PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 18 APR 2020 6:48PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

 • ದೇಶದಲ್ಲಿ ಒಟ್ಟು 14378 ಕೋವಿಡ್ -19 ಪ್ರಕರಣಗಳು ದೃಢಪಟ್ಟ ಬಗ್ಗೆ ವರದಿಯಾಗಿದೆ.
 • ಕ್ರಿಯಾ ಯೋಜನೆ ಅನುಷ್ಟಾನ ಉತ್ತಮ ಫಲಿತಾಂಶಗಳನ್ನು ತರುತ್ತಿದೆ. ಕಳೆದ 28 ದಿನಗಳಲ್ಲಿ ಮತ್ತು 14 ದಿನಗಳಲ್ಲಿ  ಕೋವಿಡ್ ಪ್ರಕರಣ ರಹಿತ ಜಿಲ್ಲೆಗಳ ಸಂಖ್ಯೆ ಹೆಚ್ಚುತ್ತಿದೆ.
 • ಭಾರತಕ್ಕೆ ಭೇಟಿ ನೀಡಲು ವಿದೇಶೀಯರಿಗೆ ನೀಡಲಾದ  ವೀಸಾಗಳನ್ನು ಮೇ 3 ರವರೆಗೆ ಅಮಾನತುಗೊಳಿಸಲಾಗಿದೆ.
 • ಕೋವಿಡ್ -19 ಕ್ಕಾಗಿ 10 ಲಕ್ಷ ರೂ. ಪರಿಹಾರ ಪಾವತಿಯನ್ನು ಗ್ರಾಮೀಣ ಡಾಕ್ ಸೇವಕರು ಸಹಿತ ಎಲ್ಲಾ ಅಂಚೆ ಸಿಬ್ಬಂದಿಗಳಿಗೆ ವಿಸ್ತರಿಸಲಾಗಿದೆ.
 • ಏಪ್ರಿಲ್ 18 ರಿಂದ 8.2 ಲಕ್ಷ ಸಣ್ಣ ವ್ಯಾಪಾರಸ್ತರಿಗೆ ಒಟ್ಟು 5204 ಕೋ.ರೂ.ಗಳ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ.
 • ಪ್ರಸ್ತುತ ಇರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳನ್ನು ಅವಕಾಶವಾದಿತ್ವದಿಂದ ವಶಕ್ಕೆ ತೆಗೆದುಕೊಳ್ಳುವ/ ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಎಫ್.ಡಿ.ಐ. ನೀತಿಯನ್ನು ತಿದ್ದುಪಡಿ ಮಾಡಲಾಗಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ ಡೇಟ್

ದೇಶದಲ್ಲಿ ಕೋವಿಡ್-19ರ ಒಟ್ಟು 14,378 ಪ್ರಕರಣಗಳು ದೃಢಪಟ್ಟ ಬಗ್ಗೆ ವರದಿಯಾಗಿದೆ. ಒಟ್ಟು ಪ್ರಕರಣಗಳ 13.82%  ಅಂದರೆ 1992 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕ್ರಿಯಾ ಯೋಜನೆಯ ಅನುಷ್ಟಾನ 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 47 ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ನೀಡಲು ಆರಂಭಿಸಿದೆ. ಕೊಡಗು (ಕರ್ನಾಟಕ) ಈ ಪಟ್ಟಿಗೆ ಸೇರಿದ ಹೊಸ ಜಿಲ್ಲೆಯಾಗಿದೆ, ಇದರ ಜೊತೆ ಮಾಹೆ (ಪುದುಚೇರಿ) ಯೂ ಸೇರಿದೆ. ಇಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. 12 ರಾಜ್ಯಗಳ 22 ಜಿಲ್ಲೆಗಳಲ್ಲಿ  ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.

ವಿವರಗಳಿಗೆ : https://pib.gov.in/PressReleseDetail.aspx?PRID=1615924

ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್, ದಿಲ್ಲಿಯ ಆರೋಗ್ಯ ಸಚಿವರು , ದಿಲ್ಲಿಯ ವಿವಿಧ ಆಸ್ಪತ್ರೆಗಳ ವೈದ್ಯಕೀಯ ಸುಪರಿಂಟೆಂಡೆಂಟರು ಮತ್ತು ಕೇಂದ್ರ ಹಾಗು ದಿಲ್ಲಿ ಸರಕಾರದ ಆರೋಗ್ಯಾಧಿಕಾರಿಗಳ ಜೊತೆ ವಿ.ಸಿ. ನಡೆಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಸಚಿವರು ಕೋವಿಡ್ -19  ಇಲ್ಲದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅನಾರೋಗ್ಯದ ವಿರುದ್ದ ಹೋರಾಟದಲ್ಲಿ ಅಷ್ತೇ ಅನುಕಂಪದಿಂದ ಚಿಕಿತ್ಸೆ ಒದಗಿಸುವಂತೆ ಆಸ್ಪತ್ರೆಗಳಿಗೆ ಮನವಿ ಮಾಡಿದ್ದಾರೆ. ಸ್ವಯಂಸೇವಾ ರಕ್ತ ದಾನಿಗಳನ್ನು ಉತ್ತೇಜಿಸಿ ರಕ್ತದ ವರ್ಗಾವಣೆಗೆ ಸಾಕಷ್ಟು ರಕ್ತದ ದಾಸ್ತಾನು ಇಡುವಂತೆ ಹೇಳಿದ ಅವರು ಇದಕ್ಕಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಜೊತೆಗೂಡಿ ವಿವಿಧ ಮೊಬೈಲ್ ರಕ್ತ ಸಂಗ್ರಹ ವ್ಯಾನ್ ಗಳನ್ನು ಬಳಸಿಕೊಳ್ಳುವಂತೆಯೂ ಸಲಹೆ ಮಾಡಿದರು. ಯಾವುದೇ ಆಸ್ಪತ್ರೆಗಳು ಅಗತ್ಯದಲ್ಲಿರುವ ರೋಗಿಗಳಿಗೆ ತಕ್ಷಣ  ಚಿಕಿತ್ಸೆ ಒದಗಿಸದೆ ನಿರಾಕರಿಸಿದರೆ ಅಂತಹ ತಪ್ಪಿತಸ್ಥ ಆರೋಗ್ಯ ರಕ್ಷಣಾ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.   

