಕ್ಕೇರಿದೆ.
 • ಕೇರಳ: ರಾಜ್ಯದಲ್ಲಿ ಇದುವರೆಗೆ ಕೋವಿಡ್ 19 ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ ಎಂದು  ಆರೋಗ್ಯ ಸಚಿವರಾದ ಕೆ.ಕೆ.ಶೈಲಜಾ ಹೇಳಿದ್ದಾರೆ. ವಿದೇಶಗಳಿಂದ ಕೇರಳಕ್ಕೆ ಬರುವ ವಿಮಾನಗಳಲ್ಲಿ ಅನಾರೋಗ್ಯ ಪೀಡಿತರಿಗೆ ಅವಕಾಶ ನೀಡದಿರುವ ಕ್ರಮ ಇತರ ಆರೋಗ್ಯವಂತ ಪ್ರಯಾಣಿಕರ ಸುರಕ್ಷೆಯನ್ನು ಖಾತ್ರಿಪಡಿಸಲು ಕೈಗೊಂಡ ಕ್ರಮ ಎಂದವರು ಹೇಳಿದ್ದಾರೆ. ಸಹಕಾರ ಸಚಿವ ಕೆ.ಸುರೇಂದ್ರನ್ ಅವರು ಪಂಚಾಯತ್ ಮಟ್ಟದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ. ಚಾರ್ಟರ್ಡ್ ವಿಮಾನಗಳಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡಲೆತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಡುವೆ ಓಮಾನಿನಲ್ಲಿ ಇನ್ನೋರ್ವ ಕೇರಳೀಯರು ಕೋವಿಡ್ -19 ರಿಂದಾಗಿ ಮೃತಪಟ್ಟಿದ್ದಾರೆ. ರಾಜ್ಯದ ಕೋವಿಡ್ ಗ್ರಾಫ್ ನಿನ್ನೆ 133 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಸತತ ಏರಿಕೆಯಾಗುತ್ತಿದೆ. ಈಗ ಅಲ್ಲಿ 1490 ಸಕ್ರಿಯ ಪ್ರಕರಣಗಳಿವೆ.
 • ತಮಿಳುನಾಡು: ಪುದುಚೇರಿಯಲ್ಲಿ ಸ್ಯಾಂಪಲ್ ಗಳ ಪರೀಕ್ಷೆಯ ಬಳಿಕ ಕೋವಿಡ್ -19 ಪ್ರಕರಣಗಳ ಸಂಖ್ಯೆ 17 ಕ್ಕಿಳಿದಿದೆ. ಒಟ್ಟು ಪ್ರಕರಣಗಳ ಸಂಖ್ಯೆ 383. ತಮಿಳುನಾಡಿನಲ್ಲಿ 2,532 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ತಮಿಳುನಾಡಿನ ದೈನಿಕ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ. ಭಾನುವಾರ 1438 ಮಂದಿ ಗುಣಮುಖರಾಗಿದ್ದಾರೆ ಮತ್ತು 53 ಮಂದಿ ಮೃತಪಟ್ಟಿದ್ದಾರೆ. ಚೆನ್ನೈಯಲ್ಲಿ 1493 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ : 59,377, ಸಕ್ರಿಯ ಪ್ರಕರಣಗಳು 25863. ಸಾವುಗಳು: 757. ಗುಣಮುಖರಾದವರು 32754. ಪರೀಕ್ಷೆ ಮಾಡಲಾದ ಸ್ಯಾಂಪಲ್ ಗಳು 861211, ಚೆನ್ನೈಯಲ್ಲಿ  ಆಕ್ಟಿವ್ ಪ್ರಕರಣಗಳ  ಸಂಖ್ಯೆ : 1783.
