ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಿ.ಪಿ.ಐ.ಐ. ಟಿ ನಿಯಂತ್ರಣ ಕೊಠಡಿ

Posted On: 30 APR 2020 2:04PM by PIB Bengaluru

ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ನಿಗಾ ವಹಿಸುವಲ್ಲಿ ಹಾಗು ಲಾಕ್ ಡೌನ್ ಅವಧಿಯಲ್ಲಿ ವಿವಿಧ ಭಾಗೀದಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಿ.ಪಿ... ಟಿ ನಿಯಂತ್ರಣ ಕೊಠಡಿ

89% ವಿಚಾರಣೆಗಳನ್ನು ಪರಿಹರಿಸಲಾಗಿದೆ/ ಬಗೆಹರಿಸಲಾಗಿದೆ

ಸಚಿವರು, ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳ ನಿಯಮಿತ ನಿಗಾ ಮತ್ತು ಪರಿಶೀಲನೆಯು ತ್ವರಿತ ಪರಿಹಾರಕ್ಕೆ ಸಹಾಯ ಮಾಡಿದೆ

ದೂರವಾಣಿ ಸಂಖ್ಯೆ: 01123062487 ಮತ್ತು -ಮೇಲ್ controlroom-dpiit[at]gov[dot]in

 

ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿರುವ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯು 26.3.2020 ರಿಂದ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವ್ಯವಹಾರಗಳ ಮೇಲೆ ನಿಗಾ ಇಡುವುದು, ಅವುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ರಾಜ್ಯ ಸರಕಾರಗಳು, ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳ ಮತ್ತು ಇತರ ಸಂಬಂಧಿತ ಏಜೆನ್ಸಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಯತ್ನಿಸುವುದು ಇದರ ಕಾರ್ಯಚಟುವಟಿಕೆಗಳಲ್ಲಿ ಸೇರಿದೆ.ನಿಯಂತ್ರಣ ಕೊಠಡಿಯು ಕೆಳಗಿನ ವಿಷಯಗಳ ಮೇಲೆ ನಿಗಾ ಇಡುತ್ತದೆ.

a. ಆಂತರಿಕ ವ್ಯಾಪಾರ, ಉತ್ಪಾದನೆ, ಪೂರೈಕೆ ಮತ್ತು ಅವಶ್ಯಕ ವಸ್ತುಗಳ ಸಾಗಾಣಿಕೆ ಮತ್ತು

b. ವಿವಿಧ ಭಾಗೀದಾರರು ಲಾಕ್ ಡೌನ್ ಅವಧಿಯಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ಪೂರೈಕೆ ಸರಪಳಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಪರಿಹಾರ.

2020 ಏಪ್ರಿಲ್ 28 ರವರೆಗೆ ನೊಂದಾಯಿಸಲ್ಪಟ್ಟ ಒಟ್ಟು 1962 ವಿಚಾರಣೆಗಳಲ್ಲಿ 1739 ನ್ನು ಪರಿಹರಿಸಲಾಗಿದೆ, 223 ದೂರುಗಳು ಪರಿಹಾರ ಪ್ರಕ್ರಿಯೆಯಲ್ಲಿವೆ. ಒಟ್ಟು 1962 ವಿಚಾರಣೆಗಳ ಪೈಕಿ 1000 ಕ್ಕೂ ಅಧಿಕ ವಿಚಾರಣೆಗಳು ದಿಲ್ಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರ್ಯಾಣಾ ಮತ್ತು ಗುಜರಾತ್ ಗಳಿಂದ ಬಂದಿವೆ.