ವಿವರಗಳಿಗೆ: https://pib.gov.in/PressReleseDetail.aspx?PRID=1615659

ಕೆಲವು ವಿಭಾಗಗಳನ್ನು ಹೊರತುಪಡಿಸಿ ವಿದೇಶೀಯರಿಗೆ ಹಾಲಿ ನೀಡಲಾಗಿರುವ ಎಲ್ಲಾ ವೀಸಾ ಮತ್ತು ವಲಸೆ ತಪಾಸಣಾ ಕೇಂದ್ರಗಳ ಮೂಲಕ ಭಾರತದೊಳಗೆ ಬರುವ ಪ್ರಯಾಣಿಕ ಸಂಚಾರವನ್ನು 2020 ರ ಮೇ 3 ರವರೆಗೆ ಅಮಾನತಿನಲ್ಲಿಡಲಾಗಿದೆ

ದೇಶದೊಳಗೆ ಕೋವಿಡ್- 19 ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ , ಎಂ.ಎಚ್.ಎ. ಯು ರಾಜತಾಂತ್ರಿಕರಿಗೆ, ಅಧಿಕಾರಿಗಳಿಗೆ, ವಿಶ್ವಸಂಸ್ಥೆ/ ಅಂತಾರಾಷ್ಟ್ರೀಯ ಸಂಘಟನೆಗಳು , ಉದ್ಯೋಗ, ಮತ್ತು ಯೋಜನಾ ವಿಭಾಗದವುಗಳನ್ನು ಹೊರತುಪಡಿಸಿ ವಿದೇಶೀಯರಿಗೆ ನೀಡಲಾಗಿರುವ ಹಾಲಿ ವೀಸಾಗಳ ಅಮಾನತು ಅವಧಿಯನ್ನು 2020 ರ ಮೇ 3 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಅದೇ ರೀತಿ 106 ವಲಸೆ ತಪಾಸಣಾ ಕೇಂದ್ರಗಳಲ್ಲಿ ಯಾವುದೇ ಕೇಂದ್ರದ  ಮೂಲಕ ಭಾರತದೊಳಗೆ ಬರುವ ಪ್ರಯಾಣಿಕ ಸಂಚಾರವನ್ನು 2020 ರ ಮೇ 3 ರವರೆಗೆ ಅಮಾನತುಗೊಳಿಸಿ ಎಂ.ಎಚ್.ಎ. ನಿರ್ದೇಶನ ನೀಡಿದೆ. ಆದರೆ ಅಂತಹ ನಿರ್ಬಂಧವು ಯಾವುದೇ ಆವಶ್ಯಕ ಅಥವಾ ಅವಶ್ಯಕವಲ್ಲದ ಸರಕುಗಳನ್ನು ಪೂರೈಸುವ ವಾಹನಗಳಿಗೆ , ವಿಮಾನಗಳಿಗೆ, ಹಡಗುಗಳಿಗೆ, ರೈಲುಗಳಿಗೆ ಇತ್ಯಾದಿಗಳಿಗೆ ಅನ್ವಯಿಸುವುದಿಲ್ಲ.

ವಿವರಗಳಿಗೆ : https://pib.gov.in/PressReleseDetail.aspx?PRID=1615700

ಕೋವಿಡ್ -19  ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರ ಮೇ ತಿಂಗಳ ದಿನಾಂಕ 3 ರವರೆಗೆ ಪ್ರವಾಸ ನಿರ್ಬಂಧದಿಂದಾಗಿ ಪ್ರಸ್ತುತ ಭಾರತದಲ್ಲಿರುವ ವಿದೇಶಿಯರಿಗೆ ಕಾನ್ಸುಲಾರ್ ಸೇವೆ ಒದಗಣೆ

ಕೋವಿಡ್ -19  ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರವಾಸ ನಿರ್ಬಂಧದಿಂದಾಗಿ ಪ್ರಸ್ತುತ ಭಾರತದಲ್ಲಿರುವ ವಿದೇಶಿಯರಿಗೆ ಕಾನ್ಸುಲಾರ್ ಸೇವೆ ಒದಗಣೆ ಬಗ್ಗೆ ಎಂ.ಎಚ್.ಎ.ಯು ದಿನಾಂಕ 28-03-2020 ರ ಆದೇಶ ಹೊರಡಿಸಿದೆ. ಮೊದಲು ಈ ಸೇವೆಯನ್ನು 2020 ರ ಏಪ್ರಿಲ್ 30 ರವರೆಗೆ ಒದಗಿಸಲಾಗಿತ್ತು. ವಿಷಯ ಪರಿಶೀಲನೆ ಬಳಿಕ ವಿದೇಶಿಯರ ಪ್ರಾದೇಶಿಕ ನೊಂದಾವಣೆ ಕಚೇರಿ ಅಧಿಕಾರಿಗಳು/ ವಿದೇಶಿಯರ ನೋಂದಣೆ ಅಧಿಕಾರಿಗಳು ಪ್ರಸ್ತುತ ಭಾರತದಲ್ಲಿ ಸಿಲುಕಿರುವ ವಿದೇಶಿಯರಿಗೆ ಕಾನ್ಸುಲಾರ್ ಸೇವೆ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1615698

ಎಲ್ಲಾ ಅಂಚೆ ಸಿಬ್ಬಂದಿಗಳಿಗೆ 10 ಲಕ್ಷ ರೂ. ಪರಿಹಾರ

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿರುವಾಗ ರೋಗದಿಂದ ಮೃತಪಟ್ಟರೆ ಗ್ರಾಮೀಣ ಡಾಕ್ ಸೇವಕರು (ಜಿ.ಡಿ.ಎಸ್.) ಸಹಿತ ಎಲ್ಲಾ ಅಂಚೆ ಸಿಬ್ಬಂದಿಗಳಿಗೆ 10 ಲಕ್ಶ ರೂಪಾಯಿಗಳ ಪರಿಹಾರ ಮೊತ್ತ ಪಾವತಿಗೆ ನಿರ್ಧರಿಸಲಾಗಿದೆ. ಈ ಸಂಬಂಧಿತ ಮಾರ್ಗದರ್ಶಿಗಳು ತಕ್ಷಣದಿಂದಲೇ ಜಾರಿಗೆ ಬಂದು ಕೋವಿಡ್ -19 ಸಂಕಷ್ಟ ಪರಿಹಾರವಾಗುವವರೆಗೆ ಮುಂದುವರೆಯುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615938

ಕೋವಿಡ್ -19  ಪರಿಸ್ಠಿತಿಗಳಲ್ಲಿ ಜಿ.ಎಸ್.ಟಿ. ತೆರಿಗೆದಾರರಿಗೆ ಸಹಾಯ ಮಾಡಲು ಬದ್ದ: ಸಿ.ಬಿ.ಐ.ಸಿ.

2020 ರ ಮಾರ್ಚ್ 30 ರಿಂದ ಸಿ.ಬಿ.ಐ.ಸಿ. 5,575 ಕೋ.ರೂ. ಮೊತ್ತದ 12,923 ಮರುಪಾವತಿ ಕ್ಲೇಮುಗಳನ್ನು ಸಂಸ್ಕರಿಸಿದೆ. ಕಳೆದ ವಾರದಲ್ಲಿಯೇ ಸಿ.ಬಿ.ಐ.ಸಿ.ಯು 3854 ಕೋ.ರೂ.ಮೊತ್ತದ 7,873 ಕ್ಲೇಮುಗಳನ್ನು ಸಂಸ್ಕರಿಸಿದೆ. ಸಿ.ಬಿ.ಐ.ಸಿ.ಯು ತನ್ನ ಸುತ್ತೋಲೆ ಸಂಖ್ಯೆ 133 ದಿನಾಂಕ 31.03.2020 ರನ್ವಯ ವ್ಯಾಪಾರೋದ್ಯಮ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿರುವ ಸಿ.ಬಿ.ಐ.ಸಿ. ಯು ಜಿ.ಎಸ್.ಟಿ. ರಿಟರ್ನ್ ಸಲ್ಲಿಕೆದಾರರು ತ್ವರಿತವಾಗಿ ಐ.ಟಿ.ಸಿ. ಪಡೆಯಲು ಮತ್ತು ತಪ್ಪು ಐ.ಟಿ.ಸಿ. ಕ್ಲೇಮುಗಳನ್ನು ಸೂಕ್ತ ಮಾಹಿತಿ ಇಲ್ಲದೆ ಸಂಸ್ಕರಿಸದೇ ಇರಲು ಕೈಗೊಂಡ ಕ್ರಮಗಳು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ತೆರಿಗೆ ಪಾವತಿದಾರರಿಗೆ ಕೋವಿಡ್ -19 ರಂತಹ ಪರಿಸ್ಥಿತಿಯಲ್ಲೂ ತೊಂದರೆ ಕೊಡಲಾಗುತ್ತಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1615904