 • ಕರ್ನಾಟಕ: ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಲಾಕ್ ಡೌನ್ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಮುಖ್ಯಮಂತ್ರಿಗಳು ಕರೆದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆ.ಆರ್. ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಸಿದ್ದಾಪುರ, ವಿ.ವಿ.ಪುರಂ, ಕಲಾಸಿಪಾಳ್ಯ ಇತ್ಯಾದಿ ಪ್ರದೇಶಗಳಲ್ಲಿ ಕ್ರಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದಲ್ಲದೆ, ಅವಶ್ಯವಿದ್ದಲ್ಲಿ ಎಫ್..ಆರ್. ದಾಖಲಿಸಲಾಗುವುದು. ಎಲ್ಲಾ ವಾರ್ಡುಗಳಲ್ಲಿಯೂ ಜ್ವರ ಕ್ಲಿನಿಕ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪೊಲೀಸ್ ಅಧಿಕಾರಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆ ಮತ್ತು ಬೆಂಗಳೂರಿನಲ್ಲಿ ಮೂವರು ಪೊಲೀಸರು ಕೋವಿಡ್ ಗೆ ಬಲಿಯಾಗಿರುವುದರಿಂದ 55 ವರ್ಷಕ್ಕೆ ಮೇಲ್ಪಟ್ಟವರು ಕರ್ತವ್ಯಕ್ಕೆ ವರದಿ ಮಾಡಬೇಕಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ನಿನ್ನೆ 453 ಹೊಸ ಪ್ರಕರಣಗಳು , 225 ಬಿಡುಗಡೆಗಳು ವರದಿಯಾಗಿವೆ. ಮತ್ತು 5 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 9150 . ಸಕ್ರಿಯ ಪ್ರಕರಣಗಳು: 3391, ಸಾವುಗಳು: 137. ಬಿಡುಗಡೆಯಾದವರು: 5618 
 • ಆಂಧ್ರ ಪ್ರದೇಶ: ನಿನ್ನೆ 439  ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 151 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಐದು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ : 7059 . ಸಕ್ರಿಯ ಪ್ರಕರಣಗಳು: 3599 , ಗುಣಮುಖರಾದವರು;3354, ಸಾವುಗಳು: 106.
 • ತೆಲಂಗಾಣ: ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ, ಅವುಗಳಲ್ಲಿ ಹೆಚ್ಚಿನವು ಹೈದರಾಬಾದಿನವು. ಇದುವರೆಗೆ ಪ್ರಕರಣಗಳ ಸಂಖ್ಯೆ 7,802, ಸಕ್ರಿಯ ಪ್ರಕರಣಗಳು: 3891, ಗುಣಮುಖರಾದವರು:3731 . ಮಾರ್ಚ್  22 ರಂದು ಲಾಕ್ ಡೌನ್ ಆರಂಭಕ್ಕೆ ಮೊದಲೇ ರಾಜ್ಯದಲ್ಲಿ ವರದಿಯಾದ ಪ್ರಕರಣಗಳು 22. ಮಾರ್ಚ್ 23 ಮತ್ತು ಏಪ್ರಿಲ್ 14 ನಡುವಣ ಲಾಕ್ ಡೌನ್ 1 ಅವಧಿಯಲ್ಲಿ ವರದಿಯಾದ ಪ್ರಕರಣಗಳು 622. ಲಾಕ್ ಡೌನ್ 2 ಅವಧಿಯಲ್ಲಿ 438 ಪ್ರಕರಣಗಳು ವರದಿಯಾಗಿದ್ದರೆ , ಲಾಕ್ ಡೌನ್ 3 ರಲ್ಲಿ 429 ಪ್ರಕರಣಗಳು ವರದಿಯಾಗಿವೆ. ಮೇ 18 ರಿಂದ ಮೇ 31 ರವರೆಗಿನ ಲಾಕ್ ಡೌನ್ 4 ರಲ್ಲಿ 1,147  ಹೊಸ ಪ್ರಕರಣಗಳು ವರದಿಯಾಗಿವೆ. ಈಗಿನ ಅನ್ ಲಾಕ್ ನಲ್ಲಿ ತೆಲಂಗಾಣ ರಾಜ್ಯವು 5,104 ಪ್ರಕರಣಗಳನ್ನು ದಾಖಲಿಸಿದೆ. ತೆಲಂಗಾಣ ಸರಕಾರ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತೀ ಜಿಲ್ಲೆಯಲ್ಲೂ ದಿನವೊಂದಕ್ಕೆ ಯಾದೃಚ್ಚಿಕವಾಗಿ 50 ಪರೀಕ್ಷೆಗಳನ್ನು ನಡೆಸಲು ಆದೇಶ ನೀಡಿದೆ.  
