ಗೃಹ ವ್ಯವಹಾರಗಳ ಸಚಿವಾಲಯ

ಅಂಗಡಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿದ ಎಂ.ಎಚ್.ಎ. ಆದೇಶ ಕುರಿತು ಸ್ಪಷ್ಟೀಕರಣ

Posted On: 25 APR 2020 11:34AM by PIB Bengaluru

ಅಂಗಡಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿದ ಎಂ.ಎಚ್.. ಆದೇಶ ಕುರಿತು ಸ್ಪಷ್ಟೀಕರಣ

 

ಲಾಕ್ ಡೌನ್ ನಲ್ಲಿ ಅಂಗಡಿಗಳನ್ನು ತೆರೆಯುವುದಕ್ಕೆ ಸಂಬಂಧಿಸಿ ಅವಕಾಶ ನೀಡುವ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳನ್ನು ತಿದ್ದುಪಡಿ ಮಾಡಿ ಗೃಹ ವ್ಯವಹಾರಗಳ ಸಚಿವಾಲಯವು ನಿನ್ನೆ ಆದೇಶವೊಂದನ್ನು ಹೊರಡಿಸಿದೆ (https://pib.gov.in/PressReleaseIframePage.aspx?PRID=1618049)

ಆದೇಶವು ಕೆಳಗಿನ ಅಂಶಗಳನ್ನು ಸೂಚಿಸುತ್ತದೆ. :

  • ಗ್ರಾಮೀಣ ಪ್ರದೇಶಗಳಲ್ಲಿ, ಶಾಪಿಂಗ್ ಮಾಲ್ ಗಳಲ್ಲಿರುವುದನ್ನು ಹೊರತುಪಡಿಸಿ, ಎಲ್ಲಾ ಅಂಗಡಿಗಳು ತೆರೆಯಲು ಅವಕಾಶ ನೀಡಬಹುದು.
  • ನಗರ ಪ್ರದೇಶಗಳಲ್ಲಿ, ಎಲ್ಲಾ ಏಕಾಂಗಿ (ಬಿಡಿ) ಅಂಗಡಿಗಳು, ನೆರೆ ಹೊರೆಯ ಅಂಗಡಿಗಳು ಮತ್ತು ವಸತಿ ಸಮುಚ್ಚಯದಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಮಾರುಕಟ್ಟೆ/ ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಮತ್ತು ಶಾಪಿಂಗ್ ಮಾಲ್ ಗಳಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ.

-ಕಾಮರ್ಸ್ ಕಂಪೆನಿಗಳಿಗೆ ಅವಶ್ಯಕ ಸರಕುಗಳ ಪೂರೈಕೆಗೆ ಒದಗಿಸಲಾಗಿರುವ ಅವಕಾಶ ಮುಂದುವರೆಯುತ್ತದೆ ಎಂದು ಸ್ಪಷ್ಟೀಕರಿಸಲಾಗಿದೆ.

ಮುಂದುವರೆದು, ಮದ್ಯ ವ್ಯಾಪಾರ ಮತ್ತು ಇತರ ವಸ್ತುಗಳ ವ್ಯಾಪಾರ ನಿರ್ಬಂಧವು, ಕೋವಿಡ್ -19 ಕ್ಕಾಗಿರುವ ರಾಷ್ಟ್ರೀಯ ನಿರ್ದೇಶನಗಳ ಅನ್ವಯ , ಅದರಲ್ಲಿ ಸೂಚಿಸಿದಂತೆ ಮುಂದುವರೆಯುತ್ತದೆ ಎಂದೂ ಸ್ಪಷ್ಟೀಕರಿಸಲಾಗಿದೆ

ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳಲ್ಲಿ ಸೂಚಿಸಿದಂತೆ , ಅಂಗಡಿಗಳು ಆಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಿದ ಪ್ರದೇಶದಲ್ಲಿ ಬರುತ್ತಿದ್ದರೆ ಅದು ಗ್ರಾಮೀಣ ಇರಲಿ ಅಥವಾ ನಗರ ಇರಲಿ ಅವುಗಳನ್ನು ತೆರೆಯಲು ಅನುಮತಿ ಇಲ್ಲ.

***(Release ID: 1618562) Visitor Counter : 161