ಎಂ.ಎಸ್.ಎಂ.ಇ. ಗಳಿಗೆ ಪರಿಹಾರವಾಗಿ, ಕಳೆದ 10 ದಿನಗಳಲ್ಲಿ 5,204 ಕೋ.ರೂ.ಗಳ ಮೊತ್ತದ ಐ-ಟಿ. ಮರುಪಾವತಿ ಮಾಡಲಾಗಿದೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿ.ಬಿ.ಡಿ.ಟಿ.) ಇಂದು ಸುಮಾರು 8.2 ಲಕ್ಷ  ಸಣ್ಣ ವ್ಯಾಪಾರೋದ್ಯಮಗಳ (ಮಾಲಿಕರು, ಸಂಸ್ಥೆಗಳು, ಕಾರ್ಪೋರೇಟ್ ಗಳು ಮತ್ತು ಟ್ರಸ್ಟ್ ಗಳು) ಒಟ್ಟು 5,204 ಕೋ.ರೂ. ಮೌಲ್ಯದ ಆದಾಯ ತೆರಿಗೆ ಮರುಪಾವತಿಯನ್ನು 2020 ರ ಏಪ್ರಿಲ್ 8 ರಿಂದ ನೀಡಲಾಗಿದೆ ಎಂದು ಹೇಳಿದೆ. ಈ ಆದಾಯ ತೆರಿಗೆ ಮರುಪಾವತಿಗಳು ಎಂ.ಎಸ್.ಎಂ.ಇ.ಗಳಿಗೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವೇತನ ಕಡಿತ, ಲೇ ಆಫ್ ಗಳಿಲ್ಲದೆ ವ್ಯಾಪಾರಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡುತ್ತವೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615695

ಪ್ರಸ್ತುತ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳ ಅವಕಾಶವಾದೀ ಸ್ವಾಧೀನತೆ / ವಶಪಡಿಸಿಕೊಳ್ಳುವಿಕೆ ನಿಯಂತ್ರಿಸಲು ಎಫ್.ಡಿ.ಐ. ನೀತಿಗೆ ಸರಕಾರ ತಿದ್ದುಪಡಿ ತಂದಿದೆ

ಪ್ರಸ್ತುತ ಇರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತೀಯ ಕಂಪೆನಿಗಳ ಅವಕಾಶವಾದೀ ಸ್ವಾಧೀನತೆ / ವಶಪಡಿಸಿಕೊಳ್ಳುವಿಕೆ ನಿಯಂತ್ರಿಸಲು ಸರಕಾರ ವಿದೇಶಿ ನೇರ ಹೂಡಿಕೆ ವ್ಯಾಪ್ತಿಯನ್ನು ಪರಿಷ್ಕರಿಸಿದೆ ಮತ್ತು ಸಮಗ್ರ ಎಫ್.ಡಿ.ಐ. ನೀತಿ, 2017 ರ ವ್ಯಾಪ್ತಿಗೆ ತಿದ್ದುಪಡಿ ಮಾಡಿದೆ. ಈಗ ದೇಶದ ಭೂಭಾಗದಲ್ಲಿ  ಅಥವಾ ಭಾರತದಲ್ಲಿ ಹೂಡಿಕೆ ಮಾಡಿರುವ ಫಲಾನುಭವಿ ಮಾಲಕ ದೇಶದಲ್ಲಿರಲಿ ಅಥವಾ ಯಾವುದೇ ದೇಶದ ನಾಗರಿಕರಾಗಿರಲಿ ಅವರು ಸರಕಾರಿ ಮಾರ್ಗದಲ್ಲಿಯಷ್ಟೇ ಹೂಡಿಕೆ ಮಾಡಬಹುದಾಗಿದೆ.

ವಿವರಗಳಿಗಾಗಿ : https://pib.gov.in/PressReleseDetail.aspx?PRID=1615922

ಪ್ರಧಾನ ಮಂತ್ರಿ ಮತ್ತು ದಕ್ಷಿಣ ಆಫ್ರಿಕಾ ಗಣತಂತ್ರದ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಗಣತಂತ್ರದ ಅಧ್ಯಕ್ಷ ಗೌರವಾನ್ವಿತ ಸಿರಿಲ್ ರಾಮಪೋಸಾ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮುಂದೊಡ್ಡಿರುವ ಆಂತರಿಕ, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಬಗ್ಗೆ ಇಬ್ಬರು ನಾಯಕರೂ ವಿಚಾರ ವಿನಿಮಯ ಮಾಡಿಕೊಂಡರು. ಈ ಸವಾಲಿನ ಸಮಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅವಶ್ಯಕ ಔಷಧಿಗಳ ಪೂರೈಕೆಯನ್ನು ಮಾಡುವ ನಿಟ್ಟಿನಲ್ಲಿ ಸಾಧ್ಯ ಇರುವ ಎಲ್ಲಾ ನೆರವನ್ನೂ ಭಾರತವು ನೀಡುವುದಾಗಿ ಪ್ರಧಾನ ಮಂತ್ರಿ ಅವರು ಭರವಸೆ ನೀಡಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615544

ಪ್ರಧಾನ ಮಂತ್ರಿ ಮತ್ತು ಈಜಿಪ್ಟ್ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

ಪ್ರಧಾನ  ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ಅಧ್ಯಕ್ಷ ಗೌರವಾನ್ವಿತ ಶ್ರೀ ಅಬ್ದೆಲ್ ಫತಾಹ ಎಲ್ -ಸಿಸಿ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಜಾಗತಿಕ ಪರಿಸ್ಥಿತಿಯ ಬಗ್ಗೆ ಈ ನಾಯಕರು ಚರ್ಚಿಸಿದರು. ಮತ್ತು ಆಯಾ ಸರಕಾರಗಳು ಅವರ ಜನಸಮುದಾಯವನ್ನು ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ವಿನಿಮಯ ಮಾಡಿಕೊಂಡರು. ಪ್ರಧಾನ ಮಂತ್ರಿ ಅವರು ಈ ಕಠಿಣ ಸಂದರ್ಭದಲ್ಲಿ ಔಷಧಿ ಪೂರೈಕೆ ಲಭ್ಯತೆಯನ್ನು ಖಾತ್ರಿಪಡಿಸಲು ಅವಶ್ಯವಾದ ಎಲ್ಲಾ ಬೆಂಬಲವನ್ನು ಭಾರತವು ಒದಗಿಸುವುದೆಂದು ಈಜಿಪ್ಟ್ ಅಧ್ಯಕ್ಷರಿಗೆ ಭರವಸೆ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1615485

ಲಾಕ್ ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ವಿವಿಧ ವ್ಯಾಪಾರ ಮುಂದುವರಿಕೆ ಕ್ರಮಗಳ ಬಗ್ಗೆ ಕೃಷಿ ಸಚಿವರ ಸಮಾಲೋಚನೆ