 • ಮೇಘಾಲಯ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ  ಎರಡು ತಿಂಗಳಿಗೂ ಅಧಿಕ ಸಮಯದ ಬಳಿಕ ಮೇಘಾಲಯದ ಲ್ಯೂದುಹ ಮರು ಆರಂಭ. ರೆಸ್ಟೋರೆಂಟ್ ಗಳು , ಕೆಫೆಗಳು, ಕ್ಷೌರಿಕರ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರುಗಳು ಆರಂಭ.
 • ಮಣಿಪುರ: ಮಣಿಪುರ ಜಿಲ್ಲೆಯ ತಮಿಗ್ಲಾಂಗ್ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಕೋವಿಡ್ ಬಾಧಿತ ಜಿಲ್ಲೆಯಾಗಿದೆ. ಇಲ್ಲಿ 101 ಕೋವಿಡ್ -19 ಪ್ರಕರಣಗಳಿವೆ. ಇದರ ಬಳಿಕ ಕಾಂಗ್ಪೋಕಿ 95 ಪ್ರಕರಣಗಳನ್ನು ಹೊಂದಿದೆ ಮತ್ತು ಚುರಾಚಂದಪುರವು 94 ಪ್ರಕರಣಗಳನ್ನು ಹೊಂದಿದೆ. ಮೊದಲ ಲಾಕ್ ಡೌನ್ ಆರಂಭವಾದಂದಿನಿಂದ ಮಣಿಪುರದ ಗಡಿ ಭಾಗದಲ್ಲಿ ಒಟ್ಟು ತಪಾಸಣೆ ಮಾಡಲಾದವರ ಸಂಖ್ಯೆ 2.76 ಲಕ್ಷ
 • ಮಿಜೋರಾಂ: ಭೂಕಂಪದ ಬಳಿಕ ಮಿಜೋರಾಂಗೆ ಎಲ್ಲಾ ಸಹಕಾರ ನೀಡುವುದಾಗಿ ಕೇಂದ್ರ ಭರವಸೆ. ಮುಖ್ಯಮಂತ್ರಿ ಝ್ಹೋರಾಂಥಂಗ ಜೊತೆ ಇಂದು  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಮತ್ತು ಡಿ..ಎನ್..ಆರ್. ಸಚಿವ ಡಾ. ಜಿತೇಂದ್ರ ಸಿಂಗ್ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
 • ನಾಗಾಲ್ಯಾಂಡ್ : ಸರಿ ಮತ್ತು ಬೆಸ ಸಂಖ್ಯೆ ವಾಹನ ನಿಯಮವನ್ನು ನಾಗಾಲ್ಯಾಂಡಿನ  ರಾಜಧಾನಿ ಕೊಹಿಮಾದಲ್ಲಿ ಜಾರಿಗೆ ತರಲಾಗಿದೆ. ಅನಾವಶ್ಯಕವಾಗಿ ತಿರುಗಾಡುವ ವಾಹನಗಳ ಸಂಚಾರಕ್ಕೆ ಲಗಾಮು ಹಾಕುವ ಅಂಗವಾಗಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಈಗಾಗಲೇ ವ್ಯಾಖ್ಯಾನಿಸಲ್ಪಟ್ಟಿರುವ ಅವಶ್ಯಕ ಸೇವೆಗಳ ವ್ಯಾಪ್ತಿಯಲ್ಲಿ ಬರುವ ವಾಹನಗಳಿಗೆ ನಿಯಮದಿಂದ ವಿನಾಯತಿ ನೀಡಲಾಗಿದೆ.

***(Release ID: 1636031) Visitor Counter : 12