ವಿಚಾರಣೆಗಳು, ದೂರುಗಳ ಮೇಲೆ ನಿಗಾ ಇಡಲು ಮತ್ತು ಅವುಗಳು ಇತ್ಯರ್ಥವಾಗಿವೆಯೇ ಎಂಬುದನ್ನು ಗಮನಿಸಲು ಹಾಗು ಇಲಾಖೆಯ ಹಿರಿಯ ಅಧಿಕಾರಿಗಳ ಮಾಹಿತಿಗಾಗಿ ಎಂ..ಎಸ್. ವರದಿಗಳನ್ನು ತಯಾರಿಸಲು ಅದಕ್ಕಾಗಿಯೇ ತಂಡವನ್ನು ನಿಯೋಜಿಸಲಾಗಿದೆ. ಕೆಲವು ಪ್ರಮುಖ ದೂರುಗಳಿಗೆ ಸಂಬಂಧಿಸಿ ತಂಡವು ದೂರುದಾರರನ್ನೆ ನೇರವಾಗಿ ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯುತ್ತದೆ. ಬಳಿಕ ಸಂಬಂಧಿತ ಏಜೆನ್ಸಿಯೊಂದಿಗೆ ದೂರನ್ನು ಪ್ರಸ್ತಾಪಿಸುತ್ತದೆ. ಇದು ದೂರುಗಳ ವಿಷಯದಲ್ಲಿ ಅವುಗಳ ಪರಿಹಾರದಲ್ಲಿ ವಿವಿಧ ಏಜೆನ್ಸಿಗಳ ದಕ್ಷತೆ ಮತ್ತು ಮೌಲ್ಯಮಾಪನಕ್ಕೆ ಸಹಕಾರಿಯಾಗುತ್ತದೆ. ವೃತ್ತಿಪರರ ತಂಡವು ಹಿರಿಯ ಅಧಿಕಾರಿಗಳಿಗೆ ಅವರ ಮಧ್ಯಪ್ರವೇಶದ ಪರಿಣಾಮವನ್ನು ತಿಳಿಯಲು ನೆರವಾಗುತ್ತದೆ ಮತ್ತು ಮೂಲಕ ಪ್ರತಿಯೊಬ್ಬರಿಗೂ ದೂರುಗಳ ಪರಿಹಾರದ ಬಗ್ಗೆ ಮಾಹಿತಿ ಇರುತ್ತದೆ.

ನಿಯಂತ್ರಣ ಕೊಠಡಿಗೆ ದೂರವಾಣಿ ಮೂಲಕ ಮತ್ತು -ಮೈಲ್ ಮೂಲಕ ವಿಚಾರಣೆ, ದೂರುಗಳು ಬರುತ್ತವೆ. ಯಾವುದೇ ಉತ್ಪಾದಕರು, ಸಾರಿಗೆದಾರರು, ವಿತರಕರು, ರಖಂ ಅಥವಾ -ವಾಣಿಜ್ಯ ಕಂಪೆನಿಗಳು ತಳ ಮಟ್ಟದಲ್ಲಿ ಸರಕುಗಳ ಸಾರಿಗೆ ಮತ್ತು ವಿತರಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸಂಪನ್ಮೂಲ ಕ್ರೋಢೀಕರಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವರು ಕೆಳಗಿನ ದೂರವಾಣಿ ಸಂಖ್ಯೆ/ -ಮೈಲ್ ಮೂಲಕ ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ: + 91 11 23062487

-ಮೈಲ್: controlroom-dpiit[at]gov[dot]in

ದೂರವಾಣಿ ಸಂಖ್ಯೆಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಿಸುತ್ತಿರುತ್ತವೆ, ತಳ ಮಟ್ಟದ ಸಂಕಷ್ಟಗಳ ದೂರುಗಳನ್ನು , ಉತ್ಪಾದಕರು, ಸಾರಿಗೆದಾರರು, ರಖಂ ವ್ಯಾಪಾರಸ್ಥರು, -ವಾಣಿಜ್ಯ ಕಂಪೆನಿಗಳು ಪ್ರಕ್ರಿಯಾ ಮತ್ತು ನೀತಿ ಸಂಬಂಧಿ ವಿಷಯಗಳಲ್ಲಿ ಸಮಸ್ಯೆಗಳಾದಾಗ ಸಲ್ಲಿಸುತ್ತಿದ್ದಾರೆ. ಇವುಗಳನ್ನು ನೊಂದಾಯಿಸಿಕೊಂಡು ಡಿ.ಪಿ...ಟಿ.ನಿಯಂತ್ರಣ ಕೊಠಡಿಯ ಸಿಬ್ಬಂದಿಗಳು ಅವುಗಳನ್ನು ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಗಳಿಗೆ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿಕೆಯೊಂದಿಗೆ ರವಾನಿಸುತ್ತಾರೆ ಮತ್ತು ದೂರುಗಳಿಗೆ ಸಂಬಂದಿಸಿ ಸಾಧ್ಯವಾದಷ್ಟು ಬೇಗ ಪರಿಹಾರ ಲಭಿಸುವುದನ್ನು ಖಾತ್ರಿಪಡಿಸಲಾಗುತ್ತದೆ.