ಸ್ಯಾಂಪಲ್ ಗಳ ಪರೀಕ್ಷೆ ಮತ್ತು ಟ್ರ್ಯಾಕ್ಟರುಗಳ , ಟಿಲ್ಲರುಗಳು, ಹಾರ್ವೆಸ್ಟರುಗಳು ಮತ್ತು 51 ಕೃಷಿ ಯಂತ್ರೋಪಕರಣಗಳ ಅಪ್ ಡೇಟಿಂಗ್ ಅನುಮೋದನೆಗಳನ್ನು ಸರಕಾರ ವರ್ಷಾಂತ್ಯದವರೆಗೆ ಮುಂದೂಡಿದೆ. ಬೀಜ ಡೀಲರುಗಳ ಪರವಾನಗಿ ಮಾನ್ಯತಾ ಅವಧಿ ಮತ್ತು ಆಮದು ಪರವಾನಗಿ ಮಾನ್ಯತಾ ಅವಧಿಯನ್ನು 2020 ರ ಸೆಪ್ಟೆಂಬರ್ ವರೆಗೆ ಮುಂದೂಡಿದೆ. , ಇದಲ್ಲದೆ ಪ್ಯಾಕ್ ಹೌಸ್ ಗಳು, ಸಂಸ್ಕರಣಾ ಘಟಕಗಳು, ಮತ್ತು ಉಪಚಾರ ಸೌಲಭ್ಯಗಳ ಮಾನ್ಯತಾ ಅವಧಿ 30 ನೇ ಜೂನ್ ತಿಂಗಳಿಗೆ ಅಂತ್ಯಗೊಳ್ಳುವುದಿದ್ದರೆ ಅದನ್ನು ಒಂದು ವರ್ಷ ವಿಸ್ತರಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1615899

ಎಂ.ಎಸ್. ಪಿ. ಯಲ್ಲಿ ರೈತರಿಂದ ಬೇಳೆ ಕಾಳುಗಳು ಮತ್ತು ತೈಲ ಬೀಜಗಳ ನೇರ ಖರೀದಿ ಕಾರ್ಯಾಚರಣೆಗಳು

ಭಾರತ ಸರಕಾರವು ಕೇಂದ್ರೀಯ ನೋಡಲ್ ಏಜೆನ್ಸಿಗಳಾದ ನಫೇಡ್ ಮತ್ತು ಎಫ್.ಸಿ.ಐ.ಗಳ ಮೂಲಕ ರೈತರಿಗೆ ಉತ್ತಮ ಲಾಭ ತಂದುಕೊಡುವ ಭರವಸೆ  ನೀಡಲು ಕಾರ್ಯತತ್ಪರವಾಗಿದೆ. ಹಲವು ರಾಜ್ಯಗಳಲ್ಲಿ 2020-21 ರ ರಾಬಿ ಅವಧಿಯ ಅಧಿಸೂಚಿತ ಸಾಮಗ್ರಿಗಳನ್ನು ರೈತರಿಂದ ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ಖರೀದಿಸಲು  ಆರಂಭಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಸಕಾಲದಲ್ಲಿ ಮಾರುಕಟ್ಟೆ ಬೆಂಬಲ ಒದಗಿಸಲಾಗಿದೆ. ಕೋವಿಡ್-19  ಜಾಗತಿಕ ಸಾಂಕ್ರಾಮಿಕ ನಿರ್ವಹಿಸಲು ಹೊರಡಿಸಲಾಗಿರುವ ಮಾರ್ಗದರ್ಶಿಗಳನ್ನು ಅನುಸರಿಸಿ ಗರಿಷ್ಟ ಸಂಖ್ಯೆಯಲ್ಲಿ ಕೃಷಿಕರನ್ನು ತಲುಪಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615776

ದೇಶದಲ್ಲಿಯ ಕಾರ್ಮಿಕರ ಕುಂದು ಕೊರತೆ ಪರಿಹರಿಸಲು ಸಮನ್ವಯದ ಪ್ರಯತ್ನಗಳಿಗಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ  ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು  ಶ್ರೀ ಸಂತೋಷ್ ಗಂಗ್ವಾರ್ ಪತ್ರ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡಲು ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದಲ್ಲಿಯ ಕಾರ್ಮಿಕರು/ಕೆಲಸಗಾರರ ಸಮಸ್ಯೆಗಳನ್ನು ಗಮನಿಸಲು ಕೇಂದ್ರ ಸರಕಾರ ಸ್ಥಾಪಿಸಿರುವ 20 ನಿಯಂತ್ರಣ ಕೊಠಡಿಗಳ ಜೊತೆ ಸಮನ್ವಯಕ್ಕಾಗಿ ಕಾರ್ಮಿಕ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು  ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವ (ಉಸ್ತುವಾರಿ) ರು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳನ್ನು ಕೋರಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615939

ಕೋವಿಡ್ -19 ರ ವಿರುದ್ದ ಹೋರಾಡಲು ಪಿ.ಪಿ.ಇ.ಗಳು ಮತ್ತು ಇತರ ಉತ್ಪನ್ನಗಳ ಉತ್ಪಾದನೆ ಕುರಿತು ವೆಬಿನಾರ್

ಕೋವಿಡ್ -19 ರ ವಿರುದ್ದ ಹೋರಾಡಲು ಸರಕಾರ ಮತ್ತು ಸರಕಾರೇತರ ವಲಯಗಳಿಗೆ ಉಪಕರಣಗಳ ಬೇಡಿಕೆ ಹೆಚ್ಚುತ್ತಿದ್ದು, ಅದನ್ನು  ಪೂರೈಸಲು ದೇಶೀಯ ಕೈಗಾರಿಕೆಗಳು ಅವುಗಳ ಉತ್ಪಾದನಾ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಉತ್ಪಾದಕರ (ಎಸ್.ಐ.ಡಿ.ಎಂ.) ಸೊಸೈಟಿಯು ಡಿ.ಆರ್.ಡಿ.ಒ. ದ ಸಹಯೋಗದೊಂದಿಗೆ ವೆಬಿನಾರನ್ನು ಆಯೋಜಿಸಿತ್ತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615707

ಸ್ಪರ್ಧಾತ್ಮಕವಾಗಿ ಉಳಿಯಲು ನವೀನ ತಂತ್ರಜ್ಞಾನ ಅಳವಡಿಕೊಳ್ಳುವಂತೆ ಮತ್ತು ಆಮದು ಬದಲಿಗೆ  ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಕೈಗಾರಿಕೆಗಳಿಗೆ ಶ್ರೀ ಗಡ್ಕರಿ ಕರೆ ನೀಡಿದ್ದಾರೆ

ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ಏಪ್ರಿಲ್ 20 ರಿಂದ ಸಡಿಲಿಕೆಯಾಗುವ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಪುನಶ್ಚೇತನ ಕುರಿತಂತೆ ಸಚಿವರು ಕೈಗಾರಿಕಾ ಸಂಘಟನೆಗಳ ಜೊತೆ ಸಂವಾದ ನಡೆಸಿದರು. ಎಂ.ಎಸ್.ಎಂ.ಇ. ವಲಯದ ಪುನಃಶ್ಚೇತನ ಕುರಿತಂತೆ ಉಲ್ಲೇಖಿಸಿದ ಸಚಿವರು ಉದ್ಯಮವು ರಫ್ತು ಹೆಚ್ಚಳದತ್ತ ವಿಶೇಷ ಒತ್ತು ನೀಡಬೇಕು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ವಿದ್ಯುತ್/ ಇಂಧನ  ಖರ್ಚು, ಸಾಗಾಟ ಖರ್ಚು, ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1615673

ದೇಶಾದ್ಯಂತ ಅವಶ್ಯ ವೈದ್ಯಕೀಯ ಪೂರೈಕೆಗಳನ್ನು ಸಾಗಿಸಲು ಲೈಫ್ ಲೈನ್ ಉಡಾನ್ ಅಡಿಯಲ್ಲಿ 274 ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ

ಕೋವಿಡ್ -19 ರ ವಿರುದ್ದ ಭಾರತದ ಯುದ್ದವನ್ನು ಬೆಂಬಲಿಸಲು ದೇಶದಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಿಗೆ ಅವಶ್ಯಕ ವೈದ್ಯಕೀಯ ಸರಕನ್ನು ಪೂರೈಸಲು ಎಂ.ಒ.ಸಿ.ಎ.ಯು ಲೈಫ್ ಲೈನ್ ಉಡಾನ್ ವಿಮಾನಗಳ ಕಾರ್ಯಾಚರಣೆಯನ್ನು ಮಾಡಿದೆ. ಏರಿಂಡಿಯಾ, ಅಲಯೆನ್ಸ್ ಏರ್ , ಐ.ಎ.ಎಫ್., ಮತ್ತು ಖಾಸಗಿ ಕ್ಯಾರಿಯರ್ ಗಳ  274 ವಿಮಾನಗಳನ್ನು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯಾಚರಣೆಗೆ ಇಳಿಸಲಾಗಿದೆ. ಇದರಲ್ಲಿ 175 ವಿಮಾನಗಳನ್ನು ಏರಿಂಡಿಯಾ ಮತ್ತು ಅಲಯೆನ್ಸ್ ಏರ್ ಗಳು ನಿರ್ವಹಿಸಿವೆ. ಇಂದಿನವರೆಗೆ ಸಾಗಾಣಿಕೆ ಮಾಡಲಾದ ಸರಕಿನ ಪ್ರಮಾಣ ಸುಮಾರು 463.15 ಟನ್ ಗಳು. ಲೈಫ್ ಲೈನ್ ಉಡಾನ್ ವಿಮಾನಗಳು ಇಂದಿನವರೆಗೆ ಕ್ರಮಿಸಿದ ವಾಯು ದೂರ 2,73,275 ಕಿಲೋ ಮೀಟರ್.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615937

ಭಾರತೀಯ ರೈಲ್ವೇಯು ನವೀನ ಚಿಂತನೆಯನ್ನು ಅಳವಡಿಸಿಕೊಂಡು, ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ ದಾಖಲೆ ಮೈಲಿಗಲ್ಲು ಸ್ಥಾಪಿಸುವಂತಹ ಪ್ರಮಾಣದಲ್ಲಿ ಸರಕು ಸಾಗಾಣಿಕೆ ಮಾಡಿದೆ

ಉತ್ತರದಿಂದ ಅನ್ನಪೂರ್ಣ ರೈಲುಗಳು ಮತ್ತು ದಕ್ಷಿಣದಿಂದ ಜೈ ಕಿಸಾನ್ ರೈಲುಗಳು ಭಾರೀ ಗಾತ್ರದ ಮತ್ತು ಅತಿ ದೂರ ಸಾಗುವ ವೇಗದ ವಿಶೇಷ ಸರಕು ಸಾಗಾಟದ ರೈಲುಗಳಾಗಿ ಗುರುತಿಸಲ್ಪಟ್ಟಿವೆ. 5000 ಟನ್ ಮತ್ತು 80 ಕ್ಕೂ ಅಧಿಕ ರೇಕುಗಳನ್ನು ಹೊಂದಿರುವ ಇವು ಅತಿ ವೇಗದಲ್ಲಿ ಸಾಗಿ ದೇಶವನ್ನು ಜೋಡಿಸುತ್ತವೆ ಮತ್ತು ಆಹಾರ ಸಾಮಗ್ರಿಗಳನ್ನು ಸಾಗಿಸುತ್ತವೆ. ಈ ವರ್ಷದ ಏಪ್ರಿಲ್ 1 ರಿಂದ ಏಪ್ರಿಲ್ 16 ರವರೆಗೆ 3.2 ಮಿಲಿಯನ್ ಟನ್ನಿಗೂ ಅಧಿಕ ಪ್ರಮಾಣದ  ಆಹಾರ ಧಾನ್ಯಗಳನ್ನು ಇವು ಹೊತ್ತೊಯ್ದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಾಗಾಟ ಮಾಡಲಾದ ಪ್ರಮಾಣ 1.29 ಮಿಲಿಯನ್ ಟನ್.

ವಿವರಗಳಿಗೆ: https://pib.gov.in/PressReleseDetail.aspx?PRID=1615867

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿ.ಡಿ.ಎಸ್.) ಸಾಕಷ್ಟು ಆಹಾರ ಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಲು , ರೈಲ್ವೇಯು ಕಳೆದ ವರ್ಷದಕ್ಕಿಂತ ದುಪ್ಪಟ್ಟು ಪ್ರಮಾಣದ  ಆಹಾರ ಧಾನ್ಯಗಳನ್ನು ಸಾಗಾಟಮಾಡಿದೆ

1500 ಕ್ಕೂ ಅಧಿಕ ರೇಕ್ ಗಳು ಮತ್ತು 4.2 ಮಿಲಿಯನ್ ಟನ್ ಗೂ ಅಧಿಕ ಆಹಾರ ಧಾನ್ಯಗಳನ್ನು ಲಾಕ್ ಡೌನ್ ಅವಧಿಯಾದ 2020 ರ ಮಾರ್ಚ್ 25 ರಿಂದ ಏಪ್ರಿಲ್ 17 ರ ನಡುವೆ ಲೋಡ್ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಈ ಪ್ರಮಾಣ 2.31 ಮಿಲಿಯನ್ ಟನ್ ಇದ್ದಿತು. ಕೃಷಿ ಉತ್ಪನ್ನಗಳಾದ ಆಹಾರ ಧಾನ್ಯಗಳನ್ನು ಸಕಾಲದಲ್ಲಿ ಎತ್ತುವಳಿ ಮಾಡಿ ಅಡೆತಡೆರಹಿತ ಪೂರೈಕೆ ಸರಪಳಿಯನ್ನು ಖಾತ್ರಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಭಾರತೀಯ ರೈಲ್ವೇಯು ಮಾಡುತ್ತಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615931

ಆಹಾರ ಪದಾರ್ಥಗಳ ತುರ್ತು ಅಗತ್ಯದಲ್ಲಿರುವವರ ಬಗ್ಗೆ ಗಮನ ನೀಡಲು ಅಂಚೆ ಇಲಾಖೆಗೆ ಶ್ರೀ ರವಿಶಂಕರ ಪ್ರಸಾದ್ ಸೂಚನೆ