ನಿಯಂತ್ರಣ ಕೊಠಡಿಗೆ ಬರುವ ದೂರುಗಳನ್ನು ಡಿ.ಪಿ...ಟಿ. ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ, ಅವರು ಸತತವಾಗಿ ಇವುಗಳ ಮೇಲೆ ನಿಗಾ ಇಡುತ್ತಾರೆ ಮತ್ತು ತುರ್ತು ಮಧ್ಯಪ್ರವೇಶ ಅವಶ್ಯವಾದರೆ ಅವರು ರಾಜ್ಯ ಸರಕಾರದ ಇತರ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಡಿ.ಪಿ...ಟಿ. ಎಲ್ಲಾ ಹಿರಿಯ ಅಧಿಕಾರಿಗಳಿಗೆ ನಿರ್ದಿಷ್ಟ ರಾಜ್ಯಗಳನ್ನು ಹಂಚಿಕೆ ಮಾಡಲಾಗಿದ್ದು, ಅವರು ಬಾಕಿ ಇರುವ ವಿಷಯಗಳನ್ನು ಬಗೆ ಹರಿಸಲು ರಾಜ್ಯಗಳ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿರುತ್ತಾರೆ. ರಾಜ್ಯ ಸರಕಾರದ ಕೈಗಾರಿಕೆ, ಸಾರಿಗೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಹಾಗು ಸಾರ್ವಜನಿಕ ವಿತರಣೆ ಇಲಾಖೆಗಳು ಇಂತಹ ದೂರುಗಳ ಪರಿಹಾರದ ಮೇಲೆ ನಿಗಾ ಇರಿಸಿರುತ್ತವೆ.

ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪೀಯೂಷ್ ಗೋಯಲ್ ಅವರೂ ಆಗಾಗ ನಿಯಂತ್ರಣ ಕೊಠಡಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ , ಅವುಗಳ ಸ್ವರೂಪದ ಬಗ್ಗೆ ಗಮನ ಹರಿಸುತ್ತಾರೆ. ಮತ್ತು ಸಂಬಂಧಿತ ಎಲ್ಲರಿಗೂ ದೇಶದ ಪ್ರತೀ ಭಾಗದಲ್ಲಿರುವ ಜನ ಸಾಮಾನ್ಯರಿಗೆ ಅವಶ್ಯಕ ಸಾಮಗ್ರಿಗಳು ತಲುಪುವುದನ್ನು ಖಾತ್ರಿಪಡಿಸಲು ಅವಶ್ಯ ಕ್ರಮಗಳನ್ನು ಜರುಗಿಸುವಂತೆ ಮನವಿ ಮಾಡುತ್ತಾರೆ. ಡಿ.ಪಿ...ಟಿ. ಕಾರ್ಯದರ್ಶಿ ಡಾ. ಗುರುಪ್ರಸಾದ್ ಮಹಾಪಾತ್ರ ಅವರು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಬಾಕಿ ಇರುವ ವಿಷಯಗಳ ಬಗ್ಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಜೊತೆಗಿನ ತಮ್ಮ ಸಭೆಗಳಲ್ಲಿ ಪರಾಮರ್ಶೆ ನಡೆಸುತ್ತಾರೆ.

2020 ಮಾರ್ಚ್ 24 ರಂದು ಕೇಂದ್ರ ಸರಕಾರವು ಕೋವಿಡ್ -19 ಹರಡುವಿಕೆಯನ್ನು ತಡೆಯಲು ರಾಷ್ಟ್ರವ್ಯಾಪೀ ಲಾಕ್ ಡೌನ್ ಘೋಷಿಸಿತ್ತು, ಆವಶ್ಯಕ ಸರಕುಗಳು ಮತ್ತು ಸೇವೆಗಳು ಎಲ್ಲ ನಾಗರಿಕರಿಗೂ ಲಭ್ಯವಾಗುವುದನ್ನು ಖಾತ್ರಿಪಡಿಸಲು ಅಗತ್ಯ ವ್ಯವಸ್ಥೆಗಳನ್ನೂ ಜಾರಿಗೆ ತಂದಿತ್ತು.

***



(Release ID: 1620534) Visitor Counter : 213