ಕೋವಿಡ್ -19 ರ ಸಂಕಷ್ಟದ ಸಮಯದಲ್ಲಿ ಅಂಚೆ ಇಲಾಖೆಯು ದೇಶಾದ್ಯಂತ ತನ್ನ ವಿಶಾಲವಾದ ಅಂಚೆ ಕಚೇರಿಗಳ ಜಾಲದ ಮೂಲಕ ದೇಶದ ಜನತೆಗೆ ಸಹಾಯ ಮಾಡುತ್ತಿದೆ. ಶ್ರೀ ರವಿಶಂಕರ ಪ್ರಸಾದ್ ಅವರು ದುರ್ಬಲರಿಗೆ ಮತ್ತು ಆಹಾರದ ತುರ್ತು ಅವಶ್ಯಕತೆ ಇರುವವರನ್ನು ಗಮನದಲ್ಲಿಟ್ಟುಕೊಂಡು ಸಹಾಯ ಮಾಡುವಂತೆ ಸೂಚನೆಗಳನ್ನು ನೀಡಿದ್ದಾರೆ. ಡಿ.ಒ.ಪಿ. ಯ ಸಿಬ್ಬಂದಿಗಳು ತಮ್ಮ ಉಳಿತಾಯವನ್ನು ಒಟ್ಟು ಸೇರಿಸಿ ಆಹಾರ, ಪಡಿತರ, ಮತ್ತು ಮುಖಗವಸುಗಳನ್ನು ಕೊಳೆಗೇರಿಗಳಲ್ಲಿ, ವಲಸೆ ಕಾರ್ಮಿಕರಿಗೆ ಮತ್ತು ದಿನಗೂಲಿಗಳಿಗೆ ವಿತರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 1 ಲಕ್ಷ ಆಹಾರ/ ಪಡಿತರ ಪೊಟ್ಟಣಗಳನ್ನು ವಿತರಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615930

ದಿಲ್ಲಿಯ ಆರ್.ಸಿ.ಡಿ.ಯಿಂದ 50,000 ಮರುಬಳಕೆ ಮುಖಗವಸುಗಳ ಪೂರೈಕೆ. ಈ ಮುಖಗವಸುಗಳನ್ನು ಮನೆಯಿಂದ ಕೆಲಸ ಮಾಡುವ ವಿಧಾನದಲ್ಲಿ ತಯಾರಿಸಲಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1615572

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಡಲು ರಕ್ಷಣಾ ಪಿ.ಎಸ್.ಯು.ಗಳು, ಒ.ಎಫ್.ಬಿ. ಗಳಿಂದ ತಮ್ಮ ಸಂಪನ್ಮೂಲದ ಬಳಕೆ

ರಕ್ಷಣಾ ಸಾರ್ವಜನಿಕ ರಂಗದ ಉದ್ಯಮಗಳಾದ (ಡಿ.ಪಿ.ಎಸ್.ಯು.ಗಳು ) ಮತ್ತು ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒ.ಎಫ್.ಬಿ.) ಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟದಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ನೀಡುವ ಮೂಲಕ ತಮ್ಮ ಕಾಣಿಕೆ ನೀಡಿವೆ. ಈ ಪ್ರಮುಖ ಸಂಸ್ಥೆಗಳು ತಮ್ಮ ಎಲ್ಲಾ ಸಂಪನ್ಮೂಲಗಳನ್ನು , ತಾಂತ್ರಿಕ ಪರಿಣತಿಯನ್ನು ಮತ್ತು ಮಾನವ ಶಕ್ತಿಯನ್ನು ಈ ಮಾರಕ ವೈರಸ್ ಪ್ರತಿಬಂಧಿಸಲು ಸಹಾಯ ಮಾಡುವುದಕ್ಕಾಗಿ ಬಳಸುತ್ತಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1615709

ಸಿ.ಎಸ್.ಐ.ಆರ್-ಎನ್.ಎ.ಎಲ್.ಗಳಿಂದ ಕೋವಿಡ್ -19 ವಿರುದ್ದ ಹೋರಾಡಲು ವೈಯಕ್ತಿಕ ರಕ್ಷಣಾ ಕವಚ ಅಭಿವೃದ್ದಿ

ಸಿ.ಎಸ್.ಐ.ಆರ್ . ಘಟಕದ ಬೆಂಗಳೂರು ಪ್ರಯೋಗಾಲಯ, ಸಿ.ಎಸ್.ಐ.ಆರ್ . –ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (ಸಿ.ಎಸ್.ಐ.ಆರ್-ಎನ್.ಎ.ಎಲ್.) ಎಲ್ಲ ಸಂದರ್ಭಕ್ಕೂ ಅನ್ವಯಿಸುವ ರಕ್ಷಣಾ ಕವಚವನ್ನು ಅಭಿವೃದ್ದಿಪಡಿಸಿ ಪ್ರಮಾಣೀಕರಿಸಿವೆ. ಪೋಲಿಪ್ರೊಪಿಲಿಥೀನ್ ಆವರಣ ಇರುವ ಬಹುಪದರದ ಫ್ಯಾಬ್ರಿಕ್ ಆಧಾರಿತ ಈ ರಕ್ಷಣಾ ಕವಚವನ್ನು ಕೋವಿಡ್ -19 ನ್ನು ತೊಡೆಯಲು ಕಾರ್ಯನಿರತರಾಗಿರುವ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿಗಳು ಮತ್ತು ಆರೋಗ್ಯ ರಕ್ಷಣಾ ಕಾರ್ಯಕರ್ತರ ಸುರಕ್ಷೆಯನ್ನು ಖಾತ್ರಿಪಡಿಸಲು ಬಳಸಬಹುದಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1615625

ಕೋವಿಡ್ -19 ವಿರುದ್ದ ಸರಕಾರ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನ್ಯಾಶನಲ್ ರಸಗೊಬ್ಬರ ಲಿಮಿಟೆಡ್ಆಹಾರ ಮತ್ತು ಔಷಧಿಗಳ ವಿತರಣೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ

ಕೇಂದ್ರ ರಸಗೊಬ್ಬರ ಖಾತೆಯಡಿ ಬರುವ ಪ್ರಮುಖ ರಸಗೊಬ್ಬರ ಕಾರ್ಖಾನೆಯಾದ , ನ್ಯಾಶನಲ್ ರಸಗೊಬ್ಬರ ಕಾರ್ಖಾನೆ (ಎನ್.ಎಫ್.ಎಲ್.)ಯು  ಕೋವಿಡ್ -19 ರ ವಿರುದ್ದ ನಡೆಸುತ್ತಿರುವ ಹೋರಾಟದಲ್ಲಿ ಸರಕಾರವನ್ನು ಬೆಂಬಲಿಸಿ ಅವಶ್ಯಕ ವಸ್ತುಗಳಾದ ಆಹಾರ, ಔಷಧಿ, ಮತ್ತು ಮುಖಗವಸುಗಳನ್ನು ವಿತರಿಸುವಲ್ಲಿ ಕ್ರಿಯಾಶೀಲ ಪಾತ್ರವನ್ನು ವಹಿಸುತ್ತಿದೆ. ಎನ್.ಎಫ್.ಎಲ್. ನ ಭಟಿಂಡಾ ಘಟಕವು ಭಟಿಂಡಾ ಜಿಲ್ಲಾಡಳಿತಕ್ಕೆ ಕೊರೋನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡಲು 3,000 ಮುಖಗವಸುಗಳನ್ನು ಒದಗಿಸಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1615936

ಪ್ರವಾಸೋದ್ಯಮ ಸಚಿವಾಲಯವು ಇಂದು ದೇಖೋ ಅಪ್ನಾ ದೇಶ್ಕುರಿತ ವೆಬಿನಾರ್ ಸರಣಿಯ ಮೂಲಕ ವಿಶ್ವ ಪರಂಪರೆ ದಿನವನ್ನು ಆಚರಿಸಿತು

ಪ್ರವಾಸೋದ್ಯಮ ಸಚಿವಾಲಯವು ವಿಶ್ವ ಪರಂಪರೆ ದಿನ ;2020ನ್ನು ಇಂದು ವೆಬಿನಾರ್ ಸರಣಿ ಮೂಲಕ ಆಚರಿಸಿತು. ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ (ಉಸ್ತುವಾರಿ ) ಸಚಿವರಾದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ ಹೇಗೆ ಪ್ರಾಚೀನ ಮಾತ್ರವಲ್ಲ ಅದು ಅಮೂಲ್ಯವಾದುದು ಎಂಬ ಬಗ್ಗೆ ಪ್ರಮುಖವಾಗಿ ಮಾತನಾಡಿದರು. ವಿಶ್ವ ಮತ್ತು ನಮ್ಮ ದೇಶ ಕೋವಿಡ್ -19 ರ ಜೊತೆ ಹೋರಾಡುತ್ತಿರುವಾಗ ,ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ನಮ್ಮ ಪರಂಪರೆಯ ಮಾನವೀಯತೆಯ ಮೌಲ್ಯಗಳು ಮತ್ತು ಆತಿಥ್ಯ ನಮ್ಮನ್ನು ವ್ಯಾಖ್ಯಾನಿಸುವುದು ಮಾತ್ರವಲ್ಲ, ನಾವು ಯಾರು ಎಂಬುದನ್ನೂ ಹೇಳುತ್ತವೆ ಎಂದರು.

ವಿವರಗಳಿಗೆ:  https://pib.gov.in/PressReleseDetail.aspx?PRID=1615762

ಪಿ.ಐ.ಬಿ. ಕ್ಷೇತ್ರ ಕಚೇರಿಗಳ ವರದಿ

 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 3,323ಕ್ಕೆ ತಲುಪಿದೆ. ಸೋಂಕು ಮತ್ತು ಸಾವುಗಳಿಗೆ ಸಂಬಂಧಿಸಿ ಮಹಾರಾಷ್ಟ್ರ ಅತ್ಯಂತ ಹೆಚ್ಚು ಬಾಧೆಗೆ ಒಳಗಾಗಿರುವ ರಾಜ್ಯವಾಗಿದೆ. ಮುಂಬಯಿಯಲ್ಲಿ ಭಾರತೀಯ ನೌಕಾದಳದ ಕನಿಷ್ಟ 20 ಸಿಬ್ಬಂದಿಗಳು ಈ ವೈರಲ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಈ ಸಿಬ್ಬಂದಿಗಳು ಪಶ್ಚಿಮ ನೌಕಾ ಕಮಾಂಡಿನ ಸಾಗಾಣಿಕೆ ಮತ್ತು ಬೆಂಬಲ ಸೌಲಭ್ಯದ ಐ.ಎನ್.ಎಸ್. ಅಂಗ್ರೇಯ ಭಾಗವಾಗಿದ್ದಾರೆ.
 • ಗುಜರಾತ್: ಶನಿವಾರ 176  ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಗುಜರಾತಿನಲ್ಲಿ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,272 ಕ್ಕೇರಿದೆ  ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಅಹ್ಮದಾಬಾದ್ ನಲ್ಲಿ  142 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಿಂದ ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 765 ಕ್ಕೇರಿದೆ. ಒಟ್ಟು 48 ಮಂದಿ ಇದರ ಸೋಕಿನಿಂದ ಮೃತಪಟ್ಟಿದ್ದಾರೆ.
 • ರಾಜಸ್ಥಾನ: ರಾಜಸ್ಥಾನದಲ್ಲಿ 98 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗುವುದರೊಂದಿಗೆ  ರಾಜ್ಯದಲ್ಲಿ ಈ ಸೋಂಕಿನಿಂದ ಬಾಧಿತರಾದವರ ಸಂಖ್ಯೆ 1229 ಕ್ಕೇರಿದೆ. ಇಂದಿನವರೆಗೆ ಒಟ್ಟು ಸೋಂಕು ತಗಲಿದವರ ಪೈಕಿ 183 ಮಂದು ಗುಣಮುಖರಾಗಿದ್ದಾರೆ ಮತ್ತು 11 ಮಂದಿ ಮೃತಪಟ್ಟಿದ್ದಾರೆ.
 • ಕೇರಳ: ವೈದ್ಯಕೀಯ  ನಿಗಾದಲ್ಲಿರಿಸಿದ್ದ ಮಲ್ಲಪುರಂ ನಿವಾಸಿ  ವ್ಯಕ್ತಿಯ ಸಾವು ಕೋವಿಡ್ -19 ರಿಂದಾದುದಲ್ಲ, ಅವರು ಹಿಂದಿನ 3 ಪರೀಕ್ಷೆಗಳಲ್ಲಿ ನೆಗೆಟಿವ್ ಆಗಿದ್ದರು ಎಂದು ರಾಜ್ಯ ಆರೋಗ್ಯ ಸಚಿವರಾದ ಕೆ.ಕೆ.ಶೈಲಜಾ ಹೇಳಿದ್ದಾರೆ. ನಿನ್ನೆ ರಾಜ್ಯದಲ್ಲಿ ಒಂದೇ ಒಂದು ಕೋವಿಡ್ -19 ದೃಢೀಕೃತ ಪ್ರಕರಣ ದಾಖಲಾಗಿದೆ, ಮತ್ತು 10 ಮಂದಿ ಖಾಯಿಲೆಯಿಂದ ಗುಣಮುಖರಾಗಿದ್ದಾರೆ.
 • ತಮಿಳುನಾಡು: ಹಾಟ್ ಸ್ಪಾಟ್ ಗಳಲ್ಲಿ ಬಳಕೆಗಾಗಿ ತಮಿಳುನಾಡಿನಾದ್ಯಂತ 36,000 ತ್ವರಿತ ಪರೀಕ್ಷಾ ಕಿಟ್ ಗಳನ್ನು ವಿತರಿಸಲಾಗಿದೆ. ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಐ.ಸಿ.ಯು. ವೆಂಟಿಲೇಟರುಗಳನ್ನು ತಯಾರಿಸುವುದಕ್ಕಾಗಿ ಹ್ಯುಂಡೈ ಸಂಸ್ಥೆಯು ಏರ್ ಲಿಕ್ವಿಡೇ ವೈದ್ಯಕೀಯ ಸಿಸ್ಟಂಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1323. ಸಾವುಗಳ ಸಂಖ್ಯೆ 15, ಆಸ್ಪತ್ರೆಗಳಿಂದ ಬಿಡುಗಡೆಯಾದವರು 283.
 • ಕರ್ನಾಟಕ: ರಾಜ್ಯದಲ್ಲಿ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಮತ್ತು ಏಪ್ರಿಲ್ 20 ರ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಹಿರಿಯ ಸಚಿವರ ಜೊತೆ ಕರ್ನಾಟಕ ಮುಖ್ಯಮಂತ್ರಿ ಪರಾಮರ್ಶೆ,. ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 371. ಇಂದು 12 ಹೊಸ ಪ್ರಕರಣಗಳ ಸೇರ್ಪಡೆ. ಒಟ್ಟು ಸಾವಿನ ಸಂಖ್ಯೆ 13, ಮತ್ತು 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
 • ಆಂಧ್ರಪ್ರದೇಶ: ಕಳೆದ 24 ಗಂಟೆಗಳಲ್ಲಿ 31 ಹೊಸ ಪ್ರಕರಣಗಳು ವರದಿಯಾಗಿವೆ; ಕೃಷ್ಣಾ ಜಿಲ್ಲೆಯಿಂದ ಮತ್ತೊಂದು ಸಾವಿನ ಪ್ರಕರಣ ವರದಿಯಾಗುವುದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 15 ಕ್ಕೇರಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 603, ಆಸ್ಪತ್ರೆಯಿಂದ ಬಿಡುಗಡೆಯಾದವರು 42, ಕೆಂಪು ವಲಯದಲ್ಲಿ (ರೆಡ್ ಝೋನ್) ಮನೆ ಮನೆ ಸರ್ವೇಕ್ಷಣೆ ಮತ್ತು ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳೆಂದರೆ ಕರ್ನೂಲು (129) , ಗುಂಟೂರು (126) , ಕೃಷ್ಣಾ (70) , ನೆಲ್ಲೂರು (67)
 • ತೆಲಂಗಾಣ: ಹೈದರಾಬಾದಿನ ಇನ್ನೋರ್ವ ಪೊಲೀಸ್ ಮತ್ತು ಯಾವುದೇ ಸಂಪರ್ಕ ಇತಿಹಾಸ ಇಲ್ಲದ ನಾರಾಯಣಪೇಟೆಯ ಶಿಶುವಿನಲ್ಲಿ ಪಾಸಿಟಿವ್ ಪತ್ತೆಯಾಗಿದೆ. ’ಹಾಟ್ ಸ್ಪಾಟ್” ತೆಲಂಗಾಣ ಲಾಕ್ ಡೌನ್ ಸಡಿಲಿಕೆ ಮಾಡುವ ಚಿಂತನೆಯಲ್ಲಿ ಇಲ್ಲ, ಭಾನುವಾರದಂದು ರಾಜ್ಯವು ಅಂತಿಮ ನಿರ್ಧಾರಕ್ಕೆ ಬರಲಿದೆ. ನಿನ್ನೆಯವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 766; ಸಾವುಗಳು 18. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಇಟಾನಗರ ಸಮೀಪದಲ್ಲಿ ಅಸ್ಸಾಂ  ಮತ್ತು ಅರುಣಾಚಲ ಗಡಿಯಲ್ಲಿರುವ ಬಂದೇರ್ ದೇವ ತಪಾಸಣಾ ತಾಣಕ್ಕೆ ಭೇಟಿ ನೀಡಿದರು ಮತ್ತು ರಾಜ್ಯದೊಳಗೆ ಬರುವವರನ್ನು ತಪಾಸಣೆ ಮಾಡಲು ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿದರು.
 • ಅಸ್ಸಾಂ: ಸಿಲಿಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಇನ್ನೋರ್ವ ಕೋವಿಡ್ -19 ರೋಗಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ; ರಾಜ್ಯದಲ್ಲಿ ಒಟ್ಟು 12 ಮಂದಿ ಗುಣಮುಖರಾಗಿದ್ದಾರೆ.
 • ಮೇಘಾಲಯ: ಎನ್.ಐ.ಸಿ. ಮೇಘಾಲಯವು ಕೃತಕ ಬುದ್ದಿಮತ್ತೆ ಸಂಪನ್ಮೂಲ ವಿಭಾಗದ ಸಹಯೋಗದಲ್ಲಿ “ವಾಣಿ-ಕೋವಿಡ್ 19” ಎಂಬ ಬಹುಭಾಷೆಯ ಚಾಟ್ ಬೂತ್ ನ್ನು ಮೇಘಾಲಯದ ಜನತೆಯ ಕೋವಿಡ್ 19 ಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಅಭಿವೃದ್ದಿ ಮಾಡಿದೆ. ಇಂಗ್ಲೀಷ್, ಖಾಸಿ ಮತ್ತು ಗಾರೋ ಭಾಷೆಗಳಲ್ಲಿ ಜನತೆ ಇದರ ಜೊತೆ ವ್ಯವಹರಿಸಬಹುದು.
 • ಮಣಿಪುರ: ಮಕ್ಕಳು ಮನೆಯಲ್ಲಿಯೇ ಅಧ್ಯಯನ ಮಾಡಲು ಸಹಾಯ ಮಾಡುವುದಕ್ಕಾಗಿ ಶಿಕ್ಷಣ ಇಲಾಖೆಯು ಕಾಮಿಕ್ ಪಠ್ಯಪುಸ್ತಕಗಳ ಇಲೆಕ್ಟ್ರಾನಿಕ್ ಮಾದರಿಯನ್ನು ಆರಂಭಿಸಿದೆ. ಇದನ್ನು ಜಾಲತಾಣ - manipureducation.gov.in ದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
 • ಮಿಜೋರಾಂ: ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಿಜೋ ಜನರಿಗೆ ಪರಿಹಾರ ಒದಗಿಸಿದುದಕ್ಕಾಗಿ ಕರ್ನಾಟಕ ಉಪ ಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ ಅವರಿಗೆ ಮಿಜೋರಾಂ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದ್ದಾರೆ.
 • ಚಂಡೀಗಢ: ನಗರದ ವಿವಿಧೆಡೆಯಲ್ಲಿರುವ ನಿರಾಶ್ರಿತರಿಗೆ ಮತ್ತು ಅವಶ್ಯಕತೆ ಇರುವವರಿಗೆ 68,525 ಬೇಯಿಸಿದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. 20,000 ಕಾರ್ಮಿಕರ ಪೈಕಿ 17,000 ಮಂದಿ ಕಾರ್ಮಿಕರು ಅವರವರ ಸಂಸ್ಥೆಗಳಿಂದ 2020 ರ ಮಾರ್ಚ್ ತಿಂಗಳ ಅವರ ವೇತನವನ್ನು ಪಡೆದಿದ್ದಾರೆ.
 • ಪಂಜಾಬ್: ರಾಜ್ಯದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾವನ್ನು ಪಂಜಾಬ್ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಕಾರ್ಯಾರಂಭ ಮಾಡಿದರು. ಈ ಯೋಜನೆ ಅಡಿಯಲ್ಲಿ ಗೋಧಿ, ಮತ್ತು ಬೇಳೆ ಕಾಳುಗಳನ್ನು ಸ್ಮಾರ್ಟ್ ಕಾರ್ಡ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. ಪ್ರತೀ ಆಹಾರ ಧಾನ್ಯವನ್ನು ಖರೀದಿಸಲಾಗುವುದು ಎಂದು ಕ್ಯಾಬಿನೆಟ್ ಸಚಿವರು ರೈತರಿಗೆ ಭರವಸೆ ನೀಡಿದರು.

 

ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ

https://pbs.twimg.com/profile_banners/231033118/1584354869/1500x500

***(Release ID: 1616027) Visitor Counter